ವಾರಭವಿಷ್ಯ: ಈ ರಾಶಿಯವರಿಗೆ ದ್ವತೀಯದಲ್ಲಿ ಗುರಿವಿದ್ದು ಉದ್ಯೋಗದಲ್ಲಿ ಉನ್ನತಿ ದೊರೆಯಲಿದೆ

ಜ್ಯೋತಿಷ್ಯ
ಜ್ಯೋತಿಷ್ಯ
Published on

ಮೇಷ: 

ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುವ ಶ್ರೀ ಗುರುರಾಯರ ಆರಾಧನೆಯಿಂದ ಈ ವಾರ ಆರಂಭವಾಗಿ, ಶ್ರೀರಾಮ ಪೂಜಿತರು ಶುದ್ಧಾತ್ಮರೂ ಆದ ಗುರುಗಳು ಎಲ್ಲರಿಗೂ ಜೀವನದ ದೋಣಿ ಸಾಗಿಸಲು ಅನುಗ್ರಹ ಮಾಡಿರುತ್ತಾರೆ. ಗುರುವು ಮೇಷ ರಾಶಿಯವರಿಗೆ ಚತುರ್ಥದಲ್ಲಿ, ಕಟಕ ರಾಶಿಯವರಿಗೆ ಜನ್ಮದಲ್ಲಿ, ಕನ್ಯಾ ರಾಶಿಯವರಿಗೆ ಏಕಾದಶದಲ್ಲಿ, ವೃಶ್ಚಿಕ ರಾಶಿಯವರಿಗೆ ನವಮದಲ್ಲಿ, ಮಕರ ರಾಶಿಯವರಿಗೆ ಸಪ್ತಮದಲ್ಲಿ ಹಾಗೂ ಮೀನ ರಾಶಿಯವರಿಗೆ ಪಂಚಮದಲ್ಲಿ ಇರುವುದರಿಂದ ಗುರುರಾಯರ ಹಾಗೂ ನಿಮ್ಮ ಕುಲಗುರುಗಳ ಧ್ಯಾನ ಮಾಡಿ. ಗುರುಗಳ ಅನುಗ್ರಹಕ್ಕೆ ಪಾತ್ರರಾಗಿ.

ವೃಷಭ: 

ಈ ರಾಶಿಯವರಿಗೆ ತೃತೀಯದಲ್ಲಿ ಗುರು ಇದ್ದರೂ ಕಾಲಕಾಲಕ್ಕೆ ಅನುಗ್ರಹ ಕೊಡುವಾಗ ಮನುಷ್ಯನ ಪಾತ್ರ ಅರಿತು ಅನುಗ್ರಹ ನೀಡುತ್ತಾನೆ. ನಿಮ್ಮ ಪಾಪ ಪುಣ್ಯದ ಹುಂಡಿಯಲ್ಲಿ ಏನು ತುಂಬಿಕೊಳ್ಳುತ್ತಿದ್ದೀರೋ ಅದೇ ಸಿಗುತ್ತದೆ. ಮನುಷ್ಯ ಜನ್ಮ ಸಾರ್ಥಕವಾಗಬೇಕಾದರೆ ದೈವದಲ್ಲಿ ದೃಢವಾದ ವಿಶ್ವಾಸ ಹೊಂದಿರಬೇಕು. ಎಲ್ಲ ವಿಷಯ ನಿಮ್ಮಂತೆ ನಡೆದು ಹರ್ಷವಾಗಿರಬಹುದು.

ಮಿಥುನ: 

ದ್ವಿತೀಯದಲ್ಲಿ ಗುರು ಇದ್ದು, ಉಚ್ಚ ಗುರುವು ನಿರೀಕ್ಷಿತ ಫಲ ನೀಡಿ ನಿಮ್ಮ ಪ್ರಾರ್ಥನೆಯಲ್ಲಿ ಶಕ್ತಿ ಇದ್ದರೆ ನೀವು ಏನನ್ನು ಬೇಕಾದರೂ ಪಡೆದುಕೊಳ್ಳಬಹುದು ಹಾಗೂ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವ ಕಾಲವಿದು. ಧನಲಾಭ, ಕಾರ್ಯದಲ್ಲಿ ಯಶಸ್ಸು, ಕೀರ್ತಿ ಹಾಗೂ ಸತ್ಪುರುಷರ ದರ್ಶನ ಮಾತ್ರದಿಂದ ಜೀವನದಲ್ಲಿ ಕೀರ್ತಿಯ ಮೆಟ್ಟಿಲನ್ನು ಹತ್ತಿ ಶೋಭಿಸಬಹುದು.

