ವಾರಭವಿಷ್ಯ: ಈ ರಾಶಿಯವರು ದುಷ್ಟರನ್ನು, ಧನ ಅಪಹರಣ ಮಾಡುವವರನ್ನು ದೂರವಿಟ್ಟು, ಸ್ವಂತಿಕೆಯಿಂದ ಜೀವನ ನಡೆಸಿ.

rta
Published on

ಮೇಷ: ದಕ್ಷಿಣಾಯನ ಆರಂಭವಾಗುತ್ತದೆ. ಮೇಷ ರಾಶಿಯವರಿಗೆ ಗುರು 2ನೇ ಮನೆಯಲ್ಲಿ ಶುಭವಾಗಿದ್ದು, ಅನೇಕ ಫಲ ನೀಡಿ ಸಂತಸ ತರುತ್ತಾನೆ. ಧನದ ನಿರೀಕ್ಷ್ಷೆಯಲ್ಲಿ ಇರುವವರಿಗೆ ನ್ಯಾಯಸಮ್ಮತವಾಗಿ ಬರುವ ಧನವನ್ನು ತಂದು ಸೇರಿಸುತ್ತಾನೆ. ದಕ್ಷಿ್ಷಾಯನ ಪುಣ್ಯಕಾಲದಲ್ಲಿ ಮೇಷ ರಾಶಿಯಿಂದ ಹಿಡಿದು ಮೀನ ರಾಶಿಯವರೆಗೆ ಎಲ್ಲರೂ ಪಿತೃದೇವತೆಗಳಿಗೆ ತಿಲಾಂಜಲಿ, ಅನ್ನದಾನ ಮಾಡಿದರೆ ಬಹುತರವಾದ ಯೋಗಗಳನ್ನು ದೇವರು ತಂದು ಕೊಡುತ್ತಾನೆ.

ವೃಷಭ: ಲಗ್ನದಲ್ಲಿ ಗುರು, ರವಿ-ಬುಧ-ಶುಕ್ರರು ಮಿಥುನದಲ್ಲಿ ಇರುವುದರಿಂದ ವೃಷಭ ರಾಶಿಯವರಿಗೆ ಕಾರ್ಯಾನುಕೂಲ. ಶುಕ್ರನಿಂದ ಧನವೂ, ಬುಧನಿಂದ ವ್ಯಾಪಾರ ಹರಿದುಬಂದು ತೃಪ್ತಿಯಾದ ಜೀವನ ನಡೆಸಲು ಅನುಗ್ರಹಿಸುತ್ತಾರೆ. ಲಗ್ನದಲ್ಲಿ ಗುರುವಿರುವುದರಿಂದ ‘ಶಿವಾಯ ಗುರುವೇ ನಮಃ’ ಎಂಬ ವಾಕ್ಯದಂತೆ ಈಶ್ವರನ ಆರಾಧನೆ ಮಾಡಿರಿ. ಪಾರ್ವತಿ ಸಾಂಬಸದಾಶಿವನನ್ನು ದರ್ಶಿಸಿ, ಇಚ್ಛಿತ ಕಾರ್ಯಗಳು ಈಡೇರುತ್ತವೆ.

ಮಿಥುನ: ದ್ವಾದಶ ಗುರುಬಲ ಇಲ್ಲದಿದ್ದರೂ ರಾಶಿಯಲ್ಲಿ ರವಿ-ಬುಧ-ಶುಕ್ರರು ಶುಭಸೂಚಕರು. ನಿಮ್ಮ ಆಸೆಗಳನ್ನು ಈಡೇರಿಸುತ್ತಾರೆ. ಮಹಾವಿಷ್ಣುವನ್ನು ಪ್ರಾರ್ಥಿಸಿ. ಸೂರ್ಯನು ಮಿತ್ರನ ಮನೆಯಲ್ಲಿರುವುದರಿಂದ ಎಲ್ಲರೂ ಮಿತ್ರರಾಗಿ ಸಹಕರಿಸಿ ಜೀವನದಲ್ಲಿ ಶುಭವಾಗುವುದು. 12ರ ಗುರು ಶತ್ರುಕಾಟವನ್ನು ತೋರಿಸುತ್ತದೆ. ವಿಷ್ಣು ಸಹಸ್ರನಾಮ ಪಾರಾಯಣ ಮಾಡಿರಿ.

