ವಾರಭವಿಷ್ಯ: ಹೀಗಿದೆ ನೋಡಿ 12 ರಾಶಿಗಳ ಫಲಾಫಲಗಳು

ವಾರಭವಿಷ್ಯ
ವಾರಭವಿಷ್ಯ
Published on: 

ಮೇಷ: ವರ್ಷ ಋತುವಿನ ಭಾದ್ರಪದ ಮಾಸವು ಆರಂಭವಾಗಿ ವೈಭವೋಪೇತವಾಗಿ ವ್ರತಗಳ ಆಚರಣೆಯನ್ನು ಮಾಡಿ ಮನುಷ್ಯನು ಪೂಜಾಫಲ ಪಡೆದು ಸುಖಿಯಾಗಿ ಬಾಳುವಂತೆ ಪರಮಾತ್ಮನೇ ಅನುಗ್ರಹಿಸಿದ್ದಾನೆ. ಶನಿಯು ದ್ವಾದಶದಲ್ಲಿ ಇರುವುದರಿಂದ, ನಿಷ್ಠುರದ ಮಾತನ್ನು ಆಡಿ ಯಾರ ಮನಸ್ಸಿಗೂ ನೋವುಂಟು ಮಾಡಬೇಡಿ, ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ ಮುಂದೆ ಹೆಜ್ಜೆ ಇಡಿ. ಬೇಕಾದದ್ದು ಸಿಕ್ಕೇ ಸಿಗುತ್ತದೆ.

ವೃಷಭ: ಶುಕ್ರ ತುಲಾ ರಾಶಿಯಲ್ಲಿ ಇದ್ದು , ಅವನ ಸ್ವಗೃಹದ ಫಲಾಫಲ ನಿಮಗೆ ಕೊಡುತ್ತಾನೆ. ಬುಧನು ತುಲಾ ರಾಶಿಗೆ ಬಂದಾಗ ಶುಕ್ರನ ಜೊತೆ ಸೇರಿ ನೀಮ್ಮ ಜೀವನ ಶೈಲಿ ಬದಲಾಯಿಸುತ್ತಾನೆ. ಕೊಡುವುದೆಲ್ಲವನ್ನು ಕೊಟ್ಟು ನಿಮ್ಮನ್ನು ರಕ್ಷಿಸುತ್ತಾನೆ. ಇಂತಹ ಪರಿಸ್ಥಿತಿಯಲ್ಲಿ ದುರ್ಗೆಯನ್ನು ಪ್ರಾರ್ಥಿಸಲೇಬೇಕು.

ಮಿಥುನ: ಅಧಿಪತಿಯು ಕನ್ಯಾ ರಾಶಿಯಲ್ಲಿ ಇದ್ದು ನಿಮ್ಮ ಚಲನವಲನಕ್ಕೆ ತಕ್ಕಂತೆ ಫಲವನ್ನು ನೀಡಲು ಗ್ರಹ ಸ್ಥಿತಿಗಳಿವೆ. 10ನೇ ಮನೆಯಲ್ಲಿ ಶನಿಯು, 9ನೇ ಮನೆಯಲ್ಲಿ ರಾಹು ಇರುವುದರಿಂದ ವಿವೇಚನೆಯಿಂದ ವರ್ತಿಸಿ. ಒಳ್ಳೆಯ ಸಂಪರ್ಕವನ್ನು ಬೆಳೆಸಿಕೊಂಡರೆ ಮಾತ್ರ ನಿಮ್ಮ ಕೆಲಸಗಳು ಪರಿಪೂರ್ಣವಾಗುತ್ತವೆೆ.

ಕಟಕ: ಗುರುವು ಉಚ್ಚ ರಾಶಿಯಲ್ಲಿ ಇದ್ದು, ನೀವು ಬೇಕಾದನ್ನು ಪಡೆಯುವ ಸಮಯ. ಶನಿಯು 9ರಲ್ಲಿದ್ದು ನೀವು ಬೇಡಿದ ವರವನ್ನು ಕೊಡುತ್ತಾನೆ. ಯಾವುದಕ್ಕೂ ಹೆದರುವ ಅವಶ್ಯಕತೆ ಇಲ್ಲ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಉಮಾಮಹೇಶ್ವರನನ್ನು ಪ್ರಾರ್ಥಿಸಿ, ಪ್ರತಿ ಸೋಮವಾರ ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ, ಶುಭವಾಗುವುದು.

