ಕೆಲಸದ ಸ್ಥಳದಲ್ಲಿ ನಿಮ್ಮ ಪ್ರದರ್ಶನ ಉತ್ತಮವಾಗಿರಲಿದ್ದು, ಪ್ರೋತ್ಸಾಹಕ ಧನ (Incentives) ಅಥವಾ ಬಹುಮಾನಗಳು ಸಿಗಬಹುದು. ಕುಟುಂಬದ ಸದಸ್ಯರ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಬಗೆಹರಿಯಲಿವೆ. ಉದ್ಯೋಗಾಕಾಂಕ್ಷಿಗಳಿಗೆ ಸೂಕ್ತ ಅವಕಾಶಗಳು ದೊರೆಯಲಿವೆ. ಆದರೆ, ವಾರದ ಕೆಲವು ದಿನಗಳಲ್ಲಿ ಮಾನಸಿಕ ಉದ್ವೇಗ ಹಾಗೂ ದೈಹಿಕ ಆಯಾಸ ಕಾಡಬಹುದು, ವಿಶ್ರಾಂತಿಗೆ ಆದ್ಯತೆ ನೀಡಿ.