

ಮೇಷ: ಅಡೆತಡೆ ಇಲ್ಲದ ಶುಭಕಾಲವು ನಡೆದಿದ್ದು ಒಂಬತ್ತರ ರವಿ-ಬುಧ, ಹತ್ತರ ಗುರು-ಶನಿ, ರಾಶ್ಯಾಧಿಪತಿ ಕುಜನು ಮೇಷದಲ್ಲಿ ಇದ್ದುಕೊಂಡು ದೊಡ್ಡ ಸಾಧನೆಯ ಕೆಲಸವನ್ನು ಕೈಗೂಡಿಸಿಕೊಡುತ್ತಾರೆ. ನಿಮ್ಮಲ್ಲಿ ಸದೃಢವಾದ ಸಂಕಲ್ಪವಿದ್ದಲ್ಲಿ, ದೇವರಲ್ಲಿ ಅನನ್ಯ ಪ್ರಾರ್ಥನೆ ಮಾಡಿದಲ್ಲಿ ಯಾವ ಕೆಲಸವನ್ನಾದರೂ ಸಾಧಿಸುವ ಕಾಲ. ಉಡುಪಿಯ ಅನಂತೇಶ್ವರನನ್ನು ಪೂಜಿಸಿ.
ವೃಷಭ: ರಾಹು ಲಗ್ನದಲ್ಲೇ ಇದ್ದು ಉಚ್ಚಸ್ಥಾನ ಫಲಗಳನ್ನು ಕೊಡುತ್ತಾನೆ. ಜೊತೆಯಿದ್ದವರ ಹಸಿವು-ಬಾಯಾರಿಕೆ ನೀಗಿಸುವುದು ನಿಮ್ಮಲ್ಲೇ ಇದೆ. ‘ಪರೋಪಕಾರಂ ಇದಂ ಶರೀರಂ’. ದೇವರಿಗೆ ಕೊಟ್ಟ ವಚನ-ಹರಕೆ ತೀರಿಸಿ. ಸಮಯ ಚನ್ನಾಗಿದೆ. ಜಾಣ್ಮೆಯಿಂದ ಬಂದ ಅವಕಾಶ ಉಪಯೋಗಿಸಿಕೊಳ್ಳಿ.
ಮಿಥುನ: ಸಪ್ತಮದಲ್ಲಿರುವ ಸೂರ್ಯನು ಮಹಾವಿಷ್ಣುವೇ ಕಾಯುವವನು. ಸೂರ್ಯ-ಬುಧರನ್ನು ಒಟ್ಟಿಗೆ ಅರ್ಚಿಸಿ, ಆರಾಧಿಸಿ. ನೂರು ದಿವಸಗಳ ಕಾಲ ತಪ್ಪದೇ ದಿನಕ್ಕೆ ಒಂದರಂತೆ ವಿಷ್ಣುಸಹಸ್ರನಾಮ ಪಾರಾಯಣ ಮಾಡಿ. ‘ಸುಪ್ರಭಾತೇ ದಿವಾಕರೋ- ಮಧ್ಯಾಹ್ನೇತೇ ಮಹೇಶ್ವರಂ- ಸಾಯಂಕಾಲೇ ಸ್ವಯಂ ವಿಷ್ಣು’ ಎಂಬ ಶ್ಲೋಕದಂತೆ ವಿಷ್ಣುವಿನ ಆರಾಧನೆಯಿಂದ ಆರೋಗ್ಯ, ಆಯಸ್ಸು ಪ್ರಾಪ್ತಿ.
ಕಟಕ: ನಿಮ್ಮ ಕೆಲಸ ಮಾಡಿಕೊಡಲು ದೇವರಿದ್ದಲ್ಲಿ ನಿಮಗೆ ಯಾವ ಕೊರತೆಯೂ ಇರುವುದಿಲ್ಲ. ನಿತ್ಯವೂ ವಿಷ್ಣು ಅಷ್ಟೋತ್ತರವನ್ನು ಪಾರಾಯಣ ಮಾಡಿ. ಸಾರಥಿ ರಥವನ್ನು ಸರಿಯಾಗಿ ಓಡಿಸಿದಲ್ಲಿ ನಿಮ್ಮ ಇಷ್ಟವಾದ ಜಾಗ ತಲುಪಲು ಸಾಧ್ಯ. ಆ ರಥದಲ್ಲಿ ನಿಮ್ಮ ಆರೋಗ್ಯ -ಅದೃಷ್ಟ ಎಲ್ಲವೂ ತಂಬಿರುತ್ತದೆ. ಆರೋಗ್ಯವೇ ಮಹಾಭಾಗ್ಯ. ಮರೆಯದೇ ಸನ್ನತಿಯ ಶ್ರೀ ಚಂದ್ರಲಾಪರಮೇಶ್ವರಿಯನ್ನು ಆರಾಧಿಸಿ.
