ವಾರಭವಿಷ್ಯ: ಈ ರಾಶಿಯವರು ಅತ್ಯಂತ ನೆಮ್ಮದಿ, ಸಂತೋಷದಿಂದ ಬದುಕುತ್ತೀರಿ

ವಾರಭವಿಷ್ಯ
ವಾರಭವಿಷ್ಯ
Published on

ಮೇಷ: ಹರಿಹರ ಬ್ರಹ್ಮರು, ಸನಕಾದಿ ಋಷಿಗಳು ತಿಳಿಸಿರುವಂತೆ ದಕ್ಷಿಣಾಯಣದ ವ್ರತಾಧಿನಿಯ ಮಗಳು ಎಲ್ಲವೂ ಕಡೆಯ ಹಂತಕ್ಕೆ ಬಂದಿದ್ದು ಉತ್ತರಾಯಣ ಪುಣ್ಯ ಕಾಲವು ಜ. 15 ರಿಂದ ಆರಂಭವಾಗುತ್ತದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ದ್ವಾದಶದಲ್ಲಿ ಶನಿ ಇದ್ದು ಆರೋಗ್ಯವನ್ನು ಕಾಪಾಡಿಕೊಂಡು ಮುಂದೆ ಸಾಗಿದರೆ ಉತ್ತಮ. ಆದಿತ್ಯ ಹೃದಯ ಪಾರಾಯಣ ಮಾಡಿ. ಸುಬ್ರಮಣ್ಯನ್ನು ಪೂಜಿಸಿ.

ವೃಷಭ: ಸೂರ್ಯನು ನವಮಕ್ಕೆ ಬರುತ್ತಾನೆ. ಏಕಾದಶದಲ್ಲಿ ಶನಿ ಇದ್ದಾನೆ. ಗ್ರಹಗಳು ಅತ್ಯುತ್ತಮ ಸ್ಥಾನದಲ್ಲಿದ್ದಾಗ ವರವನ್ನು ಕೊಟ್ಟು ಹರಸುತ್ತಾರೆ. ಅಂದುಕೊಂಡ ಕಾರ್ಯಗಳು ಸಿದ್ಧಿ ಯಾಗುತ್ತವೆ. ಸಾಧ್ಯವಾದಲ್ಲಿ ಒಡಿಶಾದಲ್ಲಿರುವ ಕೋನಾರ್ಕನ ಸೂರ್ಯ ದೇವಾಲಯಕ್ಕೆ ಭೇಟಿ ನೀಡಿ. ನಿಮ್ಮ ಭಾಗ್ಯ ಚಕ್ರವೇ ತಿರುಗುತ್ತದೆ. ದುರ್ಗೆಯನ್ನು ಪೂಜಿಸಿ ದುರ್ಗಾಷ್ಟೋತ್ತರ ಪಠಿಸಿ. ಮನಸ್ಸಿನ ನೋವಿಗೆ ಇದೇ ದಿವ್ಯ ಔಷಧ.

ಮಿಥುನ: ಮಿಥುನಾಧಿಪತಿ ಬುಧನು ಧನು ರಾಶಿಯಲ್ಲಿದ್ದಾನೆ. ಪಂಚತಂತ್ರವನ್ನು ಅರ್ಥೈಸಿಕೊಂಡು ನಿಮ್ಮ ಧೈರ್ಯ ತಂತ್ರಗಾರಿಕೆಯನ್ನು, ಗುರು ಮಂತ್ರವನ್ನು ಉಪಯೋಗಿಸಿದರೆ ದೇವರೇ ಅಮೂಲ್ಯವಾದ ಗಳಿಗೆಯನ್ನು ಸೃಷ್ಟಿಸುತ್ತಾನೆ. ಧನ ಸಂಪತ್ತಿಗೆ ಕೊರತೆ ಇಲ್ಲ. ಆರೋಗ್ಯಕ್ಕಾಗಿ ಧನ್ವಂತರಿಯನ್ನು ಪೂಜಿಸಿ.

