

ಮೇಷ: ಉದ್ಯೋಗ ಕ್ಷೇತ್ರದಲ್ಲಿ ಹೊಸ ಜವಾಬ್ದಾರಿಗಳು ಹೆಗಲೇರಲಿದ್ದು, ನಿಮ್ಮ ಸಮರ್ಥ ಕಾರ್ಯವೈಖರಿಯಿಂದ ಎಲ್ಲರ ಮೆಚ್ಚುಗೆ ಗಳಿಸುವಿರಿ. ಆರ್ಥಿಕ ಪರಿಸ್ಥಿತಿ ತೃಪ್ತಿಕರವಾಗಿರಲಿದೆ. ಕುಟುಂಬದ ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಿ. ವಾರಾಂತ್ಯದಲ್ಲಿ ಸ್ನೇಹಿತರೊಡನೆ ಕಾಲಕಳೆಯುವ ಸುಯೋಗವಿದೆ. ಸಣ್ಣಪುಟ್ಟ ಪ್ರಯಾಣಗಳಿಂದ ಹೊಸ ಅನುಭವ ಸಿಗಲಿದ್ದು, ಮನಸ್ಸಿಗೆ ಅಪಾರ ಉಲ್ಲಾಸ ದೊರೆಯಲಿದೆ.
ವೃಷಭ: ವ್ಯಾಪಾರಸ್ಥರಿಗೆ ನಿರೀಕ್ಷೆಗೂ ಮೀರಿದ ಧನಲಾಭ ದೊರೆತು ವ್ಯವಹಾರದಲ್ಲಿ ಹೊಸ ಉತ್ಸಾಹ ಹಾಗೂ ಚೈತನ್ಯ ಮೂಡಲಿದೆ. ದೀರ್ಘಕಾಲದ ಆಸ್ತಿ ವಿವಾದಗಳು ಸೌಹಾರ್ದಯುತವಾಗಿ ಬಗೆಹರಿಯಲಿವೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಯಶಸ್ಸು ಸಾಧಿಸುವರು. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಮನೆಯಲ್ಲಿ ಅತಿಥಿಗಳ ಆಗಮನದಿಂದ ಸಂತಸದ ವಾತಾವರಣವಿರಲಿದೆ.
ಮಿಥುನ: ಕಠಿಣ ಪರಿಶ್ರಮಕ್ಕೆ ತಕ್ಕ ಪ್ರತಿಫಲ ದೊರೆತು ವೃತ್ತಿ ಬದುಕಿನಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಹೊಸ ಯೋಜನೆಗಳಲ್ಲಿ ಬಂಡವಾಳ ಹೂಡಲು ಇದು ಅತ್ಯಂತ ಅನುಕೂಲಕರ ಸಮಯ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದೆ. ದೂರಪ್ರಯಾಣದಿಂದ ಶುಭ ಫಲಗಳು ಸಿಗಲಿವೆ. ಸ್ನೇಹಿತರಿಂದ ಅಪೇಕ್ಷಿತ ನೆರವು ಸಕಾಲಕ್ಕೆ ಲಭಿಸಲಿದೆ. ಕುಲದೇವರ ಸ್ಮರಣೆ ನಿತ್ಯವೂ ಮಾಡಿ.
