ವಾರಭವಿಷ್ಯ: ಈ ರಾಶಿಯವರಿಗೆ ಜೂನ್-ಜುಲೈ ತಿಂಗಳಲ್ಲೊಂದು ಅದ್ಭುತ ಘಟನೆ ನಡೆದು ಮನಃಸಂತೋಷ ನೀಡುತ್ತದೆ

om
Published on

ಮೇಷ: ಪರಮಾತ್ಮನು ಎರಡು ಆಯನಗಳನ್ನು, ಅದಕ್ಕೆ ತಕ್ಕನಾದ ಋತುಗಳನ್ನು ಮನುಷ್ಯನ ಹಿತಕ್ಕಾಗಿ ಸೃಷ್ಟಿಯಲ್ಲೇ ಇಟ್ಟು ನಮಗೆ ಬಿಟ್ಟುಕೊಟ್ಟಿದ್ದಾನೆ. ಒಂದೇ ಒಂದು ತಿಂಗಳು ಮಾತ್ರವೇ ಉತ್ತರಾಯಣ ಇದ್ದು, ದಕ್ಷಿಣಾಯಣ ಆರಂಭವಾಗಿ ಹಬ್ಬಗಳು ಶುರುವಾಗಿ ಆಷಾಢ, ಶುದ್ಧ ಏಕಾದಶಿಯಿಂದ ಪರಮಾತ್ಮನು ಶಯನದಲ್ಲಿರುತ್ತಾನೆ. ಜುಲೈ 11ರಂದು ದಕ್ಷಿಣಾಯಣ ಆರಂಭವಾಗಿ ನಿಮ್ಮ ಇಷ್ಟಾರ್ಥವು ಈಡೇರುತ್ತದೆ. ಇಷ್ಟದೇವರ ಪೂಜೆ ಮಾಡಿ. ಬಯಸಿದ್ದೆಲ್ಲ ಸಿಗುತ್ತದೆ.

ವೃಷಭ: ರವಿ- ಬುಧ-ಶುಕ್ರರು ವೃಷಭದಲ್ಲಿದ್ದು ವೃಷಭ ರಾಶಿಯ ಶುಕ್ರನು ಬುಧನೊಂದಿಗೆ ಇದ್ದು, ವ್ಯಾಪಾರ-ವಹಿವಾಟುಗಳಲ್ಲಿ ಧನಲಾಭ ಕಾಣಬಹುದು. ಲಗ್ನಾತ್ 12ನೇ ಮನೆಯಲ್ಲಿ ಕುಜನಿರುವುದರಿಂದ ಶತ್ರುಗಳನ್ನು ದಾಟುವುದು ಪ್ರವಾಹದಲ್ಲಿ ಈಜುವುದರಷ್ಟೇ ಪ್ರಯಾಸಕರ. ಎಚ್ಚರವಾಗಿರಿ. ದುರ್ಗೆಯನ್ನು ಪ್ರಾರ್ಥಿಸಿ. ಅವಳೇ ನಿಮ್ಮನ್ನು ಕಾಯುತ್ತಾಳೆ.

ಮಿಥುನ: ಮಿತ್ರಗ್ರಹಗಳಾದ ರವಿ-ಬುಧರು ಇಷ್ಟಾರ್ಥ ಈಡೇರಿಸಲು ಗುರು-ಶುಕ್ರರು ಮಿಥುನದಲ್ಲಿ ಇದ್ದಾರೆ. ಈಗಾಗಲೇ ಈ ಗ್ರಹಗಳು ಕೊಟ್ಟ ಫಲವನ್ನು ಅನುಭವಿಸುವ ಯೋಗದಿಂದ ಕೂಡಿದ ವರಾಗಿರುತ್ತೀರಿ. ದಶಮದಲ್ಲಿ ಗುರುವಿದ್ದಾನೆ. ಗುರು 12ರಲ್ಲಿ ಇರುವುದರಿಂದ ನಿಮ್ಮನ್ನು ನೀವೇ ಕಾಪಾಡಿಕೊಂಡು, ಜೀವನವನ್ನು ಸಾಗಿಸಲು ಕಲಿತುಕೊಳ್ಳಿ.

ಕಟಕ: ಜಲರಾಶಿಯಲ್ಲಿ ಜನಿಸಿದ ನೀವು ಏಕ ಗುರುವಿನ ಅನುಗ್ರಹವನ್ನು, ಸುಖವನ್ನು ಕಾಣುತ್ತೀರ. ನಿಮ್ಮ ಮನಸ್ಸು ಶುದ್ಧವಾದ ನೀರಿನಂತೆ. ನಿಮ್ಮನ್ನು ನೀವೇ ನೋಡಿಕೊಂಡು ಶುದ್ಧತೆ ಹೊಂದುವಿರಿ. ಯಾವ ಕಾರಣಕ್ಕೂ ಯಾವುದಕ್ಕೂ ಯೋಚಿಸಬೇಡಿ. ಶುಭಫಲ ಹೊಂದಿ ಅನ್ಯರಿಗೂ ಸಹಕಾರ ಕೊಟ್ಟು, ತಾಳ್ಮೆಯ ಜೀವನ ಮುಂದುವರಿಸಿ.

