

ಮೇಷ: ಮನುಷ್ಯನ ಸೃಷ್ಟಿಯಿಂದ ಅಂತ್ಯದವರೆಗೂ ಧರ್ಮಗ್ರಂಥಗಳಲ್ಲಿ ಹತ್ತು ಹಲವಾರು ನಿಯಮ ನಿರೂಪಣೆ ಮಾಡಿದ್ದಾರೆ. ಅದರಂತೆ ನಡೆದರೆ ಸುಖವಾಗಿ ಬದುಕಬಹುದು. ನಿಮ್ಮ ಗುರುಗಳನ್ನು ಸಂಪರ್ಕಿಸಿ ಪಾಪ ಪರಿಹಾರ ಮಾಡಿಕೊಳ್ಳಿ. ಎಂತಹ ಮನುಷ್ಯನೂ ಶನಿ ಸಂಚಾರ ಎದುರಿಸುವುದು ಕಷ್ಟಸಾಧ್ಯವೇ. ಈಶ್ವರನನ್ನು ಧ್ಯಾನಿಸಿ, ನಿಮ್ಮ ಯೋಗ ಕ್ಷೇಮ ಕಾಪಾಡುತ್ತಾನೆ.
ವೃಷಭ: ಈ ರಾಶಿಯಲ್ಲಿ ಹುಟ್ಟಿದವರು ಸಂಘಜೀವಿಗಳು. ಕಷ್ಟ-ಸುಖಕ್ಕೆ ಒಬ್ಬರಲ್ಲ ಒಬ್ಬರಾಗುತ್ತಾರೆ. ತಾಳ್ಮೆ, ಸತ್ಯ, ಪರೋಪಕಾರ, ತಂದೆತಾಯಿಯಲ್ಲಿ ಭಕ್ತಿ, ಕುಲದೇವರಲ್ಲಿ ಶ್ರದ್ಧೆ ಹಾಗೂ ಗುರುಹಿರಿಯರನ್ನು ಸಂಪರ್ಕಿಸದೆ ಏನೂ ಮಾಡಬಾರದು. ಅದರಂತೆ ನಡೆದರೆ ರಾಜಯೋಗ ಅನುಭವಿಸುತ್ತೀರಿ. ರಾಶಿಗೆ ಶುಕ್ರ ಅಧಿಪತಿ. ಧೋರಣೆ ಬುದ್ದಿಯನ್ನು ತಿದ್ದಿಕೊಂಡು ನೀವೇ ನಿಮ್ಮನ್ನು ಸರಿಪಡಿಸಿಕೊಳ್ಳಿ. ಚಂಡಿಯನ್ನು ಪೂಜಿಸಿ- ಪ್ರಾರ್ಥಿಸಿ.
ಮಿಥುನ: ವಾಲ್ಮೀಕಿ ಮಹರ್ಷಿಯಾಗುವುದಕ್ಕೂ ಮುನ್ನ ಕಾಡಿನಲ್ಲಿ ಅಲೆದಾಡಿ ಸಿಕ್ಕವರನ್ನು ಬಡಿದು ದೋಚುತ್ತಿದ್ದರು. ತನ್ನ ಪಾಪದಲ್ಲಿ ಯಾರೂ ಪಾಲುದಾರರಾಗುವುದಿಲ್ಲ ಎಂಬ ಅರಿವಾದಾಗ ವಾಲ್ಮೀಕಿ ಮಹರ್ಷಿಯಾಗುತ್ತಾರೆ. ಹಾಗೆಯೇ ನೀವು ರಾಮನಂತೆ ರಾಮರಾಜ್ಯ ಕಟ್ಟಿ ಸುಖವಾಗಿರಬಹುದು. ದೈವಭಕುತಿ ಇರಲಿ. ಅಹಂಕಾರವನ್ನು ಬಿಡಬೇಕು. ರಾಮಾಯಣ ಪಾರಾಯಣ ಮಾಡಿರಿ.
ಕಟಕ: ಈ ಲೋಕದಲ್ಲಿ ಅತ್ಯಂತ ಸ್ವಚ್ಛವಾದ ಪದಾರ್ಥ ಜಲವೊಂದೇ. ಊಟ ಬಿಡಬಹುದು. ಜೀವಜಲವನ್ನು ಬಿಡಲಾರೆವು. ಶಿವನನ್ನು ಪೂಜಿಸಿದರೆ ಎಲ್ಲ ಕಂದಕವನ್ನೇ ದಾಟಿ ಐಶ್ವರ್ಯವನ್ನು ಸೌಭಾಗ್ಯವನ್ನು ಹೊಂದಿ ಸುಖವಾಗಿರಬಹುದು. ನಿಮ್ಮ ಕಾರ್ಯಗಳನ್ನು ಶಿವನೇ ನಡೆಸಿಕೊಡುತ್ತಾನೆ.
ಸಿಂಹ: ಸುಮ್ಮನೆ ಸಿಂಹ ಗರ್ಜಿಸಿದರೆ ಉಪಯೋಗವಿಲ್ಲ. ಆದರೆ ಗಾಂಭೀರ್ಯದ ಆನೆಯೇ ಸಾಕು ಸಿಂಹವನ್ನು ನಿರ್ನಾಮ ಮಾಡಲು. ಆದ್ದರಿಂದ ಅಹಂಕಾರ, ದರ್ಪ, ಯಾರೊಂದಿಗೂ ನಿಷ್ಠುರ ಬೇಡ. ಅಷ್ಟಮದಲ್ಲಿ ಶನಿಯಿದ್ದಾನೆ. ದೈವಬಲ ಕಡಿಮೆಯಾಗಿದೆ. ನಿತ್ಯ ಸೂರ್ಯನಾರಾಯಣನನ್ನು ಪೂಜಿಸಿ. ಈಶ್ವರನನ್ನು ಧ್ಯಾನಿಸಿ. ಇರುವ ಭಾಗ್ಯವೇ ದೊಡ್ಡದಾಗುವುದು.
ಕನ್ಯಾ: ಹೆಣ್ಣು ಮಕ್ಕಳನ್ನು ಸೀತೆಯಂತೆ ಕಾಣಬೇಕು. ಸೌಭಾಗ್ಯವತಿಯಂತೆ ನೋಡಬೇಕು. ಕಷ್ಟ ಕಾಲದಲ್ಲಿ ನಮಗೆ ಸಹಾಯ ಮಾಡಿದವರನ್ನು ನೆನೆಸಿಕೊಳ್ಳಬೇಕು. ಜೀವಂತವಾಗಿರುವಾಗಲೇ ಎಲ್ಲರ ಋಣವನ್ನು ತೀರಿಸಿಕೊಳ್ಳಬೇಕು. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಮುಂದೆ ಸಾಗಿದರೆ ಸಪ್ತಮ ಶನಿಯ ತಾಪವನ್ನು ಸ್ವಲ್ಪ ಮಟ್ಟಿಗೆ ಸುಧಾರಿಸಿಕೊಳ್ಳಬಹುದು.
ತುಲಾ: ಕೃಷ್ಣನಿಗೆ ತುಳಸಿಯೊಂದೇ ಪ್ರಿಯವಾದದ್ದು. ಯಾರಿಗೆ ಏನು ಇಷ್ಟವಿದೆಯೋ ಅದನ್ನು ಮಾಡಿದರೆ ಮಾತ್ರವೇ ಪ್ರಿಯವಾಗುತ್ತದೆ. ಅಸೂಯೆ, ಅಹಂಕಾರದಿಂದ ಕಾರ್ಯಸಿದ್ಧಿಯಾಗದು. ನೀವು ಯಾರ ಅಂತಸ್ತಿಗೂ ಕಡಿಮೆಯಿಲ್ಲದಂತೆ ಸಂಪಾದನೆ ಮಾಡುವ ಕಾಲವಿದು. 2029ರವರೆಗೂ ಮಟ್ಟಿದ್ದೆಲ್ಲ ಬಂಗಾರ, ಇಟ್ಟಿದ್ದೆಲ್ಲಾ ಬ್ಯಾಂಕಿನಲ್ಲಿ. ನೀವು ಸಂತೋಷಪಡುವ ಸಮಯವಿದು.
ವೃಶ್ಚಿಕ: ಚೇಳು ಕಚ್ಚುತ್ತದೆಂದರೆ ಪ್ರಾಣಭಯ ಉಂಟಾಗುತ್ತದೆ. ಇಷ್ಟು ದೊಡ್ಡ ದೇಹ ಒಂದು ಸಣ್ಣದಾದ ಕ್ರಿಮಿಗೆ ಹೆದರಿರಬೇಕೆಂದರೆ ದೈವಬಲವಿಲ್ಲ. ಅದು ದೂರವಾಗಬೇಕಾದರೆ ಸುಬ್ರಹ್ಮಣ್ಯ ದೇವರನ್ನು ಬ್ರಹ್ಮಚಾರಿಯ ರೂಪದಲ್ಲಿ ಪ್ರಾರ್ಥಿಸಿ. ಪೂಜಿಸಿ. ನಿಮ್ಮ ಗುರುಗಳಿಗೆ ಶರಣಾದರೆ ಸಾಲವೂ ತೀರಿ ಹೆಂಡತಿ-ಮಕ್ಕಳನ್ನು, ಸಂಸಾರವನ್ನು ಸುಖವಾಗಿಟ್ಟುಕೊಳ್ಳಬಹುದು.
