ನಿಮ್ಮ ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಬೇಕೆಂದರೆ ಈ ವಾಸ್ತು ನಿಯಮಗಳನ್ನು ಪಾಲಿಸಿ! Vaastu Tips

untitled-design-3-69099a2bd10ab
Published on

Vaastu Tips: ಇಂದಿನ ದಿನಗಳಲ್ಲಿ ಹಲವಾರು ಜನರು ವಾಸ್ತುವನ್ನು ನಂಬುತ್ತಾರೆ. ಇದರ ಪ್ರಕಾರ ಮನೆ ಅಥವಾ ಕೆಲಸದ ವಿಷಯಗಳಲ್ಲಿ ಸರಿಯಾದ ದಿಕ್ಕುಗಳನ್ನು ಕಾಯ್ದುಕೊಳ್ಳುವುದರಿಂದ ಮನೆಯಲ್ಲಿ ಆರ್ಥಿಕ ಹಾಗೂ ಸಂತೋಷ ಬಲಶಾಲಿಯಾಗಿಸಬಹುದು ಎಂದು ತಿಳಿಸಿದೆ. ನೀವೇನಾದರೂ, ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ಬಯಸಿದರೆ, ಮನೆ ಮತ್ತು ಕಚೇರಿಗಳಲ್ಲಿ ಈ ವಾಸ್ತುಗಳನ್ನು ಪಾಲಿಸುವುದು ಉತ್ತಮ.

1. ಹಣವನ್ನು ಇಡಲು ಸೂಕ್ತ ದಿಕ್ಕನ್ನು ಆಯ್ಕೆ ಮಾಡಿ

ವಾಸ್ತು ಶಾಸ್ತ್ರದ ಪ್ರಕಾರ, ಹಣ, ಆಭರಣ ಅಥವಾ ಯಾವುದೇ ಇತರ ಆಸ್ತಿಯನ್ನು ಸುರಕ್ಷಿತವಾಗಿಡಲು ಸರಿಯಾದ ದಿಕ್ಕನ್ನು ಆಯ್ದುಕೊಳ್ಳಬೇಕು. ಇದು ನಿಮ್ಮ ಮನೆಯ ಉತ್ತರ ಅಥವಾ ಈಶಾನ್ಯ ದಿಕ್ಕಿನಲ್ಲಿ ನಿಮ್ಮ ಹಣ ಅಥವಾ ಆಭರಣವನ್ನು ಇಡುವುದರಿಂದ ನಿಮ್ಮ ಸಂಪತ್ತು ಹೆಚ್ಚಾಗುತ್ತದೆ.

ಈ ರೀತಿ ಮಾಡುವುದರಿಂದ ಲಕ್ಷ್ಮೀ ದೇವಿಯ ವಿಶೇಷ ಆಶೀರ್ವಾದ ದೊರೆಯುತ್ತದೆ. ನಿಮ್ಮ ಮನೆಗೆ ಆರ್ಥಿಕ ಸಮೃದ್ಧಿ ಹೆಚ್ಚಾಗುತ್ತದೆ. ಈ ದಿಕ್ಕಿನಲ್ಲಿ ಲಕ್ಷ್ಮೀ ದೇವಿಯ ಚಿತ್ರವನ್ನು ಇಡುವುದರಿಂದ ಇದು ಸಂಪತ್ತನ್ನು ಹೆಚ್ಚಿಸುವುದಲ್ಲದೇ, ನಿಮ್ಮ ಮನೆಗೆ ಶಾಂತಿ, ಸಂತೋಷ ಮತ್ತು ಸಕರಾತ್ಮಕ ಶಕ್ತಿಯನ್ನು ನೀಡುತ್ತದೆ.