ಕಟಕ: ದ್ವಾದಶ ರವಿ-ಬುಧ-ಶುಕ್ರರು ಬಂದು ವೆಚ್ಚವು ಹೆಚ್ಚಾಗಿ ಸಮತೋಲನ ಕಾಪಾಡಿಕೊಂಡು ಮುಂಜಾಗ್ರತೆಯಿಂದ ನಿಮ್ಮ ವ್ಯವಹಾರ ಮಾಡಿಕೊಂಡು ಹೋಗಿ. ಕೈಗೆಟಕುವಷ್ಟಕ್ಕೆ ಮಾತ್ರ ಆಸೆಯಿರಲಿ, ಬೆಟ್ಟವನ್ನು ಮುಟ್ಟಲು ಯಾರಿಗೂ ಅಗುವುದಿಲ್ಲ. ಉಮಾಮಹೇಶ್ವರನನ್ನು ಪ್ರಾರ್ಥಿಸಿ. ಏನೇ ಬರಲಿ ಧೈರ್ಯವಿರಲಿ. ಮನಸ್ಸಿಗೆ ಯಾವ ವಿಚಾರ ಹಚ್ಚಿಕೊಳ್ಳದೆ ಮುಂದೆ ಸಾಗಿ.

ಸಿಂಹ: ಏಕಾದಶದಲ್ಲಿ ರವಿ-ಬುಧ-ಶುಕ್ರರು ಬಂದು ಶುಭಫಲ ನೀಡುತ್ತಾರೆ. ದಶಮ ಗುರುವು ಪೂರ್ವ ಜನ್ಮದ ಪುಣ್ಯ ಕೊಟ್ಟು ನಿಮಗೆ ಬರಬೇಕಾದ ಧನ, ಲಾಭ, ಮನಸ್ಸಿಗೆ ಶಾಂತಿ, ವ್ಯಾಪಾರದಲ್ಲಿ ಅನುಕೂಲ ಕೊಡುತ್ತಾನೆ. ಸದಾ ಹಸನ್ಮುಖಿಯಾಗಿದ್ದು, ಕೋಪ ತಾಪ ಬಿಟ್ಟು ಸೂರ್ಯನನ್ನು ಪ್ರಾರ್ಥಿಸಿ. ಆದಿತ್ಯ ಹೃದಯ ಪಾರಾಯಣ ಓದಿರಿ. ಸುಬ್ರಹ್ಮಣ್ಯ ಜಪ ಮಾಡಿರಿ.

ಕನ್ಯಾ: ಲಗ್ನದಲ್ಲಿ ಕೇತು, ಸಪ್ತಮದಲ್ಲಿ ರಾಹು, 9ರಲ್ಲಿ ಗುರು, 6ರಲ್ಲಿ ಶನಿಇರುವುದರಿಂದ ಕಾರ್ಯ ಜಯ. ಇಂತಹ ಶುಭಸಮಯವನ್ನು ಹಾಳು ಮಾಡಿಕೊಳ್ಳಬೇಡಿ. ಇದನ್ನು ಬಳಸಿ ಜನಾನುರಾಗಿಗಳಾಗಿ ಧನ, ಸುಖ ಪಡೆಯುವ ಕಾಲ. ಕುಲದೇವರನ್ನು ಪ್ರಾರ್ಥಿಸಿ,ನಿಮ್ಮ ಆಸೆಗಳಿಗೆ ಯಾವ ಗ್ರಹಗಳೂ ತಡೆ ಒಡ್ಡುವುದಿಲ್ಲ.

