2025 ಮಂಗಳ ಸಂಚಾರ; ಈ ರಾಶಿಚಕ್ರಗಳು ಆರ್ಥಿಕವಾಗಿ ಉನ್ನತಿಗೇರಲಿವೆ! ನಿಮ್ದೂ ಇದೇ ರಾಶಿನಾ...Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಜ್ಯೋತಿಷ್ಯದಲ್ಲಿ, ಮಂಗಳವನ್ನು ಧೈರ್ಯ ಮತ್ತು ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಧನು ರಾಶಿಯಲ್ಲಿ ಸಾಗುತ್ತಿರುವ ಮಂಗಳವು ಡಿಸೆಂಬರ್​ 25 ರಂದು ತನ್ನ ನಕ್ಷತ್ರಪುಂಜದಿಂದ ಪೂರ್ವಾಷಾಢ ನಕ್ಷತ್ರಪುಂಜವನ್ನು ಪ್ರವೇಶಿಸುತ್ತದೆ. ಈ ರಾಶಿಚಕ್ರ ಬದಲಾವಣೆಯು ಕೆಲವು ರಾಶಿಗಳಿಗೆ ಶುಭವನ್ನು ನೀಡುತ್ತದೆ. ಮಂಗಳನ ಸಂಚಾರವು ಜನರಲ್ಲಿ ನಿರ್ಭಯತೆ, ಆತ್ಮವಿಶ್ವಾಸ ಮತ್ತು ಯಶಸ್ಸಿನ ಭಾವನೆಯನ್ನು ತುಂಬುತ್ತದೆ. ವಿಶೇಷವಾಗಿ ಈ 3 ರಾಶಿಯವರು ಯಶಸ್ಸು, ಆತ್ಮವಿಶ್ವಾಸ, ಧನ ಮತ್ತು ಸಂಪತ್ತನ್ನು ಹೊಂದುತ್ತಾರೆ ಎಂದು ಹೇಳಲಾಗಿದೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ...

ವೃಷಭ ರಾಶಿ

ವೃಷಭ ರಾಶಿಯಲ್ಲಿ ಮಂಗಳ ಗ್ರಹದ ಸಂಚಾರವು ತುಂಬಾ ಶುಭಕರವಾಗಲಿದೆ. ಇದು ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳನ್ನು ಬಗೆಹರಿಸಲು ಸಹಾಯ ಮಾಡುತ್ತದೆ. ಈ ಸಮಯವು ಬಾಕಿ ಉಳಿದಿದ್ದ ಕೆಲಸವನ್ನು ಪೂರ್ಣಗೊಳ್ಳಲು ಚೈತನ್ಯವನ್ನು ನೀಡುತ್ತದೆ. ವೈಯಕ್ತಿಕ ಮತ್ತು ವೃತ್ತಿಪರ ಜೀವನದಲ್ಲಿ ಯಶಸ್ಸಿನ ಬಾಗಿಲುಗಳು ತೆರೆದುಕೊಳ್ಳುತ್ತವೆ. ಹೊಸ ಸಂಬಂಧಗಳ ಪ್ರೇರೇಪಣೆಯಿಂದ ವ್ಯವಹಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಉದ್ಯೋಗದಲ್ಲಿರುವವರಿಗೆ ಕೆಲಸ ಅಥವಾ ಬಡ್ತಿ ಸಿಗಬಹುದು. ಜೀವನದಲ್ಲಿ ಉತ್ತಮ ಬದಲಾವಣೆಗಳು ಕಂಡುಬರುವುದರ ಜೊತೆಗೆ ಸಂಪತ್ತು ಮತ್ತು ಲಾಭವನ್ನು ನಿರೀಕ್ಷೆ ಮಾಡಬಹುದು.

ಸಿಂಹ ರಾಶಿ

ಮಂಗಳ ಗ್ರಹದ ಸಂಚಾರವು ಸಿಂಹ ರಾಶಿಯವರಿಗೆ ವಿಶೇಷವಾಗಿರುತ್ತದೆ. ಇದು ಮನೆ ಅಥವಾ ವಾಹನ ಖರೀದಿಸುವವರಿಗೆ ಶುಭವಾಗಿದೆ. ಉದ್ಯೋಗದಲ್ಲಿರುವವರಿಗೆ ಉತ್ತಮ ಲಾಭ ಮತ್ತು ಗೌರವ ಸಿಗುವ ಸಮಯ ಇದಾಗಿದೆ. ಪ್ರೇಮ ಸಂಬಂಧಗಳಲ್ಲಿ ಅನ್ಯೋನ್ಯತೆ ಮತ್ತು ಮಾಧುರ್ಯ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಶುಭ ಫಲಿತಾಂಶ ಸಿಗಲಿವೆ. ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಅಂದುಕೊಂಡಿ ಕೆಲಸಗಳನ್ನು ಮಾಡಿಮುಗಿಸುವ ಸಮಯ ಇದಾಗಿದ್ದು, ಆದಷ್ಟು ಜಾಗರೂಕತೆಯಿಂದ ಇರುವುದು ಉತ್ತಮ.

ಮಕರ ರಾಶಿ

ಮಂಗಳ ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಆರೋಗ್ಯದಲ್ಲಿ ಹೆಚ್ಚಿನ ಪರಿಹಾರ ಸಿಗುತ್ತದೆ. ದೀರ್ಘಕಾಲದ ಸಮಸ್ಯೆಗಳು ಬಗೆಹರಿಯಲಿವೆ. ನ್ಯಾಯಾಲಯ ಮತ್ತು ಕಚೇರಿ ವಿಷಯಗಳು ಬಗೆಹರಿಯಲಿವೆ. ಮಾನಸಿಕ ಒತ್ತಡ ಕಡಿಮೆಯಾಗಲಿದ್ದು, ಕೆಲಸಗಳನ್ನು ಸಾಧಿಸಲು ಒಳ್ಳೆಯ ಸಮಯ ಇದಾಗಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತದೆ. ಕಠಿಣ ಪರಿಶ್ರಮವು ಗೌರವವನ್ನು ಹೆಚ್ಚಿಸುತ್ತದೆ ಮತ್ತು ಸಂಪತ್ತನ್ನು ಗಳಿಸಲು ಸಹಾಯ ಮಾಡುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net