ನಿತ್ಯ ಭವಿಷ್ಯ| ಮಾಡದ ತಪ್ಪಿಗೆ ಈ ರಾಶಿಯವರ ಜೀವನದಲ್ಲಿ ಅಪವಾದಗಳು ಬೆನ್ನತ್ತಿಯಾವು...

NITYA-BHAVISHYA-300x200
Published on

ಮೇಷ: ಸ್ನೇಹಿತರಿಂದ ಸಹಾಯ ಅಪೇಕ್ಷಿಸದೆ ಆತ್ಮಾಭಿಮಾನದಿಂದ ಇರಿ. ವ್ಯರ್ಥ ಧನಹಾನಿ. ದಿನಾಂತ್ಯದಲ್ಲಿ ಬಂಧುಗಳ ಆಗಮನ. ಶುಭಸಂಖ್ಯೆ: 7

ವೃಷಭ: ಮನೆಯಲ್ಲಿ ಆಹ್ಲಾದಕರ ವಾತಾವರಣ. ಕೈಗೊಂಡ ಕೆಲಸದಲ್ಲಿ ಕಾರ್ಯಸಿದ್ಧಿ. ಹಿತಕರ ವಿದ್ಯಮಾನಗಳು ನಡೆಯುತ್ತವೆ. ಶುಭಸಂಖ್ಯೆ: 1

ಮಿಥುನ: ಸಾಲಗಾರರಿಂದ ಕಿರಿಕಿರಿ ಉಂಟಾಗಬಹುದು. ನಿಮ್ಮ ಪ್ರತಿಭೆ ಪ್ರದರ್ಶನಕ್ಕೆ ಇದು ಸಕಾಲ. ಅವ್ಯಕ್ತ ಭೀತಿ. ಕುಲದೇವರನ್ನು ಸ್ಮರಿಸಿ. ಶುಭಸಂಖ್ಯೆ: 7

ಕಟಕ: ಮಾಡದ ತಪ್ಪಿಗೆ ಜೀವನದಲ್ಲಿ ಅಪವಾದಗಳು ಬೆನ್ನತ್ತಿಯಾವು. ಕಾರ್ಯಸಾಧನೆಯ ಸಾಧ್ಯತೆ ಕಡಿಮೆ. ಆರೋಗ್ಯದಲ್ಲಿ ಚೇತರಿಕೆ. ಶುಭಸಂಖ್ಯೆ: 8

ಸಿಂಹ: ಕುಟುಂಬದಲ್ಲಿ ಮನಸ್ತಾಪ. ಸ್ಪರ್ಧಾಳುಗಳಿಗೆ ಅಂತಿಮ ಹಂತದಲ್ಲಿ ಸೋಲು. ಅವಿವಾಹಿತರಿಗೆ ವಿವಾಹ ಪ್ರಯತ್ನದಲ್ಲಿ ಯಶ. ಶುಭಸಂಖ್ಯೆ: 7

ಕನ್ಯಾ: ವ್ಯಾಪಾರ ಉದ್ಯೋಗದಲ್ಲಿ ನಿರೀಕ್ಷಿತ ಪ್ರಗತಿ. ವಿಶೇಷ ಅಧಿಕಾರ ಪ್ರಾಪ್ತಿ. ಮನೋಧೈರ್ಯ. ಬಂಧು ಮಿತ್ರರ ಸಹಾಯ ಸಿಗುವುದು. ಶುಭಸಂಖ್ಯೆ: 3

ತುಲಾ: ಟೀಕಾಕಾರರಿಗೆ ಕಾರ್ಯವೈಖರಿಯಿಂದ ಉತ್ತರ ಕೊಡುವಿರಿ. ಭೂ ವ್ಯವಹಾರದಲ್ಲಿ ಮೋಸ ಹೋಗುವ ಸಾಧ್ಯತೆ. ಧನ ನಷ್ಟ. ಶುಭಸಂಖ್ಯೆ: 2

ವೃಶ್ಚಿಕ: ನೋವು ಉಂಟುಮಾಡುವ ಘಟನೆಗಳು ನಡೆಯಬಹುದು. ವಿದ್ಯಾರ್ಥಿಗಳಿಗೆ ಯಶಸ್ಸು. ಪ್ರತಿಭಾನ್ವಿತರಿಗೆ ಉತ್ತಮ ಅವಕಾಶ. ಶುಭಸಂಖ್ಯೆ: 6

ಧನುಸ್ಸು: ತೃತೀಯದ ಗುರುವಿನಿಂದ ಆಸ್ತಿ ವಿವಾದ ಇತ್ಯರ್ಥ. ಆರೋಗ್ಯ ಸಮಸ್ಯೆ. ವೈದ್ಯರ ಸಲಹೆ ಪಾಲಿಸಿ. ಗಾಯಕರಿಗೆ ಧನಲಾಭ. ಶುಭಸಂಖ್ಯೆ:3

ಮಕರ: ವ್ಯಾಪಾರಸ್ಥರಿಗೆ ಅನಿರೀಕ್ಷಿತ ಬೆಳವಣಿಗೆ. ಸರ್ಕಾರಿ ಕ್ಷೇತ್ರಗಳಲ್ಲಿ ಕಾರ್ಯಸಿದ್ದಿ. ನಿರುದ್ಯೋಗಿಗಳಿಗೆ ಉದ್ಯೋಗದ ಆಶಾಕಿರಣ. ಶುಭಸಂಖ್ಯೆ: 7

ಕುಂಭ: ಸಹೋದ್ಯೋಗಿಗಳು ನಿಮ್ಮೊಂದಿಗೆ ಪ್ರೀತಿ-ವಿಶ್ವಾಸ ದಿಂದ ನಡೆದುಕೊಳ್ಳುತ್ತಾರೆ. ಸಂಗಾತಿಯಿಂದ ಆತ್ಮವಿಶ್ವಾಸಕ್ಕೆ ಪೆಟ್ಟು. ಶುಭಸಂಖ್ಯೆ: 6

ಮೀನ: ದ್ವಾದಶ ಗುರುವಿನಿಂದ ವೈಫಲ್ಯ ಕಾಡಬಹುದು. ಹಿರಿಯರ ಮಾರ್ಗದರ್ಶನ ಪಡೆಯಿರಿ. ಅನಿರೀಕ್ಷಿತ ಧನ ನಷ್ಟ ಆಗಬಹುದು. ಶುಭಸಂಖ್ಯೆ: 6

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net