ಹಾಸಿಗೆ ಇರುವುದು ವಿಶ್ರಾಂತಿಗಾಗಿ, ತಿನ್ನುವುದಕ್ಕಾಗಿ ಅಲ್ಲ. ಯಾವುದೇ ವ್ಯಕ್ತಿಯು ಹಾಸಿಗೆ ಮೇಲೆ ಕುಳಿತು ಊಟ ಮಾಡುವುದರಿಂದ ಇದು ರಾಹು ಗ್ರಹದ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಗೊಂದಲ ಒತ್ತಡ ಮತ್ತು ಹಠಾತ್ ಸಮಸ್ಯೆಗಳು ಉಂಟಾಗುತ್ತದೆ. ಇದಲ್ಲದೇ, ದಕ್ಷಿಣ ದಿಕ್ಕಿನಲ್ಲಿ ಊಟ ಮಾಡುವುದರಿಂದ ನಕರಾತ್ಮಕ ಶಕ್ತಿಗಳು ಬೀಳುವುದರಿಂದ ಇದು, ಮನಸ್ಸನ್ನು ಕಿರಿಕಿರಿ, ಅಶಾಂತಿಯಿಂದ ಇರುವ ಹಾಗೆ ಪ್ರೇರೇಪಿಸುತ್ತದೆ. ಆದರಿಂದ ಈ ಅಭ್ಯಾಸವನ್ನು ಇಂದಿಗೆ ನಿಲ್ಲಿಸಿ. ಆಹಾರವನ್ನು ಯಾವಾಗಲೂ ಶಾಂತ ಮನಸ್ಸಿನಿಂದ, ಸರಿಯಾದ ಸ್ಥಳದಲ್ಲಿ ಮತ್ತು ದಿಕ್ಕಿನಲ್ಲಿ ಸೇವಿಸಿರಿ.