ಈ 3 ರಾಶಿಯವರೇ ಜೀವನದಲ್ಲಿ ಹೆಚ್ಚು ಮೋಸ ಹೋಗುತ್ತಾರೆ...Zodiac Signs

Zodiac Signs
Zodiac Signs
Published on
Zodiac Signs: ಜ್ಯೋತಿಷ್ಯ ಶಾಸ್ತ್ರದ ಆಧಾರದ ಮೇಲೆ ಓರ್ವ ವ್ಯಕ್ತಿಯ ರಾಶಿ ( Zodiac Sign) ಚಕ್ರ ಮತ್ತು ಜನ್ಮ ನಕ್ಷತ್ರವು ವ್ಯಕ್ತಿಯ ಭವಿಷ್ಯ ಜೀವನವನ್ನು ನಿರ್ಧರಿಸುವ ಶಕ್ತಿಯನ್ನು ಹೊಂದಿರುತ್ತದೆ. ಹೀಗಾಗಿ, ನಮ್ಮ ದೇಶದಲ್ಲಿ ಜನರು ಜೋತಿಷ್ಯವನ್ನು ಅಷ್ಟು ನಂಬುತ್ತಾರೆ. ಒಬ್ಬ ವ್ಯಕ್ತಿಯ ಜನ್ಮ ರಾಶಿಯು ಆತನ ಹಣಕಾಸಿನ ಸ್ಥಿತಿ, ಪ್ರೀತಿ, ಶಿಕ್ಷಣ, ಮದುವೆ, ದಾಂಪತ್ಯ, ಉದ್ಯೋಗ ಮತ್ತು ಆತನ ಒಳ್ಳೆಯ ಗುಣಗಳು ಮತ್ತು ಕೆಟ್ಟ ಗುಣಗಳ ಮೇಲೆ ಪ್ರಭಾವ ಬೀರುತ್ತದೆ ಎಂದು ಹೇಳಲಾಗುತ್ತದೆ.

1. ತುಲಾ (Libra)

ತುಲಾ ರಾಶಿಯವರು ಎಲ್ಲರನ್ನೂ ಸಮಾನವಾಗಿ ನೋಡುವವರಾಗಿದ್ದು, ತಮಗೆ ಮೋಸ ಮಾಡಲು ಬಂದಿರುವ ವ್ಯಕ್ತಿಯನ್ನು ಸಹ ಸ್ನೇಹದಿಂದ ನೋಡುತ್ತಾರೆ. ಇಲ್ಲಿ ಇವರಿಗೆ ನಂಬಿಕೆ ದ್ರೋಹವಾಗುವ ಸಾಧ್ಯತೆ ಹೆಚ್ಚಿರುತ್ತದೆ. ಇತರರ ಜಗಳವನ್ನು ತಪ್ಪಸಲು ಹೋಗಿ ತಾವೇ ಕಷ್ಟಕ್ಕೆ ಸಿಲುಕಿಕೊಳ್ಳುತ್ತಾರೆ.

2. ಕರ್ಕಾಟಕ (Cancer)

ಕರ್ಕಾಟಕ ಅಥವಾ ಕಟಕ ರಾಶಿಯವರು ಸಂಬಂಧಗಳಿಗೆ ಹೆಚ್ಚು ಮಹತ್ವ ನೀಡುತ್ತಾರೆ. ಇವರು ಕರುಣಾಶೀಲ ಮತ್ತು ಕಾಳಜಿಯುಳ್ಳವರಾಗಿರುತ್ತಾರೆ. ಆದರೆ ಇವರು ನಿರ್ಧಾರಗಳನ್ನು ಭಾನಾತ್ಮಕವಾಗಿ ತೆಗೆದುಕೊಳ್ಳುವ ಕಾರಣ ಇವರಿಗೆ ತಮ್ಮವರಿಂದಲೇ ಮೋಸವಾಗುವ ಸಾಧ್ಯತೆ ಹೆಚ್ಚಿರುತ್ತದೆ.

3. ಮೀನ (Pisces)

ಮೀನ ರಾಶಿಯವರು ಹೆಚ್ಚು ಭಾವನಾತ್ಮಕ ಸ್ವಭಾವ ಹೊಂದಿರುತ್ತಾರೆ. ಇವರಿಗೆ ಎಲ್ಲರಿಗೂ ಒಳ್ಳೆಯದನ್ನೇ ನೋಡುವ ಮನಸ್ಸು ಇರುತ್ತದೆ. ಆದರೆ ಇವರು ಇತರರ ಮಾತುಗಳನ್ನು ಬೇಗ ನಂಬುವ ಸ್ವಭಾವ ಹೊಂದಿರುವುದು ಇವರುಗೆ ಮುಳ್ಳಾಗಿ ಪರಿಣಮಿಸಿ ಮೋಸಹೋಗುತ್ತಾರೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net