Zodiac Signs: ಸೂರ್ಯಗ್ರಹಣದಿಂದಾಗಿ ಈ 4 ರಾಶಿಯವರ ಮೇಲೆ ಬೀರಲಿದೆ ಕೆಟ್ಟ ಪರಿಣಾಮ!

Untitled design - 2025-09-21T215615.999
Published on

Zodiac Signs: ಜ್ಯೋತಿಷ್ಯದ ಪ್ರಕಾರ, ಒಬ್ಬ ವ್ಯಕ್ತಿಯು ಯಾವ ರಾಶಿಚಕ್ರ ಮತ್ತು ನಕ್ಷತ್ರದಲ್ಲಿ ಜನಿಸುತ್ತಾನೆ ಎಂಬುದು ಅವನ ಭವಿಷ್ಯದ ಜೀವನ, ವ್ಯಕ್ತಿತ್ವದ ಗುಣ ಲಕ್ಷಣಗಳು, ಆರ್ಥಿಕ ಪರಿಸ್ಥಿತಿ ಮತ್ತು ಆತನ ಸಕಾರಾತ್ಮಕ ಹಾಗೂ ನಕಾರಾತ್ಮಕ ಗುಣಗಳ ಮೇಲೆ ಪ್ರಮುಖ ಪ್ರಭಾವ ಬೀರುತ್ತದೆ ಎಂದು ಅನಾದಿ ಕಾಲದಿಂದಲೂ ನಂಬಲಾಗಿದೆ. ಈ ಕಾರಣಕ್ಕೆ ಹುಟ್ಟಿದ ತಕ್ಷಣ ಸಮಯವನ್ನು ನೋಡಲಾಗುತ್ತದೆ.

ಜ್ಯೋತಿಷ್ಯ ಪ್ರಕಾರ, ಸಾಮಾನ್ಯವಾಗಿ ಗ್ರಹಣಗಳು ಎಲ್ಲಾ ಗ್ರಹ ಮತ್ತು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. 2025ರ ಕೊನೆಯ ಸೂರ್ಯಗ್ರಹಣ ಭಾರತದಲ್ಲಿ ಸಂಭವಿಸದಿದ್ದರೂ ಅದರ ಪರಿಣಾಮ ಇದ್ದೇ ಇರುತ್ತೆ ಎಂದು ಜ್ಯೋತಿಷಿಗಳು ವಿಶ್ಲೇಷಿಸುತ್ತಿದ್ದಾರೆ. ಇದೇ ಸೆ.21ರ ರಾತ್ರಿ ಸಂಭವಿಸುವ ಸೂರ್ಯಗ್ರಹಣ ಈ 4 ರಾಶಿಚಕ್ರ ಚಿಹ್ನೆಗಳಿಗೆ ಅಶುಭಕರ ಎಂದು ತಿಳಿಯಿರಿ.

ಮಿಥುನ ರಾಶಿ

ಸೂರ್ಯಗ್ರಹಣದಿಂದಾಗಿ ಈ ರಾಶಿ ಚಕ್ರದಲ್ಲಿ ಜನಿಸಿದವರಿಗೆ ಕೆಟ್ಟ ಸುದ್ದಿ ಬರಬಹುದು. ಇದು ಮಾನಸಿಕ ಒತ್ತಡಕ್ಕೆ ಕಾರಣವಾಗಬಹುದು. ಯೋಜಿತ ಕೆಲಸ ನಿಲ್ಲಬಹುದು. ಆರ್ಥಿಕ ನಷ್ಟಕ್ಕೆ ಒಳಗಾಗಬಹುದು.ಅಲ್ಲದೆ, ಸ್ವಾಭಿಮಾನಕ್ಕೆ ಧಕ್ಕೆಯಾಗಬಹುದು.

ಸಿಂಹರಾಶಿ

ಈ ರಾಶಿಯಲ್ಲಿ ಜನಿಸಿದರು ಕೊಂಚ ಜಾಗೃತರಾಗಬೇಕು. ಇವರಿಗೆ ಅಪಘಾತಗಳು ಸಂಭವಿಸಬಹುದು. ಹಳೆಯ ಕಾಯಿಲೆ ಮರಳಬಹುದು. ಅರ್ಥಿಕ ನಷ್ಟ ಅನುಭವಿಸಬಹುದು.ಸದ್ಯಕ್ಕೆ ಜೀವನದ ಪರಿಸ್ಥಿತಿ ಕೂಡ ಚೆನ್ನಾಗಿಲ್ಲ.

ವೃಶ್ಚಿಕ ರಾಶಿ

ಸೂರ್ಯಗ್ರಹಣದಿಂದಾಗಿ ಈ ರಾಶಿಯವರಿಗೆ ಹೂಡಿಕೆಯಲ್ಲಿ ದೊಡ್ಡ ನಷ್ಟವಾಗಬಹುದು. ವ್ಯಾಪಾರ ಒಪ್ಪಂದಗಳು ವಿಫಲವಾಗಬಹುದು. ಕುಟುಂಬದಲ್ಲಿ ಆರೋಗ್ಯ ಸಮಸ್ಯೆಗಳು ಉದ್ಭವಿಸಬಹುದು.

ಮೀನ ರಾಶಿ

ಈ ರಾಶಿಚಕ್ರ ಚಿಹ್ನೆಯಡಿಯಲ್ಲಿ ಜನಿಸಿದ ಜನರಿಗೆ ಇದು ಒಳ್ಳೆಯ ಸಮಯವಲ್ಲ. ಖ್ಯಾತಿಯ ನಷ್ಟವಾಗಬಹುದು. ದೊಡ್ಡ ಆರ್ಥಿಕ ನಷ್ಟವನ್ನು ಅನುಭವಿಸಬಹುದು.(ಏಜೆನ್ಸೀಸ್​)

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net