ವೃಷಭ:ಈ ರಾಶಿಗೆ ಶುಕ್ರನು ಸ್ವಕ್ಷೇತ್ರದಲ್ಲಿ ಇದ್ದು, ಅಲ್ಲೇ ಸೂರ್ಯನೂ ಇದ್ದಾನೆ. ನಿತ್ಯವೂ ಎಲ್ಲರೂ ಅರಮನೆ ಕಟ್ಟಲು ಆಗುವುದಿಲ್ಲ. ರಾಜಯೋಗವೆಂಬುದು ಕ್ಷಣಾರ್ಧದಲ್ಲಿ ಬಂದು ಯೋಗಭೋಗಗಳನ್ನು ಕೊಟ್ಟು ಜನ್ಮಾಂತರದ ಪುಣ್ಯವು ಇರುವವರೆಗೂ ರಾಜನಾಗಿ ಉಳಿಯುವುದು ಸತ್ಯವಾದ ಮಾತು. ರಾಜಯೋಗ, ಜನಾನುರಾಗವನ್ನು ಬಯಸುವವರು ಅತ್ಯಂತ ಕೌಶಲ್ಯದಿಂದ ಅದನ್ನು ಪಡೆಯುವ ಕಾಲವಿದು. ಕೇವಲ ಇನ್ನು 1 ಸಂವತ್ಸರ ಮಾತ್ರವೇ ಶನಿಯು ಏಕಾದಶದಲ್ಲಿ ಇರುತ್ತಾನೆಂದು ಮರೆಯಬೇಡಿ. ನಿಮ್ಮ ವೈಫಲ್ಯವೇ ನಿಮಗೆ ಅಡ್ಡಗಾಲು ಹಾಕಿ ಬರಬೇಕಾದ ಯೋಗವನ್ನು ತಡೆಯದಂತೆ ನೋಡಿಕೊಳ್ಳಿ. ಕಾಮಾಕ್ಷಿಯನ್ನು ಪ್ರಾರ್ಥಿಸಿ.