ಶ್ರಾವಣದ ಮಹಾ ಗ್ರಹ ಸಂಯೋಗ: ಈ ರಾಶಿಯವರಿಗೆ ಕಾದಿದೆ ಮಹಾ ಧನಯೋಗ, ಸುರಿಯಲಿದೆ ಸಂಪತ್ತು! Astrology

Astrology ಸಾಂದರ್ಭಿಕ ಚಿತ್ರ
Astrology ಸಾಂದರ್ಭಿಕ ಚಿತ್ರ
Published on
Astrology: ಹಿಂದೂ ಧರ್ಮದಲ್ಲಿ ಶ್ರಾವಣ ಮಾಸಕ್ಕೆ ಅತ್ಯಂತ ಪವಿತ್ರ ಹಾಗೂ ವಿಶೇಷ ಸ್ಥಾನವಿದೆ. ಈ ವರ್ಷ ಜುಲೈ 30ರಿಂದ ಅತ್ಯಂತ ಶುಭಪ್ರದವಾದ ಶ್ರಾವಣ ಮಾಸವು ಪ್ರಾರಂಭವಾಗಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬಾರಿಯ ಶ್ರಾವಣ ಮಾಸವು ಅತ್ಯಂತ ವಿಶೇಷವಾಗಿರಲಿದೆ. ಏಕೆಂದರೆ, ಈ ಸಮಯದಲ್ಲಿ ಪ್ರಮುಖ ಗ್ರಹಗಳ ಸ್ಥಾನಪಲ್ಲಟ ಮತ್ತು ಸಂಚಾರದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳು ನಡೆಯುತ್ತಿವೆ.
ನ್ಯಾಯದೇವನಾದ ಶನಿಯು ಹಿಮ್ಮುಖ ಚಲನೆಯಲ್ಲಿದ್ದರೆ, ಜ್ಞಾನ ಮತ್ತು ಸಮೃದ್ಧಿಯ ಕಾರಕನಾದ ಗುರು ಗ್ರಹವು ತನ್ನ ಸಂಚಾರವನ್ನು ಮುಂದುವರಿಸಲಿದೆ. ಇದೇ ವೇಳೆ ಬುದ್ಧಿವಂತಿಕೆ ಮತ್ತು ವ್ಯಾಪಾರದ ದೇವನಾದ ಬುಧ ಗ್ರಹವು ನೇರ ಚಲನೆಗೆ ಮರಳಿ ಉದಯಿಸಲಿದ್ದಾನೆ. ಜುಲೈ ತಿಂಗಳ ಕೊನೆಯಲ್ಲಿ ಮೂರು ಪ್ರಮುಖ ಗ್ರಹಗಳು ಒಂದೇ ಸಮಯದಲ್ಲಿ ತಮ್ಮ ಸ್ಥಾನ ಹಾಗೂ ಚಲನೆಯನ್ನು ಬದಲಾಯಿಸುತ್ತಿರುವುದು ದೇಶ, ವಿದೇಶ ಹಾಗೂ ಸಮಸ್ತ ಮಾನವಕುಲದ ಮೇಲೆ ಆಳವಾದ ಪ್ರಭಾವ ಬೀರಲಿದೆ.
ದೃಕ್ ಪಂಚಾಂಗದ ಲೆಕ್ಕಾಚಾರಗಳ ಪ್ರಕಾರ, ಈ ಅಪರೂಪದ ಗ್ರಹಗಳ ಮರುಜೋಡಣೆಯು ಕೆಲವು ರಾಶಿಚಕ್ರದವರ ಪಾಲಿಗೆ ‘ಸುವರ್ಣ ಯುಗ’ವನ್ನೇ ತರಲಿದೆ. ಈ ಶುಭ ಶ್ರಾವಣ ಮಾಸದಲ್ಲಿ ಯಾವ್ಯಾವ ರಾಶಿಗಳಿಗೆ ಶುಭವಾಗಲಿದೆ ಎಂದು ನೋಡೋಣ ಬನ್ನಿ..