ತುಲಾ: ವಿಚಾರಗಳನ್ನು ಆಳದಿಂದ ಪರೀಕ್ಷಿಸಿ, ಆಲೋಚಿಸಿ ಕೆಲಸ ಮಾಡಬೇಕು. ಎಲ್ಲ ಕಡೆಯೂ ನಕಾರಾತ್ಮಕತೆ ಕಾಣುತ್ತದೆ. ದೈವಬಲ, ಪೂರ್ವಪುಣ್ಯ ನಿಮ್ಮ ಕೈ ಹಿಡಿದು, ಕಾಣದ ಕೈ ಸಹಾಯ ಮಾಡುತ್ತದೆ. ನದಿ ದಾಟಲು ಊರುಗೋಲು ಬೇಕು. ಜೀವನ ಸಾಗಿಸಲು ಧೈರ್ಯ ಬೇಕು. ಜನ್ಮದಾತರ ಆಶೀರ್ವಾದ ಪಡೆಯಿರಿ.

ವೃಶ್ಚಿಕ: ಹರಿಚಿತ್ತ ಸತ್ಯವೆಂದಿದ್ದಾರೆ ಪುರಂದರದಾಸರು. ನರಚಿತ್ತಕ್ಕೆ ಬಂದದ್ದೆಲ್ಲ ಆಗಬೇಕೆಂಬ ಹಂಬಲ ಬಿಟ್ಟು ದೈವವನ್ನು ಪ್ರಾರ್ಥಿಸಿ. ಸಪ್ತಮ ಗುರು ಕೊಡುವುದನ್ನು ಕೊಟ್ಟು, ಬೇಡದ್ದನ್ನು ಬಿಟ್ಟು ನಿಮ್ಮನ್ನೂ ಕಾಪಾಡಿ ಆಶೋತ್ತರಗಳನ್ನು ಈಡೇರಿಸುತ್ತಾನೆ. ಪಂಚಮ ರಾಹುವಿಗೆ ಸುಬ್ರಹ್ಮಣ್ಯನ ಪ್ರಾರ್ಥನೆ ಇರಲಿ. ಆರೋಗ್ಯದಲ್ಲಿ ವ್ಯತ್ಯಯ ಆಗದಂತೆ ನೋಡಿಕೊಳ್ಳಿ.

ಧನಸ್ಸು: ದುಷ್ಟರನ್ನು, ಧನ ಅಪಹರಣ ಮಾಡುವವರನ್ನು ದೂರವಿಟ್ಟು, ಸ್ವಂತಿಕೆ ಯಿಂದ ಜೀವನ ನಡೆಸಿ. ನಿಮಗೆ ಧನ, ಸಂಪತ್ತು, ಅಧಿಕಾರವನ್ನು ಗುರುವೇ ನೀಡುತ್ತಾರೆ. ಹೆದರುವ ನಕ್ಷತ್ರವಾಗಲಿ, ರಾಶಿಯೂ ಅಲ್ಲ. ಒಳ್ಳೆಯ ಕಾಲಕ್ಕಾಗಿ ಕಾಯಿರಿ. ಯಾರೇ ನಿಮಗೆ ಮೋಸ ಮಾಡಿದರೂ ದೇವರೇ ದಂಡ ನೀಡುತ್ತಾನೆ. ನಿಮ್ಮ ಅಭ್ಯುದಯಕ್ಕೆ ಗುರುಚರಿತ್ರೆ ಪಾರಾಯಣ ಮಾಡಿ. ಪ್ರಾಣಕ್ಕೆ ಅನ್ನ, ಶರೀರಕ್ಕೆ ಆರೋಗ್ಯ ನೀಡಲು ಕುಲದೇವರನ್ನು ಪ್ರಾರ್ಥಿಸಿ.