ಸಿಂಹ: ಷಷ್ಠದಲ್ಲಿ ಶನಿ ಶುಭಕಾರಕನೇ. ಷಷ್ಠದಲ್ಲಿ ಗುರುವು ನಿಮ್ಮ ದೈವಶಕ್ತಿಯನ್ನು ನೀವು ಮಾಡುವ ಗುರುವಿನ ಆರಾಧನೆಯನ್ನು ನೋಡಿ ಫಲ ನೀಡುತ್ತಾನೆ. ಶೃಂಗೇರಿ ಶಾರದೆಯ ಮೂಲಕ ಗುರುವನ್ನು ತಲುಪಿ ಲಲಿತಾ ಸಹಸ್ರನಾಮಾರ್ಚನೆಯನ್ನು ಮಾಡಿಸಿ. ಗುರು ಕಾಣಿಕೆ ತಲುಪಿಸಿ. ತೋರಣ ಗಣಪತಿ ಸಂದರ್ಶಿಸಿ, ಬೇಕಾದ್ದನ್ನೆಲ್ಲ ಪಡೆಯಿರಿ.
ಕನ್ಯಾ: ಪಂಚಮ ಗುರುವು ಒಳ್ಳೆಯದಕ್ಕೆ ಸೂಚನೆ ನೀಡಿದರೂ ಶನಿ ಕಾರ್ಯ ಮಾಡಲು ವಿಳಂಬ ಮಾಡುತ್ತಾನೆ. ಆದ್ದರಿಂದ ಕೆಲಸಗಳಲ್ಲಿ ವಿಫಲರಾಗಿರುತ್ತೀರಿ. ಧ್ಯೇಯ, ಮನಸ್ಸಿನ ಶಾಂತಿ, ದೇವರಲ್ಲಿ ಅಚಲವಾದ ಭಕ್ತಿ, ವಿಶ್ವಾಸ ಇದ್ದಲ್ಲಿ ಸರ್ವವನ್ನು ಪಡೆದುಕೊಳ್ಳುತ್ತೀರಿ. ಆರೋಗ್ಯಕ್ಕಾಗಿ ನವಗ್ರಹ ಸ್ತೋತ್ರವನ್ನು ಪಾರಾಯಣ ಮಾಡಿ. ಮಡದಿ-ಮಕ್ಕಳ ಮೇಲೆ ಪ್ರೀತಿ ಇರಲಿ. ಅರ್ಧಾಂಗಿ ಮಾಡಿದ ಸೇವೆಗಳಿಗೆ ನಿಮ್ಮಲ್ಲಿ ಕರುಣೆ ಇರಲಿ.
ತುಲಾ: ಆತಂಕಗಳಿಗೆ, ಕೆಲವೊಂದು ನಡೆಯುವ ಘಟನೆಗಳಿಗೆ ಅತಿಯಾದ ಬೆಲೆಯನ್ನು ಕೊಡದೆ ಹೃದಯದಲ್ಲಿ ನೆಲೆಸಿರುವ, ಜೀವದಲ್ಲಿ ನೆಲೆಸಿರುವ ಪರಮಾತ್ಮನನ್ನು ಆರಾಧಿಸಿ. ಧೈರ್ಯದಿಂದ ಮುನ್ನುಗ್ಗಿ. ಮಹಾಮಾತೆ ದುರ್ಗೆ ರಕ್ಷಿಸುತ್ತಾಳೆ. ಖಡ್ಗಮಾಲಾ ಸ್ತೋತ್ರವನ್ನು ಪಾರಾಯಣ ಮಾಡಿ. ಸಾಧ್ಯವಾದರೆ ಒಂದು ಸುವಾಸಿನಿಗೆ ವಸ್ತ್ರ, ತಾಂಬೂಲ ಕೊಟ್ಟು ನಮಸ್ಕರಿಸಿ.
ವೃಶ್ಚಿಕ: ರಾಶಿಯ ಅಧಿಪತಿ ಸ್ವಕ್ಷೇತ್ರದಲ್ಲಿದ್ದು, 3ನೇ ಮನೆಯಲ್ಲಿ ಶನಿಯು ಗುರುವಿನ ಸಂಯೋಗದಲ್ಲಿ ಕುಳಿತಿದ್ದಾನೆ. ನಿಮ್ಮ ಕುಲಗುರುಗಳನ್ನು, ಮಾರ್ಗದರ್ಶಕರನ್ನು, ಮೊದಲ ಗುರುವಾದ ತಾಯಿಯನ್ನು ನಮಿಸಿ ಮುನ್ನಡೆಯಿರಿ. ನಿಮ್ಮ ನಿರೀಕ್ಷೆಯನ್ನು ಮಿರಿ ಧನಸಂಪತ್ತು ಹಾಗೂ ಭೂವ್ಯವಹಾರದಲ್ಲಿ ಇಷ್ಟಕಾಮನೆ ಪರಿಪೂರ್ಣವಾಗುತ್ತದೆ. ಅಧ್ಯಾತ್ಮ ರಾಮಾಯಣದಪಂಚದಕ ಶ್ರೀರಾಮ ಪಟ್ಟಾಭಿಷೇಕದ ಸರ್ಗವನ್ನು ಪಠಿಸಿ.
