ವಾರ ಭವಿಷ್ಯ: ಈ ರಾಶಿಯವರಿಗೆ ಕಷ್ಟ ಕಾರ್ಪಣ್ಯ ಬರುವುದಿಲ್ಲ

15-68d82d308532f
Published on
ಮೇಷ: ಮೇಷ, ವೃಷಭ, ತುಲಾ, ವೃಶ್ಚಿಕ ರಾಶಿಯವರು ಸುಬ್ರಹ್ಮಣ್ಯ ದೇವರನ್ನು ಪೂಜಿಸಬೇಕು. ಅವನು ಪಾರ್ವತಿ ನಂದನನಾಗಿರುವುದರಿಂದ ಅವನ ತಾಯಿಯನ್ನು ಯಾವುದೇ ಸ್ವರೂಪದಲ್ಲಿ ಪೂಜಿಸಿದರೆ, ಮಕ್ಕಳಂತೆ ಕಂಡು ನಿಮ್ಮನ್ನು ಕಾಪಾಡುತ್ತಾಳೆ. ಶನಿಸಂಚಾರವಿದೆ ಜೋಪಾನ. ಆರೋಗ್ಯ ವನ್ನು ಕಾಪಾಡಿಕೊಳ್ಳಿ. ದೈವಭಕ್ತಿಯೊಂದು ಇದ್ದರೆ ಕೆಲಸಗಳು ಮಂಗಳಪ್ರದವಾಗಿ ನಡೆಯುತ್ತವೆ.

ವೃಷಭ: ಅನ್ಯಥಾ ಶರಣಂ ನಾಸ್ತಿ ತ್ವಮೇವ ಶರಣಂ ಮಮ. ಈ ಉಳಿದಿರುವ ನವರಾತ್ರಿಯ ಪಂಚ ರಾತ್ರಿ ನೀವು ಸರಿಯಾಗಿ ಶ್ರದ್ಧಾ ಭಕ್ತಿಯಿಂದ ದುರ್ಗೆಯನ್ನು ಆರಾಧನೆ ಮಾಡಿದರೆ ಸಾಮ್ರಾಜ್ಯ ಬೇಕೇ, ಸೊಗಸಾದ ಬದುಕು, ಲಗ್ನಕ್ಕೆ ಅನುರೂಪ ಸಂಗಾತಿ ಬೇಕೆ, ಧನಬೇಕೇ? ಬೇಕಾದ್ದನ್ನು ಕೊಟ್ಟು ನಡೆಸುವವಳು ದುರ್ಗೆಯೊಬ್ಬಳೇ. ಏನೂ ಬಯಸದೆ ವರವನ್ನು ಕೊಡುವವನು ದತ್ತಾತ್ರೇಯನು. ದುರ್ಗೆ-ದತ್ತಾತ್ರೇಯರನ್ನು ಪೂಜಿಸಿ, ಅಷ್ಟೈಶ್ವರ್ಯ ಪಡೆಯಿರಿ.

ಮಿಥುನ: ಬರುವ ಅಕ್ಟೋಬರ್ 28 ರವರೆಗೆ ಗುರುವು ಮಿಥುನ ರಾಶಿಯಲ್ಲಿ ಇದ್ದು, ನಂತರ ಕಟಕ ರಾಶಿಗೆ ಬರುತ್ತಾನೆ. ಆಗ ಸಮಯವು ನಿಮ್ಮದೇ. ಸಂಯಮ ಇದ್ದರೆ ಏನನ್ನೂ ಗಳಿಸಬಹುದು. ಶ್ರೀನಿವಾಸ ಕಲ್ಯಾಣದ ಕಥೆ ಕೇಳಿ ಅಥವಾ ಪಾರಾಯಣ ಮಾಡಿರಿ. ಶ್ರೀ ಎಂದರೆ ಲಕ್ಷ್ಮೀ, ನಿವಾಸ ಎಂದರೆ ನಿಮ್ಮ ಮನೆ. ಲಕ್ಷ್ಮೀ ನಿಮ್ಮ ಮನೆಯಲ್ಲಿ ವಾಸಮಾಡಿ ಶ್ರೀನಿವಾಸನೊಂದಿಗೆ ನಿಮ್ಮನ್ನು ಹರಸಲು ಉದ್ಯುಕ್ತರಾಗಿದ್ದಾರೆ.

ಕಟಕ: ದ್ವಾದಶ ಗುರು ಅಕ್ಟೋಬರ್ 28 ರಂದು ಕಟಕರಾಶಿಗೆ ಬಂದು ದ್ವಾದಶ ರಾಶಿಗಳೂ ಅವನ ಪ್ರಭಾವಕ್ಕೆ ಒಳಗಾಗುತ್ತವೆ. ಜನ್ಮದಲ್ಲಿ ಗುರು ಬರುವುದರಿಂದ ಅದರ ಸಾಫಲ್ಯ ಪಡೆಯುವುದು ನಿಮ್ಮ ಗುರಿಯಾಗಿ ರಲಿ. ಸುಖ ದುಃಖ, ಸಿಹಿ-ಕಹಿ ಮಾತುಗಳು, ಅಳುವುದು ನಗುವುದು, ಎಲ್ಲವೂ ಭಗವಂತನ ಪ್ರೇರಣೆ. ಸರ್ವಕ್ಕೂ ಗುರುವಾದ ಗುರುವನ್ನು ದತ್ತ ಸ್ವರೂಪದಲ್ಲಿ ಪೂಜಿಸಿದರೆ ಎಲ್ಲವನ್ನೂ ನೀಡುತ್ತಾನೆ.

