ವಾರ ಭವಿಷ್ಯ: ಈ ರಾಶಿಯವರಿಗೆ ಈ ವಾರ ಸ್ತ್ರೀಯರಿಂದ ಲಾಭ ಆಗುತ್ತೆ, ಆದರೆ ಹಿತಶತ್ರುಗಳ ಬಗ್ಗೆ ಎಚ್ಚರ!

Vara-Bhavishya-2
Published on

ಮೇಷ: ಫಲ ನೀಡುವುದು, ಬಿಡುವುದು ದೇವರಿಗೆ ಬಿಟ್ಟದ್ದು. ಕೆಲಸಗಳಲ್ಲಿ ನಿಮ್ಮ ಪ್ರಯತ್ನ ಸತತವಾಗಿರಲಿ. ಇದರಿಂದ ನಿಮಗೆ ಲಾಭವಾಗಲಿದೆ. ಕಾಯಕವೇ ಕೈಲಾಸವಾಗಿರಲಿ. ಪ್ರಯಾಣದ ಯೋಗವಿದೆ. ಶುಕ್ರನಿಂದ ಭೋಗ ಭಾಗ್ಯಗಳನ್ನು ಅನುಭವಿಸುವ ಸಮಯವಿದು. ಶ್ರೀ ಸುಬ್ರಹ್ಮಣ್ಯನ ಆರಾಧನೆ ಮಾಡಿರಿ.

ವೃಷಭ: ದ್ವಾದಶ ಶುಕ್ರನಿಂದ ಮಾಡಿದ ಕಾರ್ಯಗಳಲ್ಲಿ ಲಾಭವನ್ನು ಗಳಿಸುವ ಸಮಯ. ಮಾನ -ಸಮ್ಮಾನಗಳಿಂದ ಮನಸ್ಸಿಗೆ ಉಲ್ಲಾಸ. ಸುಖಮಯವಾದ ವಾರ ಇದಾಗಿದೆ. ಶಕ್ತರು ಹಾಗೂ ಪ್ರವಾಸಾಕಾಂಕ್ಷಿಗಳು ಶ್ರೀ ವೈಷ್ಣೋದೇವಿ ದರ್ಶನ ಪಡೆಯಬಹುದು. ಶ್ರೀದುರ್ಗೆಯನ್ನು ಆರಾಧನೆ ಮಾಡಿರಿ.

ಮಿಥುನ: ಹಲವಾರು ದಿಕ್ಕುಗಳಿಂದ ಸಮಸ್ಯೆಗಳು ಎದುರಾಗಬಹುದು.ಬಲು ಎಚ್ಚರಿಕೆಯಿಂದ ನಡೆಯಬೇಕಾದ ಸಮಯ, ಅಷ್ಟಮ ಶನಿಯು ಆರೋಗ್ಯದ ಸಮಸ್ಯೆಯನ್ನು ಉಂಟು ಮಾಡಬಹುದು. ಆದರೆ ಗುರುವಿನ ಅನುಗ್ರಹದಿಂದ ಸುಖವನ್ನು ಅನುಭವಿಸುವ ಯೋಗವಿದೆ. ಶ್ರೀ ದತ್ತಾತ್ರೇಯನ ಆರಾಧನೆ ಮಾಡಿರಿ.

ಕಟಕ: ಮನ್ನಣೆ- ಮಾನ್ಯತೆ ಸಿಗುವ ವಾರವಿದು. ನಿಮ್ಮ ಮಾತಿಗೆ ಎಲ್ಲರೂ ಸಮ್ಮತಿ ನೀಡಿ ನಿಮಗೆ ಗೌರವ ನೀಡುತ್ತಾರೆ. ಮನೆಯಲ್ಲಿ ಶಾಂತಿಯುತ ವಾತಾವರಣ ಇರುತ್ತದೆ. ಹಿತಶತ್ರುಗಳ ಜತೆ ಯಾವುದೇ ವ್ಯವಹಾರ ಮಾಡಬೇಡಿ. ಅವರಿಂದ ದೂರವಿರಿ. ಶ್ರೀ ಈಶ್ವರನ ಆರಾಧನೆ ಮಾಡಿರಿ.

ಸಿಂಹ: ಮಕ್ಕಳಿಂದ ಸಂತಸ. ಅವರಿಗೆ ಹೊಸ ಕೆಲಸಗಳಲ್ಲಿ ಅವಕಾಶಗಳು ಹೆಚ್ಚಲಿವೆ. ವಾರದ ಆರಂಭದಲ್ಲಿ ತುಸು ಒತ್ತಡ ಕಂಡುಬಂದರೂ ದೊಡ್ಡ ಜವಾಬ್ದಾರಿಗಳನ್ನು ನಿರ್ವಹಿಸುತ್ತೀರಿ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಶ್ರೀ ಸೂರ್ಯನಾರಾಯಣನ ಆರಾಧನೆ ಮಾಡಿರಿ.

ಕನ್ಯಾ: ದೇವನ ನಂಬಿ ಕೆಟ್ಟವರಿಲ್ಲವೋ ಎಂಬ ಮಂತ್ರ ನಿಮ್ಮದಾಗಿರಬೇಕು. ಪಂಚಮ ಶನಿಯಿಂದ ಆರೋಗ್ಯದ ಬಗ್ಗೆ ಹಾಗೂ ಮಾಡುವ ಎಲ್ಲಾ ಕೆಲಸಗಳ ಬಗ್ಗೆ ಕಾಳಜಿ ವಹಿಸಬೇಕು. ತಪ್ಪು ಮಾಡದೆ ಸರಿಯಾದ ದಾರಿಯಲ್ಲಿ ನಡೆಯಬೇಕು. ಶ್ರೀ ಆಂಜನೇಯನ ಹಾಗೂ ವಿಷ್ಣುವಿನ ಆರಾಧನೆ ಮಾಡಿರಿ.