ಕಟಕ: ಮನಸ್ಸಿನಲ್ಲಿ ಸದಾ ಧನಾತ್ಮಕ ಯೋಚನೆಗಳು ನೆಲೆಸಿ ಹೊಸ ಉತ್ಸಾಹ ಮೂಡಲಿದೆ. ಆರ್ಥಿಕ ವ್ಯವಹಾರಗಳಲ್ಲಿ ಕೊಂಚ ಎಚ್ಚರಿಕೆ ವಹಿಸುವುದು ಒಳಿತು. ಮನೆಯಲ್ಲಿ ಹೊಸ ವಸ್ತುಗಳ ಖರೀದಿ ಸಂಭ್ರಮವಿರಲಿದೆ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ತಂದೆ-ತಾಯಿಗಳ ಸಲಹೆ ಪಡೆಯಿರಿ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ಬಡವರಿಗೆ ನೆರವಾಗಿ
ಸಿಂಹ: ನಿಮ್ಮ ನಾಯಕತ್ವ ಗುಣ ಹಾಗೂ ಆತ್ಮವಿಶ್ವಾಸ ಸಮಾಜದಲ್ಲಿ ಹೊಸ ಗೌರವ ತಂದುಕೊಡಲಿದೆ. ಉದ್ಯೋಗ ಬದಲಾಯಿಸಲು ಬಯಸುವವರಿಗೆ ಉನ್ನತ ಅವಕಾಶಗಳು ಒದಗಿಬರಲಿವೆ. ಹಣಕಾಸಿನ ಮುಕ್ತ ಹರಿವು ಇರಲಿದೆ. ಧಾರ್ವಿುಕ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸುವಿರಿ. ಆರೋಗ್ಯ ಅತ್ಯುತ್ತಮವಾಗಿರಲಿದ್ದು, ಮನಸ್ಸು ಪ್ರಫುಲ್ಲವಾಗಿರುತ್ತದೆ. ಹೊಸ ಜವಾಬ್ದಾರಿಗಳನ್ನು ಸಮರ್ಥವಾಗಿ ನಿರ್ವಹಿಸುವಿರಿ.
ಕನ್ಯಾ: ಕೌಟುಂಬಿಕ ಜೀವನದಲ್ಲಿ ಅನ್ಯೋನ್ಯತೆ ಹೆಚ್ಚಾಗಲಿದ್ದು, ಬಂಧುಗಳ ಆಗಮನದಿಂದ ಸಂತಸದ ವಾತಾವರಣ ನಿರ್ವಣವಾಗಲಿದೆ. ಕಲಾ ರಂಗದವರಿಗೆ ನೂತನ ಅವಕಾಶಗಳು ಸಿಗಲಿವೆ. ಆಕಸ್ಮಿಕ ಧನಾಗಮದಿಂದ ಸಾಲದ ಹೊರೆ ಕಡಿಮೆಯಾಗಲಿದೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಏಕಾಗ್ರತೆ ಹೆಚ್ಚಾಗಿ ಉತ್ತಮ ಫಲಿತಾಂಶ ಸಿಗಲಿದೆ. ಹಿರಿಯರ ಆಶೀರ್ವಾದವಿರಲಿದೆ.
ತುಲಾ: ನಿರುದ್ಯೋಗಿಗಳಿಗೆ ಉದ್ಯೋಗ ಲಭಿಸುವ ಶುಭ ಸುದ್ದಿ ಕೇಳಲಿದ್ದೀರಿ. ಕೋರ್ಟ್- ಕಚೇರಿ ಕೆಲಸಗಳಲ್ಲಿ ನಿಮ್ಮ ಪರವಾಗಿ ತೀರ್ಪು ಬರುವ ಸಾಧ್ಯತೆಯಿದೆ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಆರೋಗ್ಯ ಸಂಪೂರ್ಣ ಉತ್ತಮವಾಗಿರುತ್ತದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವಾರಾಂತ್ಯದಲ್ಲಿ ಶುಭ ಸಮಾರಂಭದಲ್ಲಿ ಭಾಗಿಯಾಗುವಿರಿ.
ವೃಶ್ಚಿಕ: ವೃತ್ತಿರಂಗದಲ್ಲಿ ನಿಮ್ಮ ಕೆಲಸದ ಒತ್ತಡ ಕೊಂಚ ಹೆಚ್ಚಾಗಬಹುದು. ಆದರೆ ತಾಳ್ಮೆಯಿಂದ ಎಲ್ಲವನ್ನೂ ನಿಭಾಯಿಸುವಿರಿ. ಪಾಲುದಾರಿಕೆ ವ್ಯವಹಾರದಲ್ಲಿ ಸ್ಪಷ್ಟತೆ ಇರಲಿ. ಸಾರಾಸಾರ ವಿಚಾರ ಮಾಡಿ ಮುಂದುವರಿಯಿರಿ. ವಾಹನ ಚಾಲನೆ ಮಾಡುವಾಗ ಎಚ್ಚರವಿರಲಿ. ಹಿರಿಯರ ಸಲಹೆಗಳು ವೃತ್ತಿಜೀವನಕ್ಕೆ ದಾರಿದೀಪವಾಗಿ ಯಶಸ್ಸು ತಂದುಕೊಡಲಿವೆ. ಆರ್ಥಿಕ ಪ್ರಗತಿ ಕಂಡುಬರಲಿದೆ.
