ವಾರಭವಿಷ್ಯ: ಈ ರಾಶಿಯವರಿಗೆ ಕೆಲಸಗಳಲ್ಲಿ ಯಶಸ್ಸು

ವಾರಭವಿಷ್ಯ
ವಾರಭವಿಷ್ಯ
Published on
ಮೇಷ: ರಾಶ್ಯಾಧಿಪತಿ ಕುಜನು ರವಿ-ಶುಕ್ರರೊಂದಿಗೆ 9ನೇ ಮನೆಯಲ್ಲಿದ್ದು, ಧೈರ್ಯ, ಸ್ಥೈರ್ಯ, ಯಶೋಭಾವವನ್ನು ತೋರುತ್ತಾನೆ. ತೃತೀಯ ಗುರುವು ಮಾಡುವ ಕೆಲಸಗಳಲ್ಲಿ ಯಶ ನೀಡಿ, ಇಚ್ಛಿತ ಕಾಮನೆಗಳನ್ನು ಪೂರೈಸುತ್ತಾನೆ. ಸುಬ್ರಹ್ಮಣ್ಯನನ್ನು ಪೂಜಿಸಿ. ವೈಕುಂಠ ಏಕಾದಶಿಯಂದು ವೆಂಕಟೇಶ್ವರನ ದರ್ಶನ ಪಡೆಯಿರಿ.

ವೃಷಭ: ದ್ವಿತೀಯದಲ್ಲೇ ಗುರುವಿದ್ದು ಕೀರ್ತಿ, ಲಾಭವನ್ನು ತಂದರೂ, ವೃತ್ತಿ ಜೀವನದಲ್ಲಿ ಸಾಕಷ್ಟು ಬದಲಾವಣೆಯನ್ನು ನೋಡುವ ಸಮಯ. ಅನ್ಯರ ಜತೆ ಅತಿಯಾದ ವಿಶ್ವಾಸ, ಸ್ನೇಹ, ನಂಬಿಕೆ, ನಿಮ್ಮ ವ್ಯವಹಾರವನ್ನು ಹಾಳುಮಾಡಬಹುದು. ಸತ್ ಸಂಗವಿದ್ದರೆ ದೇಹಕ್ಕೆ ಆಮ್ಲ ಜನಕವಿದ್ದಂತೆ. ಮಹಾವಿಷ್ಣುವಿನ ದರ್ಶನ ಪಡೆಯಿರಿ. ದುಖಂ ಹರತಿ ದುರ್ಗಃ- ದುರ್ಗೆಯೇ ನಿಮ್ಮ ಸಂಕಟವನ್ನು ಪರಿಹರಿಸಿ ಮನಃ ಸಂಕಲ್ಪವನ್ನು ಈಡೇರಿಸುತ್ತಾಳೆ.

ಮಿಥುನ: ರಾಶಿಯ ಅಧಿದೇವತೆಯಾದ ವಿಷ್ಣುವನ್ನು ವೈಕುಂಠ ಏಕಾದಶಿಯೆಂದು ಮನಸಾ ಭಜಿಸಿ- ಪೂಜಿಸಿ. ವೆಂಕಟರಮಣ ಸಂಕಟಹರಣ ಎನ್ನುವಂತೆ ಸಾಕ್ಷಾತ್ ವೆಂಕಟೇಶ್ವರನೇ ನಿಮ್ಮ ಬಾಳಿಗೆ ಬೆಳಕನ್ನು ನೀಡಿ, ಒಳ್ಳೆಯ ಆರೋಗ್ಯ ಕರುಣಿಸುತ್ತಾನೆ. ಉದ್ವೇಗಕ್ಕೆ ಒಳಗಾಗದಿರಿ, ದೈವಬಲವನ್ನು ಹೆಚ್ಚಿಸಿಕೊಳ್ಳಲು ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ.

ಕಟಕ: ಚಂದ್ರಮಾ ಮನಸೋ ಜಾತಃ - ಮನಸ್ಸಿನ ಆರೋಗ್ಯ, ದೇಹದ ಆರೋಗ್ಯ ಎರಡೂ ನಿಮ್ಮ ಕೈಯಲ್ಲಿದೆ. ದೇಹಕ್ಕೆ ಅತಿಯಾದ ಆಯಾಸ ಮಾಡಿಕೊಳ್ಳದೆ ಬೇಕಾದಷ್ಟು ಮಾತ್ತವೇ ನಿಮ್ಮ ದುಡಿಮೆ ಇರಲಿ. ದ್ವಾದಶದಲ್ಲಿ ಗುರುವಿರುವುದರಿಂದ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಉಮಾಮಹೇಶ್ವರನ ಪ್ರಾರ್ಥನೆ ಮಾಡಿ. ಚಂದ್ರಾಷ್ಟೋತ್ತರ ಪಠಿಸಿ.

