ವಾರಭವಿಷ್ಯ ; ಈ ರಾಶಿಯವರಿಗೆ ಆಕಸ್ಮಿಕ ಧನಲಾಭ

Weeklly Astrology
Weeklly Astrology
Published on
ಮೇಷ:ನಿಜ ಜೇಷ್ಠ ಮಾಸ ಭಾನುವಾರ ಸಪ್ತಮಿಯಿದ್ದು, ಸಿದ್ಧಿನಾಮ ಯೋಗದಲ್ಲಿ ಸ್ಥಿತನಾಗಿ, ಲಗ್ನಾಧಿಪತಿ ದ್ವಿತೀಯಕ್ಕೆ ಬಂದು 2-7-2026 ರಂದು ಬುಧಗ್ರಹವೂ ಕಟಕ ರಾಶಿಯನ್ನು ಸೇರುತ್ತದೆ. ಬುಧ, ಕುಜ, ಬೃಹಸ್ಪತಿ ಹಾಗೂ ಶುಕ್ರ ಮೂರು ಗ್ರಹಗಳು ಒಂದೇ ಮನೆ ಸೇರಿ ಅವಕಾಶ ಹೆಚ್ಚಿಸಿ ನಿಮಗೆ ಅತ್ಯಾಶ್ಚರ್ಯ ಉಂಟು ಮಾಡುವ ಘಟನೆ ನಡೆಯುತ್ತದೆ. ಗುರುವು ಉಚ್ಚ ರಾಶಿಯಲ್ಲಿರುವುದರಿಂದ ಬಾಳಿನಲ್ಲಿ ಬೆಳಕು ಮೂಡುತ್ತದೆ.
ವೃಷಭ:ವೃಷಭ ರಾಶಿಗೆ ಏಕಾದಶದಲ್ಲಿ ಶನಿ, ಲಗ್ನದಲ್ಲಿ ಅಂಗಾರನಿದ್ದು, ಅವಾಂತರದಲ್ಲಿ ಅವಾಂತರವನ್ನು ಅಪಶಕುನ ತಂದು ಒಡ್ಡುತ್ತಾನೆ ಯೋಚಿಸಿ, ವಿಚಾರಿಸಿ ಕೆಲಸಗಳನ್ನು ಅತ್ಯಂತ ಶ್ರದ್ಧಾ, ಭಕ್ತಿಯಿಂದ ಮಾಡಿದರೆ ಒಳ್ಳೆಯದಾಗುತ್ತದೆ. ಬುದ್ಧಿಯೂ ಬೇಕು, ಗುರುವಿನ ಕರುಣೆಯೂ ಬೇಕು. ಸೂರ್ಯನು ಬುಧನ ಮನೆಯಲ್ಲಿ ಇರುವುದರಿಂದ ಶುಭಾಂಶ ಜಾಸ್ತಿಯಿದ್ದು, ನಿಮಗೆ ಸಮಾಧಾನಕರ ಪ್ರಗತಿ ನೀಡುತ್ತಾನೆ. ದುರ್ಗೆ ಸ್ತುತಿ ಇರಲಿ.
ಮಿಥುನ:ಮಿಥುನ ರಾಶಿಗೆ ದ್ವಿತೀಯದಲ್ಲಿ ಗುರುವಿದೆ. ದೈವಬಲ ನಿಮ್ಮೊಂದಿಗಿದೆ. ಇಂತಹ ಸುಸಮಯದಲ್ಲಿ ಜಾಗೃತರಾಗಿ ಪರಮಾತ್ಮನಲ್ಲಿ ಅತ್ಯಂತ ವಿಶ್ವಾಸದಿಂದ ಭಕ್ತಿಯನ್ನು ಇಟ್ಟುಕೊಂಡು ಯಾವುದೇ ಕೆಲಸವನ್ನು ಮಾಡಿದರೆ ಯಶಸ್ಸಿನೆಡೆಗೆ ಕೊಂಡೊಯ್ಯುತ್ತಾನೆ. ಕೃಷ್ಣನಾಮದ ಸ್ಮರಣೆ ಇರಲಿ. ಭಕ್ತಿ ದೃಢವಾಗಿರಲಿ.
