ವಾರ ಭವಿಷ್ಯ; ಈ ರಾಶಿಯವರಿಗೆ ಸಂತಾನಾಕಾಂಕ್ಷಿಗಳಿಗೆ ಪುತ್ರ ಪ್ರಾಪ್ತಿ. ನೌಕರಿಯಲ್ಲಿ ಉನ್ನತಸ್ಥಾನಕ್ಕೇರುವ ಅವಕಾಶ

Vaara-Bhavishya-1
Published on

ಮೇಷ: ಭೋಗ ಭಾಗ್ಯಗಳನ್ನು ಅನುಭವಿಸುವ ವಾರವಿದ್ದು. ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆ ಕಂಡುಬರಲಿದೆ. ಮಾನಸಿಕವಾಗಿ ನೆಮ್ಮದಿಯಾಗಿರುವಿರಿ. ಸಂತಾನಾಕಾಂಕ್ಷಿಗಳಿಗೆ ಪುತ್ರ ಪ್ರಾಪ್ತಿ. ನೌಕರಿಯಲ್ಲಿ ಉನ್ನತಸ್ಥಾನಕ್ಕೇರುವ ಅವಕಾಶವಿದೆ. ದೊಡ್ಡ ಯೋಜನೆ ಪ್ರಾರಂಭಿಸಬಹುದು. ಶ್ರೀ ಸುಬ್ರಹ್ಮಣ್ಯನ ಆರಾಧನೆ ಮಾಡಿ.

ವೃಷಭ: ಕೆಲಸ-ಕಾರ್ಯಗಳಲ್ಲಿ ಅಭಿವೃದ್ಧಿ ಹೊಂದುವಿರಿ ಹಾಗೂ ಜಯ ಸಾಧಿಸುವಿರಿ. ಸಂಸಾರದಲ್ಲಿ ಅನುಕೂಲಕರ ವಾತಾವರಣ. ಹೊಸ ವ್ಯವಹಾರಗಳಿಗೆ ಕೈಹಾಕುವ ಮೊದಲು ಜಾಗರೂಕರಾಗಿರಿ. ಮಕ್ಕಳಿಂದ ಸಂತಸ. ಶ್ರೀದುರ್ಗೆ ಹಾಗೂ ಸುಬ್ರಹ್ಮಣ್ಯನ ಆರಾಧನೆ ಮಾಡಿರಿ. ಗುರುವಿನ ಅನುಗ್ರಹ ಅತಿಮುಖ್ಯ.

ಮಿಥುನ: ಆತಂಕದ ವಾತಾವರಣದಿಂದ ಹೊರ ಬರುವಿರಿ. ಆರೋಗ್ಯದಲ್ಲಿ ಸುಧಾರಣೆ. ಗುರು ಮತ್ತು ಶನಿಗ್ರಹಗಳ ಪ್ರಭಾವದಿಂದ ಹಣಕಾಸು ವ್ಯವಹಾರಗಳಲ್ಲಿ ಮುಗ್ಗಟ್ಟು ಕಂಡುಬರಬಹುದು. ಸಕಲ ಗ್ರಹಬಲ ಸರಸಿಜಾಕ್ಷ ಶ್ರೀಮನ್ನಾರಾಯಣನ ಆರಾಧನೆ ಮಾಡಿರಿ. ಶ್ರೀ ಅಯ್ಯಪ್ಪಸ್ವಾಮಿಯನ್ನು ಧ್ಯಾನಿಸಿದರೆ ಕಷ್ಟ-ಕಾರ್ಪಣ್ಯದಿಂದ ಮುಕ್ತಿ.

ಕಟಕ: ಮಡದಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ವೃತ್ತಿಯಲ್ಲಿ ಮುನ್ನಡೆ ಇರುತ್ತದೆ. ನಿಮ್ಮ ಗಮನ ಆದಷ್ಟು ನೀವು ಇಟ್ಟುಕೊಂಡಿರುವ ಗುರಿಯ ಮೇಲಿರಲಿ. ನಿಷ್ಠೆ, ಪ್ರಾಮಾಣಿಕತೆ ನಿಮ್ಮನ್ನು ಕಾಪಾಡುತ್ತದೆ. ಶ್ರೀ ಈಶ್ವರನ ಆರಾಧನೆ ಮಾಡಿರಿ.

ಸಿಂಹ: ವಾರದ ಆರಂಭದಲ್ಲಿ ಉತ್ತಮ ಫಲಗಳಿದ್ದು ವ್ಯವಹಾರಗಳಲ್ಲಿ ನಿಮ್ಮ ಪರಿಸ್ಥಿತಿ ಸುಧಾರಿಸಲಿದೆ. ಆರೋಗ್ಯ ಸಮಸ್ಯೆ ಎದುರಾಗಬಹುದು. ಉತ್ತಮ ಸಾಂಸಾರಿಕ ಜೀವನ ನಿಮ್ಮದಾಗಲಿದೆ. ಆದಿತ್ಯ ಹೃದಯ ಪಾರಾಯಣ ಮಾಡಿರಿ. ಮಹಾಕಾಳೇಶ್ವರನನ್ನು ಧ್ಯಾನಿಸಿ. ಮೂರು ವರುಷಗಳ ಕಾಲ ನಿಮ್ಮ ಇಷ್ಟಾರ್ಥ ಸಿದ್ದಿಸುತ್ತಿದೆ.