ಸಿಂಹ: ಏಕಾದಶ ಗುರು ಒಬ್ಬನೇ ಸಾಕು ನಿಮ್ಮ ಕೈ ಹಿಡಿದು ನಡೆಸಲು. ಬೇರೆ ಯಾವ ಗ್ರಹವು ಏನೂ ಫಲಕೊಡದಿದ್ದರೂ ಗುರುಬಲ, ದೈವಬಲವಿದ್ದರೆ ಎಲ್ಲವನ್ನೂ ಜಯಿಸಬಹುದು. ಮನುಷ್ಯನಿಗೆ ದೈವಬಲವೊಂದೇ ಇಂಧನ, ಅಷ್ಟಮ ಶನಿಗೆ ಆಂಜನೇಯನನ್ನೂ, ಕೇತುವು ಲಗ್ನದಲ್ಲೇ ಇರುವುದರಿಂದ ಗುರುಗಣೇಶನನ್ನು ಪೂಜಿಲು ಮರೆಯದಿರಿ.

ಕನ್ಯಾ: ದ್ವಾದಶ ಕೇತು ವ್ಯಸನವನ್ನು ಉಂಟುಮಾಡುತ್ತಾನೆ. ಶನಿಯು ಸಪ್ತಮದಲ್ಲಿದ್ದು, ಆರೋಗ್ಯದ ಬಗ್ಗೆ ಹೆಚ್ಚು ಜಾಗರೂಕರಾಗಿರಬೇಕು. ಏನೇ ಬರಲಿ ಗೋವಿಂದನದಯ ಇರಲಿ ಎಂಬಂತೆ 30.12.2025ರ ವೈಕುಂಠ ಏಕಾದಶಿಯಂದು ರಾಶಿಯ ಅಧಿದೇವತೆಯಾದ

ತುಲಾ: ವಿಷ್ಣುವಿನ ದರ್ಶನವನ್ನು ಪಡೆಯಿರಿ. ಸುಖವಾಗಿರಿ. ಒಂಭತ್ತರ ಗುರು, ಷಷ್ಟದಲ್ಲಿ ಶನಿಯಿದ್ದು, ನಿಮಗೆ ಅತ್ಯಂತ ಒಳ್ಳೆಯ ಕಾಲವನ್ನು ಸೂಚಿಸುತ್ತದೆ. ನಿಮ್ಮ ಮನಃ ಸಂಕಲ್ಪದಂತೆ ಕೆಲಸದಲ್ಲಿ ಪ್ರಗತಿಯಾಗುವುದು. ಧನ-ಕನಕ, ವಸ್ತು, ವಾಹನಾದಿಗಳಿಗೆ ಎಂದೂ ಕೊರತೆ ಬರುವುದಿಲ್ಲ. ವೃತ್ತಿಯಲ್ಲಿ ಯಶಸ್ಸು ಇಮ್ಮಡಿಗೊಂಡು ವಿಜಯದ ಪತಾಕೆಯನ್ನು ಹಾರಿಸುವ ಸಮಯ. ದುರ್ಗಾ ಸಹಸ್ರನಾಮ ಪಾರಾಯಣ ಮಾಡಿರಿ. ದುರ್ಗೆಯೇ ನಿಮ್ಮ ಕೈಹಿಡಿದು ನಡೆಸುತ್ತಾಳೆ.

ವೃಶ್ಚಿಕ: ದ್ವಿತೀಯದಲ್ಲಿ ರವಿಯು ಕುಜ, ಶುಕ್ರರೊಂದಿಗಿದ್ದಾನೆ. ವ್ಯಾಪಾರ- ವ್ಯವಹಾರಗಳಲ್ಲಿ ಯಾರಿಗೂ ಮನಸ್ಸನ್ನು ನೋಯಿಸದೆ ಮುಂದುವರಿಸಿದಲ್ಲಿ ಒಳ್ಳೆಯ ಲಾಭವನ್ನು ಪಡೆಯುವ ಕಾಲ. ಆದರೆ ಗುರುವು ಅಷ್ಟಮದಲ್ಲಿದ್ದು, ಗುರುಬಲ, ಶನಿಬಲ ಎರಡೂ ಇಲ್ಲದ್ದರಿಂದ ವ್ಯವಹಾರಗಳಲ್ಲಿ ಬಹಳ ಎಚ್ಚರಿಕೆಯಿಂದ ಸಾಗಬೇಕು. ಗುರುದತ್ತಾತ್ರೇಯನ ದರ್ಶನ ಪಡೆಯಿರಿ. ಲಕ್ಮೀನರಸಿಂಹನನ್ನು ಪೂಜಿಸಿ, ಪ್ರಾರ್ಥಿಸಿ.

