

ಮೇಷ: ಸುಖ ಅನುಭವಿಸುವ ವಾರ ಇದಾಗಿದೆ. ಜೀವನದಲ್ಲಿ ಹೊಸ ಬದಲಾವಣೆ ಬರುವ ಸಮಯ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆ ಹೆಚ್ಚು. ಬುದ್ಧಿವಂತಿಕೆಯಿಂದ ಕೆಲಸಕಾರ್ಯಗಳನ್ನು ಮುನ್ನಡೆಸಬೇಕು. ಆಧ್ಯಾತ್ಮಿಕವಾಗಿ ತೊಡಗಿಸಿಕೊಳ್ಳಿ. ಇದರಿಂದ ಬೇರೆಯವರಿಗೆ ಮಾರ್ಗದರ್ಶನ ನೀಡಿ ಮುನ್ನಡೆಸುತ್ತೀರ. ಈಶ್ವರನ ಆರಾಧನೆಯಿಂದ ಸಾರ್ಥಕತೆ.
ವೃಷಭ: ಈ ವಾರ ಬಹಳ ಜಾಗರೂಕತೆಯಿಂದಲೇ ಕೆಲಸಕಾರ್ಯಗಳನ್ನು ಮುನ್ನಡೆಸಿ. ಯಾರೊಂದಿಗೂ ಕಲಹ ಮಾಡುವುದು ಬೇಡವೇ ಬೇಡ. ಆರೋಗ್ಯದ ಬಗ್ಗೆ ವಿಶೇಷವಾದ ಎಚ್ಚರವನ್ನು ವಹಿಸಬೇಕಾಗುತ್ತದೆ. ಕೈಗೊಂಡ ಕೆಲಸಗಳು ಸುಗಮವಾಗಿ ಜರುಗಲು ಶ್ರದ್ಧಾಭಕ್ತಿಗಳಿಂದ ದುರ್ಗಾದೇವಿಯ ಆರಾಧನೆಯನ್ನು ಮಾಡಿರಿ.
ಮಿಥುನ: ವಕ್ರಸ್ಥಿತನಾದ ಬುಧಗ್ರಹನಿಂದ ಸಂತಾನ ಪ್ರಾಪ್ತಿಯ ಯೋಗವಿದೆ. ಸುಬ್ರಹ್ಮಣ್ಯನ ಆರಾಧನೆಯಿಂದ ಭಯವು ದೂರವಾಗುವುದು. ಸಪ್ತಮ ಸ್ಥಾನದಲ್ಲಿರುವ ಗುರುವು ಭೋಗಭಾಗ್ಯಗಳನ್ನು ತರುತ್ತಾನೆ. ಆರೋಗ್ಯ ಯಥಾಸ್ಥಿತಿಯಲ್ಲಿರುತ್ತದೆ. ಕೆಲಸದ ಒತ್ತಡದಿಂದ ದೇಹಾಲಸ್ಯ ಆಗಬಹುದು. ಶ್ರೀಮನ್ನಾರಾಯಣನ ಆರಾಧನೆ ಮಾಡಿ.
ಕಟಕ: ಪ್ರಯಾಣ ಯೋಗ ಬದಗಿಬರಲಿದೆ. ಭೂ ವ್ಯವಹಾರಗಳಿಂದ ಲಾಭವಿದೆ. ಆದಾಯಕ್ಕಿಂತ ಖರ್ಚು ಹೆಚ್ಚಾಗುವ ವಾರವಿದು. ಆರೋಗ್ಯದಲ್ಲಿ ಸುಧಾರಣೆ ಹೊಂದುವಿರಿ. ‘ಯತ್ರ ನಾರ್ಯಸ್ತು ಪೂಜ್ಯಂತೇ ರಮಂತೇ ತತ್ರ ದೇವತಾಃ’ ಅಂದರೆ ಸ್ತ್ರೀಯರನ್ನು ಗೌರವದಿಂದ ಕಾಣುವಲ್ಲಿ ದೇವತೆಗಳೇ ಇರುತ್ತಾರೆ. ಕೆಲಸದಲ್ಲಿ ಜಯ ಸಾಧಿಸುವಿರಿ. ದುರ್ಗೆ ಹಾಗೂ ವಿಷ್ಣುವನ್ನು ಆರಾಧಿಸಿ.