ಸಿಂಹ: ಪೂರ್ವ ಪುಣ್ಯದ ಮೇಲೆ ಸಾಗಬೇಕೇ ಹೊರತು ದೈವ ಹಾಕಿಕೊಟ್ಟ ಹಳಿಯನ್ನು ದಾಟಿದರೆ ಅಪಾಯಕಾರಿಯಾಗುತ್ತದೆ. ಭಗವದ್​ ಕೃಪೆ ಪರಿಪೂರ್ಣವಾಗಲು ದೈವವನ್ನು ಪ್ರಾರ್ಥಿಸಿದರೆ, ಬಯಸಿದ ಕೆಲಸ ನಿರಾತಂಕವಾಗಿ ಇರಬಹುದು. ಸೂರ್ಯ ಅಷ್ಟೋತ್ತರ ಪ್ರತಿನಿತ್ಯ ಓದಲೇಬೇಕು.

ಕನ್ಯಾ: ಈ ಸಂದರ್ಭದಲ್ಲಿ ನೀವು ಮಾಡುವ ಯಾವುದೇ ಕೆಲಸಕ್ಕೂ ಕೃಷ್ಣ ಕೃಪೆ ಬೇಕು. ಕೃಷನ ಪೂಜೆಯನ್ನು, ಕೃಷ್ಣನ ನಾಮಾರ್ಚನೆಯನ್ನು ಮಾಡಿ ಕೃಷ್ಣನ ಮೂಲ ಮಂತ್ರ ಉಪದೇಶವನ್ನು ನಿಮ್ಮ ಗುರುಗಳಿಂದ ತೆಗೆದುಕೊಂಡು ಜಪತಪ ಹೋಮ ಮಾಡಿದರೆ ನೀವು ನಿಮ್ಮ ಗುರಿಯನ್ನು ಮುಟ್ಟಬಹುದು.

ತುಲಾ: ಕೃಷ್ಣನ ತುಲಾ ಭಾರದಲ್ಲಿ ಒಂದೇ ಒಂದು ತುಳಸಿ ಇರಿಸಿ ಕೃಷ್ಣನನ್ನು ಒಲಿಸಿಕೊಳ್ಳುವ ದಾರಿಯನ್ನು ಭಗವಂತನೇ ತೋರಿಸಿಕೊಟ್ಟಿದ್ದಾನೆ. ಅಲ್ಲಿಗೆ ಗೋವಿಂದನ ಕೃಪೆ ಇಲ್ಲದಿದ್ದರೆ ರಕ್ಷಣೆಯೂ ಇಲ್ಲ, ಯಶಸ್ಸೂ ಸಿಗುವುದಿಲ್ಲ. ತುಲಾ ರಾಶಿಯ ಅಧಿದೇವತೆ ದುರ್ಗೆಯಾದರೂ ಅವಳಿಗೆ ಕೃಷ್ಣನೇ ಸಹೋದರನಾಗಿದ್ದಾನೆ. ಕೃಷ್ಣನೆ ನಿಮ್ಮ ಆಪತ್ತಿನ ಕಾಲಕ್ಕೆ ಬಂದು ಸಹಾಯ ಮಾಡುವಂತೆ ಪೂಜೆ ಮಾಡಿದರೆ ನಿಮ್ಮ ಕೆಲಸಗಳು ಈಡೇರುತ್ತವೆೆ.

ವೃಶ್ಚಿಕ: ಒಂಬತ್ತನೇ ಮನೆ ಗುರು ಯಾವುದೇ ಕೆಲಸ ಮಾಡಿದರೂ ರಕ್ಷಣೆ ಮಾಡಿ ನಿಮ್ಮ ಹಿತವನ್ನು ಕಾಯುತ್ತಾನೆ. ಗುರುಸೇವೆಯನ್ನು ಏನು ಮಾಡಿದ್ದೀರೆಂದು ಮೆಲುಕು ಹಾಕಿಕೊಳ್ಳಿ. ಜೀವನ ಶೈಲಿಯನ್ನು ಯಾವ ರೀತಿ ಉತ್ತಮ ಪಡಿಸಿಕೊಳ್ಳಬೇಕೆಂದು ಅರ್ಥವಾಗುತ್ತದೆ. ಈ ರಾಶ್ಯಾಧಿಪತಿ ಸುಬ್ರಮಣ್ಯ ದೇವರು. ಅವನೊಬ್ಬನನ್ನು ಪೂಜಿಸಿ, ಪ್ರಾರ್ಥಿಸಿದರೆ ಸಾಕು, ನಿಮ್ಮ ಪಂಚಮ ಶನಿಯ ಬಾಧೆಯನ್ನು ನಿಲ್ಲಿಸುತ್ತಾನೆ.