ಧನುಸ್ಸು: ದ್ವಿತೀಯದಲ್ಲಿರುವ ಗುರು, ಶನಿಯು ಸ್ವಕ್ಷೇತ್ರದಲ್ಲಿ ಇರುವುದರಿಂದ ಆಸೆಯನ್ನು ಭಂಗ ಮಾಡಿದರೂ ಜಯವು ಕಡೆಯಲ್ಲಿ ನಿಮ್ಮದೇ. ಹಿರಿಯರು ಹೇಳಿದ ಮಾತನ್ನು ಉದಾಸೀನ ಮಾಡುವವರು ಜಯವನ್ನು ಕಾಣುವುದು ತಡವಾಗುತ್ತದೆ. ಮರೆಯದೆ ಶ್ರೀರಾಮ ಸಹಸ್ರನಾಮ ಪಾರಾಯಣ ಮಾಡಿ. ಇಷ್ಟಾರ್ಥಗಳಿಸಿಕೊಳ್ಳಿ. ಆರೋಗ್ಯ, ಆಯಸ್ಸು ಚೆನ್ನಾಗಿದ್ದು ಮನಃಸಂಕಲ್ಪ ಈಡೇರುತ್ತದೆ. ಇನ್ನು 13 ತಿಂಗಳಲ್ಲಿ ಶನಿಯ ಸಂಚಾರ ಮುಂದೆ ಹೋಗಿ ನಿಮ್ಮ ಕೆಲಸಗಳಲ್ಲಿ ಜಯವನ್ನು ಕೊಟ್ಟೇ ಕೊಡುತ್ತಾನೆ.
ಮಕರ: ಉತ್ತರಾಷಾಢ, ಶ್ರವಣ, ಧನಿಷ್ಠ ನಕ್ಷತ್ರದವರಿಗೆ ಗುರು-ಶನಿ ಸ್ವಕ್ಷೇತ್ರ ಶನಿಯು ತಡೆಯನ್ನು, ದುಃಖವನ್ನು, ಮನಸ್ಸಿಗೆ ನೋವನ್ನು ಕೊಟ್ಟರೂ ಗುರುವು ಇರುವುದರಿಂದ ಒಂದಲ್ಲ ಒಂದು ರೀತಿ ದೈವಾನು ಗ್ರಹವನ್ನು ಪಡೆದುಕೊಳ್ಳಿ. ಹಣವಿಲ್ಲದಿದ್ದರೂ ದೈವಕೃಪೆ ಇದೆ. ಲಲಿತಾತ್ರಿಶತಿಯನ್ನು ಪಾರಾಯಣ ಮಾಡಿ.
ಕುಂಭ: ನಿಮ್ಮ ದೈವಮಾರ್ಗವನ್ನು ಸರಿಪಡಿಸಿಕೊಂಡಲ್ಲಿ 12ರ ಶನಿ ಫಲಾಫಲಗಳನ್ನು ನೀಡುತ್ತಾನೆ. ನಿಮ್ಮ ಆರೋಗ್ಯ, ಮನಃಶಾಂತಿಗಾಗಿ ಧರ್ಮಸ್ಥಳದ ಮಂಜುನಾಥನನ್ನು ಪೂಜಿಸಿ, ಧರ್ವಧಿಕಾರಿಗಳ ಆಶೀರ್ವಾದ ತೆಗೆದು ಕೊಳ್ಳಿ. ಮರೆಯದಿರಿ ಏಳೂವರೆ ಶನಿಕಾಟವು ಆರಂಭ ವಾಗಿದೆ. ಇದಕ್ಕಿಂತ ಒಳ್ಳೆಯ ಮಾರ್ಗವೇ ಇಲ್ಲ.
ಮೀನ: ಏಕಾದಶದಲ್ಲೇ ಗುರು-ಶನಿ ಇದ್ದು, ಜಗತ್ತಿನಲ್ಲಿ ಗುರುವಿನ ಕೃಪೆಯಿಂದ ಏನನ್ನು ಬೇಕಾದರೂ ಪಡೆದುಕೊಳ್ಳಬಹುದು. ನಿಮ್ಮ ಸಂಕಲ್ಪಗಳು ಈಡೇರುವ ಕಾಲ. ಉಮಾಮಹೇಶ್ವರನನ್ನು ಅರ್ಚಿಸಿ. ತೊಂದರೆ ನಿವಾರಣೆಗೆ ನಂಜುಂಡೇಶ್ವರನನ್ನು ಪೂಜಿಸಿ. ಅಲ್ಲಿಯೇ ನೆಲೆಸಿರುವ ಪ್ರತ್ಯಂಗಿರ ದೇವಿಯನ್ನು ಅರ್ಚಿಸಿ, ಪೂಜಿಸಿ. ದೈವಬಲವಿದೆ. ನಿಮ್ಮ ವಂಶದ ಗುರುಗಳನ್ನು ಅರ್ಚಿಸಿ, ಪೂಜಿಸಿ. ಹಿರಿಯರನ್ನು ಕಂಡರೆ ಭಕ್ತಿಯಿರಲಿ.