ಸಿಂಹ: ಆರೋಗ್ಯದಲ್ಲಿ ಸುಧಾರಣೆಯನ್ನು ಹೊಂದುವಿರಿ. ಕಾರ್ಯಕ್ಷೇತ್ರದಲ್ಲಿ ಸಂತೋಷದ ವಾತಾವರಣವಿರುತ್ತದೆ. ಸಂಸಾರದ ವಾತಾವರಣ ಶಾಂತಿಯಿಂದ ಕೂಡಿರುತ್ತದೆ. ಎಚ್ಚರಿಕೆಯಿಂದ ಕೆಲಸಕಾರ್ಯಗಳನ್ನು ಮಾಡಿದಲ್ಲಿ ಗೆಲುವು ನಿಮ್ಮದಾಗಲಿದೆ. ಸೂರ್ಯನಾರಾಯಣನ ಆರಾಧನೆಯನ್ನು ಮಾಡಿ. ವ್ಯವಹಾರಗಳಲ್ಲಿ ಸ್ತ್ರೀಯರಿಂದ ಲಾಭವಿದೆ.
ಕನ್ಯಾ: ಕೆಲಸದಲ್ಲಿ ಹಲವಾರು ತೀತಿಯ ಅಡೆತಡೆಗಳು ಬರಬಹುದು. ಅದಕ್ಕೆ ಅಂಜದೆ ಅಳುಕದೆ ಧೈರ್ಯದಿಂದ ಮುನ್ನಡೆಯಿರಿ. ಶತ್ರುಗಳಿಂದ ಸಾಧ್ಯವಾದಷ್ಟು ದೂರ ಉಳಿಯಿರಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಬಂಧುಗಳೊಡನೆ ಯಾವ ಕಾರಣಕ್ಕೂ ಮನಸ್ತಾಪ ಮಾಡಿಕೊಳ್ಳುವುದು ಬೇಡ. ವಿಷ್ಣುವಿನ ಆರಾಧನೆ ಮಾಡಿ.
ತುಲಾ : ಈ ವಾರ ನಿಮಗೆ ಮನಃಶಾಂತಿ ಇರುತ್ತದೆ. ಕಾಡುತ್ತಿರುವ ಒತ್ತಡಗಳಿಂದ ಮುಕ್ತಿಯಿದೆ. ಆದರೆ ಯಾರೊಡನೆಯೂ ವೃಥಾ ಜಗಳ, ವಾದವಿವಾದಗಳು ಬೇಡ. ಹೊಸ ವ್ಯವಹಾರಗಳಲ್ಲಿ ಕೈಹಾಕುವ ಮೊದಲು ಜಾಗರೂಕರಾಗಿರಿ. ಧನವ್ಯಯವಾಗುವ ಸಾಧ್ಯತೆ ಹೆಚ್ಚು. ವಿದ್ಯಾರ್ಥಿಗಳಿಗೆ ಶುಭ. ಜಗನ್ಮಾತೆಯಾದ ಶ್ರೀ ದುರ್ಗೆಯನ್ನು ಆರಾಧಿಸಿ.
ವೃಶ್ಚಿಕ: ದ್ವಿತೀಯದಲ್ಲಿ ಗುರುವಿನ ಸಂಚಾರ ಇರುವುದರಿಂದ ವ್ಯವಹಾರಗಳಲ್ಲಿ ಧನಲಾಭವಾಗುತ್ತದೆ. ಈಗ ತಾನೇ ಸಾಡೇಸಾತಿ ಮುಗಿದಿರುವುದರಿಂದ, ನೀವು ಮಾಡುವ ಕಾರ್ಯಗಳು ಯಾವುದೇ ಬಗೆಯ ಅಡೆತಡೆಗಳೂ ಇಲ್ಲದೆ ನೆರವೇರುತ್ತವೆ. ಆರೋಗ್ಯದ ಬಗ್ಗೆ ಮಾತ್ರ ಹೆಚ್ಚು ಕಾಳಜಿ ವಹಿಸಿ. ಸುಬ್ರಹ್ಮಣ್ಯನೇ ನಿಮಗೆ ಆರಾಧ್ಯದೈವ.