ಮೇಷ ರಾಶಿ

ಮೇಷ ರಾಶಿಯವರಿಗೆ ಶ್ರಾವಣ ಮಾಸವು ಆರ್ಥಿಕವಾಗಿ ಸಮೃದ್ಧವಾಗಿರುತ್ತದೆ. ಈ ಮೂರು ಗ್ರಹಗಳ ಚಲನೆಯು ನಿಮ್ಮ ವ್ಯವಹಾರ ಮತ್ತು ವೃತ್ತಿಜೀವನದಲ್ಲಿ ಹಠಾತ್ ಆರ್ಥಿಕ ಲಾಭದ ಸಾಧ್ಯತೆಯನ್ನು ಸೃಷ್ಟಿಸುತ್ತದೆ. ದೀರ್ಘಕಾಲದಿಂದ ಸ್ಥಗಿತಗೊಂಡಿದ್ದ ಹಣವನ್ನು ಮತ್ತೆ ಮರಳಿ ಪಡೆಯಲಿದ್ದೀರಿ. ಉದ್ಯೋಗಿಗಳಿಗೆ ಕೆಲಸದಲ್ಲಿ ಹೊಸ ಜವಬ್ದಾರಿ ಪಡೆಯಲಿದ್ದಾರೆ. ಕೆಲಸ ಮಾಡುವ ವ್ಯಕ್ತಿಗಳು ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ಪಡೆಯಬಹುದು. ಇದು ಭವಿಷ್ಯದ ಬಡ್ತಿಗಳಿಗೆ ದಾರಿ ಮಾಡಿಕೊಡುತ್ತದೆ.

ಮಿಥುನ ರಾಶಿ

ಶನಿ, ಗುರು ಮತ್ತು ಬುಧ ಗ್ರಹಗಳ ಬದಲಾಗುತ್ತಿರುವ ಚಲನೆಯನ್ನು ಮಿಥುನ ರಾಶಿಯವರಿಗೆ ಆಶೀರ್ವಾದವೆಂದು ಪರಿಗಣಿಸಲಾಗುತ್ತದೆ. ನೀವು ಹೊಸ ಉದ್ಯಮ ಅಥವಾ ವ್ಯವಹಾರವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಇದು ಅತ್ಯುತ್ತಮ ಸಮಯವಾಗಿದೆ. ಹಳೆಯ ಹೂಡಿಕೆಗಳು ಧನನೀಯ ಲಾಭವನ್ನು ನೀಡಲಿವೆ. ನಿಮ್ಮ ಸಂವಹನ ಕೌಶಲ್ಯಗಳು ಸುಧಾರಿಸುತ್ತವೆ. ಉದ್ಯೋಗಿಗಳಿಗೆ ಕಚೇರಿಯಲ್ಲಿ ಮೇಲಾಧಿಕಾರಿಗಳಿಂದ ಪ್ರಶಂಸೆ ದೊರೆಯಲಿದೆ.

ಸಿಂಹ ರಾಶಿ

ಸಿಂಹ ರಾಶಿಯವರಿಗೆ, ಶನಿಯ ಹಿಮ್ಮುಖ ಚಲನೆ ಮತ್ತು ಗುರುವಿನ ಸ್ಥಾನವು ಅದೃಷ್ಟದ ದ್ವಾರವಾಗಿರುತ್ತದೆ. ಸಮಾಜದಲ್ಲಿ ಮತ್ತು ಕೆಲಸದಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಹಳೆಯ ಹೂಡಿಕೆಗಳು ಉತ್ತಮ ಲಾಭವನ್ನು ನೀಡುತ್ತವೆ. ಪಿತ್ರಾರ್ಜಿತ ಆಸ್ತಿಗೆ ಸಂಬಂಧಿಸಿದ ಕೇಸುಗಳಿದ್ದರೆ ಅವು ಕೊನೆಗೊಳ್ಳಲಿವೆ. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವಿರಲಿದ್ದು, ಕುಟುಂಬದೊಂದಿಗೆ ದೂರ ಪ್ರಯಾಣ ನಡೆಸಲಿದ್ದೀರಿ (ಏಜೆನ್ಸೀಸ್​). 
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು/ ಪಂಚಾಂಗಗಳು/ ನಂಬಿಕೆಗಳು/ ಹಾಗೂ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದನ್ನು ವಿಜಯವಾಣಿ ವೆಬ್​ಸೈಟ್​ ಜವಾಬ್ದಾರರಾಗಿರುವುದಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net