ಕಟಕ: ಗುರು ರಾಶಿಯಲ್ಲಿ ಇದ್ದು, ನೀವು ಮಾಡಿದ ಪೂಜಾಫಲ, ಪುಣ್ಯಸಂಗ್ರಹ ನಿಮಗೆ ಒಳ್ಳೆಯದಾಗುತ್ತದೆ. ನಿಮಗೆ ತೊಂದರೆ ಕೊಡುವವರನ್ನು ದೇವರೇ ನೋಡಿಕೊಳ್ಳುತ್ತಾನೆ. ಗಣಪತಿಗೆ ವಿಶೇಷ ಪೂಜೆಯನ್ನು ಅಕ್ಟೋಬರ್ 30ರವರೆಗೆ ಮಾಡುತ್ತಾ ಬನ್ನಿ. ನಿಮ್ಮ ಯಶಸ್ಸು-ಕೀರ್ತಿಯನ್ನು ಯಾರಿಂದಲೂ ಅಳಿಸಲು ಆಗುವುದಿಲ್ಲ.
ಸಿಂಹ:ಸಿಂಹ ರಾಶಿಗೆ ಗುರುವು ಉಚ್ಚ ರಾಶಿಯಲ್ಲಿ ದ್ವಾದಶದಲ್ಲಿದ್ದು, ಶನಿಯು ಅಷ್ಟಮ ಸ್ಥಾನದಲ್ಲಿ ಇರುವುದರಿಂದ ಈ ಸಮಯದಲ್ಲಿ ಹೆಚ್ಚು ಮೌನವಾಗಿರುವುದೇ ಒಳ್ಳೆಯದು. ಆಕಸ್ಮಿಕ ಧನಲಾಭ, ಗೌರವ, ಕೀರ್ತಿಯೂ ಹೆಚ್ಚಾಗುತ್ತದೆ. ಲಗ್ನದಲ್ಲಿರುವ ಕೇತುವಿಗಾಗಿ ಗಣಪತಿ ಪೂಜಿಸಿ.
ಕನ್ಯಾ: ಗುರುವು ಏಕಾದಶದಲ್ಲಿದ್ದೂ, ನಿಮ್ಮ ಸುಖ-ದುಃಖದಲ್ಲಿ ಸದಾ ಪಾಲ್ಗೊಳ್ಳುವ ನಿಮ್ಮ ಪತ್ನಿಯ ಆರೋಗ್ಯದ ಕಡೆಗೆ ಹೆಚ್ಚಿನ ಗಮನವಿರಲಿ. ಯಾವುದೇ ವ್ಯಾಧಿಯಿಂದ ಸಂಕಟ ಉಂಟಾದಾಗ ಸರಿಯಾದ ಔಷಧ ಹಾಗೂ ವೈದ್ಯರ ಸಲಹೆಯಿಂದ ಪರಿಹಾರ ಮಾಡುವುದೇ ಜಾಣತನ. ಶನಿಯಿ ಸಪ್ತಮದಲ್ಲಿ ಇರುವುದರಿಂದ ಆಂಜನೇಯನನ್ನು ದರ್ಶಿಸಿ-ಪ್ರಾರ್ಥಿಸಿ.
