ವಾರ ಭವಿಷ್ಯ: ಸಮಯ ಚೆನ್ನಾಗಿಲ್ಲದ ಕಾರಣ ಈ ರಾಶಿಯವರು ಶನಿಯನ್ನು ಆರಾದಿಸುವುದು..

Vara-Bhavishya
Published on

31-05-2020 ರಿಂದ 06-06-2020

ಮೇಷ: ಗುರುವಿನ ವಕ್ರಗತಿ ನಿಮ್ಮ ಚಲನೆಯನ್ನು ನಿಧಾನಿಸುತ್ತದೆ. ದೈವಕೃಪೆಯೇ ಅತ್ಯಗತ್ಯ. ದಶಮ ಶನಿ, ಗುರುವು ವಕ್ರದಲ್ಲಿದ್ದು, ಭಗವಂತನ ಅನುಗ್ರಹವನ್ನು ಸಂಪಾದಿ ಸಿಕೊಳ್ಳಬೇಕು. ಈಶ್ವರ ಆರಾಧನೆ ಮಾಡಿ. ಅವನಿಗೆ ಶರಣುಹೋಗಿ. ಕೈಗೆ ನಿಲುಕದ ಫಲವು ಕೂಡ ರೆಂಬೆಬಾಗಿ ಫಲ ಸಿಗುವುದು. ಷಣ್ಮುಖನನ್ನು ಧ್ಯಾನಿಸಿ, ಆರಾಧಿಸಿ.

ವೃಷಭ: ಸ್ವಕ್ಷೇತ್ರ ಶುಕ್ರನು ಕಳೆದ ವಾರದಲ್ಲಿ ನಿಮಗೆ ಸಂತೋಷ ಉಂಟುಮಾಡಿದ್ದಾನೆಂದು ಕರಾರುವಕ್ಕಾಗಿ ಹೇಳುತ್ತೇನೆ. ಶ್ರಮಪಟ್ಟಲ್ಲಿ ಧನ, ಸಂಪತ್ತು ದೊರೆಯುತ್ತದೆ. ಮಹಾವಿಷ್ಣುವನ್ನು ಆದಿಶೇಷ ಸ್ವರೂಪನಾದ ಶ್ರೀರಾಮನ ಸಹೋದರ ಲಕ್ಷ್ಮಣ ಸಹಿತ ಪೂಜಿಸಿದರೆ ಫಲಪ್ರಾಪ್ತಿ, ಲಾಭ ನಿಮಗಿರಲಿ, ದೇಶದ ಪ್ರಜೆಗಳ ಚಿಂತನೆ ನಿಮಗಿರಲಿ.

ಮಿಥುನ: ಬುಧ-ರಾಹು ನಿಮ್ಮನ್ನು ದೈವಮಾರ್ಗದಲ್ಲಿ ನಡೆಯಲು ಸೂಚನೆ ಕೊಡುತ್ತಾರೆ. ದ್ವಾದಶ ರವಿ ಉದ್ವೇಗವನ್ನು, ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಚನೆ ಕೊಡುತ್ತಿರುತ್ತಾನೆ. ವಕ್ರೀ ಗುರು ಜೂನ್ 29 ಸಪ್ತಮಕ್ಕೆ ಬರುವ ಕಾಲವನ್ನು ಎದುರುನೋಡಿ. ಶ್ರೀರಾಮಕವಚ ಸ್ತೋತ್ರ ಪಠಿಸಿ. ಸುಂದರಕಾಂಡವನ್ನು ಶ್ರವಣ ಮಾಡಿ, ಪಠಿಸಿ.

ಕಟಕ: ಉಚ್ಚ ಗುರುವು ಸ್ವಲ್ಪ ಕಾಲ ಸಪ್ತಮದಲ್ಲಿದ್ದು ಸುಖ-ಶಾಂತಿ, ನೆಮ್ಮದಿಯನ್ನು ಕೊಡುತ್ತಾನೆ. ಶನಿಯು ಕೆಲ ಕಾರ್ಯದಲ್ಲಿ ಹಿನ್ನಡೆ ತರುತ್ತಾನೆ. ವಕ್ರಗತಿಯ ಗುರು-ಶನಿ ಹಾದಿಯನ್ನು ತಪ್ಪಿಸದಿರಲಿ. ಸದ್ಗುರುವಿನ ಪಾದಾರವಿಂದಗಳಲ್ಲಿ ನಿಮ್ಮ ಭಕ್ತಿ ಇರಲಿ. ದಕ್ಷಿಣಾಮೂರ್ತಿ ಆರಾಧಿಸಿ, ಅಷ್ಟೋತ್ತರ ಜಪ ಮಾಡಿ. ಕಡಲೆಬೇಳೆ ದಾನ ಮಾಡಿ.

