ಕನ್ಯಾ: ಕನ್ಯಾರಾಶಿಯವರಿಗೆ ಏಕಾದಶಕ್ಕೆ ಇನ್ನೇನು ಗುರುಬಂದು ಜೂನ್ 1 ರಿಂದ ಸರ್ವತೋಮುಖ ಅಭಿವೃದ್ಧಿಗೆ ಕಾರಣವಾಗುತ್ತದೆ. ಆದರೂ ಸಪ್ತಮದ ಶನಿ, ಮುಂದೆ ಅಷ್ಟಮಕ್ಕೆ ಬರುವುವನಿದ್ದಾನೆ. ದೈವಚಿಂತನ, ಪಿತೃಗಳ ಭಕ್ತಿ ಮಾಡಬೇಕು. ಕೊಟ್ಟವರ ಸ್ವತ್ತನ್ನು ಧನವನ್ನಾಗಲಿ ಭೂಮಿಯನ್ನಾಗಲಿ, ಬಂಗಾರವಾಗಿರಲಿ ಅದನ್ನು ಅವರಿಗೆ ತಲುಪಿಸಿ ಋಣಮುಕ್ತರಾಗುವುದು ನಿಮ್ಮ ಧ್ಯೇಯವಾಗಿರಲಿ.