ಈ ಸರಳ ವಾಸ್ತು ಪರಿಹಾರಕ್ಕಾಗಿ ಮೊದಲು ಒಂದು ಪಟಿಕದ ತುಂಡನ್ನು ಖರೀದಿಸಿ, ಅದನ್ನು ಒಂದು ಸಣ್ಣ ಬಟ್ಟಲಿನಲ್ಲಿ ಹಾಕಿಡಬೇಕು. ನೆನಪಿಡಿ, ಈ ಬಟ್ಟಲಿನ ಮೇಲೆ ಯಾವುದೇ ಕಾರಣಕ್ಕೂ ಮುಚ್ಚಳವನ್ನು ಮುಚ್ಚಬಾರದು ಅಂದರೆ, ಓಪನ್ ಆಗಿರಬೇಕು. ನಂತರ ಇದನ್ನು ನಿಮ್ಮ ಮನೆ ಅಥವಾ ಕಚೇರಿಯ ಯಾವುದೇ ಮೂಲೆಯಲ್ಲಿ, ಇತರರ ಕಣ್ಣಿಗೆ ನೇರವಾಗಿ ಬೀಳದಂತಹ ಜಾಗದಲ್ಲಿ ಸುರಕ್ಷಿತವಾಗಿ ಇಡಬೇಕು. ಹೀಗೆ ಮಾಡುವುದರಿಂದ ನಿಮ್ಮ ಜಾಗದಲ್ಲಿರುವ ನೆಗೆಟಿವ್ ಶಕ್ತಿಗಳು ನಾಶವಾಗಿ, ಮನೆಯ ಎಲ್ಲಾ ವಾಸ್ತು ದೋಷಗಳು ಹಾಗೂ ಸಮಸ್ಯೆಗಳು ಹಂತಹಂತವಾಗಿ ದೂರವಾಗುತ್ತಾ ಸಾಗುತ್ತವೆ.