ಕಟಕ: ರವಿ ಸಪ್ತಮಕ್ಕೆ ಪ್ರವೇಶಿಸಲಿದ್ದು ಜೀವಕ್ಕೆ ಹುರುಪು ತಂದು ಮಾಡುವ ಕಾರ್ಯಗಳಲ್ಲಿ ತೃಪ್ತಿ ಉಂಟಾಗುತ್ತದೆ. ಆದರೆ ದ್ವಾದಶದಲ್ಲಿ ಗುರು ಇರುವುದರಿಂದ ನಡೆನುಡಿ ಎಚ್ಚರವಾಗಿರಬೇಕು. ಕೈಲಾದಷ್ಟು ಕೆಲಸವನ್ನು ಮಾತ್ರ ಮಾಡಬೇಕು. ಆರೋಗ್ಯವನ್ನು ಕೆಡಿಸಿಕೊಳ್ಳದಿರಿ. ಸದಾಶಿವನನ್ನು ಮನಸಾರೆ ಪೂಜಿಸಿ ಜೀವನವು ಸುಖಮಯವಾಗುತ್ತದೆ.

ಸಿಂಹ: ಈ ರಾಶಿಗೆ ರವಿಯು ಆರನೇ ಮನೆಯನ್ನು ಸೇರಲಿದ್ದು ಅದು ಶನಿಯ ಮನೆಯಾಗುತ್ತದೆ. ಶನಿಯು ಅಷ್ಟಮದಲ್ಲಿದ್ದರೂ ತಂದೆ ಸೂರ್ಯನನ್ನೂ ಪೂಜಿಸಿದರೆ ಮಹಾದೇವನ ಸೃಷ್ಟಿಯಾದ ಶನಿಯು ತೃಪ್ತನಾಗುತ್ತಾನೆ. ಸೂರ್ಯನು ಆದಿತ್ಯಾತ್ಮಕ ರುದ್ರನಾಗಿ ನಿಮ್ಮನ್ನು ಕಾಪಾಡುತ್ತಾನೆ. ಕೇತುವಿಗೆ ಗಣಪತಿಯನ್ನು ಪೂಜಿಸಿ. ಧನಾಗಮವಾಗಲು ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ.

ಕನ್ಯಾ: ಪಂಚಮಕ್ಕೆ ಸೂರ್ಯನು ಬರಲಿದ್ದು ಶನಿಯು 7ನೇ ಮನೆಯಲ್ಲಿದ್ದಾನೆ. ಆರೋಗ್ಯವನ್ನು ಕಾಪಾಡಿಕೊಂಡರೆ ಜಗತ್ತನ್ನೇ ಗೆಲ್ಲ ಬಹುದು. ಕಾರ್ಯಕಾರಣ ಸಂಬಂಧ ಇಲ್ಲದೆ ಶರೀರದ ಸುತ್ತಳತೆ ಏರುಪೇರಾಗಿ ಅನಾರೋಗ್ಯವು ಬರುವ ಸಾಧ್ಯತೆ ಇದೆ. ಶೀಘ್ರವಾಗಿ ಅದಕ್ಕೆ ಪ್ರತೀಕಾರ ಕೊಡಬೇಕು. ಸರಿಯಾದ ವೈದ್ಯರನ್ನು ಸಂಪರ್ಕಿಸಿ ಅತ್ಯುತ್ತಮ ಚಿಕಿತ್ಸೆಯನ್ನು ಪಡೆಯಿರಿ. ರೋಗವು ನಿರೋಗವಾಗುತ್ತದೆ. ಮಹಾ ವಿಷ್ಣುವಿನ ಅಷ್ಟೋತ್ತರ ಪಠಿಸಿ.

