ಸ್ವಲ್ಪ ಯಾಮಾರಿದ್ರೂ ಈ ಸಸ್ಯಗಳು ನಿಮ್ಮ ಮನೆಯಲ್ಲಿರುವ ಹಣದ ಪೆಟ್ಟಿಗೆಯನ್ನೇ ಖಾಲಿ ಮಾಡುತ್ತವೆ! Vastu Tips

 ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Vastu Tips : ಮನೆಯಲ್ಲಿ ಸಸ್ಯಗಳನ್ನು ನೆಡುವುದು ಒಳ್ಳೆಯದು ಎಂದು ವಾಸ್ತು ತಿಳಿಸುತ್ತದೆ. ಸಸ್ಯಗಳು ಸೌಂದರ್ಯವನ್ನು ಹೆಚ್ಚಿಸುವುದಲ್ಲದೇ, ಮನೆಗೆ ಶಕ್ತಿ, ಅದೃಷ್ಟ ಮತ್ತು ಆರ್ಥಿಕ ಸ್ಥಿತಿಯ ಮೇಲೆಯೂ ಆಳವಾದ ಪರಿಣಾಮ ಬೀರುತ್ತವೆ. ಸರಿಯಾದ ದಿಕ್ಕಿನಲ್ಲಿ ಸಸ್ಯಗಳನ್ನು ನೆಡುವುದರಿಂದ ಇದು ಸಂತೋಷ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಯನ್ನು ತರುತ್ತವೆ. ಅದೇ ತಪ್ಪು ದಿಕ್ಕಿನಲ್ಲಿ ಸಸ್ಯಗಳನ್ನು ನೆಡುವುದರಿಂದ ಇದು ಮನೆ ಹಾಗೂ ಮನಸ್ಸಿಗೆ ಒತ್ತಡ, ಅಸಮತೋಲನವನ್ನು ನೀಡುತ್ತದೆ.
ವಾಸ್ತು ಪ್ರಕಾರ, ದಕ್ಷಿಣ ದಿಕ್ಕನ್ನು ಬಹಳ ಸೂಕ್ಷ್ಮವೆಂದು ಪರಿಗಣಿಸಲಾಗುತ್ತದೆ. ಈ ದಿಕ್ಕನ್ನು ಯಮ ಮತ್ತು ಪೂರ್ವಜರ ದಿಕ್ಕು ಎಂದು ಹೇಳಲಾಗುತ್ತದೆ. ಹಾಗಾಗಿ, ನಿಮ್ಮ ಮನೆಯಲ್ಲಿ ಸಸ್ಯಗಳನ್ನು ನೆಡಲು ಕೆಲವು ನಿಯಮಗಳು ಇಲ್ಲಿವೆ. ದಕ್ಷಿಣ ದಿಕ್ಕಿನಲ್ಲಿ ನೆಟ್ಟಾಗ ಅನೇಕ ಶುಭ ಸಸ್ಯಗಳು ತಮ್ಮ ಸಕಾರಾತ್ಮಕತೆಯನ್ನು ಕಳೆದುಕೊಳ್ಳುತ್ತವೆ. ದಕ್ಷಿಣ ದಿಕ್ಕಿನಲ್ಲಿ ಯಾವ ಸಸ್ಯಗಳನ್ನು ಯಾಕೆ ನೆಡಬಾರದು ಎಂದು ನೋಡೋಣ ಬನ್ನಿ...

