

ಮೇಷ: ಈ ವಾರವು ಸಂಕಷ್ಟಹರ ಚತುರ್ಥಿಯಿಂದ ಆರಂಭ. ಗಣಪತಿಯನ್ನು ಪೂಜಿಸಲು ದೇವರ ಆದೇಶವಿದು. ಮೇಷ ರಾಶಿಯವರಿಗೆ ದ್ವಿತೀಯದಲ್ಲಿ ಗುರು ಶುಕ್ರ ಸೂರ್ಯನ ಅನುಗ್ರಹವಿದ್ದು, ಮೇಷದಲ್ಲಿ ಕುಜ ಬಂದು ಸೇರುತ್ತಾನೆ. ಗುರು ಕಟಾಕ್ಷ ನಿಮ್ಮನ್ನು ಕಾಪಾಡಿ ನಿಮಗೆ ಅನುಕೂಲಕರ ವಾತಾವರಣ ಸೃಷ್ಟಿಸುತ್ತದೆ. ದ್ವಾದಶದಲ್ಲಿ ಕುಜ ರಾಹು ಇರುವುದರಿಂದ ಕೆಲವೊಂದು ಘರ್ಷಣೆಯ ಸುಳಿವಿರುತ್ತದೆ. ಅದಕ್ಕೆ ಉತ್ತರ ಮೌನ ಹಾಗೂ ದೇವರ ಧ್ಯಾನ.
ವೃಷಭ: ಲಗ್ನದಲ್ಲಿ ಗುರು ಇದ್ದಾನೆ. ತಂದೆಯಾದವನು ತನ್ನ ಮಕ್ಕಳನ್ನು ಹೇಗೆ ಕಾಪಾಡಿ ಗುರಿ ಮುಟ್ಟುವಂತೆ ಮಾಡುತ್ತಾನೋ ಹಾಗೆಯೇ ಗುರು ನಿಮ್ಮನ್ನು ಕಾಪಾಡುತ್ತಾನೆ. ಸೂರ್ಯನು ವೃಷಭ ದಲ್ಲಿ ಇರುವುದರಿಂದ ಸೂರ್ಯ ನಾರಾಯಣನ ಪ್ರಾರ್ಥನೆ ಅತ್ಯಗತ್ಯ. ಒತ್ತಡಗಳಿಂದ, ಆಯಾಸ ದಿಂದ ಶರೀರಕ್ಕೆ ವಿಶ್ರಾಂತಿ ಕೊಟ್ಟು ಅಶ್ವಿನಿ ದೇವತೆಯನ್ನು ಪೂಜಿಸಿ.
ಮಿಥುನ: ಗ್ರಹಬಲವಿಲ್ಲ, ದೈವಬಲ ಇಲ್ಲದಿರುವಾಗ ಮನುಷ್ಯ ತನ್ನ ಕಾರ್ಯಗಳನ್ನು ನೆರವೇರಿಸಿಕೊಳ್ಳಬಹುದಾದ ಒಂದೇ ಮಾರ್ಗ ಪೂರ್ವ ಪುಣ್ಯದಿಂದ. ಏಕಾದಶದಲ್ಲಿ ಬುಧ ಇರುವುದು ಅಂಗಾರಕನ ಮನೆಯಲ್ಲಿ. ಇತರರೊಂದಿಗೆ ವ್ಯವಹಾರ ಮಾತನಾಡುವಾಗ ಆಗದಿರುವ ಏನೇನೋ ವಿಚಾರ ಹೇಳಿ ನಿಮ್ಮ ಅಂತಸ್ತನ್ನು ಕುಗ್ಗಿಸಿಕೊಳ್ಳಬೇಡಿ. ಮನಸ್ಸಿಗೆ ಶಾಂತಿ ಕೊಡುವ ಉಮಾ ಮಹೇಶ್ವರನನ್ನು ಪೂಜಿಸಿ.
ಕಟಕ: ಏಕಾದಶ ಗುರು ಶುಭ ಸೂಚಕ. ಬಯಸಿದ ಮಾರ್ಗ ತೋರುವವನು. ನಿಮಗೆ ಸಮಾಧಾನ ಕೊಟ್ಟು ಕಾರ್ಯಗಳಿಗೆ ಪುಷ್ಟಿ ಕೊಡುವನು. ಆತ್ಮದಲ್ಲಿ ವಿಜೃಂಭಿಸಿ ಅಹಿತಕರ ಘಟನೆ ನಡೆಯದಂತೆ ಸುಖ ಸಂತೋಷ ಕೊಟ್ಟು ಅನ್ಯರಿಗೆ ಸಲಹೆ ಕೊಟ್ಟು ಜೀವನವನ್ನು ಮುಂದೆ ನಡೆಸುತ್ತಾನೆ. ಚಂದ್ರಚೂಡನನ್ನು ಪ್ರಾರ್ಥಿಸಿ, ಪೂಜಿಸಿ.
