ಮಕ್ಕಳಲ್ಲಿ ಭಕ್ತಿ ಹಾಗೂ ಜಪದ ಅಭ್ಯಾಸ ಬೆಳೆಸೊದೇಗೆ? ಸುಲಭ ಪರಿಹಾರ ತಿಳಿಸಿದ ಸ್ವಾಮಿ ಪ್ರೇಮಾನಂದ್​ | Habits

Untitled design (59)
Published on

Habits: ಶ್ರೀಕೃಷ್ಣನ ಮೇಲಿನ ಭಕ್ತಿಗೆ ಹೆಸರುವಾಸಿಯಾಗಿರುವ ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರು ಭಾರತದ ಹಿಂದು ಧರ್ಮದ ಶ್ರೇಷ್ಠ ಸಂತರಲ್ಲಿ ಒಬ್ಬರಾಗಿದ್ದಾರೆ. ಶ್ರೀಕೃಷ್ಣನಿಗೆ ಅರ್ಪಿತವಾದ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರಲ್ಲಿ ಅವರು ಪ್ರಸಿದ್ಧರಾಗಿದ್ದಾರೆ. ಅವರು ಶ್ರೀಕೃಷ್ಣನ ಕಟ್ಟಾ ಭಕ್ತರಾಗಿದ್ದಾರೆ ಮತ್ತು ಶ್ರೀಕೃಷ್ಣನ ಮೇಲಿನ ಪ್ರೀತಿ ಮತ್ತು ಭಕ್ತಿಯ ಮಹತ್ವವನ್ನು ಯಾವಾಗಲೂ ಒತ್ತಿ ಹೇಳುತ್ತಾರೆ.

ಸ್ವಾಮಿ ಪ್ರೇಮಾನಂದ ಮಹಾರಾಜ್ ಅವರ ಬಗ್ಗೆ ಸಮಾಜದಲ್ಲಿ ಅಪಾರ ಗೌರವವಿದೆ. ಅವರ ಆಧ್ಯಾತ್ಮಿಕ ಪ್ರವಚನಗಳು ಲಕ್ಷಾಂತರ ಜನರಿಗೆ ಸ್ಫೂರ್ತಿ ನೀಡಿವೆ ಮತ್ತು ಅವರ ಧ್ವನಿಯು ಶಾಂತಿ, ಉದ್ದೇಶ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಬಯಸುವ ಅಸಂಖ್ಯಾತ ಜನರಿಗೆ ಮಾರ್ಗದರ್ಶಕ ಬೆಳಕಾಗಿದೆ. ಅವರು ಹೇಳುವ ಪ್ರವಚನದಲ್ಲಿ ಇದೀಗ ಮಕ್ಕಳನ್ನು ಧ್ಯಾನಕ್ಕೆ ಮತ್ತು ಜಪಕ್ಕೆ ಕೂಡಿಸೊದೇಗೆ? ಎಂಬುದರ ಬಗ್ಗೆ ಸುಲಭವಾಗಿ ಹೇಳಿದ್ದು, ಏನು? ಎಂಬುದು ತಿಳಿಯೋಣ..

ದೇವರ ಹೆಸರನ್ನು ಜಪಿಸಲು ಹೀಗೆ ಮಾಡಿ

ಮಕ್ಕಳನ್ನು ಜಪಕ್ಕೆ ಕೂರಿಸಿದಾಗ ಅವರಿಗೆ ಜಪಮಾಲೆ ಕೊಟ್ಟು ರಾಧೆ-ರಾಧಾ ಎಂದು 108 ಬಾರಿ ಪಠಿಸುವಂತೆ ಹೇಳಿ. ಮುಂದೆ ಸಾಗುತ್ತಾ ನಾನು ನಿಮಗಾಗಿ ಹಲ್ವಾ ಮಾಡಿ ಊಟ ಹಾಕುವೆ ಎಂದು ಹೇಳಿ. ಮಕ್ಕಳನ್ನು ಪ್ರಚೋದಿಸಿ. ನೀವು ಅದನ್ನು 108 ಬಾರಿ ಮಾಡಿದ್ದೀರಾ ಅಥವಾ ಇಲ್ಲವೇ ಎಂಬುದನ್ನು ನಮಗೆ ತೋರಿಸಿ. ಅದನ್ನು ಕ್ರಮೇಣ ಮಾಡಿ ಮತ್ತು ಈಗ 200 ಬಾರಿ ಮಾಡಲು ಅವರನ್ನು ಪ್ರೋತ್ಸಾಹಿಸಿ. ನೀವು ಇದನ್ನು ಕ್ರಮೇಣ ಹೀಗೆ ಮಾಡಿದರೆ, ಅದು ಬಾಲ್ಯದಿಂದಲೇ ಸಂಸ್ಕಾರವಾಗುತ್ತದೆ ಮತ್ತು ಹೆಸರನ್ನು ಜಪಿಸುವ ಮೂಲಕ ಅವರು ಒಳ್ಳೆಯ ಮತ್ತು ಸದ್ಗುಣಶೀಲ ಗೃಹಸ್ಥರಾಗುತ್ತಾರೆ. ಕೆಟ್ಟದಾಗಿ ವರ್ತಿಸದಂತೆ ಅವರಿಗೆ ಕಲಿಸಿ ಎಂದು ಸ್ವಾಮಿ ಪ್ರೇಮಾನಂದ ಮಹಾರಾಜ್ ಹೇಳಿದ್ದಾರೆ.

ಕೆಟ್ಟ ಪರಿಸ್ಥಿತಿಯಿಂದ ಮಕ್ಕಳನ್ನು ಉಳಿಸಿಕೊಳ್ಳಿ

ಇತ್ತೀಚಿನ ದಿನಗಳಲ್ಲಿ ಮಕ್ಕಳ ಪರಿಸರ ತುಂಬಾ ಕೊಳಕಾಗುತ್ತಿದೆ. ಇಂತಹ ಸಮಯದಲ್ಲಿ ಮಕ್ಕಳನ್ನು ಕಪಾಡಿಕೊಳ್ಳೋದು ಉತ್ತಮ. ಒಂದು ವೇಳೆ ಕೊಳಕು ಕೆಲಸ ಮಾಡಿದ್ದರೆ ಅದನ್ನುಮ ಪ್ರೀತಿಯಿಂದ ದೂರ ಮಾಡಿ. ಪ್ರೀತಿ ಮತ್ತು ಭಯದಿಂದ ನಮ್ಮ ಮಕ್ಕಳ ಜೀವಗಳನ್ನು ಉಳಿಸೋಣ. ಇಲ್ಲದಿದ್ದರೆ, ಇಂದಿನ ಮೊಬೈಲ್ ಮತ್ತು ಕೆಟ್ಟ ಸಹವಾಸದ ವಾತಾವರಣವು ಅವರನ್ನು ನೇರವಾಗಿ ನಾಶಪಡಿಸಲಿದೆ ಎಂದಿದ್ದಾರೆ.(ಏಜೆನ್ಸೀಸ್​)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net