

14-06-2020ರಿಂದ 20-06-2020ರವರೆಗೆ
ಮೇಷ: ವೃಷಭರಾಶಿಯಲ್ಲಿದ್ದ ರವಿಯು ಪಥಸಂಚಲನವನ್ನು ಮುಗಿಸಿ ಜೂನ್ 14ರಂದು ರಾತ್ರಿ ಮಿಥುನರಾಶಿಗೆ ಬಂದು ಸೇರುತ್ತಾನೆ. ರವಿ-ರಾಹು-ಬುಧ ಒಟ್ಟಿಗೆ ಇದ್ದು, ನಿಮ್ಮ ಜೀವನಶೈಲಿಯನ್ನು ಬದಲಾಯಿಸಿ. ಸುಬ್ರಹ್ಮಣ್ಯ ಪ್ರಾರ್ಥನೆಯನ್ನು ಮಾಡಿರಿ. ಜೂನ್ 29ರಂದು ಗುರುವು ನಿಮಗೆ ಪ್ರಗತಿಯ ಕೊಡಲಿದ್ದಾನೆ.
ವೃಷಭ: ನಿಮ್ಮ ರಾಶಿಗೆ ಅಂಗಾರಕನು ಶುಭಸ್ಥಾನದಲ್ಲಿದ್ದು, ಶುಕ್ರನು ಸ್ವಕ್ಷೇತ್ರದಲ್ಲಿರುವುದರಿಂದ ಧನ ನಿರೀಕ್ಷೆ ಮಾಡಬಹುದು. ರವಿಯು ನಿಮ್ಮ ಜೀವನಕ್ಕೆ ಅರ್ಥ ತೋರಿಸುತ್ತಾನೆ. ನಿಮ್ಮ ಸರಳ ಜೀವನ, ಗುರುಚರಣದಲ್ಲಿ ನಿಮ್ಮ ಶ್ರದ್ಧಾ ಭಕ್ತಿಗಳು ಪ್ರಗತಿಯ ಕಡೆ ನಡೆಸಿ ಮನೆಯಲ್ಲಿ ಮಂಗಳಕಾರ್ಯ ನೆರವೇರಿಸುತ್ತಾನೆ.
ಮಿಥುನ: ತ್ರಿಗ್ರಹಗಳ ಸಂಚಾರ ಮಿಥುನದಲ್ಲಿ ನಿಮ್ಮನ್ನು ಸರಿದಾರಿಗೆ ಕೊಂಡೊಯ್ಯುವುದರಲ್ಲಿ ಸಂದೇಹವಿಲ್ಲ. ಮಾತನಾಡುವಾಗ ಎಚ್ಚರವಿರಲಿ. ಅಷ್ಟಮ ಶನಿ, ಗುರುವಿನಿಂದ ದೈವಬಲ ಇರುವುದಿಲ್ಲ. ಕುಲದೇವರನ್ನು ಪೂಜಿಸಿ. ಛಲವಿರಲಿ. ನಿರಾಶೆ ಬೇಡ. ಅಹಂಕಾರ ಬೇಡ. ಜೂನ್ 29ರಿಂದ ದೈವಬಲ ಬಂದು ಸೇರಲಿದೆ.
ಕಟಕ: ದ್ವಾದಶದಲ್ಲಿ ಮೂರು ಗ್ರಹಗಳಿದ್ದು, ನಿಮ್ಮ ಮನಸ್ಸನ್ನು ಚಂಚಲತೆಯಲ್ಲಿರಿಸುತ್ತಾನೆ. ಅದು ಸಹಜ. ಆದರೆ ಅದೇ ನಿಮಗೆ ಮಾರ್ಗವಾಗಬಾರದು. ಚಂದ್ರನ ಅಷ್ಟೋತ್ತರವನ್ನು, ಶಿವನ ದಾರಿದ್ರ್ಯಹನ ಸ್ತೋತ್ರವನ್ನು ಪಠಿಸಿ ಮನಸ್ಸನ್ನು ಏಕಾಗ್ರತೆಗೆ ತನ್ನಿ. ಗ್ರಹಗಳ ಚಿಂತೆ ಬೇಡ. ಗುರುವಿನ ಕಟಾಕ್ಷವೇ ಅತಿ ಮುಖ್ಯವಾದುದು.
