ಈ ಮೂರು ರಾಶಿಯವರೇ ಹೆಚ್ಚು ಒನ್ ಸೈಡ್ ಪ್ರೇಮಿಗಳಾಗಿರುತ್ತಾರಂತೆ! ನೀವೂ ಇದೇ ರಾಶಿನಾ? Zodiac Signs
ಸಾಂದರ್ಭಿಕ ಚಿತ್ರ
Published on:
Copied
Follow Us
Zodiac Signs : ಸಾಮಾನ್ಯವಾಗಿ, ಈ ಜಗತ್ತಿನಲ್ಲಿರುವ ಎಲ್ಲವೂ ಪ್ರೀತಿಯನ್ನು ಅವಲಂಬಿಸಿರುತ್ತವೆ. ಅದಕ್ಕಾಗಿಯೇ ಮನುಷ್ಯರು ಪ್ರೀತಿಗಾಗಿ, ಪ್ರಣಯಕ್ಕಾಗಿ ಹಂಬಲಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಕೆಲವರು ಪ್ರೀತಿಯನ್ನು ಬಹಿರಂಗವಾಗಿ ಒಪ್ಪಿಕೊಳ್ಳುತ್ತಾರೆ ಆದರೆ, ಕೆಲವರು ತಮ್ಮ ಭಾವನೆಗಳನ್ನು ಯಾರಿಗೂ ಹೇಳಿಕೊಳ್ಳದೇ ತಮ್ಮಲ್ಲೇ ಇಟ್ಟುಕೊಳ್ಳುವ ಪ್ರವೃತ್ತಿ ಹೊಂದಿರುತ್ತಾರೆ.
ಅಂದಹಾಗೆ, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವ್ಯಕ್ತಿಯ ರಾಶಿಚಕ್ರ ಮತ್ತು ನಕ್ಷತ್ರ ಚಿಹ್ನೆಯು ಆತನ ಭವಿಷ್ಯದ ಜೀವನ, ಆರ್ಥಿಕ ಪರಿಸ್ಥಿತಿ, ವ್ಯಕ್ತಿತ್ವದ ಲಕ್ಷಣಗಳು ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ನೇರವಾಗಿ ಪ್ರಭಾವ ಬೀರುತ್ತದೆ ಎಂದು ನಂಬಲಾಗಿದೆ.
ಅದೇ ರೀತಿ, ಕೆಲವು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದ ಜನರು ಪ್ರೀತಿಯ ವಿಷಯಕ್ಕೆ ಬಂದಾಗ ತುಂಬಾ ನಾಚಿಕೆಪಡುತ್ತಾರೆ ಮತ್ತು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ಸದಾ ಹಿಂಜರಿಯುತ್ತಾರಂತೆ. ಹಾಗಾದರೆ, ಯಾವ ರಾಶಿಯವರು ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಲು ತುಂಬಾ ನಾಚಿಕೆಪಟ್ಟುಕೊಳ್ಳುತ್ತಾರೆ ಅನ್ನೋದನ್ನು ನಾವೀಗ ತಿಳಿಯೋಣ.
ಕರ್ನಾಟಕ ರಾಶಿ
ಪ್ರೀತಿಯ ಗ್ರಹವಾದ ಶುಕ್ರನ ಆಳ್ವಿಕೆಯಡಿಯಲ್ಲಿ, ಕರ್ಕಾಟಕ ರಾಶಿಯವರು ಸ್ವಾಭಾವಿಕವಾಗಿ ಪ್ರೀತಿಯಲ್ಲಿ ಹೆಚ್ಚು ತೊಡಗಿಸಿಕೊಂಡಿರುತ್ತಾರೆ ಮತ್ತು ಪ್ರೀತಿಯನ್ನು ನೀಡುವ ಪ್ರವೃತ್ತಿ ಹೊಂದಿರುತ್ತಾರೆ. ಆದರೆ, ಈ ರಾಶಿಯವರು ತಮ್ಮ ಪ್ರೀತಿಪಾತ್ರರಿಗೆ ಬಹಿರಂಗವಾಗಿ ಪ್ರೀತಿಯನ್ನು ವ್ಯಕ್ತಪಡಿಸಲು ಹೆಣಗಾಡುತ್ತಾರೆ. ಅವರು ಜೀವನದುದ್ದಕ್ಕೂ ಒನ್ ಸೈಡ್ ಪ್ರೇಮಿಗಳಾಗಿಯೇ ಉಳಿಯುತ್ತಾರಂತೆ. ಈ ರಾಶಿಯವರು ತುಂಬಾ ಪ್ರೀತಿಸುವವರಾಗಿದ್ದರೂ, ತಮ್ಮ ಭಾವನಾತ್ಮಕತೆ ಮತ್ತು ಸಂಕೋಚ ಸ್ವಭಾವ ಪ್ರೇಮ ಜೀವನಕ್ಕೆ ಪ್ರಮುಖ ಅಡಚಣೆಯಾಗಬಹುದು.