ತುಲಾ: ಭಾಗ್ಯಚಕ್ರವು ಒಲಿದು ಬಂದು ಶನಿ 6ರಲ್ಲಿ ಇದ್ದು, ಗುರು 9ರಲ್ಲಿದ್ದಾನೆ. ಅತ್ಯಂತ ನೆಮ್ಮದಿ, ಸಂತೋಷದಿಂದ ಬದುಕುತ್ತೀರಿ. ಒಳ್ಳೆಯ ಕಾರ್ಯಗಳನ್ನು ಮಾಡಲು ಮನಃ ಸಂಕಲ್ಪ ಇರಬೇಕು. ದುರ್ಗಾ ಸಹಸ್ರನಾಮ ಪಾರಾಯಣ ಮಾಡಿ.

ವೃಶ್ಚಿಕ: ಪಂಚಮದಲ್ಲಿ ಶನಿ ಇದ್ದು ಗುರುವು ಅಷ್ಟಮದಲ್ಲಿದ್ದಾನೆ. ಹೊಸ ವ್ಯಾಪಾರ ವ್ಯವಹಾರ ಪ್ರಾರಂಭಿಸಿ ಕೈ ಸುಟ್ಟುಕೊಳ್ಳಬೇಡಿ. ಗ್ರಹಗಳ ಚಲನೆ ಮನುಷ್ಯನನ್ನು ಪರೀಕ್ಷಿಸಲೆಂದೇ ಇರುವುದರಿಂದ ಸುಬ್ರಹ್ಮಣ್ಯ ದೇವರನ್ನು ಅನನ್ಯವಾಗಿ ಪ್ರಾರ್ಥಿಸಿ. ಲಕ್ಷ್ಮಿ ನರಸಿಂಹ ಮೂಲ ಮಂತ್ರ ಪಠಿಸಿ. ಅನಿರೀಕ್ಷಿತ ಧನಾಗಮವಾಗುತ್ತದೆ. ಆರೋಗ್ಯದ ಬಗ್ಗೆ ಎಚ್ಚರ ವಹಿಸಿ.

ಧನಸ್ಸು: ರಾಶಿ ಅಧಿಪತಿಯು ಸಪ್ತಮದಲ್ಲಿ ಇದ್ದು, ಸೂರ್ಯನು ಎರಡನೆಯ ಮನೆಯನ್ನು ಪ್ರವೇಶಿಸಲಿದ್ದಾನೆ. ಸಪ್ತಮ ಗುರು ಲೋಕರಕ್ಷಕನು, ಪ್ರಜಾ ರಕ್ಷಕನು, ಜೀವನದಲ್ಲಿ ಜಯವನ್ನು ತರುವವನು. ಗುರುವಿನ ಅನುಗ್ರಹ ಇದ್ದರೆ ನಿಮ್ಮ ಭಾಗ್ಯವನ್ನು ಲಲಾಟದಲ್ಲಿ ನೀವೇ ಬರೆದುಕೊಳ್ಳಬಹುದು. ಬ್ರಹ್ಮನು ಕೂಡ ಅದನ್ನು ಅಂಗೀಕಾರ ಮಾಡಿ ಬಹುಭಾಗ್ಯವನ್ನು ತಂದುಕೊಡುತ್ತಾನೆ. ಗುರು ದತ್ತಾತ್ರೇಯನನ್ನು ಪೂಜಿಸಿ, ಪ್ರಾರ್ಥಿಸಿ.

