ಈ ರಾಶಿಯವರಿಗೆ ಈ ವಾರ ಕಾರ್ಯಕ್ಷಮತೆಯಿಂದ ಉತ್ತಮವಾದ ಫಲಿತಾಂಶ

Vara-Bhavishya
Published on
ಮೇಷ ನೀವು ಮಾಡಿದ ವ್ಯವಹಾರಗಳಿಂದ ಲಾಭ ಪಡೆಯುವ ಸಮಯ. ಉದ್ಯೋಗದಲ್ಲಿ ಬಡ್ತಿಯನ್ನು ಕಾಣುವಿರಿ. ವಿದ್ಯಾರ್ಥಿಗಳು ಶ್ರಮಪಟ್ಟು ಅಧ್ಯಯನ ನಡೆಸಬೇಕು. ಉತ್ತಮವಾದ ಆಹಾರ ಶೈಲಿಯಿಂದ ಆರೋಗ್ಯವನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಳ್ಳಬಹುದು. ಶ್ರೀ ಅನಂತಪದ್ಮನಾಭನನ್ನು ಪೂಜಿಸಿ.
ವೃಷಭ:  ಆರೋಗ್ಯ ನಿಮ್ಮನ್ನು ಹೆಚ್ಚು ಸಕ್ರಿಯರಾಗಿಸುತ್ತದೆ. ಹೊಸ ಕೆಲಸ ಪ್ರಾರಂಭಿಸಿದರೆ ಯಶಸ್ಸು. ಮನೆಯವರೊಂದಿಗೆ ಒಡನಾಟ ನಿಮ್ಮ ಸಂಬಂಧವನ್ನು ಇನ್ನೂ ಗಟ್ಟಿ ಮಾಡುತ್ತದೆ. ಶ್ರೀ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ. ಅಷ್ಟಮ ಶನಿಯಿಂದ ಪಾರಾಗಿದ್ದರೂ, ಗುರುವಿನ ಚಲನೆಯಿದೆ. ರಾಜವೈಭವ ಬೇಡ.
ಮಿಥುನ: ಶಲ್ಯದಿಂದ ವೃತ್ತಿ ಜೀವನದಲ್ಲಿ ಹೊಸ ಯೋಜನೆಗಳನ್ನು ರೂಪಿಸುತ್ತೀರಿ. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿರುತ್ತದೆ. ವ್ಯವಹಾರಗಳನ್ನು ನಿರ್ವಹಿಸುವಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಶ್ರೀವಿಷ್ಣುಸಹಸ್ರನಾಮ ಪಾರಾಯಣ ಮಾಡಿರಿ ಅಷ್ಟಮ ಶನಿ ಹಾಗೂ ಮುಂಬರುವ ಅಷ್ಟಮ ಗುರುವಿನಿಂದ ದೇಹಬಾಧೆ ಇರುತ್ತದೆ.
ಕಟಕ: ಪ್ರಯತ್ನದಿಂದ ಮಾಡುವ ಕೆಲಸಗಳಲ್ಲಿ ಯಶಸ್ಸನ್ನು ಕಾಣುವಿರಿ. ಆರೋಗ್ಯವು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳು ಅಲಸ್ಯ ಮಾಡದೆ ಮುನ್ನಡೆಯಬೇಕು. ಸ್ವಗೃಹ ಪ್ರಾಪ್ತಿಯ ಯೋಗವಿದೆ. ಹಣಕಾಸು ಬಂದೊದಗುವ ಕಾಲವಿದು. ಶ್ರೀಮಹಾ ವಿಷ್ಣುವಿನ ಆರಾಧನೆ ಮಾಡಿರಿ.
ಸಿಂಹ: ಆತ್ಮೀಯರೊಂದಿಗೆ ಉತ್ತಮವಾದ ಸಂಬಂಧವನ್ನು ಕಾಯ್ದುಕೊಳ್ಳುವಿರಿ. ಹಣಕಾಸಿನ ಸ್ಥಿತಿಯು ಉತ್ತಮವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಮಿಶ್ರಫಲಿತಾಂಶವನ್ನು ಪಡೆಯುವ ವಾರ ವಾಗಿದೆ. ಆರೋಗ್ಯವು ಉತ್ತಮವಾಗಿರುತ್ತದೆ. ಧರ್ಮಕಾರ್ಯದಲ್ಲಿ ಹೆಚ್ಚು ಆಸಕ್ತಿ ಹೊಂದಿರುವಿರಿ. ಆದಿತ್ಯ ಹೃದಯ ಪಾರಾಯಣ ಮಾಡಿರಿ.
ಕನ್ಯಾ: ಪಂಚಮ ಶನಿಯು ಅಶುಭದಾಯಕವಾಗಿರುವುದರಿಂದ ಮಿಶ್ರಫಲ ಪ್ರಾಪ್ತಿ. ಯಾರೊಂದಿಗೂ ಮನಸ್ತಾಪ ಬೇಡ. ಸಕಾರಾತ್ಮಕ ಹಾಗೂ ಧಾರ್ವಿುಕ ಚಿಂತನೆಗಳಿಗೆ ಆದ್ಯತೆ ನೀಡಿ. ನಿರಂತರ ಪ್ರಯತ್ನದಿಂದ ಕಾರ್ಯ ಅನುಕೂಲ. ಹನುಮಾನ್ ಚಾಲೀಸಾ ಪಠಿಸಿ. ಮಾಡಿದ ಪಾಪಗಳನ್ನು ದೇವರ ಮುಂದಿರಿಸಿ. ಪ್ರಾಯಶ್ಚಿತ್ತ ಕಂಡುಕೊಳ್ಳಿ.