ಸಿಂಹ: ಸಿಂಹ ರಾಶಿಯವರಿಗೆ ಸಪ್ತಮ ಶನಿಯು ಇರುವುದರಿಂದ ಗುರುವು ಏಕಾದಶದಲ್ಲಿ ಇದ್ದರೂ, ಹೆಜ್ಜೆಯನ್ನು ಹುಷಾರಾಗಿ ಹಾಕಬೇಕು. ರಸ್ತೆಯಲ್ಲಿ ಎಡವದಂತೆ ನಡೆಯಬೇಕು, ಶಿಸ್ತಿನಿಂದ ಒಳ್ಳೆಯ ದಾರಿಯಲ್ಲಿ ನಡೆದರೆ ನಿಮ್ಮನ್ನು ಸರ್ವೆಶ್ವರನೇ ಕಾಪಾಡುತ್ತಾನೆ, ಸೂರ್ಯನನ್ನು ಪ್ರಾರ್ಥಿಸಲು ಮರೆಯದಿರಿ, ಗುರು ಗಣೇಶನನ್ನು ಪೂಜಿಸಿ.

ಕನ್ಯಾ: ಗುರುವು ಅಕ್ಟೋಬರ್ 28ರಿಂದ ಉಚ್ಛರಾಶಿಗೆ ಒಂದು ನಾವು ಮಾಡಿದ ಪಾಪಗಳನ್ನೆಲ್ಲ ತೊಳೆಯುವನು. ಶನಿಯು 6ರಲ್ಲಿ ಇರುವುದರಿಂದ ವಿಘ್ನ. ತಿಲಾಕ್ಷತೆಯಿಂದ ಶಿವನಿಗೆ ಪೂಜೆ ಮಾಡಿರಿ. ಚಿಗಲಿ-ತಂಬಿಟ್ಟು ನೇವೇದ್ಯ ಮಾಡಿ. ಓಟದಲ್ಲಿ ಎಲ್ಲರಿಗಿಂತ ಮುಂದಿರುತ್ತೀರಿ, ಶುಭವಾಗುತ್ತದೆ.

ತುಲಾ: ತುಲಾ ರಾಶಿಯವರು ದುರ್ಗೆಯ ಕಟಾಕ್ಷ ಕಾಪಾಡಿಕೊಂಡರೆ ನಿಮ್ಮನ್ನು ಯಾರೂ ಅಲ್ಲಾಡಿಸಲಾಗದು. ಕಾಳರಾತ್ರಿ ಸರಸ್ವತಿಯನ್ನಾಗಲಿ ನವಮಿಯಲ್ಲಿ ಚಂಡಿಕೆಯನ್ನಾಗಲಿ, ದಶಮಿಯಲ್ಲಿ ಧೈರ್ಯಲಕ್ಷ್ಮೀ, ವಿಜಯಲಕ್ಷ್ಮೀಯನ್ನು ಪೂಜಿಸಿದರೆ ಕಾರ್ಯ ಸಿದ್ಧಿಯಾಗುತ್ತದೆ. ಚಂಚಲ ಮನಸ್ಸನ್ನು ಹತೋಟಿ ಯಲ್ಲಿಡಿ. ಮನಸ್ಸು ಚೆನ್ನಾಗಿದ್ದರೆ ಯಾವ ಕಾರ್ಯಗಳನ್ನೂ ಜಯಿಸಬೇಕಾದ ವರವನ್ನು ಪಡೆಯಬಹುದು.

ವೃಶ್ಚಿಕ: ಗುರುವು ದೀಪಾವಳಿಯ ನಂತರ 7ನೇ ಮನೆಗೆ ಬರುತ್ತಾನೆ. ನೀವು ಬಯಸಿದ ಕೆಲಸದಲ್ಲಿ ಕಾರ್ಯೋನ್ಮುಖರಾಗಿ ಸೊಬಗಿನ ಜೀವನ ನಡೆಸಬಹುದು. ಶಾಸ್ತ್ರಕಾರರು ಹೇಳಿರುವ ಮಾತನ್ನು ನೆನಪಿಡಿ. ಶಾಸ್ತ್ರವನ್ನು ಚರ್ಚೆ ಮಾಡಬಾರದು. ಶಾಸ್ತ್ರಗಳು ಇದ್ದಂತೆ ನಡೆದರೆ ಧರ್ಮಕ್ಕೆ ಬೆಲೆ ಕೊಟ್ಟಂತೆ. ಸುಬ್ರಹ್ಮಣ್ಯ ದೇವರನ್ನು ಸದಾಪೂಜಿಸಿ ಜೀವನವು ಸುಖವಾಗಿರುತ್ತದೆ.