ಮಕರ: ಪಂಚಮ ಗುರು ಎಲ್ಲವನ್ನೂ ಕೊಡುತ್ತಾನೆ. 30 ಮಾಸ ಶನಿ ವಕ್ರಗತಿಯಲ್ಲಿದ್ದಾನೆ. ಆದ್ದರಿಂದ ದಾರಿಯು ಮುಳ್ಳು, ಕಲ್ಲಿನಿಂದ ಕೂಡಿರುತ್ತದೆ. ನೀವು ಸಾಗಲು ಸಾಮರ್ಥ್ಯ ಇರಬೇಕು. ದೈವಬಲವೂ ಅತ್ಯಗತ್ಯ. ಶನಿಯು ವಕ್ರಗತಿಯಲ್ಲಿ ಕುಂಭದಿಂದ ಮಕರಕ್ಕೆ ಬಂದಿದ್ದಾನೆ. ಶನಿಯನ್ನು ಪ್ರಾರ್ಥಿಸಿ ಇನ್ನೂ ಹೆಚ್ಚಿನ ಭೋಗಭಾಗ್ಯಗಳು ದೊರಕುತ್ತವೆ.

ಕುಂಭ: ಜನ್ಮ ಶನಿಯು ದ್ವಾದಶಕ್ಕೆ ಬಂದು, ಕೆಲ ವಿರೋಧಿಗಳಿಂದ ತೊಂದರೆ, ಅಶಾಂತಿ ಉಂಟಾಗುತ್ತದೆ. ಮನಸ್ಸನ್ನು ಗೆದ್ದವನು ಮನುಷ್ಯನನ್ನು ಒಲಿಸಿಕೊಳ್ಳಲು ದೇವರ ಕರುಣೆ ಅತ್ಯಗತ್ಯ. ಚತುರ್ಥದಲ್ಲಿ ಗುರು ಇರುವುದರಿಂದ ನಿಧಾನವಾಗಿ ಸಾಗಿ ನಿಮ್ಮ ಕೆಲಸವನ್ನು ತಕ್ಕ ಮಟ್ಟಿಗೆ ಮಾಡಿಕೊಳ್ಳಲು ಜ್ಞಾನ, ಶಕ್ತಿ ಕೊಡಲು ದುರ್ಗೆಯನ್ನು ಪೂಜಿಸಿ. ಇಚ್ಛೆಯನ್ನು ಪೂರೈಸಲು ಅನಂತಪದ್ಮನಾಭನನ್ನು ಪ್ರಾರ್ಥಿಸಿ.

ಮೀನ: ಮೀನ ರಾಶಿಯವರಿಗೆ ಮತ್ತೆ ಏಕಾದಶಕ್ಕೆ ಶನಿ ವಕ್ರಿಯಾಗಿ ಬಂದಿರುವು ದರಿಂದ, ಬರಬೇಕಾದ ಹಳೆಯ ಬಾಬತ್ತು, ಕೆಲಸ ಮಾಡಿ ನಿಮಗೆ ಬರಬೇಕಾದ ದುಡ್ಡು ತಂದು ಕೊಡುವ ಕಾಲ. ತೆಗೆದುಕೊಳ್ಳುವ ಶಕ್ತಿ, ಸಾಮರ್ಥ್ಯ ನಿಮ್ಮಲ್ಲಿರಬೇಕು. ಯಾರಿಗೂ ನಿಷ್ಠುರವಾಗಿ ಮಾತನಾಡಬೇಡಿ. ಅಪಾಯ ಬಂದಾಗ ಉಪಾಯದಿಂದ ಗೆಲ್ಲಬೇಕು. ನಾಗದೇವರನ್ನು ಮತ್ತು ಗಣಪತಿಯನ್ನು ಪ್ರಾರ್ಥಿಸಿ. ಇಷ್ಟಾರ್ಥವನ್ನು ನೆರವೇರಿಸಿಕೊಳ್ಳಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net