

Hanging clothes: ಇಂದಿನ ದಿನಗಳಲ್ಲಿ ಮನೆಯಲ್ಲಿ ಕಪಾಟುಗಳಿದ್ದರೂ, ಕೂಡಾ ಬಟ್ಟೆಗಳನ್ನು ಕುರ್ಚಿಗಳ ಮೇಲೆ ಬಾಗಿಲುಗಳ ಹಿಂದೆ ಧರಿಸಿದ ಬಟ್ಟೆಗಳನ್ನು ನೇತುಹಾಕುತ್ತಾರೆ. ಈ ರೀತಿ ಮಾಡುವುದು ಒಳ್ಳೆಯ ಅಭ್ಯಾಸವಲ್ಲ ಎಂದು ವಾಸ್ತು ಶಾಸ್ತ್ರವು ಹೇಳುತ್ತದೆ. ಹೀಗೆ ಮಾಡುವುದರಿಂದ ಮನೆಯೊಳಗೆ ನಕರಾತ್ಮಕ ಶಕ್ತಿಯು ನಿಮಗೆ ಮತ್ತು ನಿಮ್ಮ ಕುಟುಂಬಕ್ಕೆ ಸಮಸ್ಯೆಯನ್ನುಂಟು ಮಾಡುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಬಾಗಿಲು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಸ್ಥಾನವನ್ನು ಹೊಂದಿದೆ. ಆದ್ದರಿಂದ, ಕೊಳಕು ಬಟ್ಟೆಗಳನ್ನು ಅದರ ಹಿಂದೆ ನೇತುಹಾಕುವುದರಿಂದ ಇದು ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ತಂದೊಡ್ಡುತ್ತವೆ. ಇದರಿಂದ ಸಕರಾತ್ಮ ಶಕ್ತಿಯ ಹರಿವಿಗೆ ತೊಂದರೆಯಾಗಿ ಕುಟುಂಬದ ಸದಸ್ಯರಿಗೆ ಅಸ್ವಸ್ಥತೆ, ಒತ್ತಡ ಮತ್ತು ಆರ್ಥಿಕ ಸಮಸ್ಯೆಗಳು ಉಂಟಾಗುತ್ತದೆ ಎಂದು ವಾಸ್ತು ತಿಳಿಸಿದೆ.
ಬಾಗಿಲಿನ ಹಿಂದೆ ಬಟ್ಟೆಗಳನ್ನು ನೇತುಹಾಕುವುದರಿಂದ ಮನೆಯ ಶಾಂತಿಯುತ ವಾತಾವರಣವು ಹಾಳಾಗುತ್ತದೆ. ಇದು ಮನೆಯ ಜನರ ನೆಮ್ಮದಿಗೆ ಭಂಗತರುತ್ತದೆ. ಅಂದಹಾಗೆ, ನೀವೇನಾದರೂ, ಮನೆಯ ಬಾಗಿಲಿಗೆ ಮೊಳೆ ಹೊಡೆದು ಬಟ್ಟೆಗಳನ್ನು ನೇತುಹಾಕುತ್ತಿದ್ದರೆ, ಇದು ಆರ್ಥಿಕವಾಗಿ ನಷ್ಟವನ್ನು ಅನುಭವಿಸುವಂತೆ ಮಾಡಲು ಪ್ರಾರಂಭಿಸುತ್ತದೆ. ಹಾಗೆಯೇ ಇದು ಬಾಗಿಲು ಹದಗೆಡಲು ಪ್ರಾರಂಭವಾಗುತ್ತದೆ.
ಕೊಳಕು ಬಟ್ಟೆಗಳನ್ನು ಬಾಗಿಲಿನ ಹಿಂದೆ ಒಣಗಿಸುವುದರಿಂದ ಇದು ಕೋಣೆಯಲ್ಲಿ ದುರ್ವಾಸನೆ ಬರುವ ಹಾಗೆ ಮಾಡುತ್ತದೆ. ಹಾಗೆಯೇ ಇದರಿಂದ ಮಾನಸಿಕ ಮತ್ತು ದೈಹಿಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಾಗಿಲಿನ ಹಿಂದೆ ಬಟ್ಟೆಗಳನ್ನು ಒಣಗಿಸಿದಾಗ ಇದು ಮಾನಸಿಕವಾಗಿ ನೆಮ್ಮದಿಯನ್ನು ಹಾಳು ಮಾಡಲು ಪ್ರಾರಂಭಿಸುತ್ತದೆ. ಅದನ್ನು ನೋಡಿದಾಗಲೆಲ್ಲಾ ಕಿರಿಕಿರಿ ಉಂಟಾಗಿ ಮನಸ್ಸನ್ನು ಘಾಸಿಗೊಳಿಸಬಹುದು. ಹಾಗಾಗಿ ಅವುಗಳನ್ನು ಪ್ರತ್ಯೇಕ ಸ್ಥಳದಲ್ಲಿ ಇರಿಸಿರಿ. (ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್ ನೆಟ್” ಜವಾಬ್ದಾರರಾಗಿರುವುದಿಲ್ಲ.