2. ಮುಖ್ಯದ್ವಾರದ ಬಗ್ಗೆ ಗಮನವಿರಲಿ

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಖ್ಯ ದ್ವಾರ ಹೇಗೆ ಇರುತ್ತದೆ ಅದರ ಮೇಲೆ ನಿಮ್ಮ ಮನೆಗೆ ಸಮೃದ್ಧಿ ಬಹಳ ಮುಖ್ಯ ಎಂದು ನಂಬಲಾಗಿದೆ. ಮುಖ್ಯ ದ್ವಾರದ ಮೂಲಕ ಧನಾತ್ಮಕ ಶಕ್ತಿ ಮತ್ತು ಸಮೃದ್ಧಿ ಮನೆಗೆ ಬರುತ್ತದೆ. ಆದರಿಂದ ಮನೆಯ ಮುಖ್ಯ ದ್ವಾರಕ್ಕೆ ಓಂ, ಸ್ವಸ್ತಿಕ, ಕಲಶ ಅಥವಾ ಶಂಖ ದಂತಹ ಶುಭ ಚಿಹ್ನೆಗಳನ್ನು ಮುಖ್ಯ ಬಾಗಿಲಿನ ಮೇಲೆ ಅಂಟಿಸಬೇಕು. ಈ ಚಿಹ್ನೆಗಳು ಮನೆಯನ್ನು ಸಕಾರಾತ್ಮಕ ಶಕ್ತಿಯಿಂದ ತುಂಬಿಸಿ ಮನೆಯಲ್ಲಿ ಸಂಪತ್ತು ಮತ್ತು ಶಾಂತಿಗೆ ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ.

ಅಂದಹಾಗೆ, ಪ್ರತಿನಿತ್ಯ ಸಂಜೆ ಮುಖ್ಯ ದ್ವಾರದಲ್ಲಿ ದೀಪ ಹಚ್ಚುವುದನ್ನು ತುಂಬಾ ಶುಭವೆಂದು ಪರಿಗಣಿಸಲಾಗುತ್ತದೆ. ದೀಪದ ಬೆಳಕು ಮನೆಯನ್ನು ಬೆಳಗುವುದಲ್ಲದೇ, ಮನೆಯ ಸಂಪತ್ತನ್ನು ಹೆಚ್ಚಿಸುತ್ತದೆ.

3. ಮನೆಯಲ್ಲಿ ಸ್ವಚ್ಛತೆ ಕಾಪಾಡಿ

ವಾಸ್ತು ಪ್ರಕಾರ, ಲಕ್ಷ್ಮಿ ದೇವಿಯು ಸ್ವಚ್ಛ ಮತ್ತು ಶುದ್ಧವಾಗಿರುವ ಮನೆಗಳಲ್ಲಿ ಮಾತ್ರ ವಾಸಿಸುತ್ತಾಳೆ. ಆದರಿಂದ ಮನೆಯ ಮೂಲೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಇದರಿಂದ ಲಕ್ಷ್ಮೀಯು ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ.

ಮನೆಯಲ್ಲಿರುವ ದೇವಸ್ಥಾನ ಮತ್ತು ಪೂಜಾ ಸ್ಥಳವನ್ನು ನಿಯಮಿತವಾಗಿ ಸ್ವಚ್ಛಗೊಳಿಸಬೇಕು. ಯಾವುದೇ ಕಾರಣಕ್ಕೂ ಧೂಳು, ಕೊಳಕು ಸಂಗ್ರಹಿಸವಾಗದಂತೆ ಬಿಡಬೇಕು. ದೈನಂದಿನ ಪ್ರಾರ್ಥನೆ ಮತ್ತು ದೀಪಗಳನ್ನು ಬೆಳಗಿಸಿ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ.

4. ಅಡುಗೆಮನೆ ನಿರ್ದೇಶನ

ಅಡುಗೆಮನೆಯು ಕುಟುಂಬದ ಆರೋಗ್ಯ, ಶಕ್ತಿ, ಮತ್ತು ಸಮೃದ್ಧಿಗೆ ನೇರವಾಗಿ ಸಂಬಂಧಿಸಿದೆ. ಇದು ವಾಸ್ತು ಪ್ರಕಾರ, ಅಡುಗೆ ಮನೆಯ ಸರಿಯಾದ ಸ್ಥಳ ಮತ್ತು ಅದರ ಶುಚಿತ್ವ ಮನೆಯನ್ನು ಸಮೃದ್ಧಿಯಾಗಿರಿಸುವಂತೆ ಮಾಡುತ್ತದೆ. ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯನ್ನು ಇಡುವುದರಿಂದ ಲಕ್ಷ್ಮೀ ದೇವತೆ ಹಾಗೂ ಅಗ್ನಿ ದೇವತೆ ಮೆಚ್ಚುತ್ತಾಳೆ. (ಏಜೆನ್ಸೀಸ್)ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net