ತುಲಾ: ಮನುಷ್ಯನು ಸುಖವನ್ನು ಪಡಬೇಕು. ಕಷ್ಟವನ್ನು ಪಡಬೇಕು. ಅತಿಶಯೋಕ್ತಿಯಲ್ಲಿ ಉಚ್ಚರಾಶಿಯಲ್ಲಿ ಗುರುವಿದ್ದಾನೆ. ಶನಿಯು ಷಷ್ಠದಲ್ಲಿ ಇದ್ದಾನೆ. ಈ ಪ್ರಪಂಚದಲ್ಲಿ ಯಾವುದು ಒಳ್ಳೆಯದು ಲಭ್ಯವೋ ಅದೆಲ್ಲವೂ ನಿಮ್ಮದಾಗುತ್ತದೆ. ಮಾಡುವ ಕೆಲಸದಲ್ಲಿ ಶ್ರದ್ಧೆಯಿರಲಿ. ನಿಮ್ಮ ಯಶಸ್ಸಿನ ಹಾದಿಯಲ್ಲಿ ಕೀರ್ತಿ ಪತಾಕೆಯನ್ನು ಹಾರಿಸಬಹುದು. ದುರ್ಗಾ ಪೂಜಾಂ ಲಭ್ಯತೇ ಯಶೋ ಕೀರ್ತಿ ಲಾಭಮ್
ವೃಶ್ಚಿಕ: ನವಮದಲ್ಲಿ ಗುರು ಸಂಚಾರವಿದ್ದು, ಶನಿಯು ಪಂಚಮದಲ್ಲಿದ್ದಾನೆ. ರಾಶಿಚಕ್ರದಲ್ಲಿ 9ನೇ ಮನೆಯಲ್ಲಿ ಗುರುವಿರುವುದು ನಿಮ್ಮ ಶ್ರೇಯಸ್ಸಿಗಾಗಿ, ಪಂಚಮದಲ್ಲಿ ಶನಿಯಿರುವ ಪರಿಣಾಮ ಹೆಂಡತಿ-ಮಕ್ಕಳು ಹಾಗೂ ಆಪ್ತಮಿತ್ರರೇ ನಿಮ್ಮ ದಾರಿಯನ್ನು ತಪ್ಪಿಸಬಹುದು. ಇವರೆಲ್ಲರೂ ಶಾಂತತೆಯನ್ನು ಹಾಳು ಮಾಡಿದರೆ ಮನೆಗಿಂತ ಅಡವಿಯಲ್ಲಿ ಇರುವುದು ಲೇಸೆಂದು ಅಂದುಕೊಳ್ಳುವ ಬದಲು ಯಾರ ಮಾತನ್ನು ಕೇಳಿದರೂ ತೂಗಿ ಲಾಲಿಸಿ ಬೇಡದ್ದನ್ನು ತೊಟ್ಟಿಯಲ್ಲಿ ಹಾಕಿ ಮಲಗಿಸಿ. ಶುಭವಾಗುತ್ತದೆ ಕೃಷ್ಣಾಷ್ಟೋತ್ತರ ಪಠಿಸಿ.
ಧನುಸ್ಸು: ಗುರುಚರಿತ್ರೆಯ ಒಂದು ಅಧ್ಯಾಯದಲ್ಲಿ ಒಬ್ಬ ಭಕ್ತ, ‘ಧನಸಂಪತ್ತು ಹೆಚ್ಚು ಕೊಡು’ ಎಂದು ಬೇಡಿ ‘ನಾನು ನಿನ್ನ ಭಕ್ತರಿಗೆ ಊಟ ಹಾಕುತ್ತೇನೆ. ಅದಕ್ಕೆ ಬೇಕಾದ ಸಂಪಾದನೆ ನೀಡು’ ಎಂದು ಕುರುವಪುರದಲ್ಲಿ ಬಂದು ಇದ್ದ ದುಡ್ಡನ್ನು ತಲೆದಿಂಬಿನಡಿಯಲ್ಲಿ ಇಟ್ಟು ಮಲಗುತ್ತಾನೆ. ಆಕಸ್ಮಿಕವಾಗಿ ದುಷ್ಟರು ಅವನ ಹಣ ಅಪಹರಿಸಿದಾಗ ಪರಮಾತ್ಮನೇ ಬಂದು ಅವನ ಪ್ರಾಣ ಹಣವನ್ನು ಕೊಟ್ಟು ಅನುಗ್ರಹಿಸುತ್ತಾನೆ. ನೀವು ಅಂದುಕೊಂಡ ವ್ಯಾಪಾರಗಳಲ್ಲಿ ಲಾಭವನ್ನು ಕಾಣುವ ಸಮಯವಿದು. ಕುರುವಪುರದಲ್ಲಿ ದೇವರ ದರ್ಶನ ಮಾಡಿ, ಅಲ್ಲಿಯೇ ಪ್ರಸಾದವನ್ನು ಸ್ವೀಕರಿಸಿ.
