2026 ರಲ್ಲಿ ಈ 3 ರಾಶಿಯವರಿಗೆ ಅದೃಷ್ಟದ ಮಳೆ! Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology : ಇನ್ನೇನು ಕೆಲವೇ ದಿನಗಳಲ್ಲಿ ಹೊಸ ವರ್ಷ ಆರಂಭವಾಗಲಿದೆ. 2026 ರ ಹೊಸ ವರ್ಷ ಆರಂಭದಲ್ಲಿ ಬಹಳ ಅಪರೂಪದ ಗ್ರಹಗಳ ಸಂಯೋಗ ಸಂಭವಿಸಲಿರುವುದರಿಂದ ಮೂರು ರಾಶಿ ಚಕ್ರದವರಿಗೆ ಬಹಳ ಶುಭವೆಂದು ಪರಿಗಣಿಸಲಾಗಿದೆ. ಶನಿಯ ದೃಷ್ಟಿಯಲ್ಲಿ ಮಂಗಳ ಮತ್ತು ಸೂರ್ಯನ ಸಂಯೋಗವು ಈ ಮೂರು ರಾಶಿಚಕ್ರ ಚಿಹ್ನೆಗಳಲ್ಲಿ ಜನಿಸಿದವರಿಗೆ ವೃತ್ತಿಜೀವನದಲ್ಲಿ ಗಮನಾರ್ಹ ಲಾಭವನ್ನು ಪಡೆಯಲಿದ್ದಾರೆ ಎಂದು ಜ್ಯೋತಿಷ್ಯವು ತಿಳಿಸಿದೆ.

ಸೂರ್ಯ-ಮಂಗಳ ಸಂಯೋಗ ಯಾವಾಗ ಸಂಭವಿಸುತ್ತದೆ?

ಜ್ಯೋತಿಷ್ಯದ ಪ್ರಕಾರ, ಜನವರಿ 14 ರಂದು ಸೂರ್ಯನು ಶನಿಯಿಂದ ಆಳಲ್ಪಡುವ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ನಂತರ, ಜನವರಿ 16 ರಂದು, ಮಂಗಳ ಕೂಡ ಅದೇ ರಾಶಿಗೆ ಸಾಗುತ್ತಾನೆ. ಸೂರ್ಯ ಮತ್ತು ಮಂಗಳನ ಸಂಯೋಗವು ಆದಿತ್ಯ ರಾಜ್ಯವನ್ನು ಸೃಷ್ಟಿಸುತ್ತದೆ.

ವೃಷಭ ರಾಶಿ

ಜ್ಯೋತಿಷ್ಯದ ಪ್ರಕಾರ, ಈ ಸಂಯೋಗವು ವೃಷಭ ರಾಶಿಯಲ್ಲಿ ಜನಿಸಿದವರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದ್ದು, ನಿಮ್ಮ ಇಷ್ಟದ ಕೆಲಸವನ್ನು ಪಡೆಯಲು ಸುವರ್ಣಾವಕಾಶ ಹೆಚ್ಚಾಗಿದೆ. ಹೂಡಿಕೆ ಮಾಡಿದವರಿಗೆ ಒಳ್ಳೆಯ ಲಾಭ ಪಡೆಯುವ ನಿರೀಕ್ಷೆ ಇದೆ. ಮದುವೆ ಬಗ್ಗೆ ಚಿಂತನೆ ನಡೆಸಿದವರಿಗೆ ವಿವಾಹದ ಸಾಧ್ಯತೆ ಹೆಚ್ಚಾಗಿದೆ.

ತುಲಾ ರಾಶಿ

ಸೂರ್ಯ ಮತ್ತು ಮಂಗಳ ಗ್ರಹಗಳ ಸಂಯೋಗವು ಈ ರಾಶಿಯವರಿಗೆ ಸಂಪತ್ತು, ವಾಹನ ಅಥವಾ ಹೊಸ ಮನೆಯನ್ನು ಖರೀದಿಸಲು ಅವಕಾಶವನ್ನು ನೀಡುತ್ತದೆ. ಇದರಿಂದ ಅನಿರೀಕ್ಷಿತ ಆರ್ಥಿಕ ಲಾಭಗಳನ್ನು ಪಡೆಯುವ ಸಾಧ್ಯತೆ ಹೆಚ್ಚಿದೆ. ವೈವಾಹಿಕ ಜೀವನದಲ್ಲಿ ಸಂತೋಷ, ನೆಮ್ಮದಿ ವಾತಾವರಣವಿರಲಿದೆ. ಹಳೆಯ ಹೂಡಿಕೆಗಳು ಹೆಚ್ಚಿನ ಲಾಭವನ್ನು ನೀಡುತ್ತವೆ.

ಮಕರ ರಾಶಿ

ಸೂರ್ಯ ಮತ್ತು ಮಂಗಳ ಗ್ರಹವು ಮಕರ ರಾಶಿಯನ್ನು ಪ್ರವೇಶಿಸುವುದರಿಂದ, ಈ ಸಂಯೋಜನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಹೊಸ ಉದ್ಯೋಗಗಳನ್ನು ಹುಡುಕುತ್ತಿರುವವರಿಗೆ ಒಳ್ಳೆಯ ಕೆಲಸ ಸಿಗುವ ಸಾಧ್ಯತೆ ಹೆಚ್ಚಿದೆ. ನಿಮ್ಮ ವೃತ್ತಿ ಜೀವನದಲ್ಲಿ ಗೌರವಗಳು ಸಿಗುತ್ತವೆ. ಲಾಭದ ವಾತಾವರಣವಿರಲಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net