

Vastu Tips: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಗಿಡಗಳನ್ನು ಬೆಳೆಸುವುದು ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದರಲ್ಲಿಯೂ ಮುಖ್ಯವಾಗಿ 'ಮನಿ ಪ್ಲಾಂಟ್' ಅನ್ನು ಮನೆ ಹಾಗೂ ಕಚೇರಿಗಳಲ್ಲಿ ನೆಡುವುದರಿಂದ ಸಂತೋಷ, ಸಮೃದ್ಧಿ ಮತ್ತು ಆರ್ಥಿಕ ಪ್ರಗತಿ ಉಂಟಾಗುತ್ತದೆ ಎಂಬ ನಂಬಿಕೆಯಿದೆ. ಇದೇ ಕಾರಣಕ್ಕೆ ಹೆಚ್ಚಿನವರು ಬಾಲ್ಕನಿ ಹಾಗೂ ಮನೆ ಆವರಣದಲ್ಲಿ ಈ ಗಿಡವನ್ನು ಪ್ರೀತಿಯಿಂದ ಪೋಷಿಸುತ್ತಾರೆ. ಆದರೆ, ಮನಿ ಪ್ಲಾಂಟ್‌ನ ಪೂರ್ಣ ಲಾಭ ಪಡೆಯಲು ಅದನ್ನು ಸರಿಯಾದ ದಿಕ್ಕಿನಲ್ಲಿ ಹಾಗೂ ಸೂಕ್ತ ನಿಯಮಗಳೊಂದಿಗೆ ಇಡುವುದು ಬಹಳ ಮುಖ್ಯ.