ವೃಶ್ಚಿಕ ರಾಶಿ ನವೆಂಬರ್ 16 ರಿಂದ ಅದೃಷ್ಟ ನಿಮ್ಮ ಕಡೆ ಇರುತ್ತದೆ. ಈ ವೇಳೆ ಸೂರ್ಯನು ಈ ರಾಶಿಗೆ ಪ್ರವೇಶ ನಡೆಸುವುದರಿಂದ ನಿಮ್ಮ ಜಾಣ್ಮೆ, ಶಕ್ತಿ, ಧೈರ್ಯ, ಕೌಶಲ್ಯ, ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಇದರಿಂದ ನೀವು ಕೆಲಸ ಮಾಡುವ ಕಚೇರಿಯಲ್ಲಿ ಮೇಲಾಧಿಕಾರಿಗಳ ಪ್ರಶಂಸೆಯನ್ನು ಪಡೆಯುತ್ತೀರಿ. ಆದಾಯ ಮತ್ತು ಬಡ್ತಿಗಳಲ್ಲಿ ಹೆಚ್ಚಳವಾಗುವ ನಿರೀಕ್ಷೆ ಇದೆ. ಈ ಸಮಯದಲ್ಲಿ ಉತ್ತಮ ಲಾಭಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ.