

ಮೇಷ
ಸಂಪರ್ಕ ಮತ್ತು ಅವಕಾಶ ಒದಗಿಬರಲಿವೆ. ಮನಸ್ಸು ಉತ್ಸಾಹದಿಂದ ಕೂಡಿರಲಿದೆ. ಉದ್ಯೋಗ ಕ್ಷೇತ್ರದಲ್ಲಿ ಹಿರಿಯ ಅಧಿಕಾರಿಗಳಿಂದ ಮಹತ್ವದ ಜವಾಬ್ದಾರಿಗಳು ಹೆಗಲೇರಲಿವೆ. ಬುದ್ಧಿವಂತಿಕೆಯಿಂದ ಕ್ಲಿಷ್ಟಕರ ಸಮಸ್ಯೆಗಳನ್ನು ಸುಲಭವಾಗಿ ಪರಿಹರಿಸುವಿರಿ. ವ್ಯಾಪಾರಿಗಳಿಗೆ ಹೊಸ ಒಪ್ಪಂದದ ಸಾಧ್ಯತೆಯಿದೆ.
ವೃಷಭ
ಅಪಾರ ಉಲ್ಲಾಸ ಹಾಗೂ ನೆಮ್ಮದಿ ಸಿಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ರಂಗದಲ್ಲಿ ಯಶಸ್ಸು ಕಾದಿದೆ. ದೂರಪ್ರಯಾಣ ಯೋಗವಿದ್ದು, ಮನಸ್ಸಿಗೆ ಧಾರ್ವಿುಕ ಹಾಗೂ ಸೇವಾ ಕಾರ್ಯಗಳಲ್ಲಿ ಅಧಿಕ ಒಲವು ಮೂಡಲಿದೆ. ವಿದ್ಯಾರ್ಥಿಗಳಿಗೆ ಉನ್ನತ ವಿದ್ಯಾಭ್ಯಾಸಕ್ಕೆ ವಿದೇಶದಿಂದ ಅಥವಾ ಪ್ರಮುಖ ಸಂಸ್ಥೆಗಳಿಂದ ಆಹ್ವಾನ ಸಿಗಲಿದೆ.
ಮಿಥುನ
ಹಿರಿಯರ ಆಶೀರ್ವಾದ ನಿಮ್ಮೊಂದಿಗೆ ಇರಲಿದೆ. ಶುಭ ಸುದ್ದಿಗಳು ಸಿಗಲಿವೆ. ಕೈಗೆತ್ತಿಕೊಂಡ ನೂತನ ಕಾರ್ಯಗಳಲ್ಲಿ ಅನಿರೀಕ್ಷಿತ ಯಶಸ್ಸು ಸಿಗಲಿದ್ದು, ವರ್ಚಸ್ಸು ಹೆಚ್ಚಾಗಲಿದೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಬರಲಿದೆ. ದಾಂಪತ್ಯ ಜೀವನದಲ್ಲಿ ಸಾಮರಸ್ಯ ವೃದಿಟಛಿಸಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ವಾರಾಂತ್ಯ ದಲ್ಲಿ ಬಂಧುಗಳ ಆಗಮನದಿಂದ ಮನೆಯಲ್ಲಿ ಸಂಭ್ರಮದ ವಾತಾವರಣ.
ಕಟಕ
ಮನಸ್ಸಿನಲ್ಲಿ ಹೊಸ ಯೋಜನೆಗಳ ರೂಪುರೇಷೆಗಳು ಸಿದಟಛಿಗೊಳ್ಳಲಿವೆ. ಕಚೇರಿಯಲ್ಲಿ ಸಹೋದ್ಯೋಗಿಗಳ ಬೆಂಬಲದಿಂದ ಕೆಲಸ ವೇಗವಾಗಿ ಮುಗಿಯಲಿವೆ. ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ಅನಗತ್ಯ ಖರ್ಚು ನಿಯಂತ್ರಿಸಿ. ಆರೋಗ್ಯ ಅತ್ಯುತ್ತಮವಾಗಿದ್ದು, ಹೊಸ ಉತ್ಸಾಹ ಹಾಗೂ ಧೈರ್ಯ ಮೂಡಲಿದೆ. ಕುಟುಂಬದೊಂದಿಗೆ ಪ್ರವಾಸ.
ಸಿಂಹ
ಧನಲಾಭ, ಮನಸ್ಸು ಪ್ರಫುಲ್ಲವಾಗಿರುತ್ತದೆ. ನೂತನ ಅವಕಾಶ ಬರಲಿವೆ. ಆರ್ಥಿಕ ವ್ಯವಹಾರಗಳಲ್ಲಿ ಕೊಂಚ ಎಚ್ಚರಿಕೆ ವಹಿಸುವುದು ಅತ್ಯಂತ ಅಗತ್ಯ. ಷೇರು ಅಥವಾ ಊಹಾತ್ಮಕ ವಹಿವಾಟುಗಳಿಂದ ದೂರವಿರಿ. ದಾಂಪತ್ಯದಲ್ಲಿ ಹೊಂದಾಣಿಕೆ ಅಗತ್ಯ. ಹಿರಿಯರ ಮಾರ್ಗದರ್ಶನದಿಂದ ದೊಡ್ಡ ಸಂಕಷ್ಟದಿಂದ ಪಾರಾಗುವಿರಿ. ಧಾರ್ವಿುಕ ಕಾರ್ಯಗಳಲ್ಲಿ ಭಾಗಿ. ಹೊಸ ಯೋಜನೆಗಳು ಆರಂಭವಾಗಲಿವೆ.
ಕನ್ಯಾ
ಅನಿರೀಕ್ಷಿತ ಧನಾಗಮನವಿದೆ. ಆರೋಗ್ಯ ಸುಧಾರಿಸಲಿದೆ. ಉದ್ಯೋಗ ಬದಲಾವಣೆಗೆ ಪ್ರಯತ್ನಿಸುತ್ತಿರುವವರಿಗೆ ಕಚೇರಿಯಿಂದ ಅಥವಾ ಉತ್ತಮ ಸಂಸ್ಥೆಯಿಂದ ಆಹ್ವಾನ ಬರಲಿದೆ. ವ್ಯಾಪಾರದಲ್ಲಿ ಲಾಭದ ಪ್ರಮಾಣ ಹೆಚ್ಚಾಗಲಿದೆ. ಕಾನೂನು ತೊಡಕುಗಳಿಂದ ಮುಕ್ತಿ ಸಿಗಲಿದೆ. ಪ್ರೀತಿ-ಪ್ರೇಮದ ವಿಚಾರಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಆರ್ಥಿಕವಾಗಿ ಸದೃಢವಾದ ವಾರವಿದು. ಆರೋಗ್ಯ ಉತ್ತಮವಾಗಿರಲಿದೆ. ಸ್ನೇಹಿತರ ಸಹಕಾರ ಸಿಗಲಿದೆ.
ತುಲಾ
ನಿಮ್ಮ ವಿಶಿಷ್ಟ ಆಲೋಚನೆಗಳು ಎಲ್ಲರ ಪ್ರಶಂಸೆಗೆ ಪಾತ್ರವಾಗಲಿವೆ. ಹಠಾತ್ ಧನಾಗಮದಿಂದ ಬಾಕಿ ಕೆಲಸಗಳು ಪೂರ್ಣಗೊಳ್ಳಲಿವೆ. ಸ್ನೇಹಿತರೊಡನೆ ಪ್ರವಾಸ ತೆರಳುವ ಯೋಗವಿದೆ. ಆರೋಗ್ಯದ ವಿಚಾರದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಹೊಸ ಸಂಪರ್ಕಗಳು ಸಿಗಲಿವೆ. ಮನಸ್ಸು ಉಲ್ಲಾಸದಿಂದಿರಲಿದೆ.
ವೃಶ್ಚಿಕ
ಕೆಲಸದ ಒತ್ತಡ ಹೆಚ್ಚಿದ್ದರೂ ನಿಮ್ಮ ಇಚ್ಛಾಶಕ್ತಿಯಿಂದ ಎಲ್ಲ ಸವಾಲುಗಳನ್ನು ಸಮರ್ಥವಾಗಿ ಎದುರಿಸುವಿರಿ. ವಾಹನ ಚಾಲನೆ ಮಾಡುವಾಗ ಮತ್ತು ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ವಾರಾಂತ್ಯದಲ್ಲಿ ಹಳೆಯ ಸ್ನೇಹಿತರ ಭೇಟಿಯಿಂದ ಮನಸ್ಸಿಗೆ ಅಪಾರ ನೆಮ್ಮದಿ ಸಿಗಲಿದೆ. ಕೌಟುಂಬಿಕ ನೆಮ್ಮದಿ ಇರಲಿದೆ. ಹೂಡಿಕೆಯಿಂದ ಲಾಭವಿದೆ. ಹೊಸ ಜವಾಬ್ದಾರಿಗಳು ಸಿಗಲಿವೆ.
ಧನು
ವೃತ್ತಿ ರಂಗದಲ್ಲಿ ನಿಮ್ಮ ಪರಿಶ್ರಮಕ್ಕೆ ತಕ್ಕ ಮನ್ನಣೆ ದೊರೆಯಲಿದೆ. ಪ್ರಮುಖ ದಾಖಲೆಗಳಿಗೆ ಸಹಿ ಹಾಕುವಾಗ ಜಾಗರೂಕರಾಗಿರಿ. ಮನೆಯಲ್ಲಿ ಮಂಗಳ ಕಾರ್ಯಗಳ ಕುರಿತು ಗಂಭೀರ ಚರ್ಚೆ ನಡೆಯಲಿದೆ. ಆರ್ಥಿಕ ಪ್ರಗತಿ ಕಂಡುಬರಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಸಂಗಾತಿಯ ಬೆಂಬಲ ಸಿಗಲಿದೆ. ಪ್ರವಾಸ ಯೋಗವಿದೆ.
ಮಕರ
ನಿಮ್ಮ ನಿಖರವಾದ ನಿರ್ಧಾರಗಳು ವೃತ್ತಿ ಬದುಕಿಗೆ ಹೊಸ ತಿರುವು ನೀಡಲಿವೆ. ಹೊಸ ಉದ್ಯಮ ಅಥವಾ ಹೂಡಿಕೆಗೆ ಅನುಕೂಲಕರವಾಗಿದೆ. ಕುಟುಂಬದಲ್ಲಿ ಹಿರಿಯರ ಆರೋಗ್ಯ ಸುಧಾರಿಸಲಿದೆ. ವಿದ್ಯಾರ್ಥಿಗಳಿಗೆ ಏಕಾಗ್ರತೆ ಹೆಚ್ಚಾಗಲಿದೆ. ಶುಭ ಸುದ್ದಿಯನ್ನು ನಿರೀಕ್ಷಿಸಬಹುದು.
ಕುಂಭ
ಸಣ್ಣಪುಟ್ಟ ವಿಷಯಗಳಿಗೂ ಅತಿಯಾಗಿ ಆಲೋಚಿಸಿ ಚಿಂತಿಸಬೇಡಿ. ವ್ಯವಹಾರದಲ್ಲಿ ಜಾಗರೂಕತೆ ವಹಿಸಿ. ಮಕ್ಕಳಿಂದ ಹೆಮ್ಮೆಯ ಸುದ್ದಿಯನ್ನು ಕೇಳಲಿದ್ದೀರಿ. ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ. ಆರ್ಥಿಕವಾಗಿ ಸಾಮಾನ್ಯ ವಾರ.
ಮೀನ
ದಾಂಪತ್ಯ ಮಧುರವಾಗಿರುತ್ತದೆ. ಹೊಸ ಯೋಜನೆಗಳಿಗೆ ಚಾಲನೆ ನೀಡುವಿರಿ. ಆಕಸ್ಮಿಕ ಧನಲಾಭದ ಯೋಗವಿದೆ. ಕುಟುಂಬದೊಂದಿಗೆ ದೇವಾಲಯಗಳಿಗೆ ಭೇಟಿ ನೀಡುವಿರಿ. ಮನಸ್ಸು ಪ್ರಫುಲ್ಲವಾಗಿರುತ್ತದೆ. ನೂತನ ಅವಕಾಶಗಳು ಸಿಗಲಿವೆ. ಹಿರಿಯರ ಮಾರ್ಗದರ್ಶನವಿರಲಿದೆ.