ಕನ್ಯಾ: ಪಂಚಮದಲ್ಲಿರುವ ಶನಿಯಿಂದ ಉದರದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ವಿದ್ಯಾರ್0ಥಿಗಳಿಗೆ ಉತ್ತಮವಾದ ವಾರವಿದು. ಚಾತುರ್ಯಂ ಲಕ್ಷಣಂ ನಾರ್ಯ- ಸ್ತ್ರೀಯರು ಚತುರತೆಯಿಂದ ವರ್ತಿಸಿದರೆ ಸಂಸಾರದ ಕಲಹವನ್ನು ಬಗೆಹರಿಸಿಕೊಳ್ಳಬಹುದು. ಶ್ರೀಲಕ್ಷ್ಮೀನಾರಾಯಣನನ್ನು ಮತ್ತು ಆಂಜನೇಯನನ್ನು ಆರಾಧಿಸಿ.

ತುಲಾ: ಮಿಶ್ರಫಲ ಹೊಂದಿರುವ ವಾರವಿದು. ಜವಾಬ್ದಾರಿಯುತವಾಗಿ ವರ್ತಿಸಿ ಹಾಗೂ ಜಾಣ್ಮೆಯಿಂದ ನಿರ್ಧಾರಗಳನ್ನು ಕೈಗೊಳ್ಳಿ. ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಬೇಡಿ. ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವ ಮೊದಲು ಎಚ್ಚರದಿಂದಿರಿ. ಶ್ರೀ ಜಗನ್ಮಾತೆಯ ಆರಾಧನೆ ಮಾಡಿರಿ.

ವೃಶ್ಚಿಕ: ದ್ವಿತೀಯದಲ್ಲಿರುವ ಗುರುವಿನಿಂದ ಧನಲಾಭವಾಗಲಿದೆ. ಯಾರೊಂದಿಗೂ ಕಲಹಕ್ಕೆ ಹೋಗಬೇಡಿ. ಪ್ರಯಾಣದಲ್ಲಿ ಎಚ್ಚರವಹಿಸಿ. ಮಾನಸಿಕ ಚಿಂತೆಯಿಂದ ತಳಮಳ. ಮುಖ್ಯವಾದ ಕೆಲಸಗಳನ್ನು ಮುಂದೂಡುವುದು ಒಳ್ಳೆಯದು. ಶ್ರೀ ದತ್ತಾತ್ರೇಯನ ಹಾಗೂ ಸುಬ್ರಹ್ಮಣ್ಯನ ಆರಾಧನೆ ಮಾಡಿರಿ.

ಧನಸ್ಸು: ಸ್ವಕ್ಷೇತ್ರದಲ್ಲಿರುವ ಗುರು ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ವ್ಯಾಪಾರದಲ್ಲಿ ಬಂಡವಾಳ ಹೂಡಿಕೆಗೆ ಸೂಕ್ತ ಸಮಯ ಹಿತಶತ್ರುಗಳ ಬಗ್ಗೆ ಎಚ್ಚರವಹಿಸಿ. ಯಾವುದೇ ಮಹತ್ತರವಾದ ನಿರ್ಧಾರ ಕೈಗೊಳ್ಳುವ ಮೊದಲು ಯೋಚಿಸಿ. ಕ್ಷೀಣಚಂದ್ರನಿಂದ ಮನಸ್ಸಿಗೆ ತಳಮಳ. ಹನುಮಾನ್ ಚಾಲೀಸ ಪಠಿಸಿ.

ಮಕರ: ದೇಹ ಮತ್ತು ಮನಸ್ಸು ಹಗುರವಾಗಲಿದೆ. ಪ್ರಯಾಣ ಸುಖಕರ ವಾಗಲಿದೆ. ಸಾಂಸಾರಿಕ ಜಂಜಾಟಗಳನ್ನು ಬಗೆಹರಿಸಿಕೊಳ್ಳಿ. ಬಹುದಿನಗಳ ನಿರೀಕ್ಷಿತ ಧನವು ಬಂದು ಸೇರಲಿದೆ. ಸಾಡೆಸಾತಿಯ ಕಾಲವಾದ್ದರಿಂದ ಮಾಡುವ ಕೆಲಸಗಳಲ್ಲಿ ಅತ್ಯಂತ ಜಾಗರೂಕತೆ ವಹಿಸಬೇಕು. ಆಂಜನೇಯ ಹಾಗೂ ಈಶ್ವರನನ್ನು ಪ್ರಾರ್ಥಿಸಿ.

ಕುಂಭ: ದೇಹಾಲಸ್ಯ ಕಂಡುಬರಬಹುದು ವಿದ್ಯಾರ್ಥಿಗಳಿಗೆ ಉತ್ತಮವಾದ ವಾರವಾಗಲಿದೆ. ನಿಮ್ಮ ಓದಿನಲ್ಲಿ ಹೆಚ್ಚಿನ ಆಸಕ್ತಿ ತೋರಿಸಬೇಕು. ಇದು ನಿಮ್ಮ ಗುರಿಯನ್ನು ಮುಟ್ಟಲು ಸಹಕಾರಿಯಾಗುತ್ತದೆ. ನೌಕರಿಯಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಶ್ರೀ ದತ್ತಾತ್ರೇಯ ಹಾಗೂ ಆಂಜನೇಯನ ಆರಾಧನೆ ಮಾಡಿರಿ.

ಮೀನ: ಏಳು-ಬೀಳು ಎರಡೂ ಕಂಡುಬರುವ ವಾರವಿದೆ. ನೀವು ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಹುಷಾರಾಗಿರಿ. ಹಿತಶತ್ರುಗಳು ನಿಮ್ಮಿಂದ ಲಾಭವಾಗುವ ದಾರಿಯನ್ನು ಕಂಡುಕೊಳ್ಳುವ ಮೊದಲು ಎಚ್ಚರವಾಗಿರಿ. ತಾಳ್ಮೆಯಿಂದ ಹಾಗೂ ಪರೋಪಕಾರಿಗಳಾಗಿ ಬದುಕಿ. ಶ್ರೀ ಈಶ್ವರನ ಆರಾಧನೆ ಮಾಡಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net