ಕಟಕ: 

ಜನ್ಮದಲ್ಲಿ ಗುರು ಉಚ್ಚನಾಗಿರುವಾಗ ಸರ್ವ ದೇವಂ ಕೇಶವಂ ಪ್ರತಿಗಚ್ಛತಿ ಎಂಬ ಉಕ್ತಿಯಂತೆ ಎಲ್ಲ ದೇವ ಸ್ವರೂಪನೂ ಶ್ರೀ ಕೃಷ್ಣ ಪರಮಾತ್ಮನೇ. ಜಗದೊಡೆಯನಾದ ಶ್ರೀ ಕೃಷ್ಣನನ್ನು ಪೂಜಿಸಿ. ನಿಮ್ಮ ಆಸೆಗಳನ್ನು ನೆರವೇರಿಸಿ ಸ್ಥಿರವಾದ ಆರೋಗ್ಯ, ಸುಖವನ್ನು ನೀಡುತ್ತಾರೆ.

ಸಿಂಹ: 

ದ್ವಿತೀಯದಲ್ಲಿ ಗುರು ಇದ್ದು, ಉಚ್ಚ ಗುರುವು ನಿರೀಕ್ಷಿತ ಫಲ ನೀಡಿ ನಿಮ್ಮ ಪ್ರಾರ್ಥನೆಯಲ್ಲಿ ಶಕ್ತಿ ಇದ್ದರೆ ನೀವು ಏನನ್ನು ಬೇಕಾದರೂ ಪಡೆದು ಕೊಳ್ಳಬಹುದು ಹಾಗೂ ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವ ಕಾಲವಿದು. ಧನಲಾಭ, ಕಾರ್ಯದಲ್ಲಿ ಯಶಸ್ಸು, ಕೀರ್ತಿ ಹಾಗೂ ಸತ್ಪುರುಷರ ದರ್ಶನ ಮಾತ್ರದಿಂದ ಜೀವನದಲ್ಲಿ ಕೀರ್ತಿಯ ಮೆಟ್ಟಿಲನ್ನು ಹತ್ತಿ ಶೋಭಿಸಬಹುದು.

ಕನ್ಯಾ: 

ಸಪ್ತಮದಲ್ಲಿ ಶನಿ, ಏಕಾದಶದಲ್ಲಿ ಗುರು. ಅಸ್ಥಿರ ಮನಸ್ಸು, ಅಲ್ಪ ಸ್ವಲ್ಪ ಅನಾರೋಗ್ಯ ಉಂಟುಮಾಡಿದರೂ ಗುರು ನಿಮ್ಮನ್ನು ಕಾಯುತ್ತಿರುವಾಗ ಯಾವುದಕ್ಕೂ ಹೆದರಬೇಡಿ. ನಿಮ್ಮ ಹೆಜ್ಜೆಗಳು ದಿಟ್ಟವಾಗಿ, ಸತ್ಯವಾಗಿ ಧರ್ಮ ಮಾರ್ಗದಲ್ಲಿ ನಡೆದರೆ ಜಯಶೀಲರಾಗುತ್ತೀರಿ. ಗುರು ಸ್ವರೂಪಿಯಾದ ಗುರು ನರಸಿಂಹನನ್ನು ಪ್ರಾರ್ಥಿಸಿ ಪೂಜಿಸಿ.

