_1763836031678.webp?w=480&auto=format%2Ccompress&fit=max)
_1763836031678.webp?w=480&auto=format%2Ccompress&fit=max)
ವೃಷಭ: ಈ ರಾಶಿಯವರಿಗೆ ಗೊಂದಲದ ಸಮಯ. ಹೇಳುವುದೊಂದು ಮಾಡುವುದೊಂದು ಆಗಬಾರದು. ಸ್ಥಾನ-ಮಾನ ಉಳಿಸಿಕೊಳ್ಳಲು ನಿಮ್ಮ ವ್ಯಕ್ತಿತ್ವದ ಗುಣವು ಅವರಿಗೆ ಗೊತ್ತಿರಬೇಕು ಗುರು ಕಟಕದಲ್ಲಿ ವಕ್ರವಾಗಿ ಮಿಥುನ ರಾಶಿಯ ಫಲ ಕೊಡುತ್ತಿದ್ದಾನೆ. ಸಾಧನೆಯ ಮಾರ್ಗವು ತೆರೆದಿದೆ. ಸಾರ್ಥಕತೆಯ ಬಾಳನ್ನು ಬದುಕಿ ಅಂಭಾಭವಾನಿಯನ್ನು ಪೂಜಿಸಿ.
ಮಿಥುನ: ವಕ್ರಗತಿಯಲ್ಲಿ ಗುರುವು ಕಟಕ ರಾಶಿಯಲ್ಲಿದ್ದು, ಮಿಥುನ ರಾಶಿ, ಫಲ ಕೊಡುವ ಸಮಯ. ಲಗ್ನದಲ್ಲಿ ಗುರುವಿದ್ದಾಗ ಚಂಚಲತೆ ಇರುವುದು ಸಹಜ. ಮನುಷ್ಯನಿಗೆ ಸ್ಥಿರವಾದ ಮನಸ್ಸು ಮತ್ತು ಆರೋಗ್ಯವಂತ ದೇಹ, ಈ ಎರಡಿದ್ದರೆ ಏನನ್ನೂ ಸಾಧಿಸಬಹುದು. ಗುರುಸ್ವರೂಪದಲ್ಲಿ ಶಿವನನ್ನು ಪೂಜಿಸಿ. ನಕಾರಾತ್ಮಕತೆಯು ದೂರವಾಗಿ ಸಕಾರಾತ್ಮಕ ಚಿಂತನೆ ಮಾಡುತ್ತೀರಿ.
ಕಟಕ: ಜಲವಿಲ್ಲದೆ ನೆಲವಿಲ್ಲ. ನಲಿವು ಜಲದಲ್ಲಿ ಅಂತರ್ಗತವಾಗಿದೆ. ಕಟಕ ರಾಶಿಯಲ್ಲಿ ಜನಿಸಿದ ನೀವು ಚಂದ್ರ ಚೂಡನನ್ನು ವಿಶೇಷವಾಗಿ ಪೂಜಿಸಿದರೆ ನಿಮ್ಮನ್ನು ನೀವು ಇಷ್ಟಪಟ್ಟ ಜಾಗಕ್ಕೆ ತಲುಪಿಸುತ್ತಾನೆ. ಶಿವಭಕ್ತಿಯು ನಿಮ್ಮನ್ನು ಎಲ್ಲ ಸವಾಲುಗಳನ್ನು ಗೆಲ್ಲಿಸಿ ಆರೋಗ್ಯವನ್ನು ಕೊಡುತ್ತಾನೆ.
ಸಿಂಹ: ದೇವತೆಗಳು, ರಾಜಮಹಾರಾಜರು ಸಹ ಪ್ರಾಣಿಗಳನ್ನು ಅವಲಂಬಿಸಿ ರಾಜಯೋಗವನ್ನು ಅನುಭವಿದ್ದಾರೆ. ಗಣೇಶನನ್ನು ಪೂಜಿಸಿ, ವಿಘ್ನದಲ್ಲಿ ಜಯ ದೊರಕುತ್ತದೆ. ಸಿಂಹ ರಾಶಿಯ ಅಧೀದೇವತೆ ದುರ್ಗೆಯೇ - ಭವ್ಯವಾದ ಅದೃಷ್ಟದ ಬಾಗಿಲನ್ನು ತೆರೆದು ನಿಮ್ಮನ್ನು ಹರಸುತ್ತಾಳೆ. ಸೂರ್ಯನಾರಾಯಣನಿಗೆ ನಮಸ್ಕಾರ, ಸೂರ್ಯಾಷ್ಟಕವನ್ನು ಪಠಿಸಿ.
