

ಮೇಷ: ಶುಭವಾದ ಶ್ರಾವಣ ಮಾಸವು ಮುಗಿದಿದ್ದು, ಭಾದ್ರಪದ ಮಾಸವು ಆರಂಭವಾಗುವ ಸಮಯ. ಈ ಮಾಸದಲ್ಲಿ ವರಸಿದ್ಧಿ ವಿನಾಯಕನನ್ನು ಪೂಜಿಸಿ. 6ರಲ್ಲಿ ಕೇತು ಇರುವುದರಿಂದ ಚಿಂತಾಮಣಿ ಮಹಾ ಗಣಪತಿಯನ್ನು ಪೂಜಿಸಿ ಸತ್ಫಲವನ್ನು ಹೊಂದಿ. ಯಾವುದಾದರೂ ದೇವತಾ ಹರಕೆ ಇದ್ದರೆ ಕೂಡಲೇ ತೀರಿಸಿ. ಸುಬ್ರಹ್ಮಣ್ಯನನ್ನು ನಿರಂತರವಾಗಿ ಪೂಜಿಸಿ. ಪ್ರಾರ್ಥಿಸಿ.
ವೃಷಭ: ಲಗ್ನದಲ್ಲಿ ಗುರುವಿದ್ದು ಗುರು ಬಲಿಷ್ಠನಾಗಿದ್ದಾನೆ. ಗಣೇಶನನ್ನು, ಷಣ್ಮುಖನನ್ನು ಪೂಜಿ ಸುವ ಸಮಯ ಬಂದಿದೆ. ಅಲ್ಪಸ್ವಲ್ಪ ಪ್ರಗತಿಯನ್ನು ಕಾಣುವ ಕಾಲ. ನಿಮ್ಮ ಮಕ್ಕಳು ಅಪವಾದ ದಿಂದ ತಪ್ಪಿಸಿಕೊಳ್ಳುವಂತೆ ಎಚ್ಚರಿಕೆ ವಹಿಸಿ. ರಾಜಯೋಗ ಆರಂಭವಾಗಿದೆ. ಮಾಡಿದ ಪುಣ್ಯ ನಿಮ್ಮ ಮಕ್ಕಳನ್ನು ಕಾಪಾಡುತ್ತದೆ. ಲಕ್ಷ್ಮಿನರಸಿಂಹನನ್ನು ಅನಂತವಾಗಿ ಪ್ರಾರ್ಥಿಸಿ.
ಮಿಥುನ: ನಾಲಿಗೆಯು ಚಾಕುವಿಗಿಂತ ಹರಿತವಾದ ಆಯುಧ ಇದರಿಂದ ಮಾನಹರಣ ಆಗುವುದೇ ಹೆಚ್ಚು. ನಾಲಿಗೆಯ ಮೇಲೆ ಹಿಡಿತವಿರಲಿ. ಮಾತನಾಡುವ ಮೊದಲು ಚಿಂತಿಸಿ, ರ್ಚಚಿಸಿ. ಹಿತವಾದ ಮಾತಿನಿಂದ ಕ್ಷೇಮವಾಗುತ್ತದೆ. ಮಹಾವಿಷ್ಣುವನ್ನು ಪ್ರಾರ್ಥಿಸಿ, ವಿಷ್ಣು ಸಹಸ್ರನಾಮ ಪಾರಾಯಣ ಮಾಡಿ. ವಾಮನ ಅಷ್ಟೋತ್ತರ ಪಠಿಸಿ.
ಕಟಕ: ಗುರು ಏಕಾದಶದಲ್ಲಿದ್ದು ಭೋಗ್ಯ ಭಾಗ್ಯ ಸಂತೋಷಗಳನ್ನು, ಇಷ್ಟಾರ್ಥ ಸಿದ್ಧಿಯನ್ನು, ತೃಪ್ತಿಯನ್ನು ಕೊಡುತ್ತಾನೆ. ಅನ್ಯರಿಗೂ ದಾನ ಮಾಡಿ. ಮಾಡಿದ ದಾನ ಯಾರಿಗೂ ಹೇಳಬೇಡಿ. ಚಂದ್ರನಂತೆ ಶುದ್ಧವಾದ ಮನಸ್ಸು ಉಳ್ಳವರು ನೀವು ಶಿವನನ್ನು ಪ್ರಾರ್ಥಿಸಿ, ಗಣೇಶಸುಬ್ರಹ್ಮಣ್ಯನನ್ನು ಆನಂದದಿಂದ ಅರ್ಚಿಸಿದರೆ ಕೆಲಸ ಕಾರ್ಯಗಳು ತೊಡಕಿಲ್ಲದೆ ಸಾಗುತ್ತದೆ.
ಸಿಂಹ: ದೇವರು ಏನು ಮಾಡಬೇಕೆಂದಿದ್ದಾನೆಯೋ ಅದನ್ನೇ ಮಾಡುತ್ತಾನೆ. ದೈವ ಚಿಂತನೆ ಇದ್ದರೆ ತೊಂದರೆ ಬಾರದಂತೆ ದೇವರು ನಮ್ಮನ್ನು ಮುನ್ನಡೆಸುತ್ತಾನೆ. ತಾತ್ಕಾಲಿಕವಾಗಿ ಅಸಂತೋಷ ಉಂಟು ಮಾಡಿದರೂ ಶಾಶ್ವತವಾದ ಸಂತೋಷವನ್ನು ಕೊಡುತ್ತಾನೆ. ಸೂರ್ಯ ನಾರಾಯಣನನ್ನು ಪ್ರಾರ್ಥಿಸಿ, ಆದಿತ್ಯ ಹೃದಯ ಪಾರಾಯಣ ಮಾಡಿ. ನಿಮ್ಮ ಗುರುಗಳಿಂದ ಸೂರ್ಯ ಮಂತ್ರ ಉಪದೇಶ ಪಡೆಯಿರಿ. ಜೀವನಕ್ಕೆ ಶಾಶ್ವತ ಬೆಳಕು ಪಡೆಯಿರಿ.
ಕನ್ಯಾ: ಕೆಟ್ಟ ಮಾತನ್ನು ಆಡುವುದು ಕೊಟ್ಟ ಮಾತನ್ನು ನಡೆಸದಿರುವುದು ಎರಡೂ ತಪ್ಪಿನ ಕೆಲಸ. ಮನುಷ್ಯನು ಬದುಕಿರುವವರೆಗೂ ಸತ್ಯ ಧರ್ಮದಿಂದ ಇರಬೇಕು. ಕುಲದೇವರನ್ನು ಪ್ರಾರ್ಥಿಸಿ, ದೇವರು ಕೊಡಬೇಕಾದುದನ್ನು ಕೊಟ್ಟೇ ಕೊಡುತ್ತಾನೆ. ಶ್ರೀರಾಮನಾಮ ಸ್ಮರಣೆ ಮಾಡಿ, ಹನುಮಾನ್ ಚಾಲೀಸಾ ಪಠಿಸಿ.
ತುಲಾ: ತೂಕದ ತಕ್ಕಡಿಯನ್ನು ಹಿಡಿದಿರುವುದು ಧರ್ಮದೇವತೆ. ಗ್ರಹಗಳಲ್ಲಿ ಅತ್ಯಂತ ಶ್ರೇಷ್ಠತೆಯನ್ನು ಉಂಟುಮಾಡುವ ಮಹಾದೇವನ ಸೃಷ್ಟಿ ಯಾದ ಶನಿ ಗ್ರಹ. ಶನೀಶ್ವರಾಯ ಶಾಂತಯ ಸರ್ವ ಬಿಷ್ಟ ಪ್ರದಾಯಿನೆ ಎಂಬಂತೆ ಶನಿ ಬರುವುದು ಕಷ್ಟ ಕೊಡಲು ಅಲ್ಲ. ಜೀವನದಲ್ಲಿ ಪಾಠ ಕಲಿಸಲು ಬರುತ್ತಾನೆ. ಶನಿಯನ್ನು ಪ್ರಾರ್ಥಿಸಿ, ದುರ್ಗೆಯನ್ನು ಸ್ಮರಿಸಿ. ಜ್ಞಾಪಕವಿರಲಿ, ನಿಮಗೆ ನೀವೇ ವಿನ್ಯಾಸಕಾರರು. ಸಂತೋಷದಿಂದಿರಿ.
ವೃಶ್ಚಿಕ: ಇನ್ನೊಬ್ಬರ ಯೋಗ ಕ್ಷೇಮವನ್ನು ಕಾಪಾಡಿದರೆ ದೇವರೇ ನಮಗೆ ಭಾಗ್ಯಗಳನ್ನು ಕೊಟ್ಟು ಕಾಪಾಡುತ್ತಾನೆ ಎಂಬ ಹಲವಾರು ಉದಾಹರಣೆಗಳಿವೆ. ಹಣದ ಹೊಳೆಯೇ ಹರಿದು ಬರಲಿದೆ. ದಾನ ಧರ್ಮವನ್ನು ಮಾಡಿ. ಯಾವುದಕ್ಕೂ ಕೊರತೆಯಾಗುವುದಿಲ್ಲ. ಕುಲದೇವರನ್ನು ಪ್ರಾರ್ಥಿಸಿ ನಿಮ್ಮ ಸಮಸ್ಯೆಗಳು ಕೊನೆಗೊಳ್ಳುವ ಕಾಲವು ಹತ್ತಿರದಲ್ಲಿದೆ.
ಧನಸ್ಸು: ಕೇವಲ ಬಿಲ್ಲು ಬಾಣಗಳಿಂದ ರಾಕ್ಷಸನನ್ನು ವಧೆ ಮಾಡಿ ಭಾರತ ರಾಷ್ಟ್ರವನ್ನು ಕಟ್ಟಿ ಅಯೋಧ್ಯೆಯಲ್ಲಿ ನೆಲೆಸಿ, ಅಯೋಧ್ಯಾ ಜನರಿಗೆ ಮೋಕ್ಷವನ್ನು ಕೊಟ್ಟು ರಾಮನು ಅವನ ದೈವೀ ಸಂಪತ್ತನ್ನು ಇಲ್ಲೇ ಬಿಟ್ಟು ಹೋಗಿದ್ದಾನೆ. ನಿಮ್ಮ ನಡೆ ನುಡಿ ಚೆನ್ನಾಗಿದ್ದರೆ ಅವನೇ ನೀವೆಂದು ಕಾಣುತ್ತದೆ. ರಾಮನಾಮ ಜಪವನ್ನು ಮಾಡಿ, ಸುಂದರಕಾಂಡ ಪಾರಾಯಣ ಮಾಡಿ. ಸುಖವಾಗಿರುವ ಕಾಲವು ಹತ್ತಿರದಲ್ಲಿದೆ. ಕೋಪ ತಾಪವನ್ನು ಬಿಟ್ಟು ಶಾಂತವಾಗಿರಿ.
ಮಕರ: ಈ ರಾಶಿಯವರಿಗೆ ಶನಿಯ ಕಟ್ಟಕಡೆಯ ಸಾಡೇಸಾತಿಯ ಭಾಗವು ಶುಭವನ್ನು ತರುತ್ತದೆ. ಶನಿಯ ಕಾಲಘಟ್ಟದಲ್ಲಿ ಈಶ್ವರನನ್ನು ಪೂಜಿಸಿ. ಹಿರಿಯ ರಿಗೆ ವೃದ್ಧರಿಗೆ ಅಗೌರವವನ್ನು ತೋರಿಸಿದರೆ, ಶನಿಯು ಮಾತ್ರವಲ್ಲ, ನವಗ್ರಹಗಳೂ ನಿಮ್ಮನ್ನು ಕಾಪಾಡಲು ಸಾಧ್ಯವಿಲ್ಲ. ಮಾತಾಪಿತರಿಗೆ ವಂದಿಸಿ. ಪಿತೃಗಳನ್ನು ಸ್ಮರಿಸಿ. ಪಿತೃಸ್ಮರಣ ಮಾತ್ರೆನಾ ಸರ್ವ ಕಾರ್ಯಂ ಜಯೋಭವೆತ್.
ಕುಂಭ: ಶನಿಯ ತಾಪದ ಜತೆ ನಿಮ್ಮ ತಾಪವೂ ಸೇರಿದರೆ ಚ2+2ಚಚಿ+ಚಿ2 ಆಗಬಾರದು. ಚ2 ತಂದೆ ತಾಯಿಯರ ಮನಸ್ಸನ್ನು ನೋಯಿಸುವುದು, 2ಚಚಿ ದೇವರು ಗುರುಗಳು ತಪಸ್ವಿಗಳು ಸಾಧುಸಂತರ ಕೋಪ, ಚಿ2 ಪೂರ್ವಜನ್ಮದ ಪಾಪಗಳಿಂದ ನಮ್ಮನ್ನು ಕಾಪಾಡಬೇಕಾದರೆ ಉಮಾಮಹೇಶ್ವರನ ಸಂಸಾರವನ್ನು ಪೂಜಿಸಿ ಬೇಕಾದ್ದನ್ನು ಪಡೆಯಬಹುದು. ಶುಭವಾಗಲಿ. ಕಾರ್ಯ ಜಯವಾಗುತ್ತದೆ.
ಮೀನ: ರಾಶ್ಯಾಧಿಪತಿ ಗುರು ತೃತೀಯದಲ್ಲಿ ಇದ್ದಾನೆ. ಗುರು ಎಲ್ಲಿದ್ದರೂ ಅವನ ಬಲ ಇದ್ದೇ ಇರುತ್ತದೆ. ನದಿ ಮೂಲ, ಗುರು ಮೂಲ, ಸ್ತ್ರೀ ಮೂಲವನ್ನು ಹುಡುಕ ಬಾರದು ಎಂಬ ಬುದ್ಧಿ ಮಾತನ್ನು ಹಿರಿಯರು ಹೇಳಿದ್ದಾರೆ. ಗುರುವನ್ನು ನಿರಂತರವಾಗಿ ಪೂಜಿಸಿ. ಸಾಧ್ಯವಾದರೆ ಗಾಣಗಾಪುರದಲ್ಲಿರುವ ಅಷ್ಟ ತೀರ್ಥದಲ್ಲಿ ಸ್ನಾನ ಮಾಡಿ ಬನ್ನಿ. ಲಗ್ನದಲ್ಲಿ ರಾಹು ಇರುವುದರಿಂದ ಪಿತೃದೇವತೆಗಳನ್ನು ಭಾದ್ರಪದ ಮಾಸದಲ್ಲಿ ಪೂಜಿಸಿ ಕಾರ್ಯಗಳನ್ನು ಸಾಧಿಸಿ ಕೊಳ್ಳಬಹುದು. ಅನನ್ಯವಾದ ಭಕ್ತಿಯಿಂದ ಗುರುರಾಯರನ್ನು ಪೂಜಿಸಿ.