ಮಕರ: ಶನಿಯು ಮೂರನೇ ಮನೆಯಲ್ಲಿ ಇದ್ದಾಗ, ಹೊನ್ನಿನ ಬಣ್ಣದ ಪುಷ್ಪ ಹಾಗೂ ಕಾರ್ಯ ಯಶಸ್ಸಿಗೆ ನೀಲಿ ಬಣ್ಣದ ಪುಷ್ಪ ಪೂಜಿಸಿ. ದ್ವಿತೀಯದಲ್ಲಿರುವ ರಾಹುವಿಗೆ ಸವದತ್ತಿಯ ಯಲ್ಲಮ್ಮನನ್ನು ಪೂಜಿಸಿದರೆ ಬರಬೇಕಾದದ್ದು ಬಂದು ನಿಮ್ಮ ಬಾಳಲ್ಲಿ ಕಾರ್ಯಸಿದ್ಧಿಯನ್ನು ಮಾಡಿಕೊಂಡು ಲಾಭದ ಹಾದಿಯು ಕಾಣುತ್ತದೆ. ಇದ್ದಲ್ಲೇ ಇದ್ದರೆ ನಿಮ್ಮ ಬಾಗಿಲನ್ನು ತೆರೆದು ದೇವರು ದರ್ಶನ ನೀಡು ಎಂದು ಕೇಳಿಕೊಂಡು ಮೇಲೆ ಹೇಳಿದಂತೆ ನಡೆದುಕೊಳ್ಳಿ.
ಕುಂಭ: ಶ್ರದ್ಧಾಂ ವಿದ್ಯಾಂ ಬುದ್ಧಿಂ ಮನ ಸಂಹಾಯಿತಂ ಆತ್ಮ ನಿವೇದನಂ ಮೌನಪೂಜನಂ ಅತ್ಯಂತ ಶ್ರೇಷ್ಠದಾಯಕಂ. ಶ್ರೇಷ್ಠವಾದ ನಾಗದೇವತೆಯನ್ನು ಪೂಜಿಸಿ. ರಾಹು ದೋಷವನ್ನು ದೂರಮಾಡಿಕೊಂಡು ನಿಮ್ಮ ಆಲಸ್ಯವನ್ನು ಕುಂಭದಲ್ಲೇ ಹಾಕಿ ಮುಂದೆ ಸಾಗಿ ಗಂಧವನ್ನು ತಲೆಯ ಮೇಲೆ ಹೊತ್ತು ದೇವರಿಗೆ ಸಮರ್ಪಿಸಿ.
ಮೀನ: ಪಂಚಮ ಗುರುವು ಅಲಭ್ಯವಾದದ್ದನ್ನು ಕೊಡುತ್ತಾನೆ. ಶನಿಯು ತಲೆಯನ್ನು ಕೆಡಿಸುತ್ತಾನೆ. ಆರೋಗ್ಯವನ್ನು ಕೆಡಿಸುತ್ತಾನೆ. 12ರಲ್ಲಿ ರಾಹು ಚಿಂತೆಯನ್ನು ಕೊಡುತ್ತಾನೆ. ನೀರಿನಲ್ಲಿರುವ ಮೀನು ಭೂಮಿಯ ಮೇಲೆ ಬಿದ್ದರೆ ಜೀವ ಹೋಗುವಂತೆ ಮೀನ ರಾಶಿ ಗುರುವನ್ನು ಬಿಟ್ಟರೆ ನಿಂದಾಪವಾದಗಳು ಬಂದು ಆತ್ಮ ಮತ್ತು ಶರೀರವನ್ನು ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಮನಸ್ಸಿನಲ್ಲಿ ಸದಾ ಗುರುಧ್ಯಾನ ಇರಲಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net