1. ತುಳಸಿ ಸಸ್ಯ

ತುಳಸಿ ಸಸ್ಯವನ್ನು ಬಹಳ ಶುಭ ಮತ್ತು ಪವಿತ್ರವೆಂದು ಹೇಳಲಾಗುತ್ತದೆ. ಇದು ಲಕ್ಷ್ಮಿ ದೇವಿಯ ಒಂದು ರೂಪವಾಗಿದ್ದು, ಇದನ್ನು ದಕ್ಷಿಣ ದಿಕ್ಕಿನಲ್ಲಿ ನೆಡಬಾರದು. ಏಕೆಂದರೆ ಇದು ಯಮನ ದಿಕ್ಕಾಗಿರುವುದರಿಂದ ಇದು ತೀವ್ರವಾದ ಶಕ್ತಿಯನ್ನು ಹೊಂದಿರುತ್ತದೆ. ಅಂತಹ ಸ್ಥಳದಲ್ಲಿ ತುಳಸಿ ಸಸ್ಯವನ್ನು ನೆಡುವುದರಿಂದ ಅದರ ಸಕರಾತ್ಮಕ ಶಕ್ತಿಯು ಕಡಿಮೆ ಆಗಿ ಮನೆಯ ಮೇಲೆ ಬೀಳುತ್ತದೆ. ಇದರಿಂದ ಮಾನಸಿಕ ಒತ್ತಡ, ಆರೋಗ್ಯದ ಮೇಲೆ ಸಮಸ್ಯೆಗಳು ನೇರವಾಗಿ ಬೀಳಲಾರಂಭಿಸುತ್ತದೆ.

2. ಮನಿ ಪ್ಲಾಂಟ್

ಮನಿ ಪ್ಲಾಂಟ್ ಸಂಪತ್ತನ್ನು ಆಕರ್ಷಿಸುವ ಸಸ್ಯವೆಂದು ಪರಿಗಣಿಸಲಾಗುತ್ತದೆ. ಇದನ್ನು ದಕ್ಷಿಣ ದಿಕ್ಕಿನಲ್ಲಿ ನೆಡುವುದರಿಂದ ಹಣ ಮನೆಯಲ್ಲಿಯೇ ಉಳಿಯುವ ಬದಲು ಹೊರಗೆ ಹರಿಯಬಹುದು. ಇದರಿಂದ ಮನೆಯಲ್ಲಿ ಅನಗತ್ಯ ವೆಚ್ಚಗಳು ಹೆಚ್ಚಾಗುತ್ತದೆ. ಹಾಗೆಯೇ ಸಂಬಂಧಗಳಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ.

3. ಶಮಿ ಗಿಡ (ಬನ್ನಿ ಗಿಡ)

ಶಮಿ ಮರವನ್ನು ಧಾರ್ಮಿಕ ಮತ್ತು ಜ್ಯೋತಿಷ್ಯ ದೃಷ್ಟಿಕೋನದಲ್ಲಿ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ. ಇದು ಶನಿ ದೇವ ಹಾಗೂ ಶಿವನೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಈ ಸಸ್ಯವನ್ನು ಎಂದಿಗೂ ದಕ್ಷಿಣ ದಿಕ್ಕಿನಲ್ಲಿ ಇರಿಸಬಾರದು. ಅದರ ಬದಲಿಗೆ ಈಶಾನ್ಯ ಅಥವಾ ಪೂರ್ವ ದಿಕ್ಕಿನಲ್ಲಿ ನೆಡುವುದರಿಂದ ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.

4. ಬಾಳೆ ಗಿಡ

ಬಾಳೆಹಣ್ಣು ವಿಷ್ಣುವಿಗೆ ಅತ್ಯಂತ ಪ್ರಿಯವಾದ ಹಣ್ಣು. ಗುರುವಾರದಂದು ಬಾಳೆಹಣ್ಣನ್ನು ಪೂಜಿಸುವುದು ಬಹಳ ವಿಶೇಷ. ಯಾವುದೇ ಕಾರಣಕ್ಕೂ ಬಾಳೆಗಿಡವನ್ನು ಮನೆಯ ಒಳಗೆ ನೆಡಬಾರದು. ಬದಲಿಗೆ, ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಹೊರಾಂಗಣದಲ್ಲಿ ನೆಡುವುದು ಶುಭವಾಗಿದೆ. ಇದು ಮನೆಯ ಜನರಿಗೆ ಸಕರಾತ್ಮಕ ಪರಿಣಾಮಗಳನ್ನು ನೀಡುತ್ತದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net