ತುಲಾ: 

ಅತ್ತಿತ್ತ ನೋಡದಿರು, ಎಲ್ಲರನ್ನೂ ಕಾಡದಿರು, ಎತ್ತ ನೋಡಿದರೂ ಶ್ರೀಹರಿಯ ನಾಮವೇ ನಿನಗೆ ಉಳಿದಿರುವುದು. ದೇವಾಧಿದೇವತೆಗಳೆಲ್ಲರನ್ನೂ ಭೂಲೋಕಕ್ಕೆ ತಂದು ಜನನಿಯಾಗಿ ಸುಖವನ್ನು ಕೊಟ್ಟು, ದುರ್ಗತಿಯನ್ನು ದಾರಿದ್ರ್ಯವನ್ನು ನಾಶ ಮಾಡುವ ದುರ್ಗಾದೇವಿಯನ್ನು ಪ್ರಾರ್ಥಿಸಿ, ದುರ್ಗಾ ಮೂಲಮಂತ್ರ ಪಠಿಸಿ, ದುರ್ಗಾಷ್ಟಕವನ್ನು ಪಾರಾಯಣ ಮಾಡಿ. ದುರ್ಗೆ ಮೂಲಮಂತ್ರ ಪಠಿಸಿ. ದುರ್ಗಾಷ್ಟಕ ಪಠಿಸಿ.

ವೃಶ್ಚಿಕ: 

9ರಲ್ಲಿ ಗುರು ಉಚ್ಚನಾಗಿ ಇದ್ದು ಪಂಚಮದಲ್ಲಿ ಶನಿ. ಶನಿ ಸಂಚಾರ ಇನ್ನೂ 8 ತಿಂಗಳು ಇರುತ್ತದೆ. ಗುರುವು ದಾರಿಯನ್ನು ಸ್ವಚ್ಛ ಮಾಡಿ ಒಳ್ಳೆಯ ಮಾರ್ಗ ತೋರಿಸುತ್ತಾನೆ. ನಿಮಗೆ ಶ್ರೇಯೋಲಾಭ ಉಂಟಾಗುತ್ತದೆ. ಶನಿಯು 6ನೇ ಮನೆಗೆ ಬಂದ ನಂತರ ಹಣಕಾಸಿನ ಪರಿಸ್ಥಿತಿ ಸರಿಹೋಗುತ್ತದೆ. ಜಾಗರೂಕರಾಗಿ ಸಾಗಿರಿ. ಶನಿ ಮಹಾರಾಜರು ನಿಮಗೆ ಒಳ್ಳೆಯ ಮಾರ್ಗ ತೋರಿಸುತ್ತಾರೆ.

ಧನುಸ್ಸು: 

ಕಶ್ಯಪರ ಪ್ರಾರ್ಥನೆಯಂತೆ ಶ್ರೀರಾಮನು ಜನ್ಮತಾಳಿ ರಾವಣನನ್ನು ಸಂಹಾರ ಮಾಡಿದ. ರಾಮಾಯಣದ ಪುಣ್ಯಕಥೆಯನ್ನು ಕೇಳಿದ್ದೀರಿ. ಅದರಂತೆ ನೀವು ನಡೆದರೆ ನಿಮ್ಮ ಬಾಳು ಬಂಗಾರವಾಗುತ್ತದೆ. ಚತುರ್ಥ ಶನಿ ಬೇಡವಾದ ವಿಚಾರ ತರುತ್ತಾನೆ. ನಿಮ್ಮ ಆತ್ಮವು ಏನು ಹೇಳುತ್ತದೆಯೋ ಅದನ್ನು ಮಾಡಿದರೆ ಸಾಕು, ಯಶಸ್ವಿಯಾಗುತ್ತೀರಿ. ನಿಮ್ಮ ಶಿರಸ್ಸು ಜನ್ಮದಾತರ ಪಾದದ ಮೇಲಿರಲಿ. ಕಷ್ಟನಷ್ಟಗಳನ್ನು ಅವರ ಆಶೀರ್ವಾದವೇ ದೂರ ಮಾಡುತ್ತದೆ. ಮುನ್ನಡೆಸಲು ಸಮರ್ಥರನ್ನಾಗಿ ಮಾಡುತ್ತದೆ. ಶ್ರೀರಾಮಚಂದ್ರನನ್ನು ಧ್ಯಾನಿಸಿ, ಪೂಜಿಸಿ.

