ಈ ನಾಲ್ಕು ವಸ್ತುಗಳನ್ನು ಅಪ್ಪಿತಪ್ಪಿಯೂ ಯಾರಿಂದಲೂ ಪಡೆಯಬೇಡಿ..ಜೀವನ ಸರ್ವನಾಶವಾದಿತು ಎಚ್ಚರ!! |Vastu

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Vastu : ನಮ್ಮ ದೈನಂದಿನ ಜೀವನದಲ್ಲಿ, ನಾವು ಅಗತ್ಯವಿದ್ದಾಗ ಕಲವು ವಸ್ತುಗಳನ್ನು ಸಾಲವಾಗಿ ಪಡೆಯುತ್ತೇವೆ ಅಥವಾ ಸಾಲವಾಗಿ ನೀಡುತ್ತೇವೆ. ಈ ವಿಷಯವೂ ಸಹಜವಾಗಿ ಕಾಣಿಸಿದರೂ ವಾಸ್ತು(Vastu) ಶಾಸ್ತ್ರದ ಪ್ರಕಾರ ಕೆಲವು ವಸ್ತುಗಳನ್ನು ನೀಡುವುದು ಅಥವಾ ಪಡೆಯುವುದು ದುರದೃಷ್ಟವನ್ನು ಹೆಗಲಿಗೇರುವಂತೆ ಮಾಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿಯೊಂದು ವಸ್ತುವಿಗೂ ಒಂದು ನಿರ್ದಿಷ್ಟ ಶಕ್ತಿ ಇರುತ್ತದೆ. ಕೆಲವು ವಸ್ತುಗಳು ಸಕಾರಾತ್ಮಕತೆಯನ್ನು ಹೆಚ್ಚಿಸುತ್ತವೆ, ಆದರೆ ಇನ್ನು ಕೆಲವು ತಪ್ಪು ಸಮಯದಲ್ಲಿ ಅಥವಾ ತಪ್ಪು ರೀತಿಯಲ್ಲಿ ಬಳಸಿದರೆ ತಮ್ಮ ನಕಾರಾತ್ಮಕ ಶಕ್ತಿಯ ಮೂಲಕ ಜೀವನವನ್ನು ಹಾಳುಮಾಡುತ್ತದೆ.

1. ಗಡಿಯಾರ

ವಾಸ್ತು ಮತ್ತು ಜ್ಯೋತಿಷ್ಯದಲ್ಲಿ, ಗಡಿಯಾರಗಳನ್ನು ಸಮಯ, ಅದೃಷ್ಟ, ಪ್ರಗತಿ ಮತ್ತು ಜೀವನದ ವೇಗದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ನಿಮ್ಮ ಗಡಿಯಾರವನ್ನು ಬೇರೆಯವರಿಗೆ ಕೊಟ್ಟರೆ ನೀವು ನಿಮ್ಮ ಒಳ್ಳೆಯ ಸಮಯವನ್ನು ನೀಡಿದಂತಾಗುತ್ತದೆ. ನೀವು ಯಾವುದೇ ಕೆಟ್ಟ ಪರಸ್ಥಿತಿಯಲ್ಲಿರುವ ವ್ಯಕ್ತಿಯ ಗಡಿಯಾರವನ್ನು ತೆಗೆದುಕೊಂಡರೆ ಆ ವ್ಯಕ್ತಿಯ ದುಸ್ಥಿಯು ನಿಮ್ಮ ಹೆಗಲಿಗೇರುತ್ತದೆ.

2. ಕರವಸ್ತ್ರ

ಕರವಸ್ತ್ರವು ವೈಯಕ್ತಿಕ ಭಾವನೆಗಳು ಮತ್ತು ಮಾನಸಿಕ ಸ್ಥಿತಿಯ ಶಕ್ತಿಯನ್ನು ಹೀರಿಕೊಳ್ಳುತ್ತದೆ. ಆದ್ದರಿಂದ ನಿಮ್ಮ ಕರವಸ್ತ್ರವನ್ನು ಬೇರೆಯವರಿಗೆ ನೀಡಿದರೆ ಅಥವಾ ಬೇರೆಯವರ ಕರವಸ್ತ್ರವನ್ನು ನೀವು ಪಡೆದರೆ ಅವರ ಜೀವನದಲ್ಲಿ ಅನುಭವಿಸುತ್ತಿರುವ ಮಾನಸಿಕ ಸ್ಥಿತಿಯನ್ನು ನೀವು ಅನುಭವಿಸಬೇಕಾಗುತ್ತದೆ.

3. ಪೊರಕೆ

ಪೊರಕೆ ಕೇವಲ ಸ್ವಚ್ಛಗೊಳಿಸುವ ಸಾಧನವಲ್ಲ, ಅದನ್ನು ಮನೆಗೆ ಸಮೃದ್ಧಿ ಮತ್ತು ಲಕ್ಷ್ಮಿ ಶಕ್ತಿಯನ್ನು ತರುವ ಶಕ್ತಿಯಿದೆ ಎಂದು ಹೇಳಲಾಗುತ್ತದೆ. ಆದ್ದರಿಂದ ಬೇರೆ ಮನೆಯವರಿಗೆ ನಿಮ್ಮ ಮನೆಯ ಪೊರಕೆಯನ್ನು ನೀಡಿದರೆ ನಿಮ್ಮ ಮನೆಯಲ್ಲಿರುವ ಆರ್ಥಿಕ ಸ್ಥತಿ ನೀವು ಪೊರಕೆ ನೀಡದವರ ಮನೆಗೆ ವರ್ಗಾವಣೆಯಾಗುತ್ತದೆ.

4. ಸಂಜೆ ಹೊತ್ತು ಬಿಳಿ ವಸ್ತು ನೀಡಬೇಡಿ

ಸಂಜೆ ಎಂದರೆ ಶಕ್ತಿ ಬದಲಾವಣೆಯ ಸಮಯ. ಈ ಸಮಯದಲ್ಲಿ ಹಾಲು, ಮೊಸರು, ಸಕ್ಕರೆ, ಅಕ್ಕಿ ಮತ್ತು ಉಪ್ಪಿನಂತಹ ಬಿಳಿ ವಸ್ತುಗಳನ್ನು ನೀಡುವುದು ಅಶುಭವೆಂದು ಪರಿಗಣಿಸಲಾಗುತ್ತದೆ. ಈ ವಸ್ತುಗಳನ್ನು ಸಂಜೆ ಹೊತ್ತು ನೀಡುವುದರಿಂದ ಮನೆಯಲ್ಲಿ ಯಾವುದೇ ಶುಭ ಕಾರ್ಯಗಳು ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.(ಏಜೆನ್ಸೀಸ್).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net