ಧನಸ್ಸು: ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗಿ ಅಧ್ಯಯನದಲ್ಲಿ ಅತ್ಯುತ್ತಮ ಪ್ರಗತಿ ಕಂಡುಬರಲಿದೆ. ಪ್ರಮುಖ ಕಾರ್ಯಗಳು ಯಾವುದೇ ತೊಂದರೆಯಿಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡು ನೆಮ್ಮದಿ ಹೊಂದುವಿರಿ. ಸಮಾಜಸೇವೆಯಲ್ಲಿ ಆಸಕ್ತಿ ವೃದ್ಧಿಸಲಿದೆ. ಆರೋಗ್ಯದಲ್ಲಿ ಚೇತರಿಕೆ ಕಂಡುಬರಲಿದ್ದು, ಹೊಸ ಭರವಸೆ ಮೂಡುವುದು. ಕೌಟುಂಬಿಕ ಸಂತಸ ಇರಲಿದೆ.
ಮಕರ: ಆರ್ಥಿಕ ಸ್ಥಿತಿ ಬಲಗೊಳ್ಳುವುದರೊಂದಿಗೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಹಿರಿಯ ಅಧಿಕಾರಿಗಳ ಸಹಕಾರದಿಂದ ದೀರ್ಘಕಾಲದ ಕೆಲಸಗಳು ಸರಾಗವಾಗಿ ಮುಗಿಯಲಿವೆ. ಮನೆಯಲ್ಲಿ ಶುಭ ಕಾರ್ಯದ ಪ್ರಸ್ತಾಪವಾಗಲಿದೆ. ದಾಂಪತ್ಯ ಜೀವನ ಮಧುರವಾಗಿರುತ್ತದೆ. ಸಮಾಜದಲ್ಲಿ ನಿಮ್ಮ ಕೀರ್ತಿ ಹೆಚ್ಚಾಗಲಿದೆ.
ಕುಂಭ: ಸೃಜನಶೀಲ ಚಿಂತನೆಗಳು ನಿಮ್ಮ ವೃತ್ತಿಜೀವನಕ್ಕೆ ಹೊಸ ತಿರುವು ನೀಡಲಿವೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಸಿಗಲಿದೆ. ಪ್ರೀತಿ-ಪ್ರೇಮದ ವಿಚಾರಗಳಲ್ಲಿ ಯಶಸ್ಸು ದೊರೆಯಲಿದೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಪ್ರಯಾಣಗಳಿಂದ ಅನುಕೂಲವಾಗಲಿದೆ. ನಿರೀಕ್ಷಿಸದಿದ್ದರೂ ಸ್ನೇಹಿತರ ಸಹಕಾರ ಸಿಗಲಿದೆ.
ಮೀನ: ಮನಸ್ಸಿನಲ್ಲಿದ್ದ ಅಶಾಂತಿ ದೂರವಾಗಿ ನೆಮ್ಮದಿಯ ವಾತಾವರಣ ಮೂಡಲಿದೆ. ಧಾರ್ವಿುಕ ಸ್ಥಳಗಳಿಗೆ ಭೇಟಿ ನೀಡುವ ಯೋಗವಿದೆ. ಮಕ್ಕಳಿಂದ ಶುಭ ಸುದ್ದಿ ಕೇಳಲಿದ್ದೀರಿ. ಆರ್ಥಿಕವಾಗಿ ಸದೃಢವಾದ ವಾರವಿದು. ವೃತ್ತಿಯಲ್ಲಿ ಯಶಸ್ಸು ಖಚಿತ. ದೈವಾರಾಧನೆಯಲ್ಲಿ ಒಲವು ಹೆಚ್ಚಾಗಲಿದೆ. ಕುಲದೇವರ ಸ್ಮರಣೆ ಮಾಡಿ.