ಕನ್ಯಾ ರಾಶಿ
ಗ್ರಹಗಳ ಅಧಿಪತಿ ಬುಧನಿಂದ ಆಳಲ್ಪಡುವ ಕನ್ಯಾ ರಾಶಿಯವರು ಸ್ವಾಭಾವಿಕವಾಗಿಯೇ ಎಲ್ಲದರಲ್ಲೂ ಪರಿಪೂರ್ಣತೆ ಮತ್ತು ಸೊಬಗನ್ನು ನಿರೀಕ್ಷಿಸುವ ಪ್ರವೃತ್ತಿ ಹೊಂದಿರುತ್ತಾರೆ. ಈ ರಾಶಿಯವರು ಯಾವುದೇ ವಿಷಯವನ್ನು ವಿಶ್ಲೇಷಿಸಲು ಒಲವು ತೋರುತ್ತಾರೆ ಮತ್ತು ಈ ಗುಣವು ಅವರಿಗೆ ಪ್ರೀತಿಯನ್ನು ವ್ಯಕ್ತಪಡಿಸಲು ಹೆಚ್ಚು ಸಮಯ ತೆಗೆದುಕೊಳ್ಳುವಂತೆ ಮಾಡುತ್ತದೆ. ವಿಶೇಷವಾಗಿ ಪ್ರೀತಿಯ ವಿಷಯಕ್ಕೆ ಬಂದಾಗ ಅವರು ಸ್ವಾಭಾವಿಕವಾಗಿ ತುಂಬಾ ನಾಚಿಕೆಪಡುವುದರಿಂದ, ಕೆಲವೊಮ್ಮೆ ತಮ್ಮ ಪ್ರೀತಿಯನ್ನು ತಮ್ಮೊಳಗೆ ಮರೆಮಾಡುತ್ತಾರೆ.
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರು ಹುಟ್ಟಿನಿಂದಲೇ ತಮ್ಮ ನಿಗೂಢ ಮತ್ತು ರಹಸ್ಯ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದಾರೆ. ಇವರು ಸಂತೋಷದ ಪ್ರಣಯ ಸಂಬಂಧವನ್ನು ಬಯಸಿದರು ಕೂಡ ಯಾವಾಗಲೂ ಸಂಯಮದಿಂದ ಇರಲು ಇಷ್ಟಪಡುತ್ತಾರೆ. ಅವರ ಈ ವಿಶಿಷ್ಟ ನಡವಳಿಕೆ ಪ್ರೀತಿಯನ್ನು ವ್ಯಕ್ತಪಡಿಸುವಲ್ಲಿ ಪ್ರಮುಖ ಅಡಚಣೆಯಾಗಬಹುದು. ಈ ರಾಶಿಯವರು ನಿಗೂಢತೆಯ ಮುಸುಕಿನೊಂದಿಗೆ ಕಾಂತೀಯ ಮೋಡಿ ಹೊಂದಿರುತ್ತಾರೆ. ಇವರು ಪ್ರೀತಿಯ ವಿಷಯಗಳಲ್ಲಿ ಯಾವಾಗಲೂ ನಾಚಿಕೆ ಸ್ವಭಾವದವರು ಎಂದು ತಿಳಿದುಬಂದಿದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ನಂಬಿಕೆಗಳು ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್ಸೈಟ್ ಜವಾಬ್ದಾರರಾಗಿರುವುದಿಲ್ಲ.