ತುಲಾ: ಸ್ತ್ರೀಯರಿಂದ ಲಾಭ ಆಗಲಿದೆ. ಯಾವುದೇ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಹತ್ತು ಹಲವು ಬಾರಿ ಯೋಚಿಸಿ ಮುಂದಡಿಯಿಡಿ. ಹಿತಶತ್ರುಗಳಿಂದ ದೂರವಿರಿ. ಜಗಳ- ಕದನ, ವಾದ-ವಿವಾದಗಳಿಂದ ದೂರ ಸರಿಯಿರಿ. ಶ್ರೀ ದುರ್ಗಾದೇವಿ ಆರಾಧನೆ ಮಾಡಿರಿ.

ವೃಶ್ಚಿಕ: ಬಲ್ಲ ಮೂಲಗಳಿಂದ ಹಣದ ಹರಿವು. ವ್ಯವಹಾರಗಳಲ್ಲಿ ಜಾಗರೂಕತೆಯಿಂದಿರಿ. ಮನಸ್ಸಿಗೆ ನೋವುಂಟು ಮಾಡುವ ವಿಚಾರಗಳ ಬಗ್ಗೆ ಗಮನ ಕೊಡದಿರಿ. ವಾಹನಗಳ ಸಂಚಾರ ಸಾಧ್ಯವಾದಷ್ಟು ಕಡಿಮೆ ಮಾಡಿ. ಶ್ರೀ ಸುಬ್ರಹ್ಮಣ್ಯನ ಆರಾಧನೆಯಿಂದ ಧೈರ್ಯವಂತರಾಗುವಿರಿ.

ಧನಸ್ಸು: ನಿಮ್ಮ ಮನಸ್ಸಿನ ಇಚ್ಛೆಯಂತೆ ಯಾವುದೇ ಕೆಲಸ ಕಾರ್ಯಗಳು ನಡೆಯುವ ಸಾಧ್ಯತೆ ಕಡಿಮೆ. ಆರಂಭದಲ್ಲಿ ಮಾಡುವ ಮನಸ್ಸಿದ್ದರೂ ಸ್ಥಿಮಿತತೆ ಕಡಿಮೆ. ಇದರಿಂದ ನಿಂದನೆಗಳನ್ನು ಅನುಭವಿಸಬೇಕಾಗಬಹುದು. ಆರೋಗ್ಯದಲ್ಲಿ ಸುಧಾರಣೆ ಕಂಡುಬರುವುದು. ಶ್ರೀ ದತ್ತಾತ್ರೇಯನ ಆರಾಧನೆ ಮಾಡಿರಿ.

ಮಕರ: ಶನಿಯು ಸ್ವಕ್ಷೇತ್ರದಲ್ಲಿ ಇರುವುದರಿಂದ ಆರೋಗ್ಯದ ಬಗ್ಗೆ ಕಾಳಜಿ ಇರಲಿ. ನಕಾರಾತ್ಮಕ ಚಿಂತನೆಗೆ ಒಳಪಡಬೇಡಿ. ಹಿಡಿದ ಕಾರ್ಯವನ್ನು ಪೂರ್ಣಗೊಳಿಸುವ ಛಲ ಈ ವಾರ ನಿಮ್ಮದಾಗಬೇಕು. ಶ್ರೀ ಸೂರ್ಯ ನಾರಾಯಣನ ಆರಾಧನೆ, ಸೂರ್ಯ ನಮಸ್ಕಾರ ಮಾಡುವುದು ಒಳಿತು.

ಕುಂಭ: ದ್ವಾದಶ ಶನಿಯು ಕಷ್ಟ ಕಾರ್ಪಣ್ಯಗಳನ್ನು ತಂದೊಡ್ಡುವ ಸಾಧ್ಯತೆಗಳಿವೆ. ನಿಮ್ಮ ಆಹಾರ- ಜೀವನ ಶೈಲಿಯನ್ನು ಬದಲಾಯಿ ಸಿಕೊಳ್ಳಬೇಕಾದ ಕಾಲವಿದು. ಒತ್ತಡವನ್ನು ನೀವಾಗಿಯೇ ಕಡಿಮೆ ಮಾಡಿಕೊಳ್ಳಬೇಕು. ಭಗವದ್ಗೀತೆಯ 12ನೇ ಅಧ್ಯಯವನ್ನು ಪಠಿಸಿ. ಕೃಷ್ಣಂ ವಂದೇ ಜಗದ್ಗುರುಂ ಎಂದು ದೇವರ ಮೊರೆ ಹೋಗಿ.

ಮೀನ: ಸುಖ-ಸೌಭಾಗ್ಯವನ್ನು ದೇವರು ಯಥೇಚ್ಛವಾಗಿ ನಿಮಗೆ ಕರುಣಿಸಿ ದ್ದಾನೆ. ಆಹ್ಲಾದಕರ ಜೀವನ ನಿಮ್ಮದಾಗಲಿದೆ. ಮುಂದಿನ 2 ವರ್ಷ ಬಹಳ ಆನಂದದಿಂದ ಇರುವಿರಿ. ಸಕಾರಾತ್ಮಕ ಚಿಂತನೆಗಳು ಹಾಗೂ ಪರೋಪಕಾರದಿಂದ ಮುಂದಿನ ದಿನಗಳು ಹೂವಿನ ಹಾದಿಯಾಗಲಿದೆ. ಶ್ರೀಮನ್ನಾರಾಯಣನ ಆರಾಧನೆ ಮಾಡಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net