ಸೂರ್ಯ-ಶುಕ್ರ ಯುತಿ: ಹೊಸ ವರ್ಷದ ಆರಂಭದಲ್ಲೇ ಈ ರಾಶಿಗಳಿಗೆ ಲಾಟರಿ ಹೊಡೆಯೋದು ಗ್ಯಾರಂಟಿ! Astrology

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Published on
Astrology: ಜ್ಯೋತಿಷ್ಯದ ಪ್ರಕಾರ, ಶುಕ್ರನು ಸಂಪತ್ತು, ಪ್ರತಿಷ್ಠೆ, ಐಷಾರಾಮಿ ಮತ್ತು ವೈವಾಹಿಕ ಜೀವನವನ್ನು ಮುನ್ನಡೆಸಲು ಸಹಾಯ ಮಾಡುತ್ತಾನೆ ಎಂದು ನಂಬಲಾಗುತ್ತದೆ. ಮತ್ತೊಂದೆಡೆ, ಸೂರ್ಯನು ವಿಶ್ವಾಸ, ಗೌರವ, ಸ್ಥಾಪನೆಯ ಸಂಕೇತ ಎಂದು ಕರೆಯಲಾಗುತ್ತದೆ. ಈ ಎರಡು ಪ್ರಭಾವ ರಾಶಿಗಳು ಒಟ್ಟಿಗೆ ಸಂಯೋಗ ಹೊಂದಿದಾಗ ಶುಕ್ರಾದಿತ್ಯ ರಾಜ ಯೋಗವು ರೂಪುಗೊಳ್ಳುತ್ತದೆ. ಇದು ಜನವರಿ ತಿಂಗಳಲ್ಲಿ ರೂಪುಗೊಳ್ಳುವುದರಿಂದ ಕೆಲವೊಂದು ರಾಶಿಗಳಿಗೆ ಬಹುಳ ಲಾಭ ಎಂದು ಕರೆಯಲಾಗುತ್ತದೆ.
ವಾಸ್ತವವಾಗಿ, ಈ ಬಾರಿ ಶುಕ್ರ ಮತ್ತು ಸೂರ್ಯ ಇಬ್ಬರೂ ಕೆಲವು ರಾಶಿ ಚಕ್ರಗಳ ಮೇಲೆ ಸಕರಾತ್ಮಕ ಪರಿಣಾಮವನ್ನು ಬೀರುತ್ತದೆ. ಅವರು ಈ ಸಂಯೋಗದಿಂದ ಉತ್ತಮ ಫಲಿತಾಂಶವನ್ನು ಪಡೆಯುತ್ತಾರೆ. ಇದರಿಂದ ಜೀವನದಲ್ಲಿ ಉದ್ಯೋಗ, ವ್ಯವಹಾರ, ಸಂಪತ್ತನ್ನು ಪಡೆಯುತ್ತಾರೆ. ಹಾಗಿದ್ದರೆ, ಆ ರಾಶಿಗಳು ಯಾವುದು ಎಂದು ನೋಡೋಣ ಬನ್ನಿ..

ಧನು ರಾಶಿ

ಧನು ರಾಶಿಯವರಿಗೆ ಈ ಸಮಯ ತುಂಬಾ ಶುಭವಾಗಲಿದೆ. ಈ ಸಮಯದಲ್ಲಿ ಶುಕ್ರಾದಿತ್ಯ ರಾಜ್ಯಯೋಗದ ಪ್ರಭಾವದಿಂದ ಆರ್ಥಿಕ ಸ್ಥಿತಿ ಬಲವಾಗಿರುತ್ತದೆ. ಈ ಸಮಯದಲ್ಲಿ ಸಿಗಬೇಕಿದ್ದ ಹಣ ವಾಪಾಸ್ಸು ಮರಳಿ ಬರುವ ಸಾಧ್ಯತೆ ಇದೆ. ಆದಾಯದಲ್ಲಿ ಹೊಸ ಒಪ್ಪಂದಗಳನ್ನು ಮಾಡಲಿದ್ದೀರಿ. ಕುಟುಂಬದಲ್ಲಿ ಖುಷಿ, ಸಂತೋಷದ ವಾತಾವರಣವಿರಲಿದೆ. ಸಮಾಜದಲ್ಲಿ ಗೌರವ ಸಿಗಲಿದೆ. ಈ ಗ್ರಹಗಳ ಸಂಯೋಗದಿಂದ ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ.

ಮೀನ ರಾಶಿ

ಈ ಯೋಗವು ಮೀನ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತದೆ. ಈ ಸಮಯವು ನಿಮ್ಮ ಆಸೆ, ಆಕಾಂಕ್ಷೆಗಳು ಈಡೇರಲಿವೆ. ಇದು ನಿಮ್ಮ ವೃತ್ತಿ ಜೀವನವನ್ನು ಸುಧಾರಿಸಲಿದೆ. ಅಂದುಕೊಂಡ ಕೆಲಸಗಳನ್ನು ಮಾಡಿ ಮುಗಿಸಲಿದ್ದೀರಿ. ಈ ತಿಂಗಳು ಉತ್ತಮ ಕೊಡುಗೆಗಳು, ವ್ಯವಹಾರದಲ್ಲಿ ಲಾಭ ಪಡೆಯುವ ಸಾಧ್ಯತೆ ಹೆಚ್ಚಿದೆ. ಆರ್ಥಿಕ ಸಮಸ್ಯೆಗಳು ಬಗೆಹರಿಯಲಿದ್ದು, ಹಣವು ನಿಮ್ಮ ಕೈಗೆ ಬರುತ್ತದೆ.

ತುಲಾ ರಾಶಿ

ಅಪರೂಪದ ಸಂಯೋಗವು ತುಲಾ ರಾಶಿಯವರ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ತರಲಿದೆ. ಈ ಸಮಯದಲ್ಲಿ ನೀವು ಹೊಸ ವಸ್ತುಗಳನ್ನು ಖರೀದಿ ಮಾಡಲಿದ್ದೀರಿ. ತಾಯಿಯ ಆಶೀರ್ವಾದದೊಂದಿಗೆ ನಿಮ್ಮ ಜೀವನವು ಮುನ್ನಡೆಯುತ್ತದೆ. ಮಾನಸಿಕವಾಗಿ ನೆಮ್ಮದಿ ಸಿಗಲಿದೆ. ಕುಟುಂಬದಲ್ಲಿ ಸಂತೋಷದ ವಾತಾವರಣವಿರಲಿದೆ (ಏಜೆನ್ಸೀಸ್​).
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net