ಸಿಂಹ: ದೇವರ ನಾಮಬಲದಿಂದ ಮನುಷ್ಯನು ಏನನ್ನೂ ಪಡೆದುಕೊಳ್ಳಬಹುದು. ನಮ್ಮ ಪುಣ್ಯದ ಫಲವನ್ನು ಪಡೆಯಲು ನಾವು ಯಾರನ್ನು ದ್ವೇಷಿಸದೆ ಮನಸ್ಸನ್ನು ಹಿಡಿತದಲ್ಲಿಟ್ಟುಕೊಂಡು ಸಾಗಿದರೆ ದೈವವು ಸಹಾಯ ಮಾಡುತ್ತದೆ. ಜೂನ್-ಜುಲೈ ತಿಂಗಳಲ್ಲೊಂದು ಅದ್ಭುತ ಘಟನೆ ನಡೆದು ಮನಃಸಂತೋಷ ನೀಡುತ್ತದೆ. ಪಾರ್ವತಿ-ಪರಮೇಶ್ವರ, ಸುಬ್ರಹ್ಮಣ್ಯನನ್ನು ಪೂಜಿಸಿ,.

ಕನ್ಯಾ: ಹಗಲಾದ ಮೇಲೆ ರಾತ್ರಿ, ರಾತ್ರಿಯಾದ ಮೇಲೆ ಹಗಲು, ಅದರಂತೆ ಕನ್ಯಾ ರಾಶಿಗೆ ಶನಿ-ಗುರು ಒಳ್ಳೆಯ ಸ್ಥಾನಗಳಲ್ಲಿದ್ದು ನಿಮಗೆ ಶುಭ ಫಲ ನೀಡುತ್ತಿದ್ದಾನೆ. ಈ ಸಮಯದಲ್ಲಿ ದೈವಬಲ ಹೆಚ್ಚಿದ್ದು, ಅದನ್ನು ಕಾಪಾಡಿಕೊಳ್ಳಬೇಕು. ಕೊಡಬೇಕಾದವರ ಋಣ ತೀರಿಸಿ. ಮಹಾವಿಷ್ಣುವನ್ನು ಪೂಜಿಸಿ. ಎಲ್ಲವೂ ನಿಮ್ಮಿಷ್ಟದಂತೆ ನಡೆಯುವುದು.

ತುಲಾ: ಚಿಂತೆ ಎಂಬುದು ಸಾಗರವಿದ್ದಂತೆ. ಚಿಂತೆಯು ದೂರಮಾಡಲು ದೈವಶಕ್ತಿಯನ್ನು ನಂಬಬೇಕು. ನ್ಯಾಯ, ಅನ್ಯಾಯಗಳ ವಿಮರ್ಶೆ ಮಾಡಿ ಮುಂದೆ ಸಾಗಿದರೆ ಚಿಂತಿಸುವ ಅಗತ್ಯವಿಲ್ಲ. ನಕಾರಾತ್ಮಕ ಚಿಂತನೆಯನ್ನು ಸಕಾರಾತ್ಮಕಗೊಳಿಸಲು ದುರ್ಗೆಯನ್ನು ಪ್ರಾರ್ಥಿಸಿ.

ವೃಶ್ಚಿಕ: ಒಳ್ಳೆಯ ತೆಂಗಿನಕಾಯಿಯನ್ನು (ಪೂರ್ಣಫಲ) ಪೂಜಿಸಿ ದೇವರ ಮುಂದೆ ಇಟ್ಟು ಪ್ರಾರ್ಥಿಸಿ. ಗುರುಹಿರಿಯರ ಆದಿಯಾಗಿ ಫಲಸಮರ್ಪಣೆ ಮಾಡಿದರೆ ನೀವು ಬೇಕಾದ ಧನ-ಕನಕ ವಸ್ತುವಾಹನ ಪಡೆಯಬೇಕಾದರೆ ಸುಬ್ರಹ್ಮಣ್ಯನೇ ದಾರಿ ತೋರಿಸಬೇಕು. ರೈಲು ಮುಂದೆ ಸಾಗಲು ಹಸಿರುನಿಶಾನೆ ತೋರಬೇಕು. ಹಾಗೆಯೇ ನಿಮಗೆ ಗಣಪನೇ ರೈಲು. ಸುಬ್ರಹ್ಮಣ್ಯನೇ ಹಸಿರು ನಿಶಾನೆ. ಸಂತಸದಿಂದಿರಿ.