ಧನುಸ್ಸು: ನಿಮ್ಮ ಸಂಸಾರದವರೇ ನಿಮಗೆ ಬೆನ್ನೆಲುಬಾಗಿರುತ್ತಾರೆ. ಮನಸ್ಸನ್ನು ಕಲಕುವ ಕೆಲವು ಸಂದರ್ಭಗಳು ಎದುರು ಬಂದರೂ ಧೈರ್ಯದಿಂದ ಮುನ್ನಡೆಯಿರಿ. ಕೋರ್ಟ್- ಕಚೇರಿ ವ್ಯವಹಾರಗಳಲ್ಲಿ ಎಚ್ಚರಿಕೆ ವಹಿಸಿ. ಜವಾಬ್ದಾರಿಯಿಂದ ವರ್ತಿಸಿ. ಆರೋಗ್ಯದಲ್ಲಿ ಸುಧಾರಣೆ ಇರುತ್ತದೆ. ರುದ್ರ ಹಾಗೂ ದತ್ತಾತ್ರೇಯನ ಆರಾಧನೆ ಮಾಡಿ.
ಮಕರ: ಮನೆಯಲ್ಲಿ ಜಗಳ-ಕದನದ ವಾತಾವರಣವಿದ್ದರೂ ಎಲ್ಲವನ್ನೂ ಸುಧಾರಿಸುವ ಜಾಣ್ಮೆ ನಿಮ್ಮದಾಗಲಿ. ಭೂವ್ಯವಹಾರಗಳಲ್ಲಿ ಉತ್ತಮ ಆದಾಯ ಬಂದೊದಗುತ್ತದೆ. ಯಾರೊಂದಿಗೂ ವಾದದಲ್ಲಿ ತೊಡಗಬೇಡಿ. ಉನ್ನತ ವ್ಯಾಸಂಗದ ಆಕಾಂಕ್ಷಿಗಳಿಗೆ ಈ ವಾರ ಶುಭದಾಯಕವಾಗಿದೆ. ಆಂಜನೇಯ ಹಾಗೂ ಶ್ರೀ ದತ್ತಾತ್ರೇಯನನ್ನು ಆರಾಧಿಸುವುದರಿಂದ ಒಳಿತಾಗಲಿದೆ.
ಕುಂಭ: ಸಮಾಧಾನಚಿತ್ತರಾಗಿಯೇ ವ್ಯವಹಾರಗಳನ್ನು ನಡೆಸಿ. ನಿಮ್ಮ ಕೆಲಸದ ಒತ್ತಡ ಮತ್ತು ಜವಾಬ್ದಾರಿಗಳು ಹೆಚ್ಚಾಗಲಿವೆ. ಸಣ್ಣಪುಟ್ಟ ಆರೋಗ್ಯದ ಸಮಸ್ಯೆ ಬರುತ್ತಿರುತ್ತದೆ. ದೇಹಾಲಸ್ಯ ಇರುತ್ತದೆ. ಮೇಲಧಿಕಾರಿಗಳ ಜತೆಗೆ ವಾದ ಮಾಡುವುದು ಬೇಡ. ಪ್ರತಿನಿತ್ಯ ಬೆಳಗ್ಗೆ ತಪ್ಪದೆ ಹನುಮಾನ್ ಚಾಲೀಸಾ ಸ್ತೋತ್ರವನ್ನು ಪಠಿಸಿ.
ಮೀನ: ಮಿಶ್ರ ಫಲವಿರುವ ವಾರ ಇದಾಗಿದೆ. ಮೊದಲ ಅವಧಿಯಲ್ಲಿ ವ್ಯಾಪಾರ-ವ್ಯವಹಾರಗಳಲ್ಲಿ ಲಾಭ ಕಂಡುಬರುತ್ತದೆ. ಮಾಡಿದ ಕೆಲಸಗಳಲ್ಲಿ ವಿಜಯವನ್ನು ಸಾಧಿಸುವಿರಿ. ಕೋಪವನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ನಿಮ್ಮ ಜೀವನದಲ್ಲಿ ತ್ಯಾಗ-ಪರೋಪಕಾರ ಬಹು ಮುಖ್ಯ. ಶಿವ ಹಾಗೂ ದತ್ತಾತ್ರೇಯನ ಆರಾಧನೆಯನ್ನು ಕೈಗೊಳ್ಳಿ.