ಶುಕ್ರ ಸಂಚಾರ; ಏಪ್ರಿಲ್ 19 ರಿಂದ ಈ ರಾಶಿಯವರ ಜೇಬು ಫುಲ್! ನಿಮ್ದೂ ಇದೇ ರಾಶಿನಾ? Astrology

Astrology (ಸಾಂದರ್ಭಿಕ ಚಿತ್ರ)
Astrology (ಸಾಂದರ್ಭಿಕ ಚಿತ್ರ)
Published on
Astrology: ಸಂಪತ್ತು, ವಿಲಾಸಿ ಜೀವನ, ಪ್ರೀತಿ ಮತ್ತು ಸಮೃದ್ಧಿಯ ಕಾರಕನಾದ ಶುಕ್ರ ಗ್ರಹವು ಈ ಏಪ್ರಿಲ್ 19 ರಂದು ತನ್ನ ಸ್ವಂತ ರಾಶಿಯಾದ ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹವೊಂದು ತನ್ನದೇ ರಾಶಿಗೆ ಮರಳುವುದೆಂದರೆ ಅದು ಅತ್ಯಂತ ಬಲಿಷ್ಠವಾಗುತ್ತದೆ ಎಂದರ್ಥ. ಇದನ್ನು ಶುಕ್ರನ 'ಸ್ವಗೃಹ ಪ್ರವೇಶ' ಎನ್ನಲಾಗುತ್ತದೆ.
ಶುಕ್ರನು ವೃಷಭ ರಾಶಿಗೆ ಪ್ರವೇಶ ಪಡೆದಾಗ ಕೆಲವು ರಾಶಿಚಕ್ರ ಚಿಹ್ನೆಗಳು ತಮ್ಮ ಜೀವನದಲ್ಲಿ ಸಕರಾತ್ಮಕ ಬದಲಾವಣೆಯನ್ನು ಅನುಭವಿಸುತ್ತವೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ, ಗ್ರಹದ ಬದಲಾವಣೆಯಿಂದ ಯಾವ ರಾಶಿಯವರು ಪ್ರಯೋಜನ ಪಡೆಯುತ್ತಾರೆ ಎಂದು ನೋಡೋಣ ಬನ್ನಿ..

ಕನ್ಯಾ ರಾಶಿ

ಈ ಶುಕ್ರ ಸಂಚಾರವು ಕನ್ಯಾರಾಶಿಯವರ ಅದೃಷ್ಟವನ್ನು ಬಲಪಡಿಸುತ್ತದೆ. ವೃತ್ತಿ ಮತ್ತು ವ್ಯವಹಾರ ಪ್ರಗತಿಗೆ ಹೊಸ ಅವಕಾಶಗಳನ್ನು ತರುತ್ತದೆ. ವಿದ್ಯಾಭ್ಯಾಸಕ್ಕಾಗಿ ವಿದೇಶ ಪ್ರಯಾಣ ನಡೆಸಲಿದ್ದೀರಿ. ಮನೆಯಲ್ಲಿ ಮತ್ತು ಕುಟುಂಬದಲ್ಲಿ ಉತ್ತಮ ವಾತಾವರಣವಿರಲಿದೆ. ಹೊಸ ಉದ್ಯೋಗ ಮಾಡುವವರು ಲಾಭವನ್ನು ತೆಗೆದುಕೊಳ್ಳಬಹುದು. ಹಳೆಯ ಹೂಡಿಕೆಗಳು ಲಾಭವನ್ನು ನೀಡಬಲ್ಲವು. ಸಂಗಾತಿಯೊಂದಿಗೆ ದೂರ ಪ್ರಯಾಣ ಕೈಗೊಳ್ಳಲಿದ್ದೀರಿ. 

ಕುಂಭ ರಾಶಿ

ಈ ಸಮಯದಲ್ಲಿ ಮನೆ, ಭೂಮಿ ಮತ್ತು ವಾಹನಗಳಿಗೆ ಸಂಬಂಧಿಸಿದ ಹೂಡಿಕೆಗಳನ್ನು ಮಾಡಲಿದ್ದೀರಿ. ಉದ್ಯೋಗಿಗಳಿಗೆ ಕೆಲಸದಲ್ಲಿ ಬಡ್ತಿ, ಸಂಬಳ ಹೆಚ್ಚಾಗಲಿದೆ. ಕುಟುಂಬದಲ್ಲಿ ಸಾಮರಸ್ಯ ಹೆಚ್ಚಾಗಲಿದ್ದು, ಸಂಗಾತಿಯೊಂದಿಗೆ ಉತ್ತಮ ಸಮಯವನ್ನು ಕಳೆಯಲಿದ್ದೀರಿ. ಪಿತ್ರಾರ್ಜಿತ ಆಸ್ತಿಗಳು ಲಾಭವನ್ನು ನೀಡಲಿವೆ. ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿಯನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ. 

ಮೀನ ರಾಶಿ

ಮೀನ ರಾಶಿಯವರು ವಿಶೇಷ ವ್ಯಕ್ತಿಯೊಂದಿಗೆ ಸಂಪರ್ಕ ನಡೆಸಲಿದ್ದಾರೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಸಾಲಭಾದೆಗಳು ತೀರಲಿವೆ. ಹಲವು ದಿನಗಳಿಂದ ಅರ್ಧದಲ್ಲೇ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳಲಿದೆ. ಆರ್ಥಿಕವಾಗಿ ಸಬಲಗೊಳ್ಳಲಿದ್ದೀರಿ. ಕೆಲಸದಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ಪಡೆಯಲಿದ್ದೀರಿ. ಗುರು-ಹಿರಿಯರ ಆಶೀರ್ವಾದದಿಂದ ಕೆಲಸದಲ್ಲಿ ಮನ್ನಣೆ ಸಿಗಲಿದೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಹೆಚ್ಚಾಗಲಿದ್ದು, ಸಂಗಾತಿಯೊಂದಿಗೆ ದೂರ ಪ್ರಯಾಣ ಮಾಡಲಿದ್ದೀರಿ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net