ಸಿಂಹ: ಅಲ್ಪಕಾಲದ ಗುರು ಸ್ಥಾನವು, ಷಷ್ಠದ ಶನಿಯ ಜತೆ ಸೇರಿ ದೈವದ ದಯೆ ಕಡಿಮೆಯಾಗಿದೆ. ಕೋಪ ತಾಪಗಳನ್ನು ದೂರಮಾಡಿ. ಜೂನ್ 29ರಂದು ಗುರುವು ಧನಸ್ಸು ರಾಶಿಗೆ ಬರುತ್ತಾನೆ. ನಿಮ್ಮ ಕಾರ್ಯಗಳು ಸುಗಮವಾಗಿ ನಡೆಯುತ್ತವೆ. ಬಹಳ ಅಗತ್ಯವಾಗಿರುವ ಧನವು ಬಂದು ಸೇರುತ್ತದೆ. ಸದ್ವಿನಿಯೋಗವಿರಲಿ.

ಕನ್ಯಾ: ಚಂಚಲ ಮನಸ್ಸು. ಅಸ್ಥಿರ ಬುದ್ಧಿಯೇ ನಿಮ್ಮ ದುಃಖಕ್ಕೆ ಕಾರಣ. ದುಃಖವು ಇಮ್ಮಡಿಯಾಗಿದೆ. ಕಳೆದ ವಸ್ತು, ಸಮಯ ಮತ್ತೆ ಸಿಗುವುದಿಲ್ಲ. ಐದು ತಿಂಗಳು ಸಂಯಮದಿಂದ ನಡೆದಲ್ಲಿ ಪಂಚಮ ಗುರು-ಶನಿ ನಿಮ್ಮನ್ನು ಕಾಪಾಡುತ್ತಾನೆ. ದತ್ತಾತ್ರೇಯನ ಪ್ರಾರ್ಥನೆ ಇರಲಿ. ರಾತ್ರಿ ಶಯನ ಪಶ್ಚಿಮ ದಿಕ್ಕಿನಲ್ಲಿ ಮಾಡಿ. ದುಃಸ್ವಪ್ನ ದೂರವಾಗಿ ಆತ್ಮಶಕ್ತಿಯಿಂದ ಬದುಕಲು ಅನುಕೂಲ.

ತುಲಾ: ಶನಿ-ಗುರು ಗ್ರಹಗಳು ಚತುರ್ಥದಲ್ಲಿದ್ದು, ಚಿಂತಿಸಿದರೆ ಫಲವಿಲ್ಲ. ನಿಮ್ಮ ನಿರ್ಣಯಗಳು ಸರಿಯಾಗಿದ್ದರು ಕೂಡ ಅನುಮಾನಾಸ್ಪದ ಚಿಂತೆಗಳಿಂದ ಹಾಳು ಮಾಡಿಕೊಳ್ಳಬೇಡಿ. ದೃಢವಾದ ನಿರ್ಧಾರವಿರಲಿ. ಸುಂದರಕಾಂಡ ಪಠಣೆ ಮಾಡಿ. ಅಧಿಪತಿಯಾದ ಶುಕ್ರನನ್ನು ಲಲಿತಾ ಪರಮೇಶ್ವರಿಯಲ್ಲಿ ಕಂಡು ಪೂಜಿಸಿ. ಪರೋಪಕಾರವಿರಲಿ.

ವೃಶ್ಚಿಕ: ಋಣಬಾಧೆಯನ್ನು ತೀರಿಸಲು ಸಮಯ ಹುಡುಕಿಕೊಂಡು ಬರುತ್ತಿದೆ. ದ್ವಿತೀಯದಲ್ಲಿರುವ ಕೇತು-ಸರ್ಪ ಹಾಗೂ ಚೇಳಲ್ಲಿ ವಿಷವೇ ತುಂಬಿರುತ್ತದೆ. ಆದರೆ ತಾನಾಗಿ ಯಾರ ಪ್ರಾಣವನ್ನೂ ತೆಗೆಯುವುದಿಲ್ಲ. ಧನವು ಮನುಷ್ಯನಿಗೆ ಅವಶ್ಯ.ಮಾತೃದೇವತೆ ಪೂಜಿಸಿ- ಪಾದಸೇವೆ ಮಾಡಿ. ಬಂಗಾರದ ಬೆಟ್ಟದನೆಲ್ಲಿಯೂ ನಿಮ್ಮನ್ನು ಸೇರುವುದು.