ಧನಸ್ಸು: ಮನಸ್ಸಿಗೆ ಬಂದಂತೆ ನಾನೇ ಸರಿ ಎಂದು ಮದವೇರಿ ನಡೆಯಬಾರದು. ತಾತ್ಕಾಲಿಕವಾಗಿ ನಾಲ್ಕರಲ್ಲಿ ಶನಿ ಸಂಚಾರವಿದ್ದು ಎಲ್ಲೂ ನೋಡದೆ ಕುದುರೆಯಂತೆ ನಿಮ್ಮ ದೃಷ್ಟಿ ನೇರವಾಗಿ ಇದ್ದರೆ ಬೇಕಾದ್ದನ್ನು ಪಡೆಯಬಹುದು. ಮೈಲಾರಲಿಂಗೇಶ್ವರನನ್ನು ಪೂಜಿಸಿದರೆ ಏನು ಬೇಕಾದರೂ ಸಿಗುತ್ತದೆ. ಮಲ್ಲಾರಿ ಅಷ್ಟೋತರ ಪಠಿಸಿ.

ಮಕರ: ಕುಂಭ, ಮಕರ ರಾಶಿಗಳು ಶನಿ ಅಧಿಪತ್ಯದಲ್ಲಿವೆೆ. ಶನಿಯು ಮೂರನೇ ಮನೆಯಲ್ಲಿ ಇದ್ದಾನೆ. ನಿಮ್ಮ ಕೆಲಸಗಳ ಪಟ್ಟಿ ಮಾಡಿಕೊಂಡು ಯಾವುದು ಅತಿ ಮುಖ್ಯವೋ ಅದನ್ನು ಮೊದಲು ಮಾಡಿದರೆ ಸಪ್ತಮ ಗುರು ಕೂಡ ನೀವು ಕೇಳಿದ ಕೆಲಸ ಮಾಡಿಕೊಡುತ್ತಾನೆ. ಕಡಲೆಬೇಳೆ ದಾನ ನೀಡಿ. ದುರ್ಗೆಯನ್ನು ಪ್ರಾರ್ಥಿಸಿ. ಯಾವುದಾದರೂ ದಂಪತಿಗಳಿಗೆ ಹಣ್ಣು, ಪೂರ್ಣಫಲವನ್ನು ನೀಡಿ.

ಕುಂಭ: ಕಟ್ಟಕಡೆಯ ಭಾಗದಲ್ಲಿ ಶನಿ ಸಂಚಾರವಿದೆ. ಚಿಂತೆಯು ಬೇಡ. ಶನಿ ಬಿಡುವ ಕಾಲದಲ್ಲಿ ಒಳ್ಳೆಯದನ್ನೇ ಮಾಡುತ್ತಾನೆ ಎಂದು ಶಾಸ್ತ್ರವು ಹೇಳಿದೆ. ಆದರೆ ಮನುಷ್ಯನಿಗೆ ದೈವ ಪ್ರಾರ್ಥನೆ ಇರಬೇಕು. ಶನಿ ಹಾಗೂ ರಾಹು ಅಷ್ಟೋತ್ತರ ಪಠಿಸಿ. ಶನಿಯನ್ನು ತೃಪ್ತಿಗೊಳಿಸಿ. ನಿಮ್ಮ ಜೀವನವನ್ನು ಸರಿಪಡಿಸಿಕೊಂಡು ಬೇಕಾದ್ದನ್ನು ಪಡೆದುಕೊಳ್ಳಬಹುದು.

ಮೀನ: ಈ ರಾಶಿಯವರಿಗೆ ಗುರು ಪಂಚಮದಲ್ಲಿದ್ದು, ಲಗ್ನದಲ್ಲೇ ಶನಿ ಇರುವುದರಿಂದ ಪಂಚಮ ಗುರುವು ಪಾಪ ಗ್ರಹಗಳನ್ನು ಯಶಸ್ವಿಯಾಗಿ ಕಟ್ಟಿ ಹಾಕುತ್ತಾನೆ. ಹನುಮಂತನು ಲಂಕೆಗೆ ಹಾರಲು ಶ್ರೀರಾಮನ ಕೃಪೆ ಬೇಕಾದಂತೆ, ಈಗಲೂ ನೀವು ಶನಿ ಸಂಚಾರದಲ್ಲಿ ಇರುವುದರಿಂದ ರಾಮನನ್ನು ಶನಿವಾರ ಪೂಜಿಸಿ. ದೇವರಿಗೆ ಪಾನಕ, ಹೆಸರುಬೇಳೆ ಕೋಸಂಬರಿ ನೈವೇದ್ಯ ಮಾಡಿದರೆ ನಿಮ್ಮನ್ನು ಉತ್ತುಂಗಕ್ಕೆ ಕೊಂಡೊಯ್ಯುತ್ತಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net