ಸಿಂಹ: ಹನ್ನೊಂದರಲ್ಲಿ ರವಿ-ರಾಹು-ಬುಧ ಗ್ರಹಗಳಿರುವುದರಿಂದ ನಿಮ್ಮ ಅದೃಷ್ಟದ ಬಾಗಿಲನ್ನು ದೈವವೇ ತೆರೆದುಕೊಡಲಿದೆ. ಮುನ್ನೂರ ಮುವತ್ತಮೂರು ಕೋಟಿ ದೇವತೆಗಳನ್ನು ನಿಮಗಾಗಿ ಹಾಗೂ ಮತ್ತೊಬ್ಬರಿಗಾಗಿ ಪ್ರಾರ್ಥಿಸಿ. ರವಿಯು ದಾರಿ ತೋರಿಸಿದರೆ, ಬುಧನು ವ್ಯಾಪಾರ, ಸಂಧಾನ, ನೀತಿಮಾರ್ಗದಲ್ಲಿ ಕೊಂಡೊಯ್ಯುತ್ತಾನೆ.
ಕನ್ಯಾ: ಪಂಚಮ ಶನಿ ನಿಮ್ಮಲ್ಲಿ ತಂದ ಇಷ್ಟು ಬದಲಾವಣೆಯೇ ಈವರೆಗಿನ ಮುಖ್ಯವಾದ ಘಟ್ಟ. ತಪ್ಪದೆ ಪಿಪ್ಪಲಾ ಸ್ತೋತ್ರವನ್ನು ಪಠಿಸಿ. ನಿಮ್ಮಲ್ಲಿರುವ ಧನವು ವ್ಯಯವಾಗಿದೆ. ಇದ್ದದ್ದರಲ್ಲೇ ತೃಪ್ತಿಪಟ್ಟುಕೊಳ್ಳಿ. ಮಾಡಿದ ತಪ್ಪನ್ನು ತಿದ್ದಿಕೊಳ್ಳಿ. ಉಪಕಾರ ಮಾಡದಿದ್ದರೂ ಪರವಾಗಿಲ್ಲ. ಅಪಕಾರ ಮಾಡದಿರುವುದೇ ಜೀವನ. ಗಣಪತಿ ಸಹಸ್ರನಾಮ ಪಠಿಸಿ.
ತುಲಾ: ಚತುರ್ಥ ಶನಿಯು ನಿರಾಸೆಯನ್ನು ಮೂಡಿಸಿದರೂ, ಆಸೆಯನ್ನು ಜೀವಂತವಾಗಿಟ್ಟಿರುತ್ತಾನೆ. ನಾನು ನನ್ನದೆಂಬ ಹಂಬಲ ಬೇಡ. ಲೋಕಕ್ಕೆ ಪ್ರಕೃತಿಯು ಪಂಚಭೂತಾತ್ಮಕವಾದ ಅಗ್ನಿ, ವಾಯು, ಜಲ, ಸೂರ್ಯ-ಚಂದ್ರರನ್ನು ಕೊಟ್ಟು ದೇವರು ಏನು ಇಟ್ಟುಕೊಂಡಿರುತ್ತಾನೆ. ಜನ್ಮಕೊಟ್ಟವರನ್ನು ಪೂಜಿಸಿ. ಶುಕ್ರನನ್ನು, ದುರ್ಗೆಯನ್ನು ಸದಾ ಪೂಜಿಸಿ.
ವೃಶ್ಚಿಕ: ದಾನದಲ್ಲಿ ಮಹಾದಾನ ಅನ್ನದಾನ, ಪ್ರಾಣದಾನ ಹಾಗೂ ಸಮಯದ ಒತ್ತಡ ತಡೆಯುವುದರಲ್ಲಿ ನಿಧಾನ ಮಹತ್ತರ ಪಾತ್ರ ತರಲಿದೆ. ಶುಭದಿನಗಳು ಆರಂಭವಾಗುವ ಕಾಲ ಬಂದಿದೆ. ಇನ್ನೇನು ಸೂರ್ಯೋದಯವಾಗುವುದಕ್ಕೆ ಗಂಟೆಗಳು ಬಾಕಿ ಇದೆ. ಎಚ್ಚರವಾಗಿರಿ. ಗಿರಿಯಲ್ಲಿ ವಾಸವಾಗಿರುವ ಶ್ರೀನಿವಾಸನನ್ನು ಕೂಡಲೇ ಸಂದರ್ಶಿಸಿ.
