ಕನ್ಯಾ: ಏನು ಕೆಲಸವನ್ನು ಮಾಡಬೇಕಾದರೂ ಒಂದಲ್ಲ ಎರಡು ಬಾರಿ ಯೋಚನೆ ಮಾಡಿ ನಿರ್ಧಾರಕ್ಕೆ ಬನ್ನಿ. ಶನಿಯು ಸಪ್ತಮದಲ್ಲಿ ಇದ್ದು, ಕೆಲಸವು ಪೂರ್ಣ ಆಗಲು ಬಿಡುವುದಿಲ್ಲ. ಗುರುವು ದಶಮದಲ್ಲಿದ್ದು, ಅಲ್ಪಸ್ವಲ್ಪ ಕೊಟ್ಟಾನು. ಮನೆದೇವರ ಮೊರೆ ಹೋಗಿ, ದರ್ಶಿಸಿ, ಭಕ್ತಿಯಿಂದ ಪೂಜಿಸಿ. ಗ್ರಹಗಳು ನಿಮ್ಮ ಕಡೆ ತಿರುಗಿ ಲಾಭಾಂಶ ದೊರೆಯುತ್ತದೆ.