ಈ ಬಣ್ಣದ ಪಾದರಕ್ಷೆಗಳನ್ನು ಧರಿಸಿ ಮನೆಗೆ ಬಂದ್ರೆ ಲಕ್ಷ್ಮೀ ದೇವಿ ಕೋಪಗೊಳ್ಳುತ್ತಾಳಂತೆ! Vastu tips

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Vastu tips: ವಾಸ್ತು ಪ್ರಕಾರ, ರಾಹು ಮತ್ತು ಶನಿಯು ಪಾದಗಳೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದಾರೆಂದು ನಂಬಲಾಗಿದೆ. ಹಾಗೆಯೇ  ಪಾದರಕ್ಷೆಗಳ ಬಣ್ಣವು ಸಹ ಒಬ್ಬರ ಜೀವನದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತದೆ ಎಂದು ಹೇಳಲಾಗುತ್ತದೆ. ತಪ್ಪಾದ ಪಾದರಕ್ಷೆಗಳು ಜೀವನದಲ್ಲಿ ಅಡೆತಡೆಗಳನ್ನು ಉಂಟು ಮಾಡುತ್ತವೆ, ಹಾಗೆಯೇ ಸರಿಯಾದ ಪಾದರಕ್ಷೆಗಳ ಬಣ್ಣವು ಅದೃಷ್ಟ ದಿಕ್ಕಿನಲ್ಲಿ ಸಾಗಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.
ವಾಸ್ತು ಪ್ರಕಾರ, ಕಪ್ಪು, ಕಂದು ಮತ್ತು ಬಿಳಿ ಬಣ್ಣದ ಪಾದರಕ್ಷೆಗಳು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಈ ಬಣ್ಣಗಳು ಮಾನಸಿಕ ಸ್ಥಿರತೆ, ಶಾಂತಿ ಮತ್ತು ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತವೆ. ಮನೆಯಲ್ಲಿ ಗ್ರಹಗಳ ಸ್ಥಾನ ಬಲವಾಗಿರುತ್ತದೆ.  ಇದು ಆತ್ಮವಿಶ್ವಾಸವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.  ಆದಾಗ್ಯೂ,  ಜನ್ಮ ಕುಂಡಲಿಯಲ್ಲಿ ಶನಿ ದುರ್ಬಲವಾಗಿದ್ದರೆ ಕಪ್ಪು ಪಾದರಕ್ಷೆಗಳನ್ನು ಧರಿಸುವುದನ್ನು ತಪ್ಪಿಸುವುದು ಉತ್ತಮ ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ.
ಜ್ಯೋತಿಷ್ಯದ ಪ್ರಕಾರ, ಹಸಿರು ಬಣ್ಣವು ಬುಧ ಗ್ರಹದ ಸಂಕೇತವಾಗಿದೆ. ನಿಮ್ಮ ಪಾದಗಳಿಗೆ ಹಸಿರು ಬೂಟುಗಳನ್ನು ಧರಿಸುವುದರಿಂದ ನಿಮ್ಮ ಜನ್ಮ ಕುಂಡಲಿಯಲ್ಲಿ ಬುಧ ದುರ್ಬಲಗೊಳ್ಳುತ್ತದೆ. ಇದರಿಂದ ಬುದ್ಧಿವಂತಿಕೆ ಕಡಿಮೆಯಾಗಿ ಮಾತನಾಡಲು ತೊಂದರೆ ಉಂಟಾಗುತ್ತದೆ. ಹಾಗೆಯೇ ವ್ಯವಹಾರದಲ್ಲಿ ನಷ್ಟವನ್ನು ಅನುಭವಿಸಬೇಕಾಗುತ್ತದೆ.
ಆದಾಗ್ಯೂ, ವೇದಗಳು ಕೆಂಪು ಬೂಟುಗಳನ್ನು ಧರಿಸುವಂತೆ ಸೂಚನೆ ನೀಡುತ್ತದೆ. ಕೆಂಪು ಗ್ರಹವು ಮಂಗಳನ ಸಂಕೇತವಾಗಿದೆ. ಮಂಗಳ ಏನಾದರೂ ಕೋಪಗೊಂಡರೆ ವೈವಾಹಿಕ ತೊಂದರೆ, ಹಠಾತ್​ ಆರೋಗ್ಯ ಸಮಸ್ಯೆಗಳು, ಅಪಘಾತಗಳು ಸಂಭವಿಸುತ್ತವೆ ಎಂದು ಹೇಳಲಾಗುತ್ತದೆ. ಆದರಿಂದ ನಿಮ್ಮ ಪಾದಗಳಿಗೆ ಕೆಂಪು ಚಪ್ಪಲಿಯನ್ನು ಧರಿಸುವುದರಿಂದ ನಿಮ್ಮ ಜನ್ಮ ಕುಂಡಲಿಯಲ್ಲಿ ಮಂಗಳನ ಸ್ಥಾನವು ದುರ್ಬಲಗೊಳ್ಳುತ್ತದೆ.
ವಾಸ್ತು ಪ್ರಕಾರ, ಹಳದಿ ಬೂಟುಗಳನ್ನು ಧರಿಸುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಗುರು ದುರ್ಬಲವಾಗಿದ್ದರೆ, ಆರ್ಥಿಕ ಸಮಸ್ಯೆಗಳು, ಕೌಟುಂಬಿಕ ಕಲಹ ಮತ್ತು ದ್ರೋಹವನ್ನು ಮಾಡುವುದು ಹೆಚ್ಚಾಗಿರುತ್ತದೆ. ಹಾಗಾಗಿ ನಿಮ್ಮ ಬಳಿ ಏನಾದರೂ ಹಳದಿ ಬೂಟುಗಳಿದ್ದರೆ ಇಂದೇ ಹೊರಗೆ ಹಾಕಿ. 
ತಜ್ಞರು ಹೇಳುವಂತೆ ಇದೆಲ್ಲವೂ ನಂಬಿಕೆ ಮತ್ತು ಶಾಸ್ತ್ರೀಯ ವ್ಯಾಖ್ಯಾನವನ್ನು ಅವಲಂಬಿಸಿರುತ್ತದೆ. ಆದಾಗ್ಯೂ, ಬಣ್ಣವು ಮನಸ್ಥಿತಿಯ ಮೇಲೂ ಪರಿಣಾಮ ಬೀರುವುದರಿಂದ ಮನಸ್ಸಿಗೆ ನೆಮ್ಮದಿ ಕೊಡುವಂತಹ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net