ಧನಸ್ಸು: ಸಪ್ತಮದಲ್ಲಿ ಗುರುವಿದ್ದು, ನೀವು ಬೇಕಾದ್ದನ್ನು ಪಡೆಯಬಹುದು. ಲಗ್ನದಲ್ಲಿ ರವಿಯಿದ್ದು, ನಿಮ್ಮ ಕೆಲಸಗಳು ಮುನ್ನಡೆಯುವ ದಾರಿಯಲ್ಲಿ ಹೊಸ ಬೆಳಕನ್ನು ಚೆಲ್ಲುತ್ತಾನೆ. ನಿಮ್ಮ ವರ್ಚಸ್ಸನ್ನು ಹೆಚ್ಚಿಸಿ. ಮನ್ನಣೆಯನ್ನು ಪಡೆಯುವಂತೆ ಮಾಡುತ್ತಾನೆ. ಚತುರ್ಥದಲ್ಲಿ ಶನಿಯಿದ್ದು, ಕೆಲಸವು ನಿಧಾನವಾಗಿ ಸಾಗಿದರೂ, ಪರಿಪೂರ್ಣಗೊಂಡು ಯಶಸ್ಸನ್ನು ಕಾಣುವಿರಿ. ಪ್ರತಿನಿತ್ಯ ಗುರುಚರಿತ್ರೆಯ ಒಂದು ಅಧ್ಯಾಯ ಪಾರಾಯಣ ಮಾಡಲು ಮರೆಯದಿರಿ.

ಮಕರ: ಶನಿ ಸಂಚಾರವು ಮುಗಿದು ಬಾಳಲ್ಲಿ ಬೆಳಕನ್ನು ನೋಡುವ ಕಾಲ. ನಿಂತ ಕಾರ್ಯಗಳು ಪೂರ್ಣಗೊಂಡು ನಿರೀಕ್ಷಿತ ಫಲವನ್ನು ಕಾಣುವಿರಿ. ಕಷ್ಟ ಕಾಲವನ್ನು ಕಳೆಯಲು ನಿಮ್ಮೊಂದಿಗಿದ್ದ ಶ್ರೀಮನ್ನಾರಾಯಣನ ಸ್ಮರಣೆ ಮಾಡಿರಿ. ನೀವು ಬಯಸದೇ ಇರುವ ಸುಖವನ್ನು ಪಡೆಯುತ್ತೀರಿ. ಈ ಒಳ್ಳೆಯ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ.

ಕುಂಭ: ದ್ವಿತೀಯ ಶನಿ, ಲಗ್ನದಲ್ಲಿ ರಾಹು, ಮನೋಬಲವನ್ನು ಕುಗ್ಗಿಸಿದರೂ, ಪಂಚಮ ಗುರು ನಿಮ್ಮ ಕೆಲಸಗಳಿಗೆ ವೇಗವನ್ನು ತಂದು ಜಯದ ಹಾದಿಗೆ ಕೊಂಡೊಯ್ಯುತ್ತಾನೆ. ತಾಳಿದವನು ಬಾಳಿಯಾನು ಎಂಬಂತೆ ವಿಷಯ ವಿಚಾರವನ್ನು ಪರಾಮಶಿಸಿ ಮುನ್ನಡೆಯಬೇಕು. ಪ್ರತಿ ಸೋಮವಾರ ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ. ಶನಿ ಅಷ್ಟೋತ್ತರ ಪಠಿಸಿ.

ಮೀನ: ಲಗ್ನದಲ್ಲಿ ಶನಿ, ದ್ವಾದಶ ರಾಹು, ಮನಸ್ಸಿಗೆ ತಳಮಳವನ್ನು, ಅಶಾಂತಿಯನ್ನು ಉಂಟುಮಾಡಿದರೂ, ಹೆದರದಿರಿ. ದೈವಪ್ರಾರ್ಥನೆ ಒಂದಿದ್ದರೆ ಮನುಷ್ಯನು ಜೀವನದಲ್ಲಿ ಏನನ್ನು ಸಾಧಿಸಬಹುದು. ‘ಮೌನಂ ಕಲಹಂ ನಾಸ್ತಿ’ ಎಂಬಂತೆ ಯಾರೊಂದಿಗೆ ವಾದ ಮಾಡದೆ, ಸಂಯಮದಿಂದ ವರ್ತಿಸಿದಲ್ಲಿ ಕಷ್ಟದ ಕಾಲವನ್ನು ಕಳೆಯಲು ಸಾಕ್ಷಾತ್ ವಿಷ್ಣುಸ್ವರೂಪಿ ವೆಂಕಟೇಶ್ವರನೇ ನಿಮಗೆ ಸಹಾಯ ಮಾಡುತ್ತಾನೆ. ಶುಭವಾಗಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net