ಬಹಳಕಾಲದಿಂದ ಪಂಚಮ ಶನಿಯ ಆರ್ಭಟವನ್ನು, ಆಗುವ ಕೆಲಸಗಳಿಗೆ ತಡೆಯನ್ನು, ಇನ್ನುಳಿದ ಗ್ರಹವು ತಂದೊಡ್ಡಿದ ತೊಂದರೆ ಸರಿದು ಶನಿಯು ಷಷ್ಠದಲ್ಲಿದ್ದು ನಿಭಾಯಿಸುತ್ತಾನೆ. ಪಂಚಮ ಗುರುವು ಧನ, ಸುಖ, ಪ್ರೀತಿ, ಕೀರ್ತಿ, ಜಯ, ಲಾಭವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. ಆದರೆ ನಿತ್ಯವೂ ಮಖಾ ನಕ್ಷತ್ರದ ಅಧಿಪತಿ ಸುಬ್ರಹ್ಮಣ್ಯನನ್ನು ಪೂಜಿಸಿ. ದತ್ತಾತ್ರೇಯನನ್ನು ಹೃದಯ ಮಂದಿರದಲ್ಲಿಟ್ಟು ಆರಾಧಿಸಿ.