ಮೇಷ: ಮೇಷ ರಾಶಿಗೆ ದ್ವಾದಶದಲ್ಲಿ ರವಿ, ಶನಿಯಿದ್ದು ಹಾಗೂ ಶನಿ ಸಂಚಾರ ಕಾಲದಲ್ಲಿ ಸಮಯಕ್ಕೆ ಕೆಲಸಗಳು ಆಗದಿರುವುದು ಚಿಂತೆಗೀಡು ಮಾಡುತ್ತದೆ. ಗುರುವು ತೃತೀಯಲ್ಲಿದ್ದು, ಶುಕ್ರನು ಲಗ್ನದಲ್ಲಿ ಇರುವುದರಿಂದ ವಾರಾಹಿಯನ್ನು ಪೂಜಿಸಿದರೆ ನಿಮ್ಮ ಕೆಲಸಗಳು ಒಂದು ಮಟ್ಟವನ್ನು ಮುಟ್ಟಲು ಸಾಧ್ಯವಾಗುತ್ತದೆ. ರಾಶ್ಯಾಧಿಪತಿ ಸುಬ್ರಹ್ಮಣ್ಯ ದೇವರನ್ನು ನಿರಂತರವಾಗಿ ಪ್ರಾರ್ಥಿಸಿ, ಪೂಜಿಸಿ, ದೇವರ ಸಹಾಯವಿಲ್ಲದೆ ಯಾವ ಕೆಲಸಗಳೂ ಕೈಗೂಡಿ ಇಷ್ಟಾರ್ಥ ಕಂಡುಕೊಳ್ಳಲು ಸಾಧ್ಯವಾಗದು.