ವಾರ ಭವಿಷ್ಯ; ಈ ರಾಶಿಯವರು ದೊಡ್ಡ ಯೋಜನೆಗಳನ್ನು ಪ್ರಾರಂಭಿಸುವ ಮುನ್ನ ಎಚ್ಚರಿಕೆ ಹಾಗೂ ಜವಾಬ್ದಾರಿಯುತವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕು

Vara-Bhavishya-2
Published on

ಮೇಷ: ದಶಮದಲ್ಲಿರುವ ಶನಿಯಿಂದ ಉದ್ಯೋಗದಲ್ಲಿ ಯಥಾಸ್ಥಿತಿ ಕಾಪಾಡಿಕೊಳ್ಳುವಿರಿ. ನಿಮ್ಮ ವಿಶ್ವಾಸ ಹಾಗೂ ಆತ್ಮ ಸ್ಥೈರ್ಯದಿಂದ ಯಶಸ್ಸು ಕಾಣುವಿರಿ. ಈ ಬಾರಿ ಹಣಕಾಸಿನ ಮುಗ್ಗಟ್ಟಿನಿಂದ ಹೊರಬರುವಿರಿ. ವಿದ್ಯಾರ್ಥಿಗಳಿಗೆ ಶುಭವಾಗುವ ವಾರವಿದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ವೃಷಭ: ಸ್ವಂತ ವ್ಯಾಪಾರ-ವ್ಯವಹಾರವನ್ನು ಮಾಡುವವರಿಗೆ ಮಿಶ್ರಫಲ. ಆದಾಯ ಕಡಿಮೆಯಾಗುವ ಸಾಧ್ಯತೆ ಮಾರ್ಚ್ ಕೊನೆಯವಾರದವರೆಗೆ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕು. ನಿಮ್ಮ ಆಹಾರ ದ ಬಗ್ಗೆ ಹೆಚ್ಚು ಗಮನಹರಿಸಿ. ವಾರದಾರಂಭದಲ್ಲ ಕೃತ್ತಿಕಾ ನಕ್ಷತ್ರವಿದ್ದು, ಶ್ರೀಸುಬ್ರಹ್ಮಣ್ಯನ ಆರಾಧಿಸಿ ನೆಮ್ಮದಿ ಪಡೆಯಿರಿ.

ಮಿಥುನ: ಸಪ್ರಮದಲ್ಲಿರುವ ಗುರುವಿನಿಂದ ವ್ಯಾಪಾರ-ವ್ಯವಹಾರಗಳಲ್ಲಿ ಲಾಭ ಕಾಣುವಿರಿ. ಸಂಸಾರದಲ್ಲಿ ಶಾಂತಿಯುತ ವಾತಾವರಣವಿರುತ್ತದೆ. ವಿದ್ಯಾರ್ಥಿಗಳು ಆಲಸ್ಯ ಮಾಡದೆ ಓದಿದಲ್ಲಿ ಉತ್ತಮವಾದ ಫಲಿತಾಂಶವನ್ನು ಪಡೆಯಬಹುದು. ಹನುಮಾನ್ ಚಾಲೀಸಾ ಪಠಿಸಿ. ಹಾಗೂ ಶ್ರೀ ವಿಷ್ಣುವಿನ ಆರಾಧನೆ ಮಾಡಿರಿ.

ಕಟಕ: ದೊಡ್ಡ ಯೋಜನೆಗಳನ್ನು ಪ್ರಾರಂಭಿಸುವ ಮುನ್ನ ಎಚ್ಚರಿಕೆ ಹಾಗೂ ಜವಾಬ್ದಾರಿಯುತವಾಗಿ ನಿರ್ಧಾರಗಳನ್ನು ಕೈಗೊಳ್ಳಬೇಕು. ಮಕ್ಕಳ ಬಗ್ಗೆ ಹೆಚ್ಚು ಗಮನಹರಿಸಿ. ಉನ್ನತ ವ್ಯಾಸಂಗ ಆಕಾಂಕ್ಷಿಗಳಿಗೆ ಒಳ್ಳೆಯ ಸಮಯ ವಾರದ ಮೊದಲಾರ್ಧದಲ್ಲಿ ಯಶಸ್ಸು, ಈಶ್ವರನ ಆರಾಧನೆ ಮಾಡಿರಿ.

ಸಿಂಹ: ಉತ್ತಮ ಮೂಲಗಳಿಂದ ಹಣವು ಹರಿದುಬರಲಿದೆ. ನಿಮ್ಮ ಆದಾಯವೂ ಹೆಚ್ಚಲಿದೆ. ಕಲಹಗಳನ್ನು ಬಗೆಹರಿಸಿಕೊಳ್ಳಲು ಸೂಕ್ತ ಸಮಯ. ಮಕ್ಕಳಿಂದ ಸಂತಸ ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ಆದಿತ್ಯ ಹೃದಯ ಪಾರಾಯಣ ಮಾಡಿರಿ.

ಕನ್ಯಾ: ಪಂಚಮದಲ್ಲಿರುವ ಶನಿಯು ಕಷ್ಟ.ನಷ್ಟಗಳನ್ನು ತಂದೊಡ್ಡುವ ಸಾಧ್ಯತೆ. ಮಕ್ಕಳ ಬಗ್ಗೆ ಹೆಚ್ಚು ಕಾಳಜಿ ವಹಿಸಿ. ಧಮಶಾಸ್ತ್ರದ ಶ್ರೀ ಅಯ್ಯಪ್ಪಸ್ವಾಮಿಯನ್ನು ಪೂಜಿಸಿದರೆ ಶನಿಗೆ ಪ್ರೀತ್ಯರ್ಥ. ಬಂಧು-ಬಾಂಧವರೊಂದಿಗೆ ಕಲಹ ಬೇಡ. ಜಾಗರೂಕತೆಯಿಂದ ಸಂರ್ದಬಗಳನ್ನು ನಿಭಾಯಿಸಿ.