ಮಕರ: ನಕಾರಾತ್ಮಕ ಜೀವನವನ್ನು ಮಕರ ರಾಶಿಯವರು ಎಂದೆಂದಿಗೂ ಯೋಚನೆ ಮಾಡಬಾರದು. ಶನಿಯ ಆಧಿಪತ್ಯ ಇರುವ ರಾಶಿ ಇದು. ಕಷ್ಟಜೀವಿಗಳನ್ನು ರಕ್ಷಿಸು ವವನೇ ಶನಿ. ಶಾಲೆಯಲ್ಲಿ ಪರೀಕ್ಷೆಯು ನಡೆಯುವಂತೆ ಮನುಷ್ಯನ ಜೀವನದಲ್ಲೂ ಆಗಿಂದಾಗೆ ಪರೀಕ್ಷೆಯು ನಡೆಯುತ್ತದೆ. ಆದ್ದರಿಂದ ಶಿವನೇ ಶನಿಯನ್ನು ನೇಮಕ ಮಾಡಿ ಅವನ ತೀರ್ಪನ್ನು ಅಂಗೀಕಾರ ಮಾಡಿರುತ್ತಾನೆ. ತೃತೀಯದಲ್ಲಿ ಶನಿ ಇದ್ದು ಶನಿ ಬಲವು ಇದೆ. ಗುರುವು ಆರನೇ ಮನೆಯಲ್ಲಿದ್ದು, ಸಾಲಿಗ್ರಾಮ ನರಸಿಂಹನನ್ನು ಪ್ರಾರ್ಥಿಸಿ, ಸಂತೋಷವನ್ನು ಅನುಭವಿಸಿ.

ಕುಂಭ: ಶನಿಯು ರಾಶಿಗೆ ದ್ವಿತೀಯದಲ್ಲಿದ್ದು ಸಣ್ಣಪುಟ್ಟ ವಿಚಾರಕ್ಕೆ ಮನೆಯವರೊಂದಿಗೆ ಕೋಪ ತಾಪ ಪ್ರದರ್ಶಿಸಬೇಡಿ. ಸಮಾಧಾನ ಮುಖ್ಯ. ಚಿತ್ತ ಶುದ್ಧವಾಗಿದ್ದರೆ ಹರಿಚಿತ್ತವು ಸತ್ಯವಾಗುತ್ತದೆ. ಸತ್ಯಕ್ಕೆ ಬೆಲೆ ಇದೆ. ನ್ಯಾಯಕ್ಕೆ ದೇವರೇ ಒಲಿಯು ತ್ತಾನೆ. ಒಳ್ಳೆಯ ಕಾಲಕ್ಕೆ ಕಾದಿರಿ. ಶನಿಯ ಸಂಚಾರ ಮುಗಿಯುವರೆಗೂ ಹಣ ಹೂಡಿಕೆ ಮಾಡದಿರಿ. ಭಕ್ತಿಯಿಂದ ಶ್ರೀಕೃಷ್ಣನನ್ನು ಪೂಜಿಸಿ. ಕೃಷ್ಣಾಷ್ಟೋತ್ತರ ಪಠಿಸಿ.

ಮೀನ: ಚತುರ್ಥದಲ್ಲಿ ಗುರುವಿದ್ದಾನೆ. ಶನಿಯು ರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಮುಂದೆ ಹೋದರೆ ಬಾವಿ ಹಿಂದೆ ಹೋದರೆ ಬೆಂಕಿ. ಬಾವಿಯನ್ನು ದಾಟಲು ಪರಮಾತ್ಮನೇ ನಿಮ್ಮನ್ನು ಎತ್ತಿ ಹಿಡಿಯಬೇಕು. ಎಲ್ಲರನ್ನು ಸಂಯಮದಿಂದ ಮಾತನಾಡಿಸುವುದೇ ಇದಕ್ಕೆಲ್ಲ ಪರಿಹಾರ. ಹೊನ್ನಾವರದ ಹತ್ತಿರವಿರುವ ಶಾಂತಿಕಾ ಪರಮೇಶ್ವರಿಯನ್ನು ದರ್ಶಿಸಿ. ನಿಮ್ಮ ಜೀವನವನ್ನು ಅರ್ಥೈಸಿ ಕೊಂಡು ಬಾಳುವ ದಾರಿಯನ್ನು ತೋರಿಸುತ್ತಾಳೆ. ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net