Astrology: ಪವಿತ್ರ ಶ್ರಾವಣ ಮಾಸವು ಇಂದಿನಿಂದ ಆರಂಭವಾಗಿದ್ದು, ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ತಿಂಗಳು ಅತ್ಯಂತ ಮಹತ್ವದ ಗ್ರಹಗಳ ಸಂಚಾರಕ್ಕೆ ಸಾಕ್ಷಿಯಾಗಲಿದೆ. ಪ್ರಮುಖ ಗ್ರಹಗಳು ತಮ್ಮ ಸ್ಥಾನಗಳನ್ನು ಬದಲಾಯಿಸುತ್ತಿದ್ದು, ಆ ಸಾಲಿನಲ್ಲಿ ನೆರಳು ಗ್ರಹ ಹಾಗೂ ಮಾಂತ್ರಿಕ ಗ್ರಹ ಎಂದೇ ಕರೆಯಲ್ಪಡುವ ರಾಹು ಕೂಡ ಸೇರಿದ್ದಾನೆ. ಜ್ಯೋತಿಷ್ಯದ ಲೆಕ್ಕಾಚಾರದಂತೆ, ಮುಂಬರುವ ಆಗಸ್ಟ್ 2, 2026 ರಂದು ರಾಹು ತನ್ನ ಸ್ವಂತ ನಕ್ಷತ್ರವಾದ ಶತಭಿಷದಿಂದ ಹೊರಬಂದು, ಮಂಗಳನ ಒಡೆತನದ ಧನಿಷ್ಠ ನಕ್ಷತ್ರವನ್ನು ಪ್ರವೇಶಿಸಲಿದ್ದಾನೆ.