ಧನಸ್ಸು: ಶ್ರೀಕೃಷ್ಣನ ಕೃಪೆಯಿದ್ದರೆ, ಗುರುಬಲ ಇಲ್ಲದಿದ್ದರೂ ಕೆಲಸಗಳು ಆಗುತ್ತವೆ. ಕೃಷ್ಣಾಷ್ಟಕ ಪಠಿಸಿ. ಮುಂದೆ ಸಾಗಿರಿ. ತೃತೀಯ ಶನಿಯು ಹಿಂದಕ್ಕೆ ಬಂದು ಜೂನ್ 30ರಿಂದ ವಕ್ರಿಯಾಗುತ್ತಾನೆ. ಶನಿಗೆ ಪ್ರಾರ್ಥನೆ ಅತ್ಯಗತ್ಯ.

ಮಕರ: ಈ ಮಂತ್ರ ಪಠಿಸಿ: ಅನನ್ಯಾಃ ಚಿಂತಯಂತೋ ಮಾಂ ಯೇ ಜನಃ ಪರ್ಯು ಪಾಸತೆ ತೇಷಾಂ ನಿತ್ಯಾಭಿಯುಕ್ತಾನಂ ಯೋಗ-ಕ್ಷೇಮಂ ವಹಾಮ್ಯಹಮ್ಕೃಷ್ಣಮಂತ್ರ ಜಪಿಸುತ್ತ ಬಂದರೆ ಮನುಷ್ಯನ ಮುಖದಲ್ಲಿ ತೇಜಸ್ಸು ವೃದ್ಧಿಯಾಗಿ, ಮಾಡುವ ಕೆಲಸಗಳಲ್ಲಿ ಜಯವು ಸಿಗುತ್ತದೆ. ನಗುನಗುತ್ತ ನಗುಮೊಗದಿಂದ ಏಳಬೇಕು. ಮನಸ್ಸು ನಗಬೇಕಾದರೆ ದೈವಸಹಾಯ ಅತಿಮುಖ್ಯವಾದದ್ದು. ಪಂಚಮ ಗುರು ಒಬ್ಬನೇ ಸಾಕು, ನಿಮ್ಮ ಕೈ ಹಿಡಿದು ನಡೆಸಲು. ಗುರುಪ್ರಾರ್ಥನೆ ಇರಲಿ. ಗುರು ಪರಂಪರಾ ಸ್ತೋತ್ರ ಪಠಿಸಿ.

ಕುಂಭ: ಶನಿ 2025ನೇ ಮಾರ್ಚ್ 29ರಿಂದ ಮೀನರಾಶಿಗೆ ಪ್ರವೇಶಿಸಿದ ನಂತರ ಶನಿಯ ಲಗ್ನವನ್ನು ಬಿಟ್ಟು ಗುರುಮನೆಗೆ ಹೋದಾಗ ಜೀವನದಲ್ಲಿ ಬದಲಾವಣೆ ಉಂಟಾಗಿ, ಸುಖದ ಹಾದಿಯನ್ನು ಹಿಡಿಯಲು ಅನುವಾಗಿಸುತ್ತಾನೆ. ದೇವಿ ಪಾರಾಯಣವನ್ನು ಮಾಡಿ. ಕುಲದೇವರನ್ನು ಪೂಜಿಸಿ. ಭಾಗ್ಯದ ದಾರಿಯನ್ನು ಕಂಡುಕೊಳ್ಳಿ.

ಮೀನ: ದ್ವಾದಶ ಶನಿಯು ಜೂನ್ 30ರಿಂದ ಆಗಲಿದ್ದು, ಏಕಾದಶ ಸ್ಥಾನ ಫಲವನ್ನು ಕೊಡುತ್ತಾನೆ. ಚಿಂತೆ ಬಗೆಹರಿಯುತ್ತದೆ. ಈ ಹಿಂದೆ ಬಂದ ಕಷ್ಟಗಳನ್ನು ದೂರಮಾಡಿ ಮುಂದಿನ 5 ತಿಂಗಳು ಮನಃಸಂತೋಷ ಕೊಡುತ್ತಾನೆ. ದೈವಸಹಾಯ ನೀಡುತ್ತಾನೆ. ಶನಿ ಸ್ತೋತ್ರವನ್ನು ನಿತ್ಯ ಪಾರಾಯಣ ಮಾಡಿ. ಈಶ್ವರನನ್ನು ಪೂಜಿಸಿ. ಸುಖಕ್ಕೆ ಒಂದೇ ಮಂತ್ರ ‘ಓಂ ನಮಃ ಶಿವಾಯ’.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net