2026 ಹಂಸ-ಮಾಳವೀಯ ರಾಜಯೋಗ: ಈ ರಾಶಿಯವರಿಗೆ ಯಶಸ್ಸು ಮತ್ತು ಅಪಾರ ಸಂಪತ್ತು ಗ್ಯಾರಂಟಿ! Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಜ್ಯೋತಿಷ್ಯದಲ್ಲಿ, ಪಂಚ ಮಹಾಪುರುಷ ರಾಜ್ಯ ಯೋಗವನ್ನು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಈ ಯೋಗಗಳು ಜಾತಕ ಅಥವಾ ಸಂಕ್ರಮಣದಲ್ಲಿ ರೂಪುಗೊಂಡಾಗ, ವ್ಯಕ್ತಿಗಳ ಜೀವನದಲ್ಲಿ ಗೌರವ ಸ್ಥಾನ, ಸಂಪತ್ತು ಮತ್ತು ಸೌಕರ್ಯಗಳನ್ನು ಪಡೆಯುತ್ತಾನೆ ಎಂದು ನಂಬಲಾಗುತ್ತದೆ. 2026 ರಲ್ಲಿ, ಎರಡು ಪ್ರಮುಖ ರಾಜಯೋಗಗಳಾದ ಹಂಸ ರಾಜಯೋಗ ಮತ್ತು ಮಾಲವ್ಯ ರಾಜ ಯೋಗವು ರೂಪುಗೊಳ್ಳುತ್ತದೆ. ಇದರಿಂದ ಅನೇಕ ರಾಶಿ ಚಕ್ರ ಚಿಹ್ನೆಯವರಿಗೆ ಶುಭದ ಸೂಚನೆ ಎಂದು ಹೇಳಲಾಗಿದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ....

ಕುಂಭ ರಾಶಿ

2026ರಲ್ಲಿ ಕುಂಭ ರಾಶಿಯವರಿಗೆ ಬಹಳ ಶುಭ ಎಂದು ಕರೆಯಲಾಗುತ್ತದೆ. ಹಂಸ ಮತ್ತು ಮಾಳವೀಕ ರಾಜಯೋಗದ ಪ್ರಭಾವವು ವೃತ್ತಿ ಜೀವನದ ಪ್ರಗತಿಗೆ ಬಲವಾದ ನಿರೀಕ್ಷೆಯನ್ನು ನೀಡುತ್ತದೆ. ಉದ್ಯೋಗದಲ್ಲಿರುವವರಿಗೆ ಲಾಭ ಕಾಣುವ ದಿನವಾಗಿದೆ. ಹಾಗೆಯೇ ಸಾಮಾಜಿಕ ಪ್ರತಿಷ್ಟೆ ಹೆಚ್ಚಾಗಲಿದ್ದು, ಅಂದುಕೊಂಡ ಕೆಲಸಗಳು ಸಾಧಿಸುವಲ್ಲಿ ಯಶಸ್ವಿಯಾಗಲಿದ್ದಾರೆ. ಆರ್ಥಿಕ ಯೋಗಕ್ಷೇಮ ಬಲಗೊಳ್ಳಲಿದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲಿವೆ.

ಕನ್ಯಾರಾಶಿ

ಯೋಗಗಳ ಸಂಯೋಗವು ಕನ್ಯಾ ರಾಶಿಯವರಿಗೆ ಹೆಚ್ಚಿನ ಅದೃಷ್ಟವನ್ನು ತರಲಿದೆ. ವಿದ್ಯಾರ್ಥಿಗಳಿಗೆ 2026 ಒಳ್ಳೆಯ ವರ್ಷವಾಗಿದ್ದು, ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನಡೆಸುವವರು ಯಶಸ್ಸನ್ನು ಕಾಣಲಿದ್ದೀರಿ. ಈ ಸಮಯದಲ್ಲಿ ಇವರು ಐಷಾರಾಮಿ ಜೀವನವನ್ನು ನಡೆಸಲಿದ್ದಾರೆ. ಆರ್ಥಿಕ ಲಾಭಗಳು ಹೊರಹೊಮ್ಮಲಿದೆ. ಅರ್ಧದಲ್ಲೇ ನಿಂತಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಈ ವರ್ಷ ಅನೇಕ ರೀತಿಯ ಶುಭ ಸಂದೇಶವನ್ನು ಕೇಳಲಿದ್ದೀರಿ.
ಮಿಥುನ ರಾಶಿ
2026 ಮಿಥುನ ರಾಶಿಯವರಿಗೆ ಸ್ಥಾನಮಾನ ಹೆಚ್ಚಾಗಲಿದೆ. ಉದ್ಯೋಗದಾತರಿಗೆ ಸಂಬಳ ಹೆಚ್ಚಾಗುವ ನಿರೀಕ್ಷೆ ಇದೆ. ಹಳೆಯ ಹೂಡಿಕೆಗಳು ಲಾಭ ನೀಡಲಿವೆ. ಕುಟುಂಬಸ್ಥರ ನೆರವಿನಿಂದ ಅಂದುಕೊಂಡ ಕೆಲಸಗಳನ್ನು ಸಾಧಿಸಲಿದ್ದೀರಿ. ಈ ಸಮಯದಲ್ಲಿ ಹಂಸ ರಾಜ ಯೋಗವು ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಆದರೆ ಮಾಲವ್ಯ ರಾಜ ಯೋಗವು ನಿಮ್ಮ ಜೀವನಕ್ಕೆ ಐಷಾರಾಮಿ ಮತ್ತು ಸೌಕರ್ಯವನ್ನು ತರುತ್ತದೆ. ಇದರಿಂದ ಅರ್ಧಕ್ಕೆ ನಿಂತಿದ್ದ ಕೆಲಸಗಳನ್ನು ಮಾಡಿ ಮುಗಿಸಲು ಸಹಾಯವಾಗುತ್ತದೆ. ಇದರಿಂದ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net