ಧನಸ್ಸು: ಧನುರ್ ವಿದ್ಯೆಯೆಂದರೆ ಬಿಲ್ಲು ಬಾಣ ಮಾತ್ರವಲ್ಲ. ಯಾವ ವಸ್ತುವನ್ನು ಹೇಗೆ ಬಳಸಬೇಕು. ನಮ್ಮ ಆಶೋತ್ತರವನ್ನು ಹೇಗೆ ಪಡೆಯಬೇಕು ಎಂಬ ಆಲೋಚನೆ ಇರಬೇಕು. ಯಾರಿಗೂ ಮನಸ್ಸು ನೋವಾಗದಂತೆ ನೋಡಿಕೊಳ್ಳಬೇಕು. ಶುದ್ಧಾತ್ಮ ಭಕ್ತಿಯಿಂದ ದೇವಿಯನ್ನು ಪೂಜಿಸಿ. ರಾಜಯೋಗ ಪಡೆಯುವುದು ಶತಸಿದ್ಧ. ತಂದೆ-ತಾಯಿಯನ್ನು ಪೂಜಿಸಿ.
ಮಕರ: ಆಡಿದ ಮಾತುಗಳು ಸವಿಯಾಗಿರಬೇಕು. ಲಾವಣ್ಯ, ತಾರುಣ್ಯ, ಯೌವನ ಕಾಣಲು ದೈವಭಕ್ತಿ ಇರಬೇಕು. ಮನಸ್ಸನು ಶುದ್ಧಗೊಳಿಸಿಕೊಂಡು ಪಾಪ ಕಾರ್ಯಗಳನ್ನು ಮಾಡದೇ ಪುಣ್ಯದ ಹಾದಿಯಲ್ಲಿ ನಡೆದರೆ ಮನೆಯಲ್ಲಿ ಶಾಂತಿ, ಧನಾಭಿವೃದ್ಧಿ ಆಗುತ್ತದೆ. ಜಗಳ ಮಾಡಲು ಹೋಗಬೇಡಿ.
ಕುಂಭ: ಜಗತ್ತಿನಲ್ಲಿ ಏನು ಬೇಕಾದರೂ ಸಿಗುತ್ತದೆ. ಮೋಹಕ್ಕೆ ಬಿದ್ದರೆ ನಷ್ಟ, ನೋವು ಅನುಭವಿಸುತ್ತೇವೆ. ಅಲೆಗ್ಸಾಂಡರ್ಗೆ ಮೃತ್ಯು ಸಮೀಸಿತ್ತು. ದೇಹವನ್ನು ತೆಗೆದುಕೊಂಡು ಕೈಗಳನ್ನು ಆಚೆ ಇರಿಸಿ ಎಂದು ಹೇಳುತ್ತಾನೆ. ಏಕೆಂದು ಕೇಳಿದಾಗ ದುಡ್ಡನ್ನಾಗಲಿ, ದೇಶವನ್ನಾಗಲಿ, ಅನ್ಯರ ಸಂಪತ್ತನ್ನಾಗಲಿ, ರಾಷ್ಟ್ರ ಸಂಪತ್ತನ್ನಾಗಲಿ ಇಲ್ಲೇ ಬಿಟ್ಟು ಹೋಗಬೇಕು ಎನ್ನುತ್ತಾನೆ. ಪುರ್ನಜನ್ಮವು ಬಾರದಿರುವುದು ಇಂತಹ ಜೀವನದ ಸತ್ಯವನ್ನು ಅರಿತಾಗ ಎಂದು ತಿಳಿದು ಶನಿಸಂಚಾರದ ಸಮಯದಲ್ಲಿ ಬದುಕಬೇಕು.
ಮೀನ: ನಾವು ಸ್ವತಂತ್ರವಾಗಿ ಭಗವಂತನ ಸೃಷ್ಟಿಯಾದ ಗಾಳಿ, ಬೆಂಕಿ, ಪೃಥ್ವಿ, ಆಕಾಶ, ಬಲ ಇದನ್ನೆಲ್ಲ ಉಪಯೋಗಿಸಿ ಪರಮಾತ್ಮನಿಗೆ ಏನು ಕೊಡುತ್ತೇವೆ ಎಂದು ಯೋಚಿಸಬೇಕು. ಜೀವನವು ಅರ್ಥವಾಗದೇ ನಮಗಿಂತ ಕೆಳಗಿರುವವರನ್ನು ಹಿಂಸಿಸಿ ಕಾಡುವುದನ್ನು ಬಿಟ್ಟು ನಾವು ಯಾರಿಗೂ ಕಂಡು ಕಾಣದಂತೆ ಎಲೆಮರೆಯಲ್ಲಿದ್ದು, ಒಳ್ಳೆಯ ಮಾತು ಕೇಳಿ, ಒಳ್ಳೆಯ ಯೋಚನೆ ಮಾಡಿರಿ. ಶನಿ ಸಂಚಾರ ಇರುವುದರಿಂದ ಎಲ್ಲರ ಮಾತು ಕೇಳಿ. ಒಳ್ಳೆಯದನ್ನು ಮಾತ್ರ ಅಳವಡಿಸಿಕೊಳ್ಳಿ.