ತುಲಾ: ಸ್ತ್ರೀಯರಿಂದ ಅಧಿಕ ಲಾಭವಾಗುವ ಸಮಯ. ಶನಿ ಹಾಗೂ ಗುರುಗ್ರಹಗಳ ಪ್ರಭಾವದಿಂದ ಯಥಾಸ್ಥಿತಿ ಕಾಪಾಡಿಕೊಳ್ಳುವಿರಿ. ದೊಡ್ಡ ನಿರ್ಧಾರಗಳನ್ನು ಕೈಗೊಳ್ಳಲು ಸೂಕ್ತ ಸಮಯ. ಯಾರೊಂದಿಗೂ ವಾದ-ವಿವಾದದಲ್ಲಿ ತೊಡಗದಿರಿ. ಶ್ರೀ ದುರ್ಗೆಯ ಆರಾಧನೆ ಮಾಡಿರಿ.

ವೃಶ್ಚಿಕ: ಸಮಯ ಚೆನ್ನಾಗಿದ್ದು, ಈಗ ತಾನೆ ಸಾಡೇಸಾತಿಯಿಂದ ಮುಕ್ತಿ ಹೊಂದಿ ನೆಮ್ಮದಿಯಾಗಿರುವಿರಿ. ಸಂಸಾರದಲ್ಲಿ ನೆಮ್ಮದಿಯ ವಾತಾವರಣ. ವಿಕ್ರಮ ಶನಿಯಿಂದ ಶ್ರೀ ಸುಬ್ರಹ್ಮಣ್ಯನ ಆರಾಧನೆ ಮಾಡಿ. ಹೆಸರು-ಕೀರ್ತಿ ಸಂಪಾದಿಸಿ.

ಧನಸ್ಸು: ದ್ವಿತೀಯದಲ್ಲಿರುವ ಶನಿಯಿಂದ ಹಣಕಾಸಿನ ಮುಗ್ಗಟ್ಟು ಕಂಡುಬರಲಿದ್ದು, ಶ್ರೀದತ್ತಾತ್ರೇಯನ ಆರಾಧನೆಯಿಂದ ಇದರಿಂದ ಸುಧಾರಿಸಿಕೊಳ್ಳುವಿರಿ. ಮಾಡಿದ ಕೆಲಸಕ್ಕೆ ತಕ್ಕ ಪ್ರತಿಫಲ ದೊರಕುತ್ತದೆ. ಕಾರ್ಯಕ್ಷೇತ್ರದಲ್ಲಿ ಉನ್ನತ ಹುದ್ದೆಗೇರುವ ಸಾಧ್ಯತೆಗಳಿವೆ. ಹನುಮಾನ್ ಚಾಲೀಸಾ ಪಠಿಸಿ.

ಮಕರ: ಶನಿಯು ಸ್ವಕ್ಷೇತ್ರದಲ್ಲಿದ್ದು, ಆರೋಗ್ಯದ ಬಗ್ಗೆ ಬಹು ಎಚ್ಚರವಹಿಸಬೇಕು. ಹಿತಶತೃಗಳಿಂದ ಉಪಟಳ. ಸಂಪತ್ತಿನ ಬಗ್ಗೆ ವಿಶೇಷ ಗಮನ ಹರಿಸಿ. ಸ್ತ್ರೀಯರಿಂದ ಸಂತಸ. ಮನೆಯಲ್ಲಿ ನೆಮ್ಮದಿಯ ವಾತಾವರಣವಿರುವ ವಾರ ಇದಾಗಿದೆ. ತ್ರಿಮೂರ್ತಿ ರೂಪ ಶ್ರೀ ದತ್ತಾತ್ರೇಯನ ಆರಾಧನೆ ಮಾಡಿರಿ.

ಕುಂಭ: ಸಾಡೇಸಾತಿಯು ಶುರುವಾಗಿರುವ ಸಮಯ. ಬಹಳ ಜವಾಬ್ದಾರಿಯುತವಾಗಿ ವರ್ತಿಸಿ ನಿರ್ಧಾರಗಳನ್ನು ಕೈಗೊಳ್ಳಿ. ಯಾರೊಂದಿಗೂ ಮನಸ್ತಾಪ ಬೇಡ. ಸಾಂಸಾರಿಕ ವಿಚಾರಗಳನ್ನು ಗೌಪ್ಯವಾಗಿಡಿ. ಆರೋಗ್ಯದಲ್ಲಿ ಸುಧಾರಣೆ ಶ್ರೀ ಆಂಜನೇಯನ ಆರಾಧನೆ ಮಾಡಿರಿ.

ಮೀನ: ಬಹು ನಿರೀಕ್ಷಿತ ಧನವು ಬಂದು ಸೇರುತ್ತದೆ. ಅತ್ಯಂತ ಒಳ್ಳೆಯ ಸಮಯ ನಿಮ್ಮದಾಗಲಿದೆ. ದಾನ-ಧರ್ಮ ಪರೋಪಕಾರವನ್ನು ಈಗಿನಿಂದಲೇ ಮಾಡಿದಲ್ಲಿ, ಮುಂಬರುವ ಸಾಡೇಸಾತಿಯ ಪ್ರಭಾವ ಕಡಿಮೆಯಾಗುತ್ತದೆ. ಶ್ರೀಈಶ್ವರ ಹಾಗೂ ದತ್ತನ ಆರಾಧನೆ ಮಾಡಿರಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net