ಮಕರ: 

ಈ ರಾಶಿಯವರಿಗೆ ಶನಿ ಅಧಿಪತಿ. ಗುರು ಸಪ್ತಮದಲ್ಲಿದ್ದಾನೆ. ಆನಂದ ಸುಖ ನಿಮ್ಮ ಪಾಲಾಗಿದೆ. ಶನಿಯು ತೃತೀಯದಲ್ಲಿದ್ದು, ಬೇಕಾದ್ದನ್ನು ಪಡೆಯುವುದೇ ನಿಮ್ಮ ಗುರಿಯಾಗಿರಲಿ. ಹಿರಿಯರ ಆಶೀರ್ವಾದ ನಿಮ್ಮ ಮೇಲಿದೆ. ದೈವವೇ ನಿಮ್ಮ ಸಹಾಯಕ್ಕೆ ಬರುತ್ತದೆ.

ಕುಂಭ: 

ಈ ರಾಶಿಯಲ್ಲಿ ರಾಹು ಇದ್ದಾನೆ. 6ರಲ್ಲಿ ಗುರು ಇದ್ದಾನೆ. ಚಿಂತೆ ಮಾಡುವ ಕಾಲ ಇದ್ದರೂ ನೀವು ಶನಿವಾರದಂದು ಗ್ರಹಶ್ರೇಷ್ಠನೂ, ಸೂರ್ಯಪುತ್ರನೂ ಆದ ಶನಿಯನ್ನು ಪೂಜಿಸಿದರೆ ನಿಮ್ಮ ಕೆಲಸ ಕಾರ್ಯಗಳಲ್ಲಿ ದೇವರೇ ದಾರಿ ಯನ್ನು ತೋರಿಸಿ, ಪೂಜಾ ಫಲದಿಂದ ನಿಮಗೆ ನ್ಯಾಯಸಮ್ಮತವಾದ ಧನ, ಸುಖ, ಇಷ್ಟಾರ್ಥಗಳನ್ನು ಕೊಡುತ್ತಾನೆ. ಶಿವ ದರ್ಶನ ಮಾಡಿ ಸುಖವಾಗಿರಿ.

ಮೀನ: 

ಈ ರಾಶಿಯ ಅಧಿಪತಿಯಾದ ಗುರು ಉಚ್ಚ ರಾಶಿಯಲ್ಲಿ, ಪಂಚಮದಲ್ಲಿ ಕುಳಿತಿದ್ದಾನೆ. ಪಂಚಮಂ ಕಾರ್ಯ ಸಿದ್ಧಿಃ ಎಂದು ಅರ್ಥೈಸಿಕೊಂಡರೆ ಗುರು ಏನು ಕೊಡುತ್ತಾನೆ ಎಂಬುದು ತಿಳಿಯುತ್ತದೆ. ಹರಿ ಹರ ಮುನಿದರೂ ಗುರು ಅನುಗ್ರಹ ಇದ್ದರೆ ದೇವತೆಗಳೇ ಪ್ರಸನ್ನರಾಗುತ್ತಾರೆ. ಭಯ ಇಲ್ಲದೆ ಬಾಗಿಲು ತೆರೆದು ಹರಿಯನ್ನು ಕಂಡು ಸಂತೋಷಿಸುವ ಸಮಯವಿದು. ಗುರು ಗ್ರಹವು ಚೆನ್ನಾಗಿದ್ದರೆ ಮಿಕ್ಕ ಹತ್ತು ಗ್ರಹಗಳೂ ಅವನ ಮುಷ್ಟಿಯಲ್ಲಿ ಇರುತ್ತವೆ. ಗುರುವನ್ನು ಪೂಜಿಸಿ ಆನಂದ ಪಡೆಯಿರಿ. ದತ್ತಾತ್ರೇಯನನ್ನು ಪೂಜಿಸಿ ಜೀವನ ಸಾಗಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net