ಕನ್ಯಾ: ಈ ರಾಶಿಗೆ ವಕ್ರನಾಗಿ ದಶಮದಲ್ಲಿ ಗುರುವಿದ್ದು, ನಿಂತ ನೀರಿನಂತೆ ನಿಮ್ಮ ಜೀವನವಿರುತ್ತದೆ. ಶನಿಯ ಬಲವೂ ಇಲ್ಲ. ಎಚ್ಚರಿಕೆಯಿಂದ ನೀವು ನಿಮ್ಮ ಜೀವನವನ್ನು ನಡೆಸಲೇಬೇಕು. ದೇವರ ಅನುಗ್ರಹ ಅವಶ್ಯಕ. ಆರೋಗ್ಯ ತಪಾಸಣೆ ಮಾಡಿಕೊಳ್ಳುವುದು ಉತ್ತಮ. ಮೂತ್ರಪಿಂಡ ಮತ್ತು ಹೃದಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ತಲಾ: ಬಲಾಢ್ಯರಾಗಿ ಎಲ್ಲ ಸಾಮರ್ಥ್ಯವನ್ನು ಹೊಂದಿ ಜೀವನವನ್ನು ನಡೆಸುವ ಧೈರ್ಯವನ್ನು ಭಗವಂತನೇ ಕೊಟ್ಟಿರುತ್ತಾನೆ. ಸದ್ಯದಲ್ಲಿ ಗುರುವು ಮಿಥುನ ರಾಶಿಯಲ್ಲಿ ವಕ್ರನಾಗಿದ್ದು, ನಿಮ್ಮನ್ನು ಸಕಾರಾತ್ಮಕ ಜೀವನ ನಡೆಸಲು ಅನುಕೂಲ ಮಾಡಿಕೊಡುತ್ತಾನೆ. ತಕ್ಕಡಿಯೂ ಬೇಕು, ತೂಕವೂ ಬೇಕು ಎಂಬಂತೆ ಮನಸ್ಸನ್ನು ಹತೋಟಿಯಲ್ಲಿಟ್ಟು ಮುಂದೆ ಸಾಗಿದರೆ ದೇವರೇ ನಿಮ್ಮನ್ನು ಕಾಯುತ್ತಾನೆ. ಮನೆಯಲ್ಲಿ ಚಂಡಿಕಾ ಪಾರಾಯಣ ಮಾಡಿಸಿ, ಒಳ್ಳೆಯದಾಗುತ್ತದೆ.
ವೃಶ್ಚಿಕ: ಲಗ್ನದಲ್ಲಿ ಸೂರ್ಯನಿರುವುದರಿಂದ ಕೆಲವೊಂದು ಅನಿರೀಕ್ಷಿತ ಘಟನೆ ಉಂಟಾಗಿ ಮನಸ್ಸಿಗೆ ಬೇಜಾರು ತರಬಹುದು. ಶರೀರಕ್ಕೆ ಆಲಸ್ಯ ಆಗಬಹುದು. ಎರಡನ್ನೂ ತಡೆಯಬೇಕಾದರೆ ದೇವರ ಕೃಪೆ ಬೇಕೇ ಬೇಕು, ಈ ಸದ್ಯದಲ್ಲಿ ನರಸಿಂಹನನ್ನು ಅರ್ಚಿಸಿ, ಪೂಜಿಸಿದರೆ ಏನೇನು ಬೇಕೋ ಎಲ್ಲವೂ ಸಿಗುತ್ತದೆ. ಋಣಬಾರದಿಂದ ಮುಕ್ತರಾಗುತ್ತೀರಿ.
ಧನಸ್ಸು: ಬಲ-ಅತಿಬಲ ಎಂಬ ಎರಡು ವಿದ್ಯೆಯನ್ನು ವಿಶ್ವಾಮಿತ್ರರು ರಾಮ- ಲಕ್ಷಣ ರಿಗೆ ಕಲಿಸಿ ಹಸಿವು ಬಾಯಾರಿಕೆಯನ್ನು ನೀಗಿಸಿ, ಧನುರ್-ಬಾಣಗಳ ಯುದ್ಧದಲ್ಲಿ ಏಕಾಗ್ರತೆ ಸಾಧಿಸಲು ಸಹಾಯ ಮಾಡುತ್ತಾರೆ. ಹಾಗೆಯೇ ಈ ಸಮಯದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು ಜಯಶಾಲಿ ಯಾಗಲು ನಿಮ್ಮ ವ್ಯಾಪಾರವನ್ನು ವೃದ್ಧಿಗೊಳಿಸಿಕೊಳ್ಳಲು ಸುಂದರಕಾಂಡ ಪಾರಾಯಣ ಮಾಡಿ. ಚಿಂತಿತಾರ್ಥ ಕೆಲಸವನ್ನು ಮಾಡಲು ವಿಶೇಷ ಕಾಲ ಮಾರ್ಗಶಿರ ಮಾಸ ನಿಮಗೆ ಅನುಕೂಲಕರ ದಾರಿಯನ್ನು ತೋರಿಸುತ್ತದೆ.