ಸಿಂಹ: ದಶಮದಲ್ಲಿ ಸೂರ್ಯ ಗುರು ಇರುವುದರಿಂದ, ಶುಕ್ರನೂ ಅಲ್ಲೇ ಸೇರಿರುವುದರಿಂದ ಎಂದೂ ಕಂಡಿಲ್ಲದ, ಕೇಳಿಲ್ಲದ ಬಹು ಭಾಗ್ಯ ಉಂಟಾಗುವ ಸಮಯ ಇದು. ಇಂದೇ ಆಗುತ್ತದೆ ಎಂದು ನಿಖರವಾಗಿ ಹೇಳಲಾಗದು. ಆದರೆ ದೊಡ್ಡ ಘಟನೆಯೊಂದು ನಡೆದು ಲಾಭ ತರುತ್ತದೆ. ಸೂರ್ಯಅಷ್ಟಕ ಪಠಿಸಿ. ಸುಬ್ರಮಣ್ಯ ದೇವರ ಧ್ಯಾನ ಮಾಡಿ.
ಕನ್ಯಾ: ಗುರು ಶನಿ ಶುಭ ಸ್ಥಾನದಲ್ಲಿ ಇರುವುದರಿಂದ ಎಲ್ಲ ಕಾರ್ಯಗಳಲ್ಲಿ ಯಶಸ್ಸನ್ನು ಕಾಣುತ್ತೀರಿ. ಲಗ್ನದಲ್ಲಿ ಕೇತು ಇರುವುದರಿಂದ ಪ್ರತಿ ನಿತ್ಯ ವೈಭವ ಗಣಪತಿ ಪೂಜೆ ಮಾಡಿ. ನಿಮ್ಮ ಸಂಕಲ್ಪಗಳಿಗೆ ವಿಘ್ನಗಳು ಬರದಂತೆ ನೋಡಿಕೊಳ್ಳುತ್ತಾನೆ. ಮನಸ್ಸಿಗೆ ಸಮಾಧಾನ ಕೊಟ್ಟು ಹರಸುತ್ತಾನೆ.ಬೆಂಗಳೂರಿನ ದೊಡ್ಡ ಗಣೇಶ, ವೈಭವ ಗಣಪತಿಯನ್ನು ಪೂಜಿಸಿ ಅನುಗ್ರಹ ಪಡೆಯಿರಿ.
ತುಲಾ: ಪಂಚಮ ಶನಿ ಇದ್ದರೂ ಗುರು ಅಷ್ಟಮಕ್ಕೆ ಹೋಗಿದ್ದರೂ ಸಮಾಧಾನಕ್ಕಿಂತ ಮಿಗಿಲಾದದ್ದು ಏನೂ ಇಲ್ಲ. ಯೋಚಿಸಿ ನಿರ್ಧಾರ ಕೈಗೊಳ್ಳುವ ಕೆಲಸಗಳು ದಡವನ್ನು ಸೇರುತ್ತವೆ. ಆತುರದ ನಿರ್ಧಾರಗಳು ಬೇಡ. ಹಗಲು ಕಂಡ ಬಾವಿಯಲ್ಲಿ ರಾತ್ರಿ ಬೀಳುವುದು ಬೇಡ. ರಾಶ್ಯಾಧಿಪತಿ ಶುಕ್ರನಿಗೆ ಸೌಮ್ಯ ಶಾಂತಕರವಾದ ಸರಸ್ವತಿಯನ್ನು ಪೂಜಿಸಿ.
ವೃಶ್ಚಿಕ: ಸಪ್ತಮದಲ್ಲಿ ಗುರು ಇದ್ದರೂ ಚತುರ್ಥದಲ್ಲಿ ಶನಿ ಇದ್ದು ಸ್ವಕ್ಷೇತ್ರದಲ್ಲಿ ಇರುವುದರಿಂದ ಅತಿಯಾದ ಬಾಧೆ ಇರುವುದಿಲ್ಲ. ಕೆಲ ಬಾರಿ ನಿಮ್ಮ ಗ್ರಹಗಳು ಉತ್ತಮ ಸ್ಥಿತಿಯಲ್ಲಿ ಇಲ್ಲದಿರುವಾಗ ಅಹಿತಕರ ಘಟನೆ ನಡೆದಿರುತ್ತದೆ. ಅದರಿಂದ ಹೊರಬರಲು ದೈವ ಸಹಾಯ ಬೇಕೇ ಬೇಕು. ನರಸಿಂಹನನ್ನು ಪೂಜಿಸಿ. ಎಲ್ಲವೂ ಸರಿ ಹೋಗುತ್ತದೆ. ಆರೋಗ್ಯದ ಕಡೆ ಗಮನ ಇರಲಿ.