ಧನುಸ್ಸು: ಗುರು ಬರುವ ಅಕ್ಟೋಬರ್ 28ರಂದು ಉಚ್ಚ ರಾಶಿಗೆ ಹೋಗುತ್ತಾನೆ. ಕಷ್ಟ ಕಾರ್ಪಣ್ಯ ಬರುವುದಿಲ್ಲ. ರಾಶಿಯ ಅಧಿಪತಿ ಗುರುವಾಗಿರುವುದರಿಂದ, ಅನ್ನ ಕೊಟ್ಟವನು ಯಾರನ್ನೂ ರಕ್ಷಿಸುವುದಿಲ್ಲ ಎಂಬಂತೆ ನಿಮ್ಮನ್ನು ಕಾಪಾಡುತ್ತಾನೆ. ಕೋಪ ತಾಪ ಬೇಡ, ಕೋಪ ಬಂದಾಗ ರಾಮನಾಮ ಜಪವಿರಲಿ, ಜೀವನವನ್ನು ಗೆಲ್ಲಲು ತಯಾರಿಯನ್ನು ನಡೆಸಿ. ಸುಖ ಸಂತೋಷದಿಂದ ಇರುವ ಕಾಲ

ಮಕರ: ಷಷ್ಠ ಗುರುವು ಸಪ್ತಮಕ್ಕೆ ಬಂದು ಶನಿಯು ಜನವರಿ ತಿಂಗಳಲ್ಲಿ ಮತ್ತೆ ಮೀನ ರಾಶಿಗೆ ಬಂದಾಗ ನಿಮ್ಮ ಆಕಾಂಕ್ಷೆ ಈಡೇರಿಸುತ್ತಾನೆ. ಭಗವಂತನನ್ನು ಏನನ್ನಾದರೂ ಕೊಡು ಆದರೆ ಎಲ್ಲವನ್ನು ನಿಭಾಯಿಸಲು ನನ್ನ ಬೆನ್ನ ಹಿಂದೆ ಇರು ಎಂದು ಪ್ರಾರ್ಥಿಸಿದರೆ ದೈವವು ನಿನ್ನಲ್ಲಿಯೇ ಇದ್ದು ಅಗೋಚರವಾಗಿ ಕೆಲಸಗಳನ್ನು ಮಾಡಿಕೊಡುತ್ತಾನೆ.

ಕುಂಭ: ಲಗ್ನದಲ್ಲಿ ಶನಿ- ರಾಹು ಇದ್ದು, ರಾಹು ಸಂಯುಕ್ತನಾಗಿದ್ದಾನೆ. ಅಲ್ಪ ಸಮಯದಲ್ಲಿ ಶನಿಯು ಮುಂದೆ ಹೋದರೂ ಲಗ್ನದಲ್ಲೇ ರಾಹುವು ಇರುವುದರಿಂದ ಆತ್ಮವನ್ನು ಶುದ್ಧವಾಗಿಟ್ಟುಕೊಂಡು ಉತ್ತುಂಗದಿ ಭಕ್ತಿಯಿಂದ ಭಗವಂತನ್ನು ಗೆಲ್ಲುವುದು ನಿಮ್ಮ ಕಾರ್ಯವಾದರೆ, ಖಂಡಿತವಾಗಿಯೂ ದೇವರೇ ನಿಮ್ಮೊಳಗೆ ಸೇರಿ ಕೆಲಸದಲ್ಲಿ ಜಯವನ್ನು ಕೊಡುತ್ತಾನೆ.

ಮೀನ: ಶನಿಯು ವಕ್ರಗತಿಯಲ್ಲಿ ದ್ವಾದಶ ರಾಹುವಿನೊಂದಿಗೆ ಸೇರಿರುವುದರಿಂದ ಸ್ನೇಹಿತರಲ್ಲಿ, ಸಹೋದರರಲ್ಲಿ ವಿರೋಧವನ್ನು ಕಟ್ಟಿಕೊಳ್ಳಬೇಡಿ. ಏನನ್ನೂ ಬಿಡಬಹುದು. ಆದರೆ ರಕ್ತಸಂಬಂಧ ಬಿಡುವುದು ಬಹಳ ಕಷ್ಟವಾಗುತ್ತದೆ. ಇನ್ನೊಬ್ಬರನ್ನು ದೂಷಿಸಿ ಪ್ರಯೋಜನವು ಇಲ್ಲ. ನಾವೇ ಉತ್ತಮರಾಗಿ ಎಲ್ಲರನ್ನು ಕ್ಷಮಿಸಿ ಮುಂದೆ ಸಾಗುವುದೇ ಜಾಣತನ. ಜನವರಿ 6 ನೇ ತಾರೀಖಿನಿಂದ 2027 ರವರೆಗೆ ಹುಷಾರಾಗಿ ಸಾಗಿ. ಕುಲದೇವರನ್ನು ಪೂಜಿಸಿ, ನರಸಿಂಹನನ್ನು ಸದಾ ಧ್ಯಾನ ಮಾಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net