ಮಕರ: ವಕ್ರನಾಗಿ ದ್ವಿತೀಯದಲ್ಲಿ ಶನಿಯಿದ್ದು, ಗುರು ಕಷ್ಟದಲ್ಲಿ ಇದ್ದಾನೆ. ಶನಿಯು ಎಲ್ಲ ವನ್ನು ಕೊಟ್ಟರೂ ಅದನ್ನು ನೆರವೇರಿಸುವವನು ಗುರುವೇ. ಗುರು ಪ್ರಾರ್ಥನೆ ಇರಲಿ ಹಾಗೂ ನಿಮ್ಮ ಗುರುಗಳ ಆಶೀರ್ವಾದ ಪಡೆದು ಯಾವ ಕೆಲಸಕ್ಕೆ ಕೈ ಹಾಕಿದರೂ ನಷ್ಟ ಇಲ್ಲ. ಲಾಭವನ್ನು ಪಡೆಯಲು ಮಹಾಲಕ್ಷ್ಮೀಯನ್ನು ಪೂಜಿಸಿ
ಕುಂಭ: ದೇವತಾರಾಧನೆಗಾಗಲಿ, ಕುಂಭಾಭೀಷೇಕಕ್ಕೆ ಅಗಲಿ, ಕುಂಭದ ಅವಶ್ಯಕತೆ ಇದ್ದೇ ಇರುತ್ತದೆ. ಕುಂಭದ ಮಹತ್ವ ಗೊತ್ತಿದ್ದರೆ ಮಾತ್ರವೇ ಅದರ ಮಹತ್ವವು ತಿಳಿಯುತ್ತದೆ. ಸಾಯಂಕಾಲದಲ್ಲಿ ಕುಂಭವನ್ನು (ಕಲಶ) ಇಟ್ಟು, ಮಹಾಲಕ್ಷ್ಮೀಯನ್ನು ಪೂಜಿಸಿ ಲಕ್ಷ್ಮೀ ಅಷ್ಟೋತ್ತರ ಪಠಿಸಿ, ಹಾಲು ಸಕ್ಕರೆ ನೇವೇದ್ಯ ಮಾಡಿದರೆ ಸಾಕು. ದೇವರು ಪಂಚ ಭಕ್ಷ್ಯ ಪರಮಾನ್ನವನ್ನು ಕೇಳುವುದಿಲ್ಲ. ಭಕ್ತಿಯೆಂಬ ಸಕ್ಕರೆಗೆ ಅಮೃತದಂತಹ ಹಾಲನ್ನು ಬೆರೆಸಿದರೆ ದೇವರೇ ನಿಮಗೆ ಒಲಿಯುತ್ತಾನೆ.
ಮೀನ: ನಿತ್ಯವೂ ಬೆಳಗಾಗುತ್ತದೆ, ರಾತ್ರಿಯಲ್ಲಿ ಕತ್ತಲಾಗುತ್ತದೆ. ಅದು ಪ್ರಕೃತಿಯ ನಿಯಮ ಎದ್ದವರು ವಿಶ್ರಾಂತಿಗಾಗಿ ಮಲಗಬೇಕು. ಬೆಳಗಾಗುತ್ತಲೇ ಕಾರ್ಯೋನ್ಮುಖನಾಗಿ ಸ್ವಚ್ಛ ಮನಸ್ಸಿನಿಂದ ಭಕ್ತಿಯೆಂಬ ಅಮೃತದ ಧಾರೆಯನ್ನು ಹರಿಸಿ ದೇವರನ್ನು ಕಾಣುವ ಪ್ರಯತ್ನ ಮಾಡಿ. ಶನಿ ಸಂಚಾರದಲ್ಲಿ ಇದೇ ಮುಖ್ಯ ವಾದದ್ದು. ದೇವರೇ ನಿಮ್ಮ ಬೆನ್ನಹಿಂದೆ ಇದ್ದು, ನಿಮ್ಮನ್ನು ಕಾಯುತ್ತಾನೆ.