ಧನಸ್ಸು: ದ್ವಿತೀಯ ಶನಿಯು ಸಂತೋಷದಲ್ಲಿ ತೇಲಿಸಿ ಉಯ್ಯಾಲೆಯಲ್ಲಿ ಕೂರಿಸಿದೆ. ಸ್ವಕ್ಷೇತ್ರದ ಗುರುವು ನಿಮಗೆ ಎಚ್ಚರವನ್ನು ಕೊಟ್ಟು ನಿಮಗೆ ಮಾರ್ಗದರ್ಶನ ನೀಡಲು ಬಂದಿರುತ್ತಾನೆ. ನಿಮ್ಮ ಜೀವನದಲ್ಲಿ ನೊಂದವರಿಗೆ ಸಹಾಯ, ಪರೋಪಕಾರ ಮಾಡಿ. ಮಾನವ ಕುಲದ ಏಳಿಗೆಗಾಗಿ ಎಲ್ಲರನ್ನೂ ಪ್ರೀತಿಸಿ. ಚಿಕ್ಕವರನ್ನು ಮಕ್ಕಳಂತೆ ಕಾಣಿ.

ಮಕರ: ಗುರು-ಶನಿಯು ಮಕರದಲ್ಲಿದ್ದು ಮತ್ತೆ ಜೂನ್ 29ರ ನಂತರ ಹನ್ನೆರಡನೆ ಸ್ಥಾನಕ್ಕೆ ಬಂದು ಸೇರುತ್ತಾನೆ. ದೈವಸಂಕಲ್ಪದಂತೆ ಎಲ್ಲವೂ ನಡೆಯುತ್ತದೆ. ನಿಮ್ಮ ನಿತ್ಯ ಪ್ರಾರ್ಥನೆ ಅತ್ಯಗತ್ಯ. ದೇವರಲ್ಲಿ ಮೊರೆ ಹೋಗಿ ನೆಮ್ಮದಿ, ಶಾಂತಿಯನ್ನು ಕಂಡುಕೊಳ್ಳಿ. ಈಶ್ವರ ಆರಾಧನೆ, ಶನಿ ಅಷ್ಟೋತ್ತರ ಮಾಡಿ. ಪ್ರದೋಷದಂದು ಶಿವನನ್ನು ಧ್ಯಾನಿಸಿ. ರಾತ್ರಿಯಲ್ಲಿ ಅಲ್ಪಆಹಾರ ಸೇವಿಸಿ.

ಕುಂಭ: ದ್ವಾದಶ ಗುರುವು ಹನ್ನೊಂದನೆ ಮನೆಗೆ ಬರಲಿದ್ದಾನೆ. ಪೂರ್ವದ ಪುಣ್ಯ, ತಪಸ್ಸು, ದಾನ-ಧರ್ಮವು ಐದು ತಿಂಗಳ ಕಾಲ ನಿಮ್ಮನ್ನು ಕಾಪಾಡುವುದು. ಶನಿಯು ಸುಜ್ಞಾನವನ್ನು ಉಂಟು ಮಾಡಿ ಒಳ್ಳೆಯದನ್ನು ಕೆಟ್ಟದ್ದನ್ನು ತೋರಿಸುತ್ತಾನೆ. ಕೃಷ್ಣಂ ವಂದೇ ಜಗದ್ಗುರುಂ. ನಾರಾಯಣ ಸ್ವರೂಪಿ ಕೃಷ್ಣನನ್ನು ಆರಾಧಿಸಿ.

ಮೀನ: ಹನ್ನೊಂದರ ಗುರುವು ದಶಮ ಸ್ಥಾನಕ್ಕೆ ಹಿಂದಿರುಗು ತ್ತಾನೆ. ಏಕಾದಶ ಶನಿಯು ನಿಮ್ಮನ್ನು ಕಾಪಾಡುತ್ತಾನೆ. ಮತ್ತೆ ನವೆಂಬರ್​ನಲ್ಲಿ ಗುರುವು ಹನ್ನೊಂದಕ್ಕೆ ಬಂದು ಸಕಲ ಕಾರ್ಯವನ್ನು ಈಡೇರಿಸಿಕೊಟ್ಟು, ಯಶಸ್ಸು, ಧೈರ್ಯ-ಕೀರ್ತಿ, ಲಾಭ ತರುತ್ತಾನೆ. ಧನ, ಸಂಪತ್ತು ಸುಖ ಎಲ್ಲವೂ ಲಭ್ಯವಾಗಿದೆ. ಪ್ರಜೆಗಳನ್ನು ಮಕ್ಕಳೆಂದು ಕಲ್ಪಿಸಿ ದಾನ ಮಾಡಿದಲ್ಲಿ ಶುಭಫಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net