ತುಲಾ: ಪ್ರಗತಿಪರ ವಾರ. ಸಮಸ್ಯೆಗಳಿಂದ ಹೊರಬರುವಿರಿ. ಒತ್ತಡದ ಕೆಲಸವಿದ್ದರೂ ಗೌರವ-ಕೀರ್ತಿ. ಎಚ್ಚರಿಕೆಯಿಂದ ಹಣಕಾಸು ವ್ಯವಹಾರ ಮಾಡುವುದು ಒಳಿತು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಸಾಧ್ಯವಾದಷ್ಟು ನಿಮ್ಮಿಂದ ಮತ್ತೊಬ್ಬರಿಗೆ ಒಳಿತಾಗುವ ಕೆಲಸಗಳಲ್ಲಿ ತೊಡಗಿಕೊಳ್ಳಿ. ವೆಚ್ಚದ ಲೆಕ್ಕವಿರಲಿ. ದುರ್ಗೆ ಆರಾಧನೆ ಮಾಡಿರಿ.
ವೃಶ್ಚಿಕ: ಸ್ವಸಾಮರ್ಥ್ಯದಿಂದ ಕೆಲಸಗಳಲ್ಲಿ ಯಶಸ್ಸು. ತೊಂದರೆಗಳಿಂದ ಮುಕ್ತಿ. ಬದಲಾವಣೆ ಎಂಬುದು ಪ್ರಕೃತಿಯ ನಿಯಮ. ಹಾಗೆಯೇ ಜೀವನದಲ್ಲಿ ಇದಕ್ಕೆ ನೀವು ಹೊಂದಿಕೊಳ್ಳಬೇಕು. ಆರ್ಥಿಕವಾಗಿ ಬಲವಾಗಿರುವಿರಿ. ಮಾರ್ಚ್ 27ರ ನಂತರ ನಿಮ್ಮ ಭಾಗ್ಯದ ಬಾಗಿಲು ತೆರೆಯುವುದು. ಧೈರ್ಯವಿರಲಿ. ದುಃಖಿಸಬೇಡಿ.
ಧನಸ್ಸು:  ಉತ್ತಮ ವಾರ. ಸಾಮರಸ್ಯದ ಜೀವನ ನಿಮ್ಮದಾಗಲಿ. ದೊಡ್ಡ ಯೋಜನೆಗಳನ್ನು ಪ್ರಾರಂಭಿಸುವುದು ಗುರುವು ಸ್ವಕ್ಷೇತ್ರದಲ್ಲಿರುವುದರಿಂದ ಧರ್ಮಕಾರ್ಯಾಸಕ್ತರಾಗಿರುತ್ತೀರಿ. ದತ್ತಾತ್ರೇಯನ ಆರಾಧನೆ ಹಾಗೂ ಹನುಮಾನ್ ಚಾಲೀಸ ಪಠಿಸಿ. ದಾನ ಹಾಗೂ ನಿಧಾನ ನಿಮ್ಮ ಮಂತ್ರವಾಗಿರಲಿ.
ಮಕರ: ವ್ಯಾಕುಲತೆಯಿಂದ ಹೊರಬನ್ನಿ ಧೈರ್ಯವಾಗಿ ಮುನ್ನುಗ್ಗಿ ಕೆಲಸಗಳನ್ನು ನಿರ್ವಹಿಸಿ. ಸಕಾರಾತ್ಮಕ ಚಿಂತನೆಗಳಿಂದ ಮನಸ್ಸಿಗೆ ನೆಮ್ಮದಿ. ಆರೋಗ್ಯದ ಸಮಸ್ಯೆಗಳು ದೂರಾಗಬಹುದು. ಬಹಳ ಎಚ್ಚರವಹಿಸಿ. ವೃಥಾ ಪ್ರವಾಸದ ಯೋಗ. ಆಂಜನೇಯನ ಆರಾಧನೆ ಹಾಗೂ ಶ್ರೀಮಹಾವಿಷ್ಣುವಿನ ಧ್ಯಾನದಿಂದ ಮನಃಸಂತೋಷ.
ಕುಂಭ: ಮಿಶ್ರಿತ ಫಲ ಪಡೆಯುವ ಸಮಯ. ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿ. ವ್ಯವಹಾರಗಳಲ್ಲಿ ತಕ್ಕಮಟ್ಟಿಗೆ ಪ್ರಗತಿ ಕಾಣುವಿರಿ. ಬಂಧು-ಮಿತ್ರರೊಡನೆ ಕಲಹ, ವಾದಗಳಿಂದ ಆದಷ್ಟು ದೂರವಿರಿ. ಧರ್ಮ- ಕರ್ವಸಕ್ತರಾಗಿ ನಡೆದರೆ ಒಳಿತು. ಸಂಸಾರಿಕ ಸುಖವು ಇರುತ್ತದೆ. ಶ್ರೀದತ್ತಾತ್ರೇಯನ ಪ್ರಾರ್ಥನೆಯಿಂದ ಕಷ್ಟಗಳಿಂದ ಮುಕ್ತಿ.
ಮೀನ: ಕಾರ್ಯಕ್ಷಮತೆಯಿಂದ ಉತ್ತಮವಾದ ಫಲಿತಾಂಶ. ಶುಭದಾಯಕವಾದ ವಾರ ಹಾಗೂ ವರ್ಷವಿದು. ಸಾಮಾಜಿಕವಾಗಿ ಮನ್ನಣೆ ದೊರೆಯುತ್ತದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ. ವ್ಯವಹಾರಗಳಲ್ಲಿ ದೊಡ್ಡ ನಿರ್ಧಾರಗಳನ್ನು ತೆಗೆದುಕೊಳ್ಳಲು ಸೂಕ್ತವಾದ ಸಮಯ. ಗುರುವಿನ ಆರಾಧನೆ ಮಾಡಿರಿ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net