ಧನಸ್ಸು: ಪರಾಕ್ರಮಿಯಾಗಬೇಕಾದರೆ ತ್ರಿವಿಕ್ರಮನಂತೆ ಇರಬೇಕು. ಲಕ್ಷ್ಮೀಯಂತಹ ಹೆಣ್ಣುಮಗಳು ಸಿಗಬೇಕಾದರೆ ಶಿವಧನುಸ್ಸನ್ನು ಮುರಿಯಬೇಕು. ಈ ಗುಣಗಳು ಇದೆಯೇ ಎಂದು ಪರೀಕ್ಷಿಸಿಕೊಳ್ಳಿ, ಆತುರಪಡಬೇಡಿ. ದ್ವಿತೀಯ ಶನಿಯು ದಾರಿಯನ್ನು ತೋರಿಸುತ್ತಾನೆ. ಪ್ರಾರ್ಥನೆಯಲ್ಲಿ ಏಕಾಗ್ರತೆಯಿರಲಿ. ಆದಿತ್ಯಹೃದಯವನ್ನು ಪಠಿಸಿ. ವಿಜಯವಾಗಲಿ.
ಮಕರ: ಶೀಲ, ಶಿಸ್ತು, ನಡೆ-ನುಡಿ, ವಿಷಯ, ವಿಜಯ ಎಲ್ಲವೂ ದೇವರು ಮನುಷ್ಯನಿಗೆ ಕೊಟ್ಟಿರುವ ಅಂಗಾಂಗಗಳಿದ್ದಂತೆ. ಯಾವುದು ಇಲ್ಲದಿದ್ದರೂ ಊನವಾದಂತೆ. ನಿಮ್ಮ ಶರೀರವನ್ನು ಒತ್ತಿ ಹಿಡಿದು ದೇವರನ್ನು ಪೂಜಿಸಿ. ನಿಮ್ಮ ತಂದೆ ತಾಯಿಯಲ್ಲಿ ಶ್ರದ್ಧಾಭಕ್ತಿ ಕಾಣುವುದರಲ್ಲಿ ತಪ್ಪಿದ್ದೀರಿ. ಸರಿಪಡಿಸಿಕೊಳ್ಳಿ. ಶಿವ ಪಂಚಾಕ್ಷರಿಯನ್ನು ಪಠಿಸಿ.
ಕುಂಭ: ದೈವಬಲ ಇಲ್ಲದಲ್ಲಿ ಹುತ್ತಕ್ಕೆ ಕೈಹಾಕಿದರೆ ಹಾವು ಕಡಿಯುವುದು ಖಚಿತ. ಈಗಿನ ಅಗತ್ಯ ದೈವಬಲ. ಸದಾ ಅನುಗ್ರಹಿಸುವ ದತ್ತಾತ್ರೇಯನನ್ನು ಪ್ರಾರ್ಥಿಸಿ. ನವಗ್ರಹ ಸ್ತೋತ್ರವನ್ನು ಪಠಿಸಿ. ಇದ್ದುದ್ದನ್ನು ದಾನ ಮಾಡಿ. ಕಾಲಘಟ್ಟವು ಬದಲಾಗುತ್ತದೆ. ರಾಷ್ಟ್ರದ ಸಂಕಟವಾದ ರೋಗ ನಿವಾರಣೆಯನ್ನು ಗಮನಿಸಿ. ಮೀನಾಕ್ಷಿ-ಸುಂದರೇಶ್ವರರನ್ನು ಪೂಜಿಸಿ. ತಾಳ್ಮೆ ನಿಮ್ಮ ಜೀವನದ ಮುಖ್ಯ ಧ್ಯೇಯವಾಗಿರಲಿ. ಸುಖವಾಗಿರಿ.
ಮೀನ: ಮೀನರಾಶಿಯ ಮಾನವರು ಗುರುವಿನ ಕಟಾಕ್ಷವಿಲ್ಲದೆ ಬದುಕುವುದಿಲ್ಲ. ಗುರುವನ್ನು ಮರೆತಲ್ಲಿ ದಾರಿಯೂ ಕಾಣುವುದಿಲ್ಲ. ದೇವರು ಎಲ್ಲ ಕೊಟ್ಟರೂ ಇಲ್ಲದ ವಿಷಯಕ್ಕೆ ದುಃಖಿಸಬಾರದು. ಕಷ್ಟ ಬಂದಾಗ ತಾಳ್ಮೆಯಿರಬೇಕು. ಗುರುವನ್ನು ಭಜಿಸಿ, ಪೂಜಿಸಿ, ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸಿ. ಶ್ರೀಚಕ್ರದಲ್ಲಿ ಲಲಿತಾತ್ರಿಶತಿಯಿಂದ ಲಲಿತೆಯನ್ನು ಅರ್ಚಿಸಿ.