

ಮೇಷ: ಆಷಾಢ ಮಾಸದ ಕಡೆಯ ದಿನ (ಆ. 4) ವಿಶೇಷವಾದದ್ದು. ಹೆಣ್ಣುಮಕ್ಕಳು ಜ್ಯೋತಿರ್ಭೀಮೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿ ಹುಟ್ಟಿದ ಮನೆಗೂ ಸೇರಿದ ಮನೆಗೂ ಅಭ್ಯುದಯ ಪ್ರಾರ್ಥಿಸುತ್ತಾರೆ. ಮೇಷ ರಾಶಿಯವರಿಗೆ ಗುರು ದ್ವಿತೀಯದಲ್ಲಿರುವುದರಿಂದ ಉಮಾಮಹೇಶ್ವರನನ್ನು ಪೂಜಿಸಿ, ಜೀವನದಲ್ಲಿ ಹೊಸ ಬೆಳಕನ್ನು ಕಾಣಬಹುದು. ಗುರು ಮಂಗಳರು ವೃಷಭದಲ್ಲಿರುವುದರಿಂದ ಸುಬ್ರಹ್ಮಣ್ಯ ದೇವರನ್ನು ಪ್ರಾರ್ಥಿಸಿ.
ವೃಷಭ: ವೃಷಭ ರಾಶಿಯವರಿಗೆ ಗುರು-ಮಂಗಳ ಯೋಗವನ್ನು ಪರಮಾತ್ಮನೇ ಕರುಣಿಸಿದ್ದಾನೆ. ವಕ್ರ ಶನಿಯಿಂದ ರಾಜ್ಯ-ರಾಷ್ಟ್ರದಲ್ಲಿ ಏನೇನು ಅಲ್ಲೋಲಕಲ್ಲೋಲವಾಗುತ್ತಿದೆ ಎಂದು ಗಮನಿಸುತ್ತಿದ್ದೀರಿ. ಅಲ್ಲಿಗೆ ವಕ್ರ ಶನಿಯು ಹೇಗೆ ಜನರ ವರ್ತನೆ ಬದಲಾಯಿಸುತ್ತಾನೆ ಎಂದು ಅರ್ಥಮಾಡಿಕೊಳ್ಳಿ. ಶನಿ ಮಕರಕ್ಕೆ ಬಂದಿರುವುದರಿಂದ ಕುಲದೇವರನ್ನು ಪೂಜಿಸಿ.
ಮಿಥುನ: ವಕ್ರಗತಿಯಲ್ಲಿ ಶನಿಯು ಅಷ್ಟಮಕ್ಕೆ ಬಂದು ಸೇರಿದ್ದಾನೆ. ಅಡೆತಡೆ ಇಲ್ಲದ ದೇವರು ನಾಲಿಗೆ ಕೊಟ್ಟಿರುವುದು ಶುದ್ಧವಾದ, ರುಚಿಯಾದ ಆಹಾರವನ್ನು ತಿನ್ನಲು. ಹಾಗೆಯೇ ಎಲ್ಲರೊಂದಿಗೆ ಒಳ್ಳೆಯ ಮಾತನಾಡಲು ಲೋಕಾಸಮಸ್ತ್ತಾ ಸುಖಿನೋಭವಂತು ಎಂದು ಹೇಳಿ. ಇದನ್ನು ಅಭ್ಯಾಸ ಮಾಡಿಕೊಂಡರೆ ಚೇತರಿಕೆಯ ಜೀವನವು ನಿಮ್ಮದಾಗಿರುತ್ತದೆ.
ಕಟಕ: ಏಕಾದಶದಲ್ಲಿ ಗುರು-ಮಂಗಳ ಯೋಗ ಇದ್ದು, ವಕ್ರಿಯಾದರೂ ಯಾವ ಚಿಂತೆಯೂ ಇರುವುದಿಲ್ಲ. ಯಾವುದೇ ಕಾರಣಕ್ಕೂ ಆಹಾರ ಕಡಿಮೆ ಮಾಡಿಕೊಳ್ಳಬೇಡಿ. ವಿಶೇಷವಾಗಿ ಕುಲದೇವರನ್ನು, ಜುಂಜೇಶ್ವರನನ್ನು ಪ್ರಾರ್ಥಿಸಿರಿ. ಯಾವುದೂ ಸಿಕ್ಕುವುದಿಲ್ಲ ಎಂಬ ಶಬ್ದವೇ ಇರುವುದಿಲ್ಲ. ಜುಂಜೇಶ್ವರ - ಸುಬ್ರಹ್ಮಣ್ಯ ದೇವರ ಪ್ರತಿರೂಪ.
ಸಿಂಹ: ಒಂದೆಡೆಯಿಂದ ಗುರು ಮಂಗಳ ಯೋಗ ರಾಶಿಯಲ್ಲಿ ಬುಧ ಶುಕ್ರರು ಇದ್ದರೂ ಬರಬೇಕಾದ ದುಡ್ಡು ಸಿಗದೇ ಇದ್ದರೂ ಮನುಷ್ಯನ ಮನಸ್ಸು ನಕಾರಾತ್ಮಕ ಚಿಂತನೆ ಶುರು ಮಾಡುತ್ತದೆ. ಈ ವಾರವು ಶುಭಕರವಾಗಿದ್ದು, ಮನುಷ್ಯನು ಮನುಷ್ಯನಿಗೆ ಉಡುಗೊರೆ ಕೊಟ್ಟರೆ ಮುಯ್ಯಿ ಕೊಟ್ಟಂತೆ. ದೇವರೇ ಉಡುಗೊರೆ ಕೊಟ್ಟರೆ ಶಾಶ್ವತವಾದ ಧನ ಧಾನ್ಯ ಸಂಪತ್ತು ಕರುಣಿಸುತ್ತಾನೆ. ಆದಿತ್ಯಹೃದಯ ಪಾರಾಯಣ ಮಾಡಿರಿ.
ಕನ್ಯಾ: ಜಗತ್ತಿನ ಬೆಳಕಿಗೆ ಸೂರ್ಯನೇ ಕಾರಣ. ಸೂರ್ಯನನ್ನು ಮರೆ ಮಾಚಿ ಚಂದ್ರನು ಬಂದಾಗ ಮನುಷ್ಯನ ದೇಹವು ಆಯಾಸ- ಆಲಸ್ಯಪಡುವುದು ಸಹಜ. ನಿಮ್ಮ ಕಾರ್ಯ ಸಾಧನೆ ಮಾಡಲು ಗಣೇಶನನ್ನು, ಸುಬ್ರಹ್ಮಣ್ಯನನ್ನು ಪ್ರಾರ್ಥಿಸಿ. ಒಳ್ಳೆಯ ಫಲ ಪಡೆಯಬಹುದು.
ತುಲಾ: ದೇವರು ಕೊಡುವುದನ್ನು ಕೊಟ್ಟು, ನಿಮಗೆ ಏನು ಇಷ್ಟವೋ ಅದನ್ನು ತಡೆಹಿಡಿದಾಗ ನಿಮಗೆ ಕಷ್ಟ ಬಂದಿದೆ ಎಂಬ ಅನುಮಾನ ಬರುವುದು ಸಹಜ. ಆದರೆ ಮನುಷ್ಯರಿಗೆ ಏನು ಕೊಡಬೇಕೆಂಬುದು ದೇವರಿಗೆ ಗೊತ್ತಿದೆ. ದುರ್ಗೆಯನ್ನು ಪೂಜಿಸಿ. ಲಕ್ಷ್ಮೀನರಸಿಂಹನನ್ನು, ಪ್ರತ್ಯಂಗೀರ ದೇವಿಯನ್ನು ಪ್ರಾರ್ಥಿಸಿ.
ವೃಶ್ಚಿಕ: ಈ ರಾಶಿಯಲ್ಲಿ ಜನಿಸಿದವರು ಏನನ್ನೂ ಪಡೆಯಬಹುದು. ಏನನ್ನೂ ದಾನ ಮಾಡಬಹುದು. ಏನೇ ಕಷ್ಟ ಬಂದರೂ ಸಹಿಸಿ ಕೊಳ್ಳಲು ದೇವರೇ ಶಕ್ತಿ-ಸಾಮರ್ಥ್ಯ ಕೊಟ್ಟಿರುತ್ತಾನೆ. ಸದ್ಯದಲ್ಲಿ ಉದ್ಯೋಗ, ವ್ಯಾಪಾರ, ಒಡಹುಟ್ಟಿದವರೊಂದಿಗೆ ಸಂಬಂಧ ಕಾಪಾಡಿಕೊಳ್ಳಿ. ಕಾರ್ತೀಕೇಯ ಸ್ತೋತ್ರ ಪಾರಾಯಣ ಮಾಡಿ.