ಧನಸ್ಸು: ಗುರುವು ಷಷ್ಟದಲ್ಲಿ ಇರುವುದರಿಂದ ಮನಸ್ಸಿಗೆ ಒತ್ತಡ ಮಾಡಿಕೊಳ್ಳಬೇಡಿ. ಕೈಲಾದಷ್ಟು ಕೆಲಸ ಮಾಡಬೇಕು. ಭಾರ ಹೊರುವವನು ಅದರ ತೂಕವನ್ನು ಅರಿತಿರಬೇಕು. ನಿತ್ಯ ಗುರು ಚರಿತ್ರೆಯ ಒಂದು ಅಧ್ಯಾಯ ಪಾರಾಯಣ ಮಾಡಿ. ಧೈರ್ಯ, ಯಶಸ್ಸು, ಲಾಭ, ಕೀರ್ತಿಗೆ ಕೊರತೆ ಇರುವುದಿಲ್ಲ.
ಮಕರ: ಪಂಚಮದಲ್ಲಿ ಗುರು ಶುಭಾಂಶದಲ್ಲಿದ್ದು, ಎಲ್ಲ ಕೆಲಸ ದಾಟಿಸಿಕೊಂಡು ಸುಖದ ಹಾದಿ ಹಿಡಿದು ದಡವನ್ನು ಸೇರಿ ಅಮೃತ ಪಾನವನ್ನೇ ಮಾಡಬಹುದು. ಎರಡನೇ ಮನೆಯಲ್ಲಿ ಶನಿ ಇರುವುದರಿಂದ ಶನಿಯನ್ನು ಪ್ರಾರ್ಥಿಸಿ. ಶಿವಪಂಚಾಕ್ಷರಿ ಜಪ ಮಾಡಿ.
ಕುಂಭ: ಶನಿ ಲಗ್ನ ಇದ್ದಾನೆ. ಕುಜ ರಾಹು ದ್ವಿತೀಯದಲ್ಲಿ ಇದ್ದರೆ ಸಂಸಾರವು ಸುಳಿಯಲ್ಲಿ ಸಿಕ್ಕರೆ ಕೊಚ್ಚಿ ಹೋಗುತ್ತದೆ. ಶನಿ ಬಾಧೆಯಲ್ಲಿ ಹೆಂಡತಿ ಮಕ್ಕಳ ಮೇಲೆ ಕೋಪ ತಾಳದೆ ಶಾಂತವಾಗಿ ಅವರು ಕೊಡುವ ಸಲಹೆ ಸ್ವೀಕರಿಸಿ. ಕಾಲವು ಕೆಟ್ಟಾಗ ಮಕ್ಕಳು ಹೆಂಡತಿಯೇ ನಿಮ್ಮನ್ನು ಸರಿಯಾದ ಮಾರ್ಗದಲ್ಲಿ ನಡೆಯಲು ಅನುವು ಮಾಡಿಕೊಡುವ ದೇವರು ಕೊಟ್ಟ ವರ. ಮೃತ್ಯುಂಜಯ ಮಹಾ ಮಂತ್ರ ಜಪ ಮಾಡಿ.
ಮೀನ: ಲಗ್ನದಲ್ಲಿ ಕುಜ ರಾಹು ಸಂಧಿಯಾಗಿರುವುದರಿಂದ ಯಾವ ಕಾರಣಕ್ಕೂ ಯಾವ ವಿಚಾರಕ್ಕೂ ಆತಂಕ ಪಡದೇ ಶಾಂತ ಚಿತ್ತರಾಗಿ ಇದ್ದು ಸೂರ್ಯೋ ದಯಕ್ಕೆ ಮುಂಚೆ ಎದ್ದು ದೇವರ ಪ್ರಾರ್ಥನೆ ಮಾಡಿ. ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸಿ. ಓಂ ನಮೋ ನಾರಾಯಣ ಮಂತ್ರ ಪಠಿಸಿ.