ಧನಸ್ಸು: ಧನುರ್ ರಾಶಿಯಲ್ಲಿ ಹುಟ್ಟಿದವರು ಮಹಾವಿಷ್ಣುವಿನ ಆರಾಧಕರು. ಸರ್ವವನ್ನೂ ಪಡೆಯುತ್ತಾರೆ. ಶ್ರೀರಾಮನು ಲಕ್ಷ್ಮಣನಿಗೆ ಹೇಳಿದಂತೆ ಮನುಷ್ಯರು 100 ವರ್ಷ ಬದುಕಿದಾಗ ಸಂತೋಷ, ಸಮೃದ್ಧಿ ಒಮ್ಮೆ ಅವನಿಗೆ ಬಂದೇ ಬರುತ್ತದೆ. ಗ್ರಹಗಳು, ಯಥಾಸ್ಥಿತಿಯಲ್ಲಿ ಇರುವುದರಿಂದ ನಿಮ್ಮ ದೈವಭಕ್ತಿಯಿಂದ ಏನನ್ನೂ ಪಡೆಯಬಹುದು.
ಮಕರ: ಶನಿಯು ವಕ್ರಗತಿಯಲ್ಲಿ ಬಂದಿರುವುದು ಸಮತೋಲನಕ್ಕಾಗಿ ಸಿಹಿ-ಕಹಿ ಕೊಡುತ್ತಾನೆ. ಶನಿಯು ಒಳ್ಳೆಯ ಫಲ ಕೊಡಬೇಕಾದರೆ ಉಮಾಮಹೇಶ್ವರರನ್ನು ಪೂಜಿಸಿ, ಶುದ್ಧವಾದ ಕ್ಷೀರ, ತುಪ್ಪವನ್ನು ದೇವರ ಮುಂದಿಟ್ಟು ಸೇವಿಸಿ ಶರೀರ ಬಾಧೆಗಳು ಹೋಗಿ, ಮನಸ್ಸಿಗೆ ಶಾಂತಿ, ದೇಹಾರೋಗ್ಯ ಸಿಗುತ್ತದೆ.
ಕುಂಭ: ದೈವಬಲ ಕಡಿಮೆ. ಕಾರ್ಯಗಳು ನಿಮ್ಮಂತೆ ನಡೆಯಬೇಕಾದರೆ ಶ್ರೀಕೃಷ್ಣನನ್ನು ಪೂಜಿಸಿ. ಪಂಡರಾಪುರದ ಪಾಂಡುರಂಗನನ್ನು ದರ್ಶಿಸಿ. ಎಲ್ಲವೂ ಒಳ್ಳೆಯದಕ್ಕೇ ತಿರುಗಿ ನಿಮ್ಮ ಜೀವನವು ಸುಖಮಯವಾಗಿರುತ್ತದೆ. ವಿಷ್ಣು ಅಷ್ಟೋತ್ತರ ಪಾರಾಯಣ ಮಾಡಿ.
ಮೀನಾ: ವಕ್ರಗತಿಯಲ್ಲಿ ಶನಿ ಏಕಾದಶಕ್ಕೆ ಲಾಭದಲ್ಲಿ ಬಂದು ಸಂತೋಷ, ಯೋಗ, ಜಯ, ಬರಬೇಕಾದ ಧನ ತಂದುಕೊಡುತ್ತಾನೆ. ಚತುರ್ಥದಲ್ಲಿರುವ ಗುರುವಿಗೆ ಗುರು ದತ್ತಾತ್ರೇಯನನ್ನು ದ್ವಾದಶಲಿಂಗರೂಪಿ ಮಹಾಕಾಳೇಶ್ವರನ್ನು ಪೂಜಿಸಿ. ನಿಮ್ಮ ನುಡಿ ಚೆನ್ನಾಗಿರಲಿ, ಮುಖದಲ್ಲಿ ನಗು ಮೂಡಿಬಂದು